ಭಗವಂತನು ಜೀವರನ್ನು ಉದ್ಧಾರಮಾಡುವುದಿರಲಿ; ಭಗವಂತನನ್ನೇ ಆಚಾರ್ಯರು ಉದ್ಧಾರಮಾಡಿದರಂತೆ! ಕೆಟ್ಟದೃಷ್ಟಿಗಳೆಂಬ ಹಳ್ಳದಲ್ಲಿ ಬಿದ್ದು ಅಸಹಾಯನಾಗಿ ಒದ್ದಾಡುತ್ತಿದ್ದ ಪರಬ್ರಹ್ಮನನ್ನು ರಾಮಾನುಜರು ಕೈಹಿಡಿದು ಮೇಲೆತ್ತಿ ಬದುಕಿಸಿದರಂತೆ! ಲೇ: ಶಾಸ್ತ್ರಚೂಡಾಮಣಿ ವಿದ್ಯಾಲಂಕಾರ ಪ್ರೊ|| ಸಾ.ಕೃ. ರಾಮಚಂದ್ರರಾವ್ ಪ್ರಚಲಿತ ಶ್ರೀವೈ಼ಷ್ಣವಸಂಪ್ರದಾಯಕ್ಕೆ ರಾಮಾನುಜಾಚಾರ್ಯರೇ ಪ್ರವರ್ತಕರು; ಆ ಜನಾಂಗವನ್ನು ರೂಢಿಸಿದವರು ಅವರೇ. ಮತತ್ರಯಗಳಲ್ಲಿ ಒಂದಾದ ವಿಶಿ?ದ್ವೈತದರ್ಶನವನ್ನು ದೃಢಪಡಿಸಿದವರು ಅವರು. ಹನ್ನೊಂದನೇ ಶತಮಾನದಲ್ಲಿ ಆರಂಭವಾದ ಆ ದಿವ್ಯಾಜ್ಞೆ ಇಡೀ ದಕ್ಷಿಣಭಾರತದಲ್ಲೆಲ್ಲ ಧ್ವನಿಸಿತು, ಉತ್ತರ ದಿಗ್ಭಾಗಕ್ಕೂ ಅದರ ಪ್ರಭಾವ ವ್ಯಾಪಿಸಿತು. ಪರಂಪರೆ ರಾಮಾನುಜಾಚಾರ್ಯರಿಗೆ ತುಂಬ ಪೂರ್ವದಲ್ಲೆ ಭಾಗವತಧರ್ಮ ಈ ಪ್ರದೇಶದಲ್ಲಿ ಹರಡಿದ್ದಿತು. […]
ಶ್ರೀರಾಮಾನುಜ-ದರ್ಶನ
Month : August-2017 Episode : Author : ಪ್ರೊ|| ಸಾ.ಕೃ. ರಾಮಚಂದ್ರರಾವ್