
ಪರಪ್ಪು ಎಂಬ ಬೆಳ್ತಂಗಡಿ ತಾಲೂಕಿನ ಪುಟಾಣಿ ಊರಿಗೆ ಬಂದು ಮೂರು ವರ್ಷದಲ್ಲೇ ಮಸೀದಿ ಕಮಿಟಿಯನ್ನು ಸೇರಿಕೊಂಡಿದ್ದವ ಊರಿನ ಎಲ್ಲರಿಗೂ ಪರಿಚಯವಿದ್ದ. ಹೊಸ ಒಕ್ಕಲು ಬಂದವರನ್ನು ಐದು ವರ್ಷಗಳ ಬಳಿಕ ಮಾತ್ರವೇ ಕಮಿಟಿಗೆ ತೆಗೆದುಕೊಳ್ಳಬೇಕೆಂಬ ಲಿಖಿತ ನಿಯಮವೊಂದು ಬದಿಗೆ ಸರಿದದ್ದೇ ಆಗ. ಝಕರಿಯ ಎಂಬ ಹೆಸರು ಮಾತ್ರ ಕೇಳಿದ್ದ ಊರಿನ ಜನಕ್ಕೆ ಈ ಸಕರಿಯ ಎಂಬ ಹೆಸರು ವಿಚಿತ್ರವಾಗಿ ಕಂಡಿತ್ತು. ಕೇರಳಿಗರು ‘ಝ’ ಅಕ್ಷರದ ಬದಲು ‘ಸ’ ಎಂದು ಬರೆದು ಹಾಗೆಯೆ ಉಚ್ಚರಿಸುತ್ತಿದ್ದ ಕಾರಣಕ್ಕೆ ಝಕರಿಯ ಹೆಸರು ಅಪಭ್ರಂಶಗೊಂಡು […]