ಬೌದ್ಧ ವಾಙ್ಮಯದಲ್ಲಿ ಗೌತಮಬುದ್ಧನ ಜೀವನಚರಿತ್ರೆಯನ್ನು ನಿರೂಪಿಸಿರುವ ಹಲವು ಕೃತಿಗಳು ಇವೆ. ತ್ರಿಪಿಟಕಗಳಲ್ಲಿ ಬುದ್ಧನ ಜೀವನವನ್ನು ಕುರಿತ ಹಲವು ವಿವರಗಳು ಬಂದಿವೆ. ಅವುಗಳ ಆಧಾರದ ಮೇಲೆ ರಚಿತವಾಗಿರುವವು ಆಮೇಲಿನ ಕಾಲದಲ್ಲಿ ಬಂದ ವ್ಯವಸ್ಥಿತ ಜೀವನಚರಿತ್ರೆಗಳು. ಅವುಗಳಲ್ಲಿ ಅಶ್ವಘೋಷರಚಿತ ‘ಬುದ್ಧಚರಿತ’ ಕಾವ್ಯವು ಶುದ್ಧ ಸಂಸ್ಕೃತ ಭಾಷೆಯಲ್ಲಿದ್ದರೆ ‘ಲಲಿತವಿಸ್ತರ’ ಮತ್ತು ‘ಮಹಾವಸ್ತು’ ಕೃತಿಗಳು ಮಿಶ್ರಸಂಸ್ಕೃತದಲ್ಲಿಯೂ ‘ನಿದಾನಕಥಾ’ ಕೃತಿಯು ಪಾಲಿಭಾಷೆಯಲ್ಲಿಯೂ ಇವೆ. ಇವಲ್ಲದೆ ಚೀನೀ ತರ್ಜುಮೆಯಲ್ಲಿ ಮಾತ್ರ ದೊರೆತಿರುವ ‘ಅಭಿನಿಷ್ಕ್ರಮಣಸುತ್ತ’ ಎಂಬ ಕೃತಿಯೂ ಉಂಟು. ಅಶ್ವಘೋಷನ ರಚನೆಯು ಸಂಸ್ಕೃತ ಕಾವ್ಯಮರ್ಯಾದೆಯಲ್ಲಿರುವ ಉತ್ತಮ ಕಾವ್ಯವಾಗಿದ್ದು […]
ಲಲಿತವಿಸ್ತರ (ಗೌತಮಬುದ್ಧನ ಜೀವನಗಾಥೆ)
Month : March-2018 Episode : Author : ಎಸ್.ಆರ್. ರಾಮಸ್ವಾಮಿ