
ಅವಳೊಂದು ನಗೆ. ಅಷ್ಟು ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ಹೆಣ್ಣಿನ ನಗೆಯ ಅರ್ಥಗಳನ್ನು ಹುಡುಕಹೋಗಿ ಸೋತವರಲ್ಲಿ ನಾನೂ ನಿಲ್ಲಬೇಕಾದ ಸಂದರ್ಭದಲ್ಲಿ ಅವಳ ಬಗ್ಗೆ ಹೇಳದಿದ್ದರೆ ಹೇಗೆ? ಬದುಕಿಗೂ ನಗುವಿಗೂ ಜೋಡಿಸಿಕೊಂಡ ಕೊಂಡಿಗಳ ಕತೆ ಇದು! ಅವಳಿಗೆ ಹೆಸರು ಬೇಡ, ತಿಳಿದಿದ್ದರೂ ಹೇಳಬಾರದು ಅಂದುಕೊಂಡಿದ್ದೇನೆ. ಈ ಸ್ವಚ್ಛ, ಮುಗ್ಧ ನಗೆಯ ಮೂಲಕವೇ ನನ್ನ ಮನಸ್ಸಿನ ಪದರಗಳಲ್ಲುಳಿದವಳು ಅಷ್ಟೇ, ಕೆಲವೊಮ್ಮೆ ಎಲ್ಲೋ ಕೂಡಿದ ಕೊಂಡಿಗಳು ಇನ್ನೆಲ್ಲೋ ಕಳಚಿಕೊಳ್ಳುತ್ತವಂತೆ…. ಹೊಗೆಯ ಮುಂದೆ ಹರಡಿದ ನಗೆಯಾಗಿ ಬೆನ್ನ ಹಿಂದಿನ ಬದುಕಿಗೆ ಬಣ್ಣದ ಹೊದಿಕೆಯೆಳೆದು ಆ […]