ವಿಶ್ವದ ಪ್ರತಿಯೊಂದು ಜೀವವೂ ತತ್ತ್ವತಃ ಅಪರಿಮಿತ ಶಕ್ತಿಗಳ ಆಗರ. ವಿಕಾಸ ಮತ್ತು ವಿನಾಶ – ಇದು ಜೀವಸಮುದಾಯರೂಪೀ ಪ್ರಪಂಚದ ಬಹುಮುಖ್ಯ ಲಕ್ಷಣ. ಈ ವಿಕಾಸ-ವಿನಾಶಗಳ ಕಾರಣಸಾಮಗ್ರಿಯಾಗಿ ಅವುಗಳ ನಡುವೆ ಲಾಳಿಯಾಡುವ ವಿಶಿಷ್ಟ ತತ್ತ್ವವೇ ಮನಸ್ಸು. ಕಣ್ಣಿಗೆ ಕಾಣದೆಯೂ ಕೈಗೆ ಸಿಗದೆಯೂ ಆಂತರ್ಯದಲ್ಲಿ ಧುತ್ತೆಂದು ಮುತ್ತುತ್ತಲೇ ಇರುವ ಮನಸ್ಸು ಅಗೋಚರಿ, ಅರೂಪಿ. ಬ್ರಹ್ಮತತ್ತ್ವ ಹೇಗೆ ಮಾತಿಗೂ ಮನಸ್ಸಿಗೂ ಅತೀತವೋ ಹಾಗೆ ಮನಸ್ಸೂ ಕೂಡ ಮಾತಿಗೂ ಬುದ್ಧಿಯ ಕಲನಕ್ಕೂ ಅತೀತ. ಮನಃಶಾಸ್ತ್ರ-ಮನೋವಿಜ್ಞಾನದಂಥ ಮಾನಸಿಕ ಅಧ್ಯಯನ ಸಂಗತಿಗಳು ಮನಸ್ಸೆಂಬ ಹುಚ್ಚುಕುದುರೆಯ ಆಕೃತಿಯನ್ನು […]
ಕೂಡಿಸಿ ನೆಲೆಗೊಳಿಸುವ ಯೋಗ
Month : May-2020 Episode : Author : ಡಾ| ಶ್ರೀರಾಮ ಭಟ್ಟ