ನೈಋತ್ಯಮಾರುತಗಳು ಕರಾವಳಿ, ಪಶ್ಚಿಮಘಟ್ಟ ಮತ್ತು ಮಲೆನಾಡುಗಳಲ್ಲಿ ಧಾರಾಳ ಮಳೆ ಸುರಿಸುತ್ತವೆ. ಮಲೆನಾಡನ್ನು ದಾಟುವಷ್ಟರಲ್ಲಿ ಮೋಡಗಳಲ್ಲಿ ನೀರಿನ ಅಂಶ ಕಡಮೆಯಾಗಿ ಬಯಲುಸೀಮೆ ಪ್ರದೇಶದಲ್ಲಿ ಮಳೆ ತುಂಬ ಕಡಮೆ ಮತ್ತು ಅನಿಶ್ಚಿತವಾಗುತ್ತದೆ. ಒಟ್ಟಿನಲ್ಲಿ ಜಗತ್ತಿನಲ್ಲಿ ಏನೇನೋ ಬದಲಾವಣೆಗಳಾಗುತ್ತಿವೆ; ನಮ್ಮಮಟ್ಟಿಗೆ ಮಳೆ ಆಗಬೇಕೆಂದರೆ ಪಶ್ಚಿಮಘಟ್ಟವನ್ನು ಸುಭದ್ರವಾಗಿ ರಕ್ಷಿಸಬೇಕು. ಅಲ್ಲಿ ಮಾನವ ಚಟುವಟಿಕೆಯನ್ನು ಆದಷ್ಟು ಕಡಮೆ ಮಾಡಬೇಕು. ಅದು ಸಂರಕ್ಷಿತ ಪ್ರದೇಶವಾಗಿ ಇರಬೇಕು. ಪಶ್ಚಿಮಘಟ್ಟಕ್ಕೆ ಸಹ್ಯಾದ್ರಿ ಪರ್ವತಶ್ರೇಣಿ ಎಂದೂ ಹೆಸರಿದೆ. ಜಗತ್ತಿನಲ್ಲಿ ಜೀವವೈವಿಧ್ಯದಲ್ಲಿ ಶ್ರೀಮಂತವಾಗಿರುವ ಸ್ಥಳ(ಪ್ರದೇಶ)ಗಳನ್ನು ಜೀವವೈವಿಧ್ಯದ ಹಾಟ್ಸ್ಪಾಟ್ಗಳೆಂದು ಕರೆಯುತ್ತಾರೆ. ಒಂದು ಪಟ್ಟಿಯ […]
ಮಾನವಾಘಾತಕ್ಕೆ ನಲುಗುತ್ತಿರುವ ಪಶ್ಚಿಮಘಟ್ಟದ ಕಾಡು ಮತ್ತು ಮಳೆ
Month : November-2019 Episode : Author : ಡಾ| ಕೆ.ಜಿ. ಭಟ್