ಅಬ್ಬಾ ತಾಯಿ ಹೃದಯವೇ! ನಾಕಾರು ನಿಮಿಷಗಳ ಕೆಳಗೆ ಅಲ್ಲೋಲಕಲ್ಲೋಲ ಅನ್ನುವಂತೆ ಮಾತಾಡಿ , ಈಗ ಎಷ್ಟು ಸಡನ್ನಾಗಿ ಮೆತ್ತಗಾದರಲ್ಲ ಅಂತ ನನಗೇ ಅಚ್ಚರಿಯಾಯಿತು.
ಫೋನು ಮಾಡಿದಾಗ, ಎದೆಯ ಬೇಗುದಿ ಹೇಳಿಕೊಳ್ಳಬೇಕು ಅನಿಸಿದಾಗ ಮುಲಾಜಿಲ್ಲದೇ, “ಈಗ ಸ್ವಲ್ಪ ಬಿಜಿ ಇದೀನಿ, ನಾನೇ ಬಿಡುವಾದಾಗ ಮಾತಾಡ್ತೀನಿ, ಏನೂ ಅನ್ಕೋಬೇಡಿ” ಅನ್ನುತ್ತ, ತುಂಬಿಕೊಂಡಿರುತ್ತಿದ್ದ ನನ್ನ ಕಣ್ಣೀರು ಕಪಾಳಕ್ಕೆ ಇಳಿಯುವ ಹಾಗೆ ಮಾತಾಡಿಬಿಡುತ್ತಿದ್ದವರ ವರಸೆ ನೆನಪಾಗಿ, ನಾನೂ ಸೊಕ್ಕು ತುಂಬಿಕೊಂಡು, “ಅದೂ. ಇವತ್ತ ತುಂಬ ಕೆಲ್ಸ ಇದೆ, ಆಮೇಲೆ ಮಾತಾಡ್ತೀನ್ರೀ” ಅಂದು ಔಪಚಾರಿಕ ಬಿಂಕ ತೋರಿಸಿದೆ.
“ನೀವೇನೂ ಅನ್ಕೊಳ್ಳದೇ ಇದ್ರೆ, ಸ್ವಲ್ಪ ಹೊತ್ತು ನಿಮ್ಮನೆಗೆ ಬಂದು ಹೋಗ್ಲಾ? ನೀವು ಸ್ವಲ್ಪ ಡ್ರೈವರ್ಗೆ ಗೈಡ್ ಮಾಡಿ ಸಾಕು. ಅಂದವರು, ಮಾತಿರಲಿ, ಬಂದೇತೀರುವ ಬಗ್ಗೆ ಮಾತಾಡಿದಾಗ, ನನ್ನ ಇಲ್ಲದ ಸೊಕ್ಕು ಅಲ್ಲೇ ಮಾಯವಾಗಿ, “ಅಯ್ಯ ನಿಮ್ಮ, ಬರ್ರೀ, ಅಡಿಗೆ ಆಗಿದೆ, ಇಲ್ಲೇ ಬಂದ್ಬಿಡಿ ಊಟಕ್ಕೆ” ಅಂದು ಫೋನಿಟ್ಟೆ. ಕಾಫಿ ಫಿಲ್ಟರಿಗೆ ನೀರು ಹಾಕಿಟ್ಟು, ತುತ್ತು ಉಂಡರೆ ಹೆಚ್ಚು, ಉಣದಿದ್ದರೆ ಕಮ್ಮಿ ಅನ್ನುವಂತೆ ಮೆಶರು ಮಾಡಿ ಮುದ್ದೆ ಮುರಿಯುತ್ತಿದ್ದ, ಗ್ರಾಮಿನಲ್ಲಿ ಊಟ, ಲೀಟರಿನಳತೆಯಲ್ಲಿ ನೀರು, ಕಾಫಿ ಕುಡಿಯುತ್ತ ಭಯಂಕರ ಕರಾರುವಾಕ್ ನಿಯಮಗಳನ್ನ ರೂಢಿಸಿಕೊಂಡು ಬಂದಿದ್ದ ಅವರಿಗೆ ಏನು ಮಾಡಿ ನಿ q ಲಿ ಎ ಂ ಬ z ಅ g ಬ ಲ g g z g ತಲೆಕೆಡಿಸಿಕೊಳ್ಳುವ? ಕಾಮನ್ ಆಗಿತ್ತು. ಬರೋದನ್ನೆಲ್ಲ ಮಾಡಿ ನೀಡಿದರೆ ಎರಡೂ ಕೈಲಿ ಉಂಡೇನು ಅನಿಸುವಂತಹ ನಮ್ಮ ಬಯಲು ಸೀಮಿ ಆಡಿಗಿಯನ್ನ ಮೂಸಿಯೂ ನೋಡಿರದಿದ್ದ ಆಕೆ ಸದಾ ಹೊರದೇಶಗಳನ್ನು ಸುತ್ತಿಕೊಂಡಿರುವರು. ಕರ್ನೆಲ್ ಅನಂತ್ ಒಡೆತನದ ಇಂಟೆಲ್ ರೈಟಿಂಗ್ ಅನ್ನುವ ಪಬ್ಲಿಶಿಂಗ್ ಕಂಪನಿಯಲ್ಲಿ ನಾನು ಕೆಲಸ ಮಾಡುತ್ತಿರುವಾಗ ನಾನು ಸೇರಿದ ಒಂದು ತಿಂಗಳಿಗೆ ಸೇರಿದ್ದರು ಪಾರ್ವತಿ ರಾಮನ್. ಆಗ ಆ ಲೆಕ್ಕದಲ್ಲಿ ನನಗೆ ಅವರಿಗಿಂತ ಅಲ್ಲಿ ನಾನೇ ಸೀನಿಯರ್ ಎಂಬ ಹಮ್ಮು ಹದವಾಗಿ ತಲೆಸೇರಿಕೊಂಡಿತ್ತು. ಟೀ, ಕಾಫಿ ಕಪ್ಪನ್ನು ಹೇಗೆ ಹಿಡಿದುಕೊಳ್ಳಬೇಕು, ಹೇಗೆ ಸೇವಿಸಬೇಕು ಎಂಬಲ್ಲಿಂದ ಹಿಡಿದು, ಅತಿಯಾದ ಆಭರಣ, ಒಡವೆಗಳ ಆಸೆ ಇರೋ ಹೆಣ್ಮಕ್ಕಳು ಬುದ್ಧಿವಂತರಾಗಿರುವುದಿಲ್ಲ, ತಲೆ ಚುರುಕಾಗಿರೋಲ್ಲ, ಮುಖ್ಯ ನಮ್ಮನಮ್ಮ ಬೌದ್ಧಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳುವತ್ತ ನಮ್ಮ ಗಮನ ಇರಬೇಕು ಸದಾ ಎಂದು ಹೇಳಿ, ನನ್ನನ್ನು ಕಾಲಕಾಲಕ್ಕೆ ತಿದ್ದುತ್ತ, ತಕ್ಮಟ್ಟಿಗಾದರೂ ಮಹಾನಗರದಲ್ಲಿ ಹೊಂದಿಕೊಳ್ಳಲು ನೆರವಾಗಿದ್ದ ಟಿಪಿಕಲ್ ವರ್ಕಿಂಗ್ ವುಮನ್ ಆಕೆ. ಯಾಕ ವಲ್ಲೆ ಅಂದ್ರ ಇಲ್ಲ ಅದಕ್ಕ ವಲ್ಲೆ ಅನ್ನುವ ಹಾಗೆ ಇದ್ದುಕೊಂಡು ಬಂದಿದ್ದ ನಾನು ಆಗ? ಕೈಸೇರತೊಡಗಿದ್ದ ಐದಂಕಿ ಸಂಬಳದಲ್ಲಿ ಒಡವೆ ಮಾಡಿಸಿಕೊಳ್ಳುವ ಆಸೆ ನೇಯುವ?ರಲ್ಲೇ, ನನ್ನ ಆಸೆಗಳನ್ನು ನಾನೇ ಚಿವುಟಿ ಹಾಕಿಬಿಡುವಂತೆ ಅವರ ಅನುಭವದ ಮಾತುಗಳು ನನ್ನ ಕಿವಿಗೆ ಬೀಳುತ್ತಿರುತ್ತಿದ್ದವು.
“ನಾನು ಇ? ದಿವ್ಸ ಯಾರನ್ನೂ ಹೀಗೆ ಹಚ್ಕೊಂಡಿರ್ಲಿಲ್ಲ, ಯಾರ ಹತ್ರಾನೂ ಇ? ಆಪ್ತವಾಗಿ ಮಾತಾಡಿರ್ಲಿಲ್ಲ, ಯಾರಲ್ಲೂ ಹೇಳಿರದ ಗುಟ್ಟನ್ನು ನಿಮ್ಮಲ್ಲೇ ಹೇಳ್ತಿರೋದು” ಅಂತೆಲ್ಲ ಯಾರಾದರೂ ಮಾತು ಶುರು ಮಾಡಿಬಿಟ್ಟರೋ, ಕೃತಕೃತಾರ್ಥ ಭಾವದಿಂದ ನಾನವರನ್ನ ನನ್ನ ಖಾಸಗಿ ಕೋಶದೊಳಕ್ಕೆ ಸೇರಿಸಿಕೊಂಡು ಬಿಡುತ್ತೇನೆ. ರಾಮನ್ ದಂಪತಿಗಳಿಬ್ಬರೂ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಉನ್ನತಹುದ್ದೆಗಳಲ್ಲಿ ದುಡಿದು, ವಯೋಸಹಜ, ವೃತ್ತಿಸಹಜ ಹಿರಿತನ, ಜಂಭ, ಡಿಪ್ಲೊಮಸಿ, ಮಣ್ಣುಮಸಿ ಮುಂತಾದ ಫಾರ್ಮಲ್ ಗಂಭೀರತೆಗಳನ್ನು ಅರಗಿಸಿ ಕುಡಿದು, ವಾಲಂಟರಿ ರಿಟೈರುಮೆಂಟನ್ನು ಒಲಿಸಿಕೊಂಡು, ಈಗ ಮತ್ತೆ ಈ ಖಾಸಗೀ ಕಂಪನಿಗೆ ಕೆಲಸಕ್ಕೆ ಸೇರಿಕೊಂಡಿದ್ದ ಶ್ರೀಮತಿ ರಾಮನ್ ಅದು ಯಾವಾಗ “ಯಾರಿಗೂ ಹೇಳಿಲ್ಲ ನಿಮಗೇ ಹೇಳ್ತಿರೋದು” ಅನ್ನುತ್ತ ಬದುಕಿನ ಖಾಸಗೀ ವಿ?ಯಗಳ ಪೊರೆ ಕಳಚುತ್ತ ಹೋದರೋ, ವಯಸ್ಸು ಮರಳಿ ಬಂದ ತರುಣಿಯಂತೆ ಅವರೂ, ಇಪ್ಪತ್ತೆರಡಕ್ಕೇ ಎಪ್ಪತ್ತರ ಹಿರಿತನ ಬಂದವಳಂತೆ ನಾನೂ, ಬದುಕುಗಳು ಎಕ್ಸ್ಚೇಂಜ್ ಆಗತೊಡಗಿದ್ದವು. ಮುಟ್ಟುನಿಂತು ಮುಪ್ಪನ್ನು ಮೆಟ್ಟಿನಿಲ್ಲುವ ಜೀವನೋತ್ಸಾಹದ ಆಕೆಗೆ ಒಮ್ಮೊಮ್ಮೆ ನಾನು ಶುದ್ಧಾತಿಶುದ್ಧ ಬೆಪ್ಪಿಯ ಹಾಗೆ ಕಾಣುತ್ತಿದ್ದೆ. “ನೀವು ತುಂಬಾ ಇನೋಸೆಂಟಪ್ಪಾ, ಈ ಗಲೀಜು ಪ್ರಪಂಚದ ಬಗ್ಗೆ ನಿಮ್ಗೆ ಏನಂದ್ರೆ ಏನೂ ಗೊತ್ತಿಲ್ಲ” ಅಂದು ನನ್ನ ತಲೆ ನೇವರಿಸುತ್ತಿದ್ದರೆ ನನಗೆ ಒಳಗೊಳಗೆ ನೋವು ಚಿಲ್ಲೆಂದು ಚಿಮ್ಮಿಕೊಂಡು ಬರುತ್ತಿತ್ತು. ಯಾರೇನು ಬಲ್ಲರು ಬಳಿಯಲ್ಲೇ ನಿಂತವರ ಅಂತರಾಳವೇನೆಂಬುದನ್ನು ಅಂತ ಕಾವ್ಯಾತ್ಮಕವಾಗಿಯೇ ಗುನುಗಿಕೊಂಡು, ನೀವಂದುಕೊಂಡ? ಮುಗ್ಧೆಯೇನೂ ಅಲ್ಲ ಬಿಡರಿ ನಾನು ಅಂತ ಒಳಗೊಳಗೇ ಅಂದುಕೊಂಡು ಸುಮ್ಮನಾಗುತ್ತಿದ್ದೆ. ಅವರದ್ದೇನು ಮಹಾ ಅನ್ನುವಂಥ ಬದುಕನ್ನು, ಏಳುಬೀಳುಗಳನ್ನು, ಕ?ನ?ಗಳನ್ನು ಕಂಡುಂಡು ಬೆಳೆದಿದ್ದ ನನಗೆ ಒಮ್ಮೆ ಅವರು ಖಾಸಾ ಅಮ್ಮನಂತೆ ಕಂಡರೆ, ಮಗದೊಮ್ಮೆ ಸಿನಿಮಾಗಳ ಅತ್ತೆಯ ಹಾಗೆ ಪ್ರಕಟವಾಗಿಬಿಡುತ್ತಿದ್ದರು. ಅಪರೂಪಕ್ಕೆ ಪ್ರೀತಿ, ಅಕ್ಕರೆ ತೋರಿಸಿದರೆ ಅದರಲ್ಲೂ ಅಳತೆ, ಲೆಕ್ಕಾಚಾರ!
“ನಿಮ್ಗೆ ಗೊತ್ತಾ, ಮ್ಯಾರೇಜ್ ಇಸ್ ಅ ಮಿರೇಜ್” ಅಂದುಬಿಟ್ಟಿದ್ದರು, ನನ್ನ ಮದುವೆಗಿನ್ನೂ ತಿಂಗಳೊಪ್ಪತ್ತಿದೆಯೆನ್ನುವಾಗ. ಬಯಸಿಬಯಸಿ ನನ್ನನ್ನು ಮದುವೆಯಾಗಲು ಹೊರಟಿದ್ದ ಭಾವೀಪತಿಯನ್ನು ಅವರಿಗೆ ಪರಿಚಯಿಸಿದ್ದ ಮಾರನೇ ದಿವಸವೇ ಅವರು ಉದುರಿಸಿದ್ದ ಈ ಅಣಿಮುತ್ತುಗಳನ್ನು ಅರಗಿಸಿಕೊಳ್ಳಲು ನನಗೆ ಬಹಳ ಸಮಯವಾಗಿತ್ತು. “ಅಲ್ರೀ, ನೀವು, ನಿಮ್ಮ ಮನೆಯವ್ರು, ಮದುವೆ ಅನ್ನೋ ಆ ವ್ಯವಸ್ಥೆಯಲ್ಲೇ ಅಲ್ಲವೇನ್ರೀ ಇರೋದು. ಅದು ಹೇಗೆ ಮದುವೆ ಮರೀಚಿಕೆ ಅಂತೀರಿ ನೀವು, ಉದಾಹರಣೆ ಸಮೇತ ವಿವರಿಸಿ” ಅಂತ ಕೆಣಕಿ ಕೇಳಿ ಅವರು ಕನ್ನಡಪದಗಳ ಅರ್ಥ ತಡಕಾಡುವ ಹಾಗೆ ಮಾಡುತ್ತಿದ್ದೆ. ನನ್ನ ಊಟ ಉಪಚಾರ, ಬೇಕುಬೇಡಗಳನ್ನು ನಾನು ಮಾತಾಡಿ ಹೇಳದೆಯೂ ಅರ್ಥಮಾಡಿಕೊಂಡಿರುವ, ಅಗಾಧವಾಗಿ ಪ್ರೀತಿಸುವ ಹುಡುಗ ನನಗೆ ಸಿಕ್ಕಿದ್ದಾನೆ ಎಂಬ ನನ್ನದೇ ನಂಬುಗೆಯ ಎಳೆ ಸಡಿಲಾಗಿ ಬಿಡುವುದೇನೋ ಎನ್ನುವಂತೆ ಅವರ ಮಾತುಗಳು ಇರುತ್ತಿದ್ದವು. ಪಾರ್ವತಿಯವರ ಹೈಫೈ ಸಿಟಿ ಲೈಫಿನ ಒಳಮಾತುಗಳು, ನಾನು ಬೆಳೆದುಬಂದಿದ್ದ ಪರಿಸರಕ್ಕೆ ಪೂರ್ತಿ ವಿರುದ್ಧವಾದ ನೆಲೆಯಲ್ಲಿರುತ್ತಿದ್ದವು. ನನ್ನ ಆಯ್ಕೆ, ಅನುರಾಗ ಹೆಚ್ಚು ಅರ್ಥಪೂರ್ಣವಾದವು, ನಾನೇ ಪರಮ ಸುಖಿ ಎಂದು ಭಾವಿಸಿದ್ದ ದಿನಗಳಲ್ಲಿ, ಇಲ್ಲ ಇಲ್ಲ, ಯಾವೊಂದು ಮದುವೆಯೂ ಆದರ್ಶವಾದದ್ದಲ್ಲ ಅಂತ ವಾದಿಸುತ್ತ, ವಾಲಂಟರಿ ರಿಟೈರ್ಮೆಂಟಿನ ಹಂತದಲ್ಲೂ, ತಮ್ಮ ಪೆನ್ಶನ್ನಿನ ಗಳಿಕೆಯಲ್ಲೇ ದೇವರ ಹುಂಡಿಗೆ ದುಡ್ಡು ಹಾಕುವ? ಕಡು ಸ್ವಾಭಿಮಾನಿಯಾಗಿದ್ದ ಆಕೆ ಒಗಟಿಗಿಂತ ಒಗಟು ಅನಿಸಿಬಿಡುತ್ತಿದ್ದರು. “ನಿನ್ನನ್ನು ನೋಡುತ್ತಿದ್ದರೆ, ಏನೋ ಒಂದು ಪ್ರಶಾಂತಭಾವ ನನ್ನನ್ನ ಆವರಿಸಿಕೊಳ್ಳುತ್ತದೆ, ನೆಮ್ಮದಿ ಮೂಡುತ್ತದೆ” ಅನ್ನುತ್ತ, ಜೊತೆಯಾಗಿ ಕೈಹಿಡಿದು, ದಕ್ಷಿಣೆ ಹಾಕಿಸಿ, ದೀಪ ಬೆಳಗುತ್ತಿದ್ದ ನನ್ನ ಭಾವೀಗಂಡನನ್ನು ನೋಡುತ್ತಲೇ, ಎಳೆಯ ಹೂಪಕಳೆಯಂತಹ ನನ್ನ ನವಿರು ಭಾವನೆಗಳ ದೋಣಿ ಪಾರ್ವತಿಯವರ ಈ ಇಂಥ ಮಾತುಗಳನ್ನು ಕೇಳಿ, ಬಕಬೋರಲಾಗಿ ಬಿದ್ದುಕೊಂಡುಬಿಡುತ್ತಿತ್ತು, ಅವರು ಎ? ಬೇಸರಾಗುವಂತೆ ಮಾತಾಡಿದರೂ, ಅವರ ಗೆಳೆತನ ಬಿಟ್ಟಕೊಡಲಾರದ? ಅವರನ್ನು ನಾನು ಹಚ್ಚಿಕೊಂಡುಬಿಟ್ಟಿದ್ದೆ. “ವಯಸ್ಸಾದವರ ಕ?ಗಳು ನಿಮಗರ್ಥವಾಗಲ್ಲಮ್ಮ” ಅಂತ ಅವರನ್ನುತ್ತಿದ್ದರೆ, “ವಯಸ್ಸಿನವರ ಕ?ಗಳು ನಿಮಗರ್ಥವಾಗುವವರೆಗೂ ಹೀಗೇ” ಅಂದು ಅವ್ರನ್ನು ರೇಗಿಸುತ್ತಿರುತ್ತಿದ್ದೆ. ಈಗ ನೋಡಿದರೆ, ಕಠೋರ ಮನಸಿನ ಹೆಣ್ಮಗಳು ಅಂದುಕೊಳ್ಳುವ ಹೊತ್ತಿನಲ್ಲಿ ಅವರು ಬರೋಬ್ಬರಿ ಉಲ್ಟಾ ಹೊಡೆಯತೊಡಗಿದ್ದರು. ನಾನವರಿಗೆ ತಾಸುಗಟ್ಟಲೇ ಕೂತು ಖಲೀಲ್ ಗೀಬ್ರಾನನ ಮಾತುಗಳನ್ನು ಉಪದೇಶಿಸುವ? ಮಾತು ಕಲಿತುಬಿಟ್ಟಿದ್ದೆ.
******
ಪಾರ್ವತಿ ರಾಮನ್ ತುಂಬ ಓದಿಕೊಂಡವರು. ಮಕ್ಕಳನ್ನು ಸ್ನೇಹಿತರಂತೆಯೆ ಕಂಡು, ಬೆಳೆಸಿ, ದಡಮುಟ್ಟಿಸುವ ಅಪ್ಪ-ಅಮ್ಮಂದಿರ ಮುದ್ದಿನ ಮಗಳಾಗಿ ಮದರಾಸಿನ ಮನೆಯಲ್ಲಿ ಅಚ್ಚುಕಟ್ಟಾಗಿ ಬೆಳೆದಿದ್ದ ಆಕೆ ಮದುವೆಯಾಗಿ ಬೆಂಗಳೂರು ಸೇರಿಕೊಂಡಿದ್ದರು. ತಾವು ಕೆಲಸ ಮಾಡುತ್ತಿದ್ದ ಬ್ಯಾಂಕಿನ ಸಿಬ್ಬಂದಿಯೆಲ್ಲ ಹೆಮ್ಮೆಯಿಂದ ನೋಡುವಂತೆ ವಿಶ್ವಾಸ ಗಳಿಸಿಕೊಂಡಿದ್ದ ಆಕೆ ಇದ್ದೊಬ್ಬನೇ ಮಗ ಹೆಚ್ಚಿನ ಓದಿಗಾಗಿ ಅಮೆರಿಕಕ್ಕೆ ಹೊರಟುನಿಂತಾಗ, ದುಡ್ಡು ಕಮ್ಮಿಬಿದ್ದವೆಂದು ಹೇಳಿ, ವಾಲಂಟರಿ ನಿವೃತ್ತಿ ಪಡೆದು, ಉಳಿಸಿದ ಹಣದಲ್ಲಿ ಅವನನ್ನು ಓದಿಸಲು ಕಳಿಸಿಕೊಟ್ಟದ್ದರು. ಅದಾದ ಮೇಲೆ ಬಾಧಿಸುತ್ತಿದ್ದ ಒಂಟಿತನ ಮರೆಯಲು ನಮ್ಮ ಕಂಪನಿಗೆ ಸೇರಿದ್ದರು. ಅವರ ಗಂಭೀರತೆ ನನಗಿ?ವಾದ ಹಾಗೆಯೇ, ಹೆಚ್ಚು ಯಾರೊಡನೆಯೂ ಬೆರೆಯದೇ ನಾನಾಯಿತು ನನ್ನ ಕೆಲಸವಾಯಿತು ಎಂದು ಇರುತ್ತಿದ್ದ ನನ್ನ ಸ್ವಭಾವ ಅವರಿಗಿ?ವಾಗಲು ಹೆಚ್ಚು ಸಮಯ ಹಿಡಿದಿರಲಿಲ್ಲ. ಕಾಮನ್ನಾಗಿ ನಾವಿಬ್ಬರೂ ಮನಸೋಇಚ್ಛೆ ಆಸ್ವಾದಿಸುತ್ತಿದ್ದ ಹತ್ತಾರು ಹಸಿಬಿಸಿ ಸಂಗತಿಗಳು ನಮ್ಮ ವರ್ಕ್ಪ್ಲೇಸುಗಳಲ್ಲಿ ಮಾತ್ರವಲ್ಲದೇ ವರ್ಕಿಂಗ್ ಫೇಸುಗಳಲ್ಲಿಯೂ ಧಾರಾಳವಾಗಿದ್ದವು. ಫಿಸಿಕ್ಸಿನ ಎಡಿಟಿಂಗ್ ವಿಭಾಗಕ್ಕೆ ಸೇರಿಕೊಂಡಿದ್ದ ಆಂಧ್ರದ ರಾಮನಾಥ್ ಮಧ್ಯಾಹ್ನದ ಊಟವಾಗುತ್ತಲೂ ಕೀಬೋರ್ಡಿಗೇ ತಲೆಯಾನಿಸಿಕೊಂಡು ಗೊರಕೆ ಕೊರೆಯುವುದನ್ನು, ಇಳಿವಯಸ್ಸಿನಲ್ಲಿಯೂ ಮದುಮಗನಂದದಿ ತಯಾರಾಗಿ ಬರುತ್ತಿದ್ದ ಕರ್ನಲ್ರನ್ನು, ಅಲ್ಲಲ್ಲೇ, ಅ??ರಲ್ಲೇ ಅರಳಿಕೊಳ್ಳುತ್ತಿದ್ದ ಅನುರಾಗಗಳನ್ನು ನಾವು ನಮ್ಮಿಬ್ಬರ ಕೊನೆಗಣ್ಣುಗಳಲ್ಲೇ ನೋಡಿ, ಮೆತ್ತಗೆ ನಮ್ಮ ಡೀಪ್ ಡಿಸ್ಕಶನ್ನುಗಳಿಗೆ ತೊಡಗಿಕೊಳ್ಳುತ್ತಿದ್ದೆವು. ಕಟ್ಟುನಿಟ್ಟಿನ ಸಂಪ್ರದಾಯಸ್ಥರ ಮನೆಯಲ್ಲಿ ಹುಟ್ಟಿ ಬೆಳೆದಿದ್ದರೂ, ಪಾರ್ವತಿಯವರ ಆಲೋಚನೆಗಳು, ಜೀವನಶೈಲಿಗಳು ಅಗದೀ ಮಾಡರ್ನ್ ಹಾಗೂ ಎಜುಕೇಟೆಡ್ ಆಗಿರುತ್ತಿದ್ದವು. ಒಮ್ಮೊಮ್ಮೆ ಭಾ?ಗೆ ಸಂಬಂಧಪಟ್ಟ ಚರ್ಚೆಗಳಲ್ಲಿ ಆಕೆ ಕರ್ನಲ್ರನ್ನು ಕೂಡ ಬಾಯಿಮುಚ್ಚಿಸಿಬಿಡುವ? ಕರಾರುವಾಕ್ಕಾಗಿ, ಖಚಿತವಾಗಿ ಸಲಹೆಗಳನ್ನು ನೀಡಿ ಸೈ ಎನಿಸಿಕೊಳ್ಳುತ್ತಿದ್ದರು.
ಈ ಇಂಥ ಪಾರ್ವತಿ ಮೇಡಮ್ ಮಗನ ಮದುವೆ ಗೊತ್ತಾಗುತ್ತಲೂ ಕೆಂಪೇರಿ ಹೋಗಿಬಿಟ್ಟರು. ಮಗ ಅವರು ವಾಲಂಟರಿ ರಿಟೈರುಮೆಂಟಿಗೆ ಮೊದಲು ಕೆಲಸ ಮಾಡುತ್ತಿದ್ದ ಅವರ ಕೈಕೆಳಗಿನ ಸಹಾಯಾಧಿಕಾರಿಯಾಗಿದ್ದ ಸಹೋದ್ಯೋಗಿಯೊಬ್ಬರ ಮಗಳನ್ನು ಮೆಚ್ಚಿಬಿಟ್ಟಿದ್ದ. ಆಗ “ನೋಡ್ರಿ, ನಾನು ಆಫೀಸಲ್ಲಿ ತುಂಬಾನೇ ಸ್ಟ್ರಿಕ್ಟು ಅಂತ ಆಕೆಗೂ ಗೊತ್ತು. ಈಗ ಬೀಗರಾಗ್ತಾರೆ. ನನಗೋ ಆಫೀಸಲ್ಲೂ, ಮನೇಲೂ ಅವ್ರದ್ದೇ ಸಂಬಂಧ ಮ್ಯಾನೇಜು ಮಾಡೋದು ಅಂದ್ರೆ ಕುತ್ತಿಗೆಗೆ ಬರುತ್ತೆ, ಯು ನೋ ರೈಟ್. ನನ್ನ ಸ್ವಭಾವ ನಿಮ್ಗೆ ಗೊತ್ತಲ್ಲ” ಅಂದು ತಾಸುಗಟ್ಟಲೇ ಪರಿತಪಿಸಿದ್ದರು. ಕಳ್ಳುಬಳ್ಳಿ ಅಂದರೆ ಎಲ್ಲದಕ್ಕೂ ಕೈ ಮುಂದು ಮಾಡಿ ಖರ್ಚು ಮಾಡುವುದನ್ನು ಹೃದ್ಗತ ಮಾಡಿಕೊಂಡಿದ್ದ ನನಗೋ ಅವರ ಭಾವನೆಗಳು ಅ?ಗಿ ಹಿಡಿಸಿರಲಿಲ್ಲ. ಇರ್ಲಿ ಬಿಡ್ರೀ, ಗೊತ್ತಿರೋರೇ ಆದ್ರೆ ಚೆನ್ನಾಗಿ ಹೊಂದಿಕೊಳ್ತಾರೆ. ಇ?ಪಟ್ಟ ಮೇಲೆ ಒಪ್ಪಿ ಮಾಡಿಕೊಡುವುದು ಉತ್ತಮ ಅನಿಸುತ್ತೆ ಎಂದು ಪ್ರವಚನ ನೀಡಿದ್ದೆ. ನನ್ನ ಜೀವನವೂ ಕಣ್ಮುಂದೆ ಬಂದು ನಾನು ಆ ಮಾತುಗಳನ್ನು ಆಡುವಂತೆ ಮಾಡಿತ್ತು.
ಅದಾಗಿ, ಎಲ್ಲವೂ ತಣ್ಣಗಾಗಿ ಮಗ ಅದೇ ಹುಡುಗಿಯನ್ನು ಮದುವೆಯಾಗಿ ಇಬ್ಬರೂ ಅಮೆರಿಕ ಸೇರಿ ಸಂಸಾರಸಂಗೀತ ಆರಂಭವಾಗಿ, ಇವರು ಎರಡ್ಮೂರು ಸಲ ಅಲ್ಲಿಂದಿಲ್ಲಿಗೆ ಪ್ರವಾಸ ಕೂಡ ಮಾಡಿ, ನಂತರದ ದಿನಗಳಲ್ಲಿ ಅವರ ಸೊಸೆಯಂತಹ ಸೊಸೆ ಮತ್ತೆ ಯಾರಿಗೂ ಸಿಗಲು ಸಾಧ್ಯವೇ ಇಲ್ಲ, ಹೈಲಿ ಟ್ಯಾಲೆಂಟೆಡ್ಡು, ಅದೂ ಇದೂ ಅಂತ ಅವರು ಫೋನು ಮಾಡಿ ಮಾಡಿ ಕತೆ ಕೊರೆಯುವುದೂ, ಅಳುವ ಕೂಸಿಗೆ ಹಾಲುಣಿಸದೇ ಫೋನಿಗೆ ಕಿವಿ ಹಚ್ಚಿಯೇ ಕುಂತಿರ್ತಿಯವಾ ಸದಾ ಅಂತ ನನ್ನ ಗಂಡ ಗುರುಗುರು ಅನ್ನುವುದೂ ಒಂದ? ದಿವಸ ನಡೆದು ಸುಮ್ಮನಾದವು. ಅವರು ತಮ್ಮ ಸೊಸೆ, ನಾನು ನಮ್ಮ ಅತ್ತೆ ಹೀಗೆ ಬದುಕು, ಅನುಭವ, ಅನಿಸಿಕೆಗಳನ್ನು ಎರಡೂ ತುದಿಗಳಲ್ಲಿ ನಿಂತು ವಿಶ್ಲೇ?ಣೆ ಮಾಡಿಕೊಳ್ಳುತ್ತಿದ್ದೆವು.
ಎಲ್ಲ ಸರಿ ಹೋಯಿತೆಂದುಕೊಳ್ಳುವ?ರಲ್ಲಿ ಮಗನೊಡನೆ ಇರಲು ಹೋಗಿದ್ದವರು ಈಗ ದಿಢೀರನೆ ಫೋನು ಮಾಡಿ ಬರುತ್ತೇನೆ ಅಂದದ್ದೂ ಆಗಿ ನಾನವರ ಹಾದಿ ಕಾಯುವಂತಾಗಿದ್ದು. ಹೆಚ್ಚಿನ ಉಪಚಾರವನ್ನು ಬಯಸದ, ಆದರೆ ಔಪಚಾರಿಕತೆಯೇ ಮೈಯಲ್ಲಿ ಹೊಕ್ಕವರಂತೆ ಆಡುವ ಶ್ರೀಮತಿ ಪಾರ್ವತಿ ರಾಮನ್ ಹೆಚ್ಚು ಹೇಳಿಸಿಕೊಳ್ಳದೇ ಮಾಡಿಕೊಟ್ಟ ಮುದ್ದೆ ನುಂಗಿ, ನೀರು ಕುಡಿದು, ಹಿಂದೆಲೇ ಸೋಸಿಕೊಟ್ಟ ಕಾಫಿಯನ್ನು ಆಸಮ್ ಎನ್ನುತ್ತ ಹೀರಿ, ಏಕಾಏಕಿ ಭಾವುಕರಾಗಿ ಕೈಲಿದ್ದ ಕರ್ಚೀಫಿನಿಂದ ಮೂಗೊರೆಸಿಕೊಂಡರು.
ಯಾವ ಪ್ರಶ್ನೆಯನ್ನೂ ಕೇಳದೇ ಸುಮ್ಮನೆ ಅವರ ಮುಂಗೈ ಒಮ್ಮೆ, ಬೆನ್ನನ್ನೊಮ್ಮೆ ಸವರುತ್ತ ನಾನು ಪಕ್ಕದಲ್ಲಿ ಕುಳಿತೇ ಇದ್ದೆ. “ನೋಡೀ, ಇನ್ನು ಮುಂದೆ ಯಾವತ್ತೂ ಅವನ ಮನೆಗೆ ಹೋಗಲ್ಲ ನಾನು. ಯೂಸ್ಲೆಸ್ ಫೆಲೋ. ನಾನು ಎ? ಸ್ವಾಭಿಮಾನಿಯಾಗಿ ಇದ್ದವಳು ಅಂತ ನಿಮಗೆ ಗೊತ್ತಲ್ಲ, ಅದಕ್ಕೇ ನಿಮಗೆ ಹೇಳಿಹೋಗೋಣಾ ಅಂತ ಬಂದೆ” ಎಂದು ಮತ್ತೆ ಬಿಕ್ಕಿದರು. ಅಮ್ಮ ಮಗನ ನಡುವೆ ಏನೋ ಘನವಾದದ್ದೇ ಜರುಗಿದೆ, ಅತ್ತು ಹಗುರಾಗಲಿ ಎಂದುಕೊಂಡು ನಾನೂ ಅವರನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಅವನ ಓದಿಗಾಗಿಯೇ ಅವರು ಮಾಡಬಹುದಾಗಿದ್ದ ತಮ್ಮ ವೈಯಕ್ತಿಕ ಸಾಧನೆಗಳನ್ನೆಲ್ಲ ಬದಿಗಿಟ್ಟು, ಸಾಕ? ಹೆಣಗಾಡಿ, ಕೇಳಿದೊಡನೆ ಪರದೇಶಕ್ಕೆ ಓದಿಗಾಗಿಯೇ ಅವನನ್ನು ರಫ್ತು ಮಾಡಿದ್ದ ಆಕೆ, ಕಣ್ಣೀರು ಸುರಿಸಿಕೊಂಡು ಮರಳಿದ್ದಾರೆಂದರೆ ಮಗರಾಯ ಏನಂದಿರಬಹುದು ಎಂಬ ಪ್ರಶ್ನೆಯ ಹುಳ ನನ್ನ ತಲೆಯನ್ನು ಒಂದೇಸಮನೆ ಕೊರೆಯುತ್ತಿತ್ತು. ಆದರೂ ಸುಮ್ಮನೆ ಅವರೇ ಮಾತಾಡಲಿ ಎಂದು ಕಾಯುತ್ತ ಕೂತೆ.
“ನನ್ನ ಗಂಡ ಒಬ್ಬರನ್ನೇ ಬಿಟ್ಟು, ಅವರ ಆರೋಗ್ಯವನ್ನೂ ಲೆಕ್ಕಿಸದೇ ತಿಂಗಳಾನುಗಟ್ಟಲೇ ಅವನ ಜೊತೆ ಇದ್ದು ಬಂದದ್ದಕ್ಕೆ ಸರಿಯಾದ ಗಿಫ್ಟನ್ನೇ ಕೊಟ್ಟರೀ ನನ್ನ ಮಗ! ಐ ಜಸ್ಟ್ ಕಾಂಟ್ ಬಿಲೀವ್ ದಟ್ ಹಿ ಸೆಡ್ ಆಲ್ ದಿಸ್ ಟು ಮಿ” ಅಂತ ಅಳೂ ಅಳೂ ಅತ್ತು, ಸುಮ್ಮನೆ ಕೂತ ಅವರನ್ನು ನೋಡಿ ಪಾಪ ಅನಿಸಿತು.
“ಏನಂದ?” ಅ? ನಾನು ಕೇಳಿದ್ದು.
“ನಾನು ’ಪ್ಯಾರಾಸೈಟ್’ ಅಂತೆ, ’ಸೈಕಿಕ್ ಮದರ್’ ಅಂತೆ! ಅವನಿಗಾಗಿಯೇ ಜೀವನ ಸವೆಸಿದರೆ, ಹೀಗನ್ನಬಹುದಾ ಅವನು? ಹೊತ್ತುಹೊತ್ತಿಗೆ ಮಾಡಿ ಉಣಿಸಿ, ಓದಿಸಿ, ನನ್ನೆಲ್ಲ ಕಂಫರ್ಟ್ಸ್ನ್ನೂ ಬದಿಗೊತ್ತಿ, ಬಾಳಿರುವಾಗ ಹೀಗೆ ಅವನಿಂದ ಇಂಥ ಮಾತುಗಳನ್ನು ಕೇಳಬೇಕೇ ನಾನು? ನಾವೋ ಇಲ್ಲಿ ನಮಗಿರುವುದೆಲ್ಲ ಅವನದೇ ತಾನೇ, ಅಂತ ಪರದೇಶಿಗಳ ಹಾಗೆ ಮಗ ಇದ್ದೂ ಇರದವರ ಥರಾ ಒಬ್ರ ಮುಖಾ ಒಬ್ರು ನೋಡ್ಕೊಂಡು ಕಾಲ ಕಳೀತಿರುವಾಗ, ಅವ್ನಲ್ಲಿ ಆರಾಮಾಗಿ ಹೆಂಡ್ತಿ ಜೊತೆ ಸುಖವಾಗಿ ಇರೋದು ಬಿಟ್ಟಬಿಟ್ಟು ಎರಡು ವ?ಗಳಾದ್ರೂ ಮಕ್ಕಳಾಗಿಲ್ಲ ಅಂತ ನಮ್ಮ ಮೇಲೆ ತಪ್ಪು ಹೊರಿಸ್ತಾ ಇದಾರೇಂದ್ರೆ ನಂಬ್ತೀರಾ?” ಎಂದು ಹೇಳಿ, ಉಸಿರೇ ಅಡಗಿ ಹೋದವರ ಹಾಗೆ ನಿಸ್ತೇಜರಾಗಿ ಕುಳಿತ ಪಾರ್ವತಿಯವರ ಮನಸ್ಸಿಗೆ ಪೆಟ್ಟು ಜೋರಾಗಿಯೇ ಬಿದ್ದಿರುವುದು ಸ್ಪ?ವಾಗಿತ್ತು.
“ನಿಮ್ಮ ತಪ್ಪು ಏನಿದೆ ಅಂತೆ ಅದ್ರಲ್ಲಿ?” ನನಗೂ ಅವರ ಮಾತಿನಿಂದ ಅಚ್ಚರಿಯಾಗಿತ್ತು.
“ಅಲ್ಲಾರೀ, ಅವನ ಹೆಂಡ್ತಿ ಜಾಣೆ, ಒಳ್ಳೇ ಹುಡುಗೀ ಅನ್ಕೊಂಡಿದ್ದೆ. ಅದೂ ಅವನ ಹಾಗೇ ಆಡುತ್ತಲ್ರೀ. ಮದುವೇಲಿ ನಾವು ಒಳ್ಳೇ ಮನಸಿಂದ ಆಶೀರ್ವಾದ ಮಾಡಿಲ್ಲವಂತೆ. ಅದಕ್ಕೆ ಅವ್ರಿಗೆ ಮಕ್ಕಳಾಗಿಲ್ಲವಂತೆ. ಎ? ಫನ್ನಿ ಅನ್ಸಲ್ಲವಾ?” ಎಂದು ಏನು ನೆನಪಾಯಿತೋ ಜೋರಾಗಿ ನಕ್ಕರು. ನಗುತ್ತಲೇ ಕಣ್ಣು ತುಂಬಿಕೊಂಡರು. “ಆರೋಗ್ಯದ ವಿ?ಯ ಸಾವ್ರ ಇರುತ್ತೆ ಕಣ್ರೀ. ಎಜುಕೇಟೆಡ್ ಆಗಿ ಹೀಗೆ ಮಾತಾಡ್ತಾರಲ್ಲ ಅಂತ ಬೇಸ್ರ ಆಯ್ತು….” ಪುನಃ ಕಣ್ಣೊರೆಸಿಕೊಳ್ಳುತ್ತಾ,
“ಅಡಾಪ್ಟ್ ಮಾಡ್ಕೊಂಡು ಬೆಳೆಸಿದ್ರಾಯ್ತು ಅಂದುಕೊಳ್ಳಲಾರದ? ನನ್ನ ಮಗ ಹೆಡ್ಡ ಆದನಲ್ರೀ?” ಎಂಬ ಅವರ ರೋದನಕ್ಕೆ ಸುಮ್ಮನೆ ಅವರ ಮುಂಗೈಯನ್ನೊಮ್ಮೆ ಮತ್ತೆ ಮತ್ತೆ ಸವರಿ ಸಮಾಧಾನಿಸುವುದನ್ನು ಬಿಟ್ಟು ನಾನೂ ಏನನ್ನಾದರೂ ಹೇಳಲಾಗಲೇ ಇಲ್ಲ.
ಮತ್ತೊಮ್ಮೆ ಕಾಫಿ ಮಾಡಿಕೊಟ್ಟ ಮೇಲೆ ಸ್ವಲ್ಪ ಗೆಲವಾದರು. “ಪ್ರಪಂಚದಲ್ಲಿ ಎ? ಮಂದಿಗೆ ಅವ್ರದ್ದೇ ಮಕ್ಳಿದಾರೆ ಹೇಳ್ರೀ. ಮಕ್ಕಳಿಲ್ಲದಿರೋರಿಗೆ ಇಲ್ಲ ಅನ್ನುವುದೊಂದೇ ಚಿಂತೆ ಆದರೆ, ಮಕ್ಕಳಿರೋರಿಗೆ ನೂರಾರು ಚಿಂತೆ!” ಎಂಬ ಹಳೆಯ ವಾಡಿಕೆಯ ಮಾತನ್ನು ಆಡಿ “ಐ ಪಿಟಿ ಅಬೌಟ್ ಬೋತ್ ಆಫ್ ದೆಮ್” ಎನ್ನುತ್ತ ನಿಟ್ಟುಸಿರು ಹೊರಚೆಲ್ಲಿದರು.
ಅಬ್ಬಾ ತಾಯಿ ಹೃದಯವೇ! ನಾಕಾರು ನಿಮಿ?ಗಳ ಕೆಳಗೆ ಅಲ್ಲೋಲಕಲ್ಲೋಲ ಅನ್ನುವಂತೆ ಮಾತಾಡಿ, ಈಗ ಎ? ಸಡನ್ನಾಗಿ ಮೆತ್ತಗಾದರಲ್ಲ ಅಂತ ನನಗೇ ಅಚ್ಚರಿಯಾಯಿತು. ಅವರೆದೆಯ ಅಸಮಾಧಾನದ ಐಸ್ಗಡ್ಡೆ ಕರಗುತ್ತಿರುವ
ಸೂಚನೆ ಸಿಕ್ಕಿತು,
“ಮಕ್ಕಳು ಏನಂದರೂ ಸಹಿಸಿಕೋಬೋದು ನೋಡಿ. ಆದ್ರೆ ಅವ್ನು ನಂಗೆ ಪ್ಯಾರಾಸೈಟ್ ಅಂದುಬಿಟ್ಟನಲ್ಲ. ಅವನ ಹತ್ರ ನಾನು ಚಿಕ್ಕಾಸು ತೆಗೆದುಕೊಂಡಿಲ್ಲ. ಅಂದ್ರೂ ನನ್ನನ್ನ ಪರಾವಲಂಬಿ ಅಂದನಲ್ಲ, ಅದಕ್ಕೇ ನಂಗೆ ಕೋಪ ಬಂತು. ಹೊರಟು ಬಂದುಬಿಟ್ಟೆ” ಅಂದು ಮತ್ತೆ ಬತ್ತಿದ ಕೆರೆಗೆ ನೀರು ಹರಿಸುವ ಸೂಚನೆ ಕೊಟ್ಟರು.
“ಅಯ್ಯೋ ತಗೀರಿ ಅತ್ಲಾಗೆ. ಅರ್ಥ ಗೊತ್ತಾಗದೇ ಮಾತಾಡಿರ್ತಾನೆ ಬಿಡಿ” ಅಂದು ನನಗನಿಸಿದ್ದನ್ನು ಹೇಳಿದೆ.
“ಏನೋಪ್ಪಾ ನೀವು ಹೇಳಿದ್ದೂ ನಿಜ ಇರಬಹುದು. ನೀವೇನೇ ಹೇಳಿ. ಇನ್ನು ಮತ್ತೆ ನಾನು ಅವನ ಮನೆಗೆ ಕಾಲಿಡಲ” ಅಂತ ಭಾರವಾದ ದನಿಯಲ್ಲಿ ಉಲಿದರು. ಏನೇನು ನೋವು, ಗೊಂದಲಗಳಿದ್ದವೋ ಆ ಹಿರಿಯ ಹೃದಯದಲ್ಲಿ ಅಂತ ನನಗೂ ಕೆಡುಕೆನಿಸಿತು. ಮಕ್ಕಳಾಗಿಲ್ಲವೆಂದು ಕೊರಗುತ್ತಿರುವ ದೂರದೇಶದಲ್ಲಿರುವ ಇಬ್ಬರು, ಮಗನಿದ್ದೂ ಇಲ್ಲವೆಂದು ಭಾವಿಸುತ್ತೇನೆ ಎನ್ನುತ್ತಿರುವ ಒಬ್ಬರು? ಎಂಥ ವಿಪರ್ಯಾಸಗಳ ಜೀವನವಿದು ಅನಿಸಿತು. ಕಠಿಣತೆಯ ಮತ್ತೊಂದು ಅವತಾರವೆಂಬಂತೆ ನಾನು ಬಲ್ಲವರಾಗಿದ್ದ ಶ್ರೀಮತಿ ಪಾರ್ವತಿ ರಾಮನ್ ಮೊದಲಬಾರಿಗೆ ವಯಸ್ಸಾದ ಹೆಣ್ಣುಮಗಳೊಬ್ಬಳ ಆರ್ತತೆಯ ಜೋಂಪಿನಲ್ಲಿ ಲೇಪಿತರಾದವರಂತೆ ಕಾಣುತ್ತಿದ್ದರು. ಮತ್ತೊಂದು ತಾಸರ್ಧತಾಸು ಸಿನಿಮಾ, ನಾಟಕ ಅಂತ ಸುಮ್ಮಸುಮ್ಮನೆ ಮಾತಾಡಿ ಮನೆಗೆ ಮರಳಿದ ಆಕೆಯ ಎದೆಯ ಬೇಗುದಿ ತುಸುವಾದರೂ ಕಡಮೆಯಾದಂತೆ ಕಾಣುತ್ತಿತ್ತು.
ಇದೆಲ್ಲ ಆಗಿ ನಾಕಾರು ತಿಂಗಳಾಗಿದ್ದುವೇನೋ. ನಾನೊಮ್ಮೆ ಅವರಿಗೆ ಕೊಡಿಸಿದ್ದ ಧಾರವಾಡ ಕಾಟನ್ ಸೀರೆಯನ್ನು ಉಟ್ಟುಕೊಂಡು, ಉಬ್ಬುಬ್ಬಿ ನಗುತ್ತ ಮನೆಗೆ ಬಂದರು. “ನಿನ್ನೆ ಅವರೇ ಇಬ್ರೂ ಫೋನು ಮಾಡಿದ್ರು. ಖುಷಿಯಾಗಿ ಮಾತಾಡಿದ್ರು. ಮಕ್ಕಳಾಗ್ತವೆ ಅಂದಿದ್ದಾರಂತೆ ಡಾಕ್ಟ್ರು. ತುಂಬಾ ಒತ್ತಾಯ ಮಾಡಿ ಕರೀತಿದಾರೆ. ನಾಳೆ ವೀಸಾಗಾಗಿ ಚೆನ್ನೈಗೆ ಹೋಗ್ತಾ ಇದೀನಿ. ಪಾಪ! ಚಿಕ್ಕವರಲ್ಲವಾ? ಏನ್ ಮಾಡೋಕಾಗುತ್ತೆ ಹೇಳಿ? ಈ ಸರ್ತಿ ಹೋದಾಗ ನಿನ್ನ ವೊಕಾಬುಲರಿ ಸುಧಾರಿಸಕೊಳ್ಳೋ. ಪ್ಯಾರಾಸೈಟ್ ಅಲ್ಲ ಕಣೋ ಮಂಗಾ, ಪರಫೆಕ್ಟ್ ಮದರ್ ಅಂತ ಹೇಳಿ ಬರ್ತೀನಿ” ಅಂದು ಹರೆಯ ಮರಳಿ ಬಂದ ಹುಡುಗಿಯ ಹಾಗೆ ಮಾತಾಡಿ, ಬಾಯ್ತುಂಬ ಹರಟಿ, ನಕ್ಕು, ಆಪ್ತವಾದ ಒಂದು ಅಪ್ಪುಗೆ ಕೊಟ್ಟು ಸಂಭ್ರಮದಿಂದ ಹೊರಟರು ಪಾರ್ವತಿ.
ನನ್ನೆರಡು ಮಕ್ಕಳು ಶಾಲೆಯಿಂದ ಮರಳಿ ಬರುವುದನ್ನೇ ಕಾಯುತ್ತ, ಶ್ರೀಮತಿ ಪಾರ್ವತಿ ರಾಮನ್ನರ ಮಾತುಗಳನ್ನೇ ಮೆಲುಕುಹಾಕುತ್ತ ಮರುಮುಂಜಾವಿನ ಚಪಾತಿಗೆ ಚವುಳಿಕಾಯಿ ಸೋಸುತ್ತ ಕೂತೆ. ನಾಳೆ ದೊಡ್ಡವರಾದ ಮೇಲೆ ನನ್ನ ಮಕ್ಕಳು ಏನೆಲ್ಲ ಮಾತಾಡಿ ನನ್ನನ್ನು ಅಳಿಸಬಹುದು, ನನ್ನ ಪ್ರತಿಕ್ರಿಯೆ ಹೇಗಿರಬಹುದು ಎಂದೆಲ್ಲ ಕಲ್ಪಿಸಿಕೊಂಡು ನಕ್ಕವಳಿಗೆ ಮಕ್ಕಳಿಗಾಗಿ ಮೆಕ್ಕೆತೆನೆ ಬೇಯಿಸುವ ಕೆಲಸ ನೆನಪಾಗಿ ಯೋಚನೆಗಳಿಗೆ ಬ್ರೇಕು ಹಾಕಬೇಕಾಯಿತು. ಈ ಸಲ ಗುಡಿಗೆ ಹೋದಾಗ ನನ್ನುಳಿತಾಯದ ಹಣವನ್ನೇ ಮಂಗಳಾರತಿ ತಟ್ಟೆಗೆ ಹಾಕುವ ಕ್ರಾಂತಿಕಾರಿ ಯೋಚನೆಯೂ ಮೂಡದೇ ಇರಲಿಲ್ಲ!
ಲೇಖಕರು ಅನುವಾದಕಿ ಹಾಗೂ ರಂಗಕಲಾವಿದೆ