ನಾನು ಹುಟ್ಟಿದ್ದು ಆರ್ಥಿಕವಾಗಿ ಕೆಳಮಧ್ಯಮವರ್ಗದ ಕುಟುಂಬದಲ್ಲಿ. ಬಾಲ್ಯದಲ್ಲಿ ಯಾವುದೇ ವಿಶೇಷ ಸವಲತ್ತುಗಳಿರಲಿಲ್ಲ. ಆದರೆ ಸಾಂಸ್ಕೃತಿಕವಾಗಿ ಶ್ರೀಮಂತ ವಾತಾವರಣವಿತ್ತು. ನಿರರ್ಗಳವಾಗಿ, ಶ್ರುತಿ-ಸ್ವರ-ಲಯಬದ್ಧವಾಗಿ ಅಪಾರ ಸಂಖ್ಯೆಯಲ್ಲಿ ದೇವರನಾಮಗಳನ್ನು ಹಾಡುತ್ತಿದ್ದರು ತಂದೆ ರಾಮರಾವ್, ತಾಯಿ ಅಂಬುಜಮ್ಮ. ಅಮ್ಮ ಸಣ್ಣಪ್ರಮಾಣದಲ್ಲಿ ಹರಿಕಥೆಯನ್ನೂ ಹೇಳುತ್ತಿದ್ದರು. ಶ್ರಾವಣಮಾಸದ ಶುಕ್ರವಾರ-ಶನಿವಾರ ಗೌರಿಯ ಹಾಡು; ಆರತಿ ಹಾಡು; ದೇವಸ್ಥಾನದಲ್ಲಿ ಭಜನೆ, ಶಂಕರಜಯಂತಿ ಅಂದರೆ ನಾಟಕ, ಹಾಡಿನ ಸ್ಪರ್ಧೆ… ಈ ಎಲ್ಲ ಹಾಡುಗಳಿಗೆ ಎಲ್ಲೋ ಒಂದುಕಡೆ ಶಾಸ್ತ್ರೀಯ ಸಂಗೀತದ ರಾಗಗಳ ಜಾಡು, ಮೂಲ, ಛಾಯೆ ಖಾಯಂ ಆಗಿ ಇರುತ್ತಿತ್ತು. ತಾಲ್ಲೂಕು […]
ದಿಗ್ಗಜರ ಹುಡುಕಾಟದಲ್ಲಿ….
Month : December-2020 Episode : Author : ಡಾ|| ನಾಗರಾಜರಾವ್ ಹವಾಲ್ದಾರ್