
ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ‘ಯಕ್ಷಗಾನ’ ಒಂದು ಸಾತ್ತ್ವಿಕ ಮನೋರಂಜನಾ sಸಾಧನವಾಗಿ, ಕನ್ನಡಭಾಷೆಯ ಶುದ್ಧ ಕಲೆಯಾಗಿ, ಪುರಾಣಪ್ರಪಂಚವನ್ನು ಆಸಕ್ತ ಪ್ರೇಕ್ಷಕರೆದುರು ತೆರೆದಿಡುವ ಅದ್ಭುತವೂ ಜನಪ್ರಿಯವೂ ಆದ ಕಲೆಯಾಗಿದೆ. ಕಾಲಕ್ಕೆ ತಕ್ಕಂತೆ ಸಹಜವಾದ ಮತ್ತು ಅನಿವಾರ್ಯವಾದ ಬದಲಾವಣೆಗಳು ಯಕ್ಷಗಾನಕ್ಕೂ ಅನ್ವಯವಾಗುತ್ತದೆ. ಹಿಂದಿನ ಯಕ್ಷಗಾನ ಪ್ರಸಂಗಗಳಿಗೂ, ಈಗಿನ ಯಕ್ಷಗಾನ ಪ್ರಸಂಗಗಳಿಗೂ ಸಾಕಷ್ಟು ಬದಲಾವಣೆಗಳು, ವ್ಯತ್ಯಾಸಗಳು ಆಗಿವೆ. ನಿರೂಪಣೆಯಲ್ಲಿ, ವಸ್ತುವಿನ್ಯಾಸದಲ್ಲಿ, ರಂಗದಲ್ಲಿ – ಹೀಗೆ ಎಲ್ಲ ವಿಧಗಳಲ್ಲೂ ಬದಲಾವಣೆಗೆ ಒಗ್ಗಿಕೊಂಡಿದೆಯಾದರೂ, ಯಕ್ಷಗಾನ ತನ್ನ ಮೂಲ ಅಡಿಪಾಯದಿಂದ ವಿಮುಖಗೊಂಡು ಪೂರ್ಣವಾಗಿ ವಿರೂಪಗೊಂಡಿಲ್ಲ […]