
ಕಳೆದ ಸುಮಾರು ಇಪ್ಪತ್ತೈದು ವರ್ಷಗಳಿಂದ ನನ್ನದು ಮುಖ್ಯವಾಗಿ ನೀರು, ಮಣ್ಣು ಮತ್ತು ಅವುಗಳ ರಾಸಾಯನಿಕ ಗುಣಲಕ್ಷಣಗಳ ಬಗೆಗೆ ಅಧ್ಯಯನ. ನನ್ನ ಸಂಶೋಧನೆಯು ಮುಖ್ಯವಾಗಿ ನೀರಿನ ಲಭ್ಯತೆ, ಅದರ ಗುಣಲಕ್ಷಣಗಳು ಮತ್ತು ಮಾಲಿನ್ಯವನ್ನು ಕುರಿತದ್ದಾಗಿದೆ. ಕೇಂದ್ರಸರ್ಕಾರದ ಮೂರು ಸಂಸ್ಥೆಗಳು ನನ್ನ ಸಂಶೋಧನೆಗಳಿಗೆ ಅನುದಾನವನ್ನು ನೀಡಿವೆ. ಅವುಗಳೆಂದರೆ, ‘ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ’, ‘ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ’ ಹಾಗೂ ಅಣುಶಕ್ತಿ ಇಲಾಖೆಗೆ ಸೇರಿದ ‘ಅಣುವಿಜ್ಞಾನ ಸಂಶೋಧನಾ ಮಂಡಳಿ’ (ಬೋರ್ಡ್ ಆಫ್ ರಿಸರ್ಚ್ ಇನ್ ನ್ಯೂಕ್ಲಿಯರ್ […]