
ಯಾಕೋ ಕಾನ್ವೆಂಟ್ ಬಗ್ಗೆ ಇದ್ದ ಅಭಿಮಾನ ಕಮಲಮ್ಮನವರಲ್ಲಿ ಸ್ವಲ್ಪ ಕಡಮೆ ಆದ ಹಾಗೆ ಕಾಣುತ್ತಿತ್ತು. “ರೀ ವಿಮಲಮ್ಮ, ನಮ್ಮ ಮೊಮ್ಮಗ ಕಾನ್ವೆಂಟ್ಗೆ ಹೋಗುತ್ತಿದ್ದಾನೆ.” “ಹೌದೇ! ಯಾವಾಗ ಸೇರಿದ? ಯಾವ ಕಾನ್ವೆಂಟ್?” “ಮೊನ್ನೆಯಿಂದ ಹೋಗುತ್ತಾ ಇದ್ದಾನೆ. ಅದೇನೋ ಹೆಸರಪ್ಪ. ನನಗೆ ಸರಿಯಾಗಿ ಹೇಳುವುದಕ್ಕೆ ಬರುವುದಿಲ್ಲ. ದಿನಾಲೂ ಬಸ್ ಬಂದು ಕರೆದುಕೊಂಡು ಹೋಗುತ್ತದೆ. ಬಸ್ಗೇ ೪೦,೦೦೦ ರೂ. ಕೊಡಬೇಕು.” “ಹೌದೇ, ಅಷ್ಟು ಸಣ್ಣ ಹುಡುಗನನ್ನು ಯಾಕೆ ಬಸ್ನಲ್ಲಿ ಕಳುಹಿಸುತ್ತೀರಿ? ಇಲ್ಲೇ ಹತ್ತಿರದಲ್ಲಿ ಶಾಲೆ ಇದೆಯಲ್ಲ, ಅಲ್ಲಿಗೆ ಸೇರಿಸಬೇಕಿತ್ತು.” “ಅಯ್ಯೋ, ಅಲ್ಲಿ […]