
ಶ್ರೀ ಮದ್ರಾಮಾಯಣಕ್ಕೆ ರಾಷ್ಟ್ರೀಯ ಮಹಾಕಾವ್ಯ ಎಂಬ ಗೌರವದ ಸ್ಥಾನವನ್ನು ಭಾರತೀಯ ಸಮಾಜ ಶತಮಾನಗಳ ಹಿಂದೆಯೇ ನೀಡಿದೆ. ಭಾರತೀಯ ಸಮಾಜದ ಮೇಲೆ ರಾಮಾಯಣ ಮಾಡಿರುವಷ್ಟು ಪ್ರಭಾವವನ್ನು ಬೇರೆ ಯಾವ ಗ್ರಂಥವೂ ಬೇರೆ ಯಾವ ದೇಶದ ಮೇಲೂ ಮಾಡಿಲ್ಲ. ಈ ದೇಶದ ಜನ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ – ಇವರೆಲ್ಲರನ್ನು ಕಾವ್ಯದ ಮಹಾಪಾತ್ರಗಳಷ್ಟೇ ಎಂಬಂತೆ ಎಂದೂ ಕಂಡಿಲ್ಲ; ಅವರೆಲ್ಲ ಕಣ್ಣೆದುರಿಗಿರುವ ವ್ಯಕ್ತಿಗಳಷ್ಟೇ ವಾಸ್ತವ ಎಂಬುದಾಗಿ ಪರಿಗಣಿಸಿ ಅವರ ಬಗ್ಗೆ, ರಾಮಾಯಣದ ಬಗ್ಗೆ ಅನುಪಮವಾದ ಪ್ರೀತಿಯನ್ನು ಇರಿಸಿದ್ದಾರೆ. ಹೀಗಿರುವುದರಿಂದಲೇ ರಾಮಾಯಣ […]