ಶ್ರೇಷ್ಠಿ ನಾಣ್ಯಗಳನ್ನು ಎಣಿಸುತ್ತಿದ್ದ. ಆತನ ಮಗ, ಸುಮಾರು ಹತ್ತು ವ?ದವ, ಸನಿಯದಲ್ಲೆ ಆಟವಾಡಿಕೊಂಡಿದ್ದ.
“ಅಪ್ಪಾಜಿ, ಯಾರೋ ಬಂದಿದ್ದಾರೆ. ಕವಿಗಳಂತೆ.”
ಶ್ರೇಷ್ಠಿಯು ಗಹನವಾದ ಆಲೋಚನೆಯಲ್ಲಿದ್ದ. ಮಗನ ಮಾತು ಅವನ ಕಿವಿಯ ಮೇಲೆ ಬಿದ್ದಂತಿರಲಿಲ್ಲ. ಬೆರಳಿನ ತುದಿಯಲ್ಲಿ ಲೆಕ್ಕವನ್ನು ಮುಂದುವರೆಸಿದ್ದ.
ಸ್ವಲ್ಪ ಸಮಯ ಕಳೆಯಿತು. ಮಗ ಈ ಬಾರಿ ಅಪ್ಪನ ಹತ್ತಿರ ಬಂದು ಅವನ ಭುಜವನ್ನು ಅಲ್ಲಾಡಿಸುತ್ತ ಹೇಳಿದ, “ಅಪ್ಪಾಜೀ, ಯಾರೋ ಕವಿಗಳಂತೆ. ನಿಮ್ಮನ್ನು ನೋಡಲು ಬಂದಿದ್ದಾರೆ” ಶ್ರೇಷ್ಠಿ ಕತ್ತೆತ್ತಿ ನೋಡಿದ. ಹತ್ತಿರದಲ್ಲಿ ಸಾಧಾರಣ ಮೈಕಟ್ಟಿನ ವ್ಯಕ್ತಿಯೊಬ್ಬ ನಿಂತಿದ್ದ. ಬಂದ ವ್ಯಕ್ತಿ ಧನ ಸಹಾಯ ಕೇಳಲು ಬಂದಿದ್ದಾನೆಂದು ಅವನ ವಿನೀತ ಭಾವವೇ ತಿಳಿಸುತ್ತಿತ್ತು.
“ಏನು ಕವಿವರ್ಯರೇ, ಮತ್ತೆ ಹಣದ ತೊಂದರೆಯೋ? ಹಳೆಯ ಬಾಕಿ ಕೂಡ ಇದೆ. ಅದಕ್ಕೇ ಹೇಳುವುದು ಬಡತನ ಶಾಪವೆಂದು. ಸರ್ವೇ ಗುಣಾಃ ಕಾಂಚನಂ ಆಶ್ರಯಂತಿ ಅಂತ ನೀವೇ ಕಲಿಸಿರೋದು. ಎ? ಬೇಕು?”
“ಶ್ರೇಷ್ಠಿಗಳೇ, ಹಣವನ್ನು ಹಾಗೇ ಸಾಲವಾಗಿ ಕೊಡಬೇಡಿ. ನನ್ನ ಶ್ಲೋಕವನ್ನು ಕೊಂಡು ಹಣಕೊಡಿ.”
“ನಿಮ್ಮ ಶ್ಲೋಕಕ್ಕೆ ಹಣ! ನನಗೆ ನಗುವನ್ನೂ ತಡೆಯಲಾಗುತ್ತಿಲ್ಲ! ಅದೆ? ಕೊಡಬೇಕು ಹೇಳಿ!”
“ಹತ್ತು ಚಿನ್ನದ ನಾಣ್ಯಗಳು, ಹಿಂದಿನ ಸಾಲವೂ ತೀರಿತೆಂದು ಹೇಳಿ.”
“ಹತ್ತು! ಪರವಾ ಇಲ್ಲ, ಶ್ಲೋಕಗಳೂ ದುಬಾರಿಯಾಗಿವೆ” ಎನ್ನುತ್ತಲೇ ಶ್ರೇಷ್ಠಿ ಹತ್ತು ಚಿನ್ನದ ನಾಣ್ಯಗಳನ್ನು ಎಣಿಸಿದ.
“ಎಲ್ಲಿ ನಿಮ್ಮ ಆ ಶ್ಲೋಕ?”
“ಒಮ್ಮೆ ಓದಲೇ?”
“ಅದರ ಅವಶ್ಯಕತೆ ಇಲ್ಲ, ನಿಮ್ಮ ಕೆಲಸವಾಯಿತಲ್ಲ, ಇನ್ನು ನೀವು ಹೊರಡಬಹುದು.”
ಶ್ಲೋಕವನ್ನು ಬರೆದಿದ್ದ ಕಾಗದವನ್ನು ಹಾಗೇ ಮಡಿಸಿ ಶ್ರೇಷ್ಠಿ, ಅದನ್ನು ಹೊರಬಾಗಿಲಿನ ಮೇಲುಭಾಗದ ಅಂಚಿನ ಬಿರುಕಿನಲ್ಲಿ ಸಿಕ್ಕಿಸಿದ. ಒಂದು ಕೆಟ್ಟನಗೆ ಕೂಡ ತುಟಿಯಂಚಿನಲ್ಲಿ ಕಾಣಿಸಿಕೊಂಡು ಮರೆಯಾಯಿತು.
ಶ್ರೇಷ್ಠಿ ವ್ಯಾಪಾರದಲ್ಲಿ ನಿ?ತನಿದ್ದ. ಮನೆಯಲ್ಲಿ ಹೆಂಡತಿ ಮತ್ತು ಮಗ. ಪುತ್ರೋತ್ಸವವೂ ಸ್ವಲ್ಪ ತಡವಾಗಿಯೇ ಅದುದರಿಂದ, ಹುಟ್ಟಿದ ಕುಮಾರನಲ್ಲಿ ವಿಶೇ? ಮಮತೆ. ಆದ? ಸಂಪತ್ತನ್ನು ಮಗನಿಗಾಗಿ ಸಂಗ್ರಹಿಸುವ ತವಕ. ಶ್ರೇಷ್ಠಿಯ ವ್ಯಾಪಾರದ ವ್ಯಾಪ್ತಿ ದೇಶದ ಉದ್ದಗಲಕ್ಕೂ ಹರಡಿತ್ತು. ಒಮ್ಮೊಮ್ಮೆ ವ್ಯಾಪಾರಕ್ಕೆ ಹೊರಟನೆಂದರೆ ಅನೇಕ ತಿಂಗಳುಗಳು, ವ?ಗಳೂ ಕಳೆದು ಹೋಗುತ್ತಿದ್ದವು. ಸಂಪಾದನೆಯೇ ಜೀವನದ ಗುರಿ ಎಂದು ನಂಬಿದ್ದ ಶ್ರೇಷ್ಠಿ.
ಒಮ್ಮೆ ಶ್ರೇಷ್ಠಿಯ ವ್ಯಾಪಾರದ ಪ್ರವಾಸ ವ?ಗಳನ್ನೂ ಮೀರಿದವು. ಅದೆ? ವ?ಗಳು ಪ್ರವಾಸದಲ್ಲಿದ್ದನೋ ಅವನ ಅವಗಾಹನೆಗೆ ಬಾರದಾಯಿತು. ಪ್ರವಾಸ ಮಾಡಿದ? ಸಂಪಾದನೆ ಹೆಚ್ಚಿತ್ತು.
ಕೊನೆಗೊಮ್ಮೆ ಶ್ರೇಷ್ಠಿ ತನ್ನ ಊರಿಗೆ ಹಿಂತಿರುಗಲು ನಿರ್ಧರಿಸಿದ. ಗಳಿಸಿದ ಹಣವನ್ನೆಲ್ಲ ಸುರಕ್ಷಿತವಾಗಿ ಮನೆಗೆ ತರುವುದೇ ಒಂದು ಸಾಹಸದ ಕೆಲಸವಾಯಿತು. ಊರಿಂದ ಊರಿಗೆ ಎತ್ತಿನ ಬಂಡಿಗಳಲ್ಲಿ ಸಾಗುತ್ತ ತನ್ನ ಊರಿಗೆ ವಾಪಸಾದ ಶ್ರೇಷ್ಠಿ. ಹತ್ತು ದೀರ್ಘವ?ಗಳೇ ಕಳೆದಿದ್ದವು. ಹತ್ತು ವ?ಗಳ ಹಿಂದೆ ವ್ಯಾಪಾರಕ್ಕೆ ಹೊರಟಾದ ಇದ್ದ ದೈಹಿಕಸಾಮರ್ಥ್ಯ ಈಗ ಕುಗ್ಗಿತ್ತು. ಆದರೂ ಸಂಪಾದನೆ ಹಲವು ಪಟ್ಟು ಹೆಚ್ಚಿತ್ತು. ಅದರ ಸಮಾಧಾನದಿಂದ ಶ್ರೇಷ್ಠಿ ಬೀಗಿದ್ದ.
ಶ್ರೇಷ್ಠಿ ತನ್ನೂರಿಗೆ ತಲಪಿದಾಗ ರಾತ್ರಿಯಾಗಿತ್ತು. ಊರಿನವರೆಲ್ಲ ಮಲಗಿಯಾಗಿತ್ತು. ಮನೆಯ ಮುಂಬಾಗಲಿಗೆ ಬಂದ ಶ್ರೇಷ್ಠಿಗೆ ಹೆಂಡತಿಯನ್ನು ಎಬ್ಬಿಸಿ ನೋಡುವ ಕಾತರ. ಈ ಅವೇಳೆಯಲ್ಲಿ ಎಬ್ಬಿಸುವುದು ಬೇಡ ಎಂದು ನಿಶ್ಚಯಿಸಿದ. ಆದರೂ ಮನದಾಳದಲ್ಲೊಂದು ಕುತೂಹಲವಿತ್ತು. ಕುತೂಹಲ ತಡಯಲಾರದೆ ಬಂದು ನಿಶ್ಚಯಕ್ಕೆ ಬಂದು ಹೆಂಡತಿಯನ್ನು ಎಚ್ಚರಿಸುವುದೆಂದು ತೀರ್ಮಾನಿಸಿದ. ಮನೆಯ ಹಿಂದಿನ ಬಾಗಿಲನ್ನು ಏರಿ ಸಪ್ಪಳವಾಗದಂತೆ ಮಹಡಿಯನ್ನು ಏರಿ, ತಾನು ಮಲಗುತ್ತಿದ್ದ ಕೋಣೆಯ ಬಳಿಬಂದ. ಬಾಗಿಲು ಅರ್ಧ ತೆರೆದಿತ್ತು. ಬಾಗಿಲಿನ ಪಕ್ಕದಲ್ಲಿ ಒಂದು ಸಣ್ಣ ಹಣತೆಯನ್ನು ಹಚ್ಚಲಾಗಿತ್ತು.
ಹಣತೆಯ ಮಂದ ಬೆಳಕಿನಲ್ಲಿ ಅಸ್ಪ?ವಾದರೂ ಎಲ್ಲವನ್ನು ಗಮನಿಸಬಹುದಿತ್ತು. ನಿರೀಕ್ಷಿಸಿದ್ದಂತೆ, ಮಂಚದಲ್ಲಿ ತನ್ನ ಹೆಂಡತಿಯನ್ನು ಕಂಡ. ಸಂತೋ?ವಾಯಿತು. ಮರುಕ್ಷಣದಲ್ಲಿ ಶ್ರೇಷ್ಠಿಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ ಹೆಂಡತಿಯ ಪಕ್ಕದಲ್ಲಿ ತಾರುಣ್ಯವನ್ನು ದಾಟಿ, ಯೌವನದಲ್ಲಿದ್ದ, ಕಿರುಮೀಸೆಯ ಯುವಕನೊಬ್ಬ ಮಲಗಿದ್ದಾನೆ! ಹೆಂಡತಿ ಆ ಯುವಕನ ಮೇಲೆ ತನ್ನ ಕೈ ಹಾಕಿದ್ದಾಳೆ! ತಾನೇನು ನೋಡುತ್ತಿದ್ದೇನೆಂದು ಅರಿತ ಶ್ರೇಷ್ಠಿಗೆ ಸಿಟ್ಟು ಬಂದಿತು. ತನ್ನ ಹೆಂಡತಿಯ ಬಗ್ಗೆ ಕೀಳುಭಾವನೆ ಮೂಡಿತು. ಲಜ್ಜೆಗೆಟ್ಟ ಹೆಂಗಸೆಂದು ತಿರಸ್ಕಾರವುಂಟಾಯಿತು. ದಮನಿಗಳಲ್ಲಿ ಕ್ರೋಧ, ಪ್ರತಿಕಾರಗಳ ರಕ್ತ ಸಂಚಾರವುಂಟಾಯಿತು. ತನ್ನ ಮಡದಿಯೊಂದಿಗೆ ಮಂಚವನ್ನು ಹಂಚಿಕೊಂಡ ಆ ಯುವಕನನ್ನು ಅಲ್ಲೇ ಆಯುಧದಿಂದ ಇರಿದು ಕೊಲ್ಲಬೇಕೆನಿಸಿತು. ಆಯುಧಕ್ಕಾಗಿ ಸುತ್ತಮುತ್ತ ನೋಡಿದ. ಏನೂ ಸಿಗಲಿಲ್ಲ ಮನೆಯ ಮುಂದೆ ಕಲ್ಲೊಂದು ಇದ್ದುದು ನೆನಪಾಯಿತು. ಹಿಂದಿನ ಬಾಗಿಲನ್ನು ಇಳಿದು ಮುಂಬಾಗಿಲಿಗೆ ಬಂದ. ಕಲ್ಲಾಗಲೀ ಆಯುಧವಾಗಲೀ ಕಾಣಿಸಲಿಲ್ಲ. ಮುಂಬಾಗಿಲಿನ ಮೇಲೆ, ಮನೆಯ ಛಾವಣಿಗೆ ಹೊಂದಿಕೊಂಡಂತೆ ಮರದ ತುಂಡೊಂದಿತ್ತು, ಅದರಿಂದಲೇ ಯುವಕನ ತಲೆಯನ್ನು ಬಡಿದು, ಚಚ್ಚಿ ಸಾಯಿಸುವುದೆಂದು ತೀರ್ಮಾನಿಸಿದ. ನಿಧಾನವಾಗಿ ಹೊರ ಬಾಗಿಲಿನ ಮೇಲಂಚನ್ನು ತಲಪಿದ. ಕತ್ತಲಲ್ಲಿ ಏನೋ ಬಿದ್ದ ಸಪ್ಪಳವಾಯಿತು. ಕೆಳಗೆ ನೋಡಿದ. ಮಡಿಸಿದ ಕಾಗದವಾಗಿತ್ತು ಅದು. ಅದನ್ನು ಕೈಗೆತ್ತಿಕೊಂಡ. ಕತ್ತಲಲ್ಲಿ ಏನೂ ಕಾಣಲಿಲ್ಲ. ಎಸೆದುಬಿಟ್ಟ. ಮತ್ತೆ ಹತ್ತಿ ಛಾವಣಿಯಲ್ಲಿದ್ದ ಮರದ ತುಂಡನ್ನು ತೆಗೆದ. ಕ್ರೋಧ ಉಲ್ಬಣಿಸುತ್ತಿತ್ತು. ಹಿಂದಿನ ಬಾಗಿಲನ್ನು ಹತ್ತಿ ಮಲಗುವ ಕೋಣೆಯತ್ತ ತೆರಳಲು ಉದ್ಯುಕ್ತನಾದ, ನೆಲದ ಮೇಲೆ ಎಸೆದಿದ್ದ ಕಾಗದ ಕಾಲಿಗೆ ತಗುಲಿತು. ಮತ್ತೆ ಅದನ್ನು ಎತ್ತಿಕೊಂಡ. ಹಾಗೇ ಮಡಿಚಿದ್ದ ಕಾಗದವನ್ನು ತನ್ನ ಸೊಂಟಕ್ಕೆ ಸಿಕ್ಕಿಸಿಕೊಂಡ.
ಶ್ರೇಷ್ಠಿ ಮನೆಯ ಹಿಂದಿನ ಬಾಗಿಲನ್ನು ಹತ್ತಿ ಮಲಗುವ ಕೋಣೆಗೆ ಬಂದ. ಮನಸ್ಸು ಕ್ರೋಧದಿಂದ ಕುದಿಯುತ್ತಿತ್ತು. ಹಣತೆಯ ಬೆಳಕಿನಲ್ಲಿ ನೋಡಿದ. ಈ ಬಾರಿ ಯುವಕ ಕೂಡ ಶ್ರೇಷ್ಠಿಯ ಮಡದಿಯ ಮೈಮೇಲೆ ಕೈಯನ್ನಿಟ್ಟಿದ್ದಾನೆ!
ಯುವಕನ ಮುಖವನ್ನು ಚಚ್ಚಲು ಮರದ ತುಂಡನ್ನು ಮೇಲೆತ್ತಿದ. ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಕಾಗದದ ಸ್ಪರ್ಶವಾಯಿತು. ಹಣತೆಯ ಮಂದ ಬೆಳಕಿನಲ್ಲಿ ಹತ್ತಿರಕ್ಕೆ ಬಂದು, ಕಾಗದವನ್ನು ಬಿಡಿಸಿದ. ಅಲ್ಲಿ ಬರೆದಿದ್ದ ಅಕ್ಷರಗಳನ್ನು ಒಂದೊಂದಾಗಿ ಮನಸ್ಸಿನಲ್ಲೇ ಓದಿಕೊಂಡ.
’ಸಹನಾ ವಿದಧೀತ ನ ಕ್ರಿಯಾಂ, ಅವಿವೇಕಃ ಪರಮಾಪದಾಂ ಪದಂ’ ಎಂದು ಬರೆಯಲಾಗಿತ್ತು, ’ಯೋಚಿಸದೇ ಏನನ್ನೂ ಮಾಡಬಾರದು’ ಎಂದು ಅರ್ಥೈಸಿದ. ಏನೋ ನಿಶ್ಚಯಿಸಿದವನಂತೆ ಮನೆಯ ಮುಂಬಾಗಿಲಿಗೆ ಹಿಂತಿರುಗಿದ. ಕೆಲವೇ ಕ್ಷಣಗಳಲ್ಲಿ ಸೂರ್ಯೋದಯವಾಗುತ್ತಿತ್ತು. ಶ್ರೇಷ್ಠಿ ಮನೆಯ ಮುಂದೆ ಕುಳಿತ. ಹಾಗೇ ನಿದ್ದೆ ಹತ್ತಿತು.
ಪೂರ್ವದಲ್ಲಿ ಸೂರ್ಯೋದಯವಾಗಿ ಎಲ್ಲೆಲ್ಲೂ ಬೆಳಕು ಹರಡಿತ್ತು. ತನ್ನ ಗಂಡನನ್ನು ಗುರುತು ಹಿಡಿದ ಹೆಂಡತಿ ಜೋರಾಗಿ ಕೂಗಿಕೊಂಡಳು.
“ಕುಮಾರ, ನಿನ್ನ ತಂದೆ ವ್ಯಾಪಾರದಿಂದ ವಾಪಸಾಗಿದ್ದಾರೆ. ಬಾ ಬೇಗ. ಅವರ ಕಾಲಿಗೆರಗು” ಶ್ರೇಷ್ಠಿ ಕಣ್ಣು ತೆರೆದ.
ಹತ್ತು ವರ್ಷಗಳ ಹಿಂದೆ ಕವಿಯಿಂದ ಖರೀದಿಸಿದ್ದ ಎರಡು ಸಾಲಿನ ಶ್ಲೋಕದ ಕಾಗದ ಕೈಯಲ್ಲಿತ್ತು!
(ಮುಂದೆ ’ಕಿರಾತಾರ್ಜುನೀಯಂ’ ಮಹಾಕಾವ್ಯ ರಚಿಸಿದ ಭಾರವಿಯೇ ಆ ಕವಿಯೆಂದು ಹೇಳುತ್ತಾರೆ.)
ಸಹಸಾ ವಿದಧೀತ ನಕ್ರಿಯಾಂ ಅವಿವೇಕಃ ಪರಮಾಪದಾಂ ಪದಂ| ವೃಣತೇಹಿ ವಿಮೃಶ್ಯಕಾರಿಣಂ ಗುಣ ಲುಬ್ಧಾಃ ಸ್ವಯಮೇವ ಸಂಪದಃ ||
ಚಿಂತಿಸದೆ ಕಾಯಕದಿ ತೊಡಗದಿರು ಮಿತ್ರ ಅವಿವೇಕ ಆಪತ್ತಿಗೆಳೆಯುವುದು ನಿತ್ಯ | ನಿಂತು ಚಿಂತಿಸಿ ಕಾರ್ಯ ಕೈಗೊಳ್ಳುವವರನ್ನು ಸಂಪತ್ತು ಕೂಡುವುದು ಇದೆ ಬಾಳ ಸತ್ಯ ||