ಉತ್ಥಾನ ಮಾರ್ಚ್ 2018
Month : March-2018 Episode : Author :
Month : March-2018 Episode : Author :
Month : March-2017 Episode : Author : ದು.ಗು.ಲಕ್ಷ್ಮಣ
ರಾಹುಲ್ ದ್ರಾವಿಡ್ ಮೇಲ್ಪಂಕ್ತಿ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ, `ವಾಲ್’ ಎಂದೇ ಪ್ರಖ್ಯಾತರಾಗಿರುವ ರಾಹುಲ್ ದ್ರಾವಿಡ್ ನಿವೃತ್ತಿಗೆ ಮುನ್ನ ಹೇಗೋ ಹಾಗೆ ಈಗಲೂ ಕ್ರೀಡಾಪ್ರೇಮಿಗಳಿಗೆ ರೋಲ್ ಮಾಡೆಲ್ ಆಗಿಯೇ ಉಳಿದಿದ್ದಾರೆ. ಭಾರತ ತಂಡ ಸೋಲಿನ ಸುಳಿಯಲ್ಲಿದ್ದಾಗ ಅವರು ಆಪದ್ಬಾಂಧವನಂತೆ ಬಂದು ಬ್ಯಾಟ್ ಬೀಸಿ ತಂಡವನ್ನು ಗೆಲವಿನ ದಡ ಸೇರಿಸಿದ ನಿದರ್ಶನಗಳು ಸಾಕಷ್ಟಿವೆ. ತಲೆಯನ್ನು ತಂಪಾಗಿಟ್ಟುಕೊಂಡು ಹೃದಯ ಬೆಚ್ಚಗಿಟ್ಟುಕೊಂಡು ತಂಡದ ಗೆಲವಿಗಾಗಿಯೇ ಶ್ರಮಿಸುತ್ತಿದ್ದ ಅಪರೂಪದ ಕ್ರಿಕೆಟಿಗ ರಾಹುಲ್ ದ್ರಾವಿಡ್. ಆತ ನಮ್ಮ ಕರ್ನಾಟಕದವರೆಂದು ಹೇಳಿಕೊಳ್ಳಲು ಕನ್ನಡಿಗರಿಗೆ ಮತ್ತಷ್ಟು […]
Month : March-2017 Episode : Author : ಶ್ರೀಹರ್ಷ ಪೆರ್ಲ
ಹಾರುವ ತಟ್ಟೆಗಳು ಅಥವಾ ವಸ್ತುಗಳ ಬಗ್ಗೆ ವದಂತಿಗಳು, ಅಂತೆಕಂತೆಗಳು – ಎಲ್ಲವನ್ನೂ ಹಲವು ಬಾರಿ ಕೇಳಿದ್ದೇವೆ. ಅತೀಂದ್ರಿಯವಾದ ಅಂತಹವುಗಳನ್ನು ನಂಬುತ್ತೇವೋ ಇಲ್ಲವೋ ಎಂಬುದು ಬೇರೆ ವಿಷಯ; ಆದರೆ ವೈಜ್ಞಾನಿಕವಾದ ಅಂತಹ ಯಂತ್ರಗಳು ಈಗಾಗಲೇ ಹಲವು ರೀತಿಗಳಲ್ಲಿ ಬಳಕೆಗೆ ಬಂದಿವೆ. ಮಾನವನನ್ನು ಹೊತ್ತೊಯ್ಯುವ ವಿಮಾನಗಳೂ ಹೆಲಿಕಾಪ್ಟರ್ಗಳೂ ಅತ್ಯಂತ ದುಬಾರಿಯ ವಸ್ತುಗಳು. ಸಾಮಾನ್ಯರ ಕೈಗೆ ಅವು ಗಗನಕುಸುಮಗಳೇ. ಆದರೆ ಇದೀಗ ರಿಮೋಟ್ ಮೂಲಕ ನಿಯಂತ್ರಿಸಬಹುದಾದ ’ಡ್ರೋನ್’ಗಳು ತಮ್ಮ ಹೆಜ್ಜೆ ಗುರುತನ್ನು ಎಲ್ಲೆಡೆ ಮೂಡಿಸಲಾರಂಭಿಸಿವೆ. ತನ್ನಿಂದತಾನೇ ಹಾರಾಡುವ ’ಡ್ರೋನ್’ಗಳು […]
Month : March-2017 Episode : Author : ಡಾ|| ಕೆ. ಜಗದೀಶ ಪೈ
ಮನುಷ್ಯ ಯಾವುದೇ ಸಾಧನೆ ಮಾಡಬೇಕಾದರೂ, ಆತನಲ್ಲಿ ಮೊದಲು ಇರಬೇಕಾದದ್ದು ಧೈರ್ಯ. ’ಧೈರ್ಯಂ ಸರ್ವತ್ರ ಸಾಧನಂ.’ ಧೈರ್ಯ ಇದ್ದರೆ ಎಂತಹ ಸಂಕಟದಿಂದಲೂ ಪಾರಾಗಿ ಬರಬಹುದು. ಧೈರ್ಯವು ಮನುಷ್ಯನ ಎಲ್ಲ ಸದ್ಗುಣಗಳ ರಕ್ಷಾಕವಚವೆನಿಸಿದೆ. ಧೈರ್ಯವಿಲ್ಲದಿದ್ದರೆ ಜೀವನದಲ್ಲಿ ಒಂದು ಹೆಜ್ಜೆಯನ್ನೂ ಮುಂದಿಡಲು ಸಾಧ್ಯವಿಲ್ಲ. ಧೀರನು ಸದಾ ಮುಂದುವರಿಯುತ್ತಾ ಇರುತ್ತಾನೆ. ಹೇಡಿ ಸದಾ ಇದ್ದಲ್ಲೇ ಇರುತ್ತಾನೆ. ಸಾಹಸದ ಕಾರ್ಯ ಮಾಡಲೂ ಧೈರ್ಯ ಬೇಕು. ’ಗಾಳಿ ಮತ್ತು ಸಮುದ್ರದ ಅಲೆಗಳು ಯಾವತ್ತೂ ಧೈರ್ಯವಂತ ನಾವಿಕನ ಪರವಾಗಿರುತ್ತದೆ’ ಎಂಬುದಾಗಿ ಇಂಗ್ಲೆಂಡಿನ ಇತಿಹಾಸಕಾರನಾದ ಎಡ್ವರ್ಡ್ ಗಿಬ್ಬನ್ ಹೇಳಿದ್ದಾನೆ. […]
Month : March-2017 Episode : Author : ಛಾಯಾ ಭಗವತಿ
ಅಬ್ಬಾ ತಾಯಿ ಹೃದಯವೇ! ನಾಕಾರು ನಿಮಿಷಗಳ ಕೆಳಗೆ ಅಲ್ಲೋಲಕಲ್ಲೋಲ ಅನ್ನುವಂತೆ ಮಾತಾಡಿ , ಈಗ ಎಷ್ಟು ಸಡನ್ನಾಗಿ ಮೆತ್ತಗಾದರಲ್ಲ ಅಂತ ನನಗೇ ಅಚ್ಚರಿಯಾಯಿತು. ಫೋನು ಮಾಡಿದಾಗ, ಎದೆಯ ಬೇಗುದಿ ಹೇಳಿಕೊಳ್ಳಬೇಕು ಅನಿಸಿದಾಗ ಮುಲಾಜಿಲ್ಲದೇ, “ಈಗ ಸ್ವಲ್ಪ ಬಿಜಿ ಇದೀನಿ, ನಾನೇ ಬಿಡುವಾದಾಗ ಮಾತಾಡ್ತೀನಿ, ಏನೂ ಅನ್ಕೋಬೇಡಿ” ಅನ್ನುತ್ತ, ತುಂಬಿಕೊಂಡಿರುತ್ತಿದ್ದ ನನ್ನ ಕಣ್ಣೀರು ಕಪಾಳಕ್ಕೆ ಇಳಿಯುವ ಹಾಗೆ ಮಾತಾಡಿಬಿಡುತ್ತಿದ್ದವರ ವರಸೆ ನೆನಪಾಗಿ, ನಾನೂ ಸೊಕ್ಕು ತುಂಬಿಕೊಂಡು, “ಅದೂ. ಇವತ್ತ ತುಂಬ ಕೆಲ್ಸ ಇದೆ, ಆಮೇಲೆ ಮಾತಾಡ್ತೀನ್ರೀ” ಅಂದು ಔಪಚಾರಿಕ […]
Month : March-2017 Episode : Author : ಸುಧೀಂದ್ರ ಹಾಲ್ದೊಡ್ಡೇರಿ
ಸಾಮಾನ್ಯವಾಗಿ ಕಳೆಯೆಂದು ಪರಿಗಣಿಸಲಾದ ನೂರೆಪ್ಪತ್ತು ಸಸ್ಯಗಳನ್ನು ಗುರುತಿಸಿ, ಅವು ಈ ನಿಸರ್ಗದಲ್ಲಿ ಏಕೆ ಹುಟ್ಟಿವೆ, ಅವುಗಳಿಂದ ಏನಾದರೂ ಪ್ರಯೋಜನವಿದೆಯೆ? ಎಂದು ಸಂಶೋಧನೆ ನಡೆಸಿದವರು ವಿಜ್ಞಾನಿ ಪಳ್ಳತ್ತಡ್ಕ ಕೇಶವ ಭಟ್ಟ. ಇಂಥ ವಿಭಿನ್ನ ಕೆಲಸಗಳಿಂದಲೇ ಜಗನ್ಮಾನ್ಯತೆ ಪಡೆದ ಈ ಕನ್ನಡಿಗ ವಿಜ್ಞಾನಿಯ ಮೂಲ ಕಾರ್ಯಕ್ಷೇತ್ರ ದಕ್ಷಿಣ ಅಮೆರಿಕದ ವೆನಿಝ್ಯೂಲ! ಬಾಲ್ಯದಲ್ಲಿದ್ದಾಗ ಅಂಗಡಿಯಿಂದ ಉಪ್ಪೊ, ಹುರಿಗಡಲೆಯೊ ತಂದುಕೊಡು ಎಂದು ಅಮ್ಮ ಹೇಳಿದೊಡನೆ ನೀವು ನೆಗೆಯುತ್ತಾ ಪೇಟೆಬೀದಿಗೆ ಓಡುತ್ತಿದ್ದೀರಲ್ಲವೆ? ಆ ಓಟವೆಂದೂ ನೇರವಾಗಿರುತ್ತಿರಲಿಲ್ಲ, ಎಡದಿಂದ ಬಲ, ಬಲದಿಂದ ಎಡಕ್ಕೆ ಸುತ್ತುತ್ತಾ ಅಂಗಡಿ […]
Month : March-2017 Episode : Author : ಎಂ.ಬಿ. ಹಾರ್ಯಾಡಿ
ಮುಸ್ಲಿಂ ಮಹಿಳೆಯರಿಗೆ ಸಂಬಂಧಿಸಿದ `ತ್ರಿವಳಿ ತಲಾಖ್’ ಬಗ್ಗೆ ಮಗದೊಮ್ಮೆ ಬಹಳಷ್ಟು ಚರ್ಚೆಗಳು ದೇಶದಾದ್ಯಂತ ನಡೆಯುತ್ತಿವೆ. ತ್ರಿವಳಿ ತಲಾಖ್ ಮುಸ್ಲಿಂ ಪುರುಷರ ಪಾಲಿಗೆ ವರದಾನವೆಂದೇ ಪರಿಗಣಿಸಲಾಗಿರುವ ಒಂದು ಅನಿಷ್ಟ ಪದ್ಧತಿ. ಈ ಪದ್ಧತಿಯಂತೆ ಓರ್ವ ವಿವಾಹಿತ ಮುಸ್ಲಿಂ ಪುರುಷ ತನ್ನ ಪತ್ನಿಯಿಂದ ವಿವಾಹವಿಚ್ಛೇದನ ಪಡೆಯಲು ಬೇರೇನೂ ಮಾಡಬೇಕಾಗಿಲ್ಲ; ಮೂರು ಬಾರಿ ‘ತಲಾಖ್’ ಎಂದು ಹೇಳಿದರೆ ಅಷ್ಟು ಸಾಕು. ನ್ಯಾಯಾಲಯಗಳು ಈ ಪದ್ಧತಿಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವ ಕಾರಣದಿಂದ ಇದು ಮತ್ತೆಮತ್ತೆ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ಒಂದು ನೆಲೆಯಲ್ಲಿ ನೋಡಿದರೆ […]
Month : March-2017 Episode : ರಾಗಮಾಲ ಕೃತಿಗಳು-5 Author : ಮಹೇಂದ್ರ ಡಿ.
ಧೀಮಿಕಿಟ ತಾ ಥೈ ಢಣನನನ ಢಣನನ ಧಿಮಿತ ತಕಿಟ ಧಿಮಿ ಡಮರು ನಿನಾದ ಮೇಘಮಾರುತಗಳ ಚಲನ ಪ್ರರೋಧ ಕರ್ಣಸುಧಾ ಧ್ವನಿ ಆಲಿತ ಸುಲಲಿತ ಝೇಂಕರಣ ಹೂಂಕರಣ ಭೋರ್ಗರಿತ ಧೀಮಿಕಿಟ ತಾ ಥೈ ಢಣನನನ ಢಣನನ ಹೀಗೆ ಕೇಳುವಾಗ ಶಬ್ದೋಚ್ಚಾರದ ಜೊತೆಗೆ ಡಮರುವಿನ ಧ್ವನಿ ನಿಮಗೆ ಕೇಳುತ್ತಿರುವಂತೆ ಭಾಸವಾದರೆ ಅದುವೆ ಸಂಗೀತ ಸ್ಫುರಿಸುವಿಕೆಗೆ ಇರುವ ಶಕ್ತಿ. ನಾದದಲ್ಲಿನ ಭಾವಾವೇಶವೇ ತನ್ನ ಅಂತರಂಗದ ಇರುವಿಕೆಯನ್ನು ಪ್ರಸ್ತುತಗೊಳಿಸಿ ತನ್ನೊಳಗೆ ಚಿತ್ತೈಸಿಕೊಂಡುಬಿಡುತ್ತದೆ. ಗೌಡಮಲ್ಹಾರ ರಾಗದ ವೈಶಿ್ಷ್ಟಯವೇ ಹಾಗೆ ದೇಹಲಾಸ್ಯವನ್ನೊ, ಜಟಿಲತೆಯನ್ನೊ ಸುಲಲಿತಗೊಳಿಸಿ ಆಹ್ಲಾದ […]
Month : March-2017 Episode : Author : ಎಚ್ ಮಂಜುನಾಥ ಭಟ್
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ರಾಷ್ಟ್ರೋತ್ಥಾನ ವಿದ್ಯಾಲಯ ಬೆಂಗಳೂರು ಕೇಂದ್ರಿತ ಸೇವಾಸಂಸ್ಥೆ ‘ರಾಷ್ಟ್ರೋತ್ಥಾನ ಪರಿಷತ್’ ನಡೆಸುತ್ತಿರುವ ಒಂದು ಶೈಕ್ಷಣಿಕ ಪ್ರಕಲ್ಪ. ಗ್ರಾಮಸಮುದಾಯದ ಸಮಗ್ರ ಬೆಳವಣಿಗೆಯನ್ನು ಕಣ್ಮುಂದೆ ಇರಿಸಿಕೊಂಡು 1988ರಲ್ಲಿ ಇಲ್ಲಿ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗಿದೆ. ಈ ವಿದ್ಯಾಲಯ ತನ್ನ ಸಂಸ್ಕಾರಪ್ರದ ಮತ್ತು ಸಂಘಟನಾ ಚಟುವಟಿಕೆಗಳಿಂದಾಗಿ ಸಾರ್ವಜನಿಕರ ಮೆಚ್ಚುಗೆ ಪಡೆದಿದೆ. ಸ್ಥಳ ಮತ್ತು ಸಂದರ್ಭ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಒಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ. ವಿದ್ಯಾರ್ಥಿಗಳು ಪರೀಕ್ಷಾ ಹಾಲ್ನಲ್ಲಿ ಕುಳಿತು ಬರೆಯಲು ಸಜ್ಜಾಗಿದ್ದಾರೆ. ಅಲ್ಲಿ ಕೆಲವು ಶಿಕ್ಷಕರು ವಿದ್ಯಾರ್ಥಿಗಳಿಗೆ […]
Month : March-2017 Episode : Author : ಪ್ರೋ. ಎಂ. ಎಂ. ಗುಪ್ತ
ಪ್ರತಿ ಪ್ರಜೆಯೂ ಹಣವನ್ನು ಸರ್ಕಾರಕ್ಕೆ ತೆರಿಗೆ ಮತ್ತು ಇನ್ನಿತರ ರೂಪದಲ್ಲಿ ಕೊಡದ ಹೊರತು ಅವನು ಹೆಚ್ಚು ಪಡೆಯಲು ಸಾಧ್ಯವಿಲ್ಲ. ಸರ್ಕಾರದಿಂದ ಎಲ್ಲವನ್ನೂ ಉಚಿತವಾಗಿ ಪಡೆದು, ಕ?ಪಡದೆ ಮತ್ತು ಪರಾವಲಂಬಿಗಳಾಗಿ ಜೀವಿಸುವ ಒಂದು ವರ್ಗವನ್ನು ಬಜೆಟ್ ಮೂಲಕ ನಿರ್ಮಾಣ ಮಾಡಬೇಕೆ ಎಂದು ಯೋಚಿಸುವ ಕಾಲ ಈಗ ಬಂದಿದೆ ಎನಿಸುತ್ತದೆ. ಹಣಕಾಸು ಸಚಿವರು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಆರ್ಥಿಕ ಬದಲಾವಣೆಗಳ ಹಿನ್ನೆಲೆಯಲ್ಲಿ ತಮ್ಮ 4ನೇ ಬಜೆಟ್ನ್ನು ಮಂಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತೀಕರಣದ ಎರಡು ದಶಕಗಳ ನಂತರ ಅಭಿವೃದ್ಧಿ […]