ಯಾಕೋ ಕಾನ್ವೆಂಟ್ ಬಗ್ಗೆ ಇದ್ದ ಅಭಿಮಾನ ಕಮಲಮ್ಮನವರಲ್ಲಿ ಸ್ವಲ್ಪ ಕಡಮೆ ಆದ ಹಾಗೆ ಕಾಣುತ್ತಿತ್ತು.
“ರೀ ವಿಮಲಮ್ಮ, ನಮ್ಮ ಮೊಮ್ಮಗ ಕಾನ್ವೆಂಟ್ಗೆ ಹೋಗುತ್ತಿದ್ದಾನೆ.”
“ಹೌದೇ! ಯಾವಾಗ ಸೇರಿದ? ಯಾವ ಕಾನ್ವೆಂಟ್?”
“ಮೊನ್ನೆಯಿಂದ ಹೋಗುತ್ತಾ ಇದ್ದಾನೆ. ಅದೇನೋ ಹೆಸರಪ್ಪ. ನನಗೆ ಸರಿಯಾಗಿ ಹೇಳುವುದಕ್ಕೆ ಬರುವುದಿಲ್ಲ. ದಿನಾಲೂ ಬಸ್ ಬಂದು ಕರೆದುಕೊಂಡು ಹೋಗುತ್ತದೆ. ಬಸ್ಗೇ ೪೦,೦೦೦ ರೂ. ಕೊಡಬೇಕು.”
“ಹೌದೇ, ಅಷ್ಟು ಸಣ್ಣ ಹುಡುಗನನ್ನು ಯಾಕೆ ಬಸ್ನಲ್ಲಿ ಕಳುಹಿಸುತ್ತೀರಿ? ಇಲ್ಲೇ ಹತ್ತಿರದಲ್ಲಿ ಶಾಲೆ ಇದೆಯಲ್ಲ, ಅಲ್ಲಿಗೆ ಸೇರಿಸಬೇಕಿತ್ತು.”
“ಅಯ್ಯೋ, ಅಲ್ಲಿ ಏನೂ ಪಾಠವನ್ನೇ ಮಾಡುವುದಿಲ್ಲವಂತೆ. ಮೇಡಮ್ಗಳ ಮಾತೇ ಮಾತಂತೆ ಅ?. ಏನೂ ಪ್ರಯೋಜನ ಇಲ್ಲವಂತೆ.”
“ಮತ್ತೆ ಆಚೆ ಮನೆ ಸೀತಮ್ಮ ಚೆನ್ನಾಗಿ ಪಾಠ ಮಾಡುತ್ತಾರೆ, ನಮ್ಮ ಹುಡುಗನನ್ನು ಅಲ್ಲಿಗೆ ಕಳುಹಿಸುತ್ತಿದ್ದೇವೆ, ಒಂದು- ಎರಡು, ಅಆಇಈ ಎಲ್ಲವನ್ನೂ ನಾಲ್ಕು ದಿವಸಗಳಲ್ಲಿಯೇ ಕಲಿತಿದ್ದಾನೆ ಎಂದರು.”
“ಅದೇನು ಪಾಠಾನ್ರೀ, ಒಂದು, ಎರಡು? ನನ್ನ ಮೊಮ್ಮಗನನ್ನು ಕೇಳಬೇಕು ನೀವು. oಟಿe, ಣತಿo ಎ? ಚೆನ್ನಾಗಿ ಹೇಳುತ್ತಾನೆ. ಅದೇನು ಹಾಡು ಹೇಳಿಕೊಟ್ಟಿದ್ದಾರೆ. ಕೈಕಾಲು ತಿರುವುತ್ತಾ ಹೇಳುವುದು ನೋಡಬೇಕು ನೀವು. ಎಷ್ಟು ಚಂದ ಗೊತ್ತಾ?”
“ಏನೋ ಬಿಡಿ ಅವರವರ ಮಕ್ಕಳು ಅವರವರಿಗೆ ಮುದ್ದು. ನೋಡ್ರಿ ಸಣ್ಣಮಕ್ಕಳು ಹೇಗೆ ಮಾಡಿದರೂ ಚಂದ. ಹೆಗಲಿಗೆ ಚೀಲ ಹಾಕಿಕೊಂಡು ಕೈಯಲ್ಲಿ ಊಟದ ಬ್ಯಾಗ್ ಹಿಡಿದು ಹೋಗುತ್ತಿದ್ದರೆ ನಿಂತು ನೋಡುತ್ತಿರಬೇಕು ಅನ್ನಿಸುತ್ತದೆ.”
“ಅದನ್ನೇ ಹೇಳೋಣ ಎಂದು ಬಂದೆ ವಿಮಲಮ್ಮ. ನಮ್ಮ ಹುಡುಗನ ಡ್ರೆಸ್ ನೋಡಬೇಕು ನೀವು. ಯೂನಿಫಾರಂ ಹಾಕಿಕೊಂಡು, ಟೈ ಕಟ್ಟಿಕೊಂಡು, ಸಾಕ್ಸ್ ಬೂಟ್ಸ್ ಹಾಕಿಕೊಂಡು ಅದೆಂತದೋ ಕಾರ್ಡ್ ಕುತ್ತಿಗೆಗೆ ತಗಲಿಹಾಕಿಕೊಂಡು ಟಕ್ಟಕ್ ಎಂದು ನಡೆಯುತ್ತಾ ಬಸ್ ಹತ್ತುತ್ತಿದ್ದರೆ, ಎಲ್ಲರೂ ಅವನನ್ನೇ ನೋಡುತ್ತಿರುತ್ತಾರಂತೆ. ಅವನು ಒಂದುದಿನಕ್ಕೂ ಕಾನ್ವೆಂಟ್ಗೆ ಹೋಗಲು ಅಳಲಿಲ್ಲ ನೋಡ್ರಿ.”
“ಹೌದು ಕಮಲಮ್ಮ, ಕೆಲವು ಮಕ್ಕಳು ಚೂಟಿ ಇರುತ್ತಾರೆ. ಶಾಲೆಗೆ ಹೋಗುವುದು ಎಂದರೆ ಅವರಿಗೆ ಏನೋ ಖುಷಿ ಆಗುತ್ತದೆ ಎಂದು ಕಾಣುತ್ತದೆ. ಅಲ್ಲಿ ಗೆಳೆಯರ ಜೊತೆ ಕುಣಿದಾಡಲು ಇ? ಎಂದು ಕಾಣುತ್ತದೆ.”
“ಕಾನ್ವೆಂಟ್ ಅಂದರೆ ಕಾನ್ವೆಂಟ್ ಕಣ್ರೀ ವಿಮಲಮ್ಮ. ಏನು ದೊಡ್ಡ ಬಿಲ್ಡಿಂಗ್ ಗೊತ್ತಾ? ಮೂರು ಮಹಡಿ ಇದೆ. ದೊಡ್ಡದೊಡ್ಡ ರೂಂಗಳು. ಟೀಚರ್ಸ್ ಕೂಡ ಅ?. ಅವರ ಯೂನಿಫಾರ್ಮ್ ಬಣ್ಣ ಎ? ಚಂದ ಗೊತ್ತೆ? ಅವರ ಹೆಡ್ಮಿಸ್ ಬಹಳ ಸ್ಟ್ರಿಕ್ಟ್ ಅಂತೆ. ಸಮಯಕ್ಕೆ ಸರಿಯಾಗಿ ಬಸ್ ಬರದಿದ್ದರೆ, ಟೀಚರ್ಸ್ ಬರದಿದ್ದರೆ ತುಂಬಾ ಬಯ್ತಾರಂತೆ. ಹೀಗಾಗಿ ೯-೪೫ಕ್ಕೆ ಬಸ್ಗಳು ಕಾನ್ವೆಂಟ್ನಲ್ಲಿ ಇರುತ್ತವೆ. ಟೀಚರ್ಸ್ ಕೂಡ ಅಷ್ಟೆ.”
“ಕಮಲಮ್ಮ ಬಿಲ್ಡಿಂಗ್, ಟೀಚರ್ಸ್ ಚೆನ್ನಾಗಿಲ್ಲದಿದ್ದರೆ ಪೋ?ಕರು ಅ? ದುಡ್ಡು ಕೊಟ್ಟು ಮಕ್ಕಳನ್ನು ಯಾಕೆ ಸೇರಿಸುತ್ತಾರೆ ಹೇಳಿ.”
“ವಿಮಲಮ್ಮ, ನಮ್ಮ ರಾಜನಿಗೆ ೧-೪ ಲಕ್ಷ ರೂ. ಫೀ ಒಂದು ವ?ಕ್ಕೆ ಕೊಟ್ಟಿರುವುದು. ನಾನೇನೋ ಮೊದಲು ಅಷ್ಟೊಂದು ದುಡ್ಡು ಕೇಳುವ ಕಾನ್ವೆಂಟ್ ಬೇಡ ಎಂದೆ. ಆದರೆ ಆ ಬಿಲ್ಡಿಂಗ್, ಆ ಬಸ್, ಟೀಚರ್ಸ್ ನೋಡಿದ ಮೇಲೆ ಕೊಡಬಹುದು ಎಂದು ಸುಮ್ಮನಾದೆ.”
“ಹೋಗಲಿ ಬಿಡಿ, ನಾವಂತೂ ಅ? ಖರ್ಚು ಮಾಡಲಿಲ್ಲ.
ನಮ್ಮ ಮಕ್ಕಳಾದರೂ ಚೆನ್ನಾಗಿ ಓದಲಿ. ಬರುತ್ತೇನೆ. ನೀವು ಏನೋ ಕೂಗಿದಿರಿ ಎಂದು ಹಾಗೇ ಬಂದೆ. ಒಲೆಯ ಮೇಲೆ ಹಾಲು ಇಟ್ಟು ಬಂದಿದ್ದೆ. ಏನಾಗಿದೆಯೋ ಏನೋ” ಎಂದು ವಿಮಲಮ್ಮ ಅಂದಿನ ಸಭೆಗೆ ಮುಕ್ತಾಯಹೇಳಿ ಒಳಗೆ ಹೋದರು.
ಪಕ್ಕದ ಮನೆಯಲ್ಲಿಯೇ ಇರುವ ನನಗೆ ಬೇಡಬೇಡ ಎಂದರೂ ಅವರಿಬ್ಬರ ಮಾತುಕತೆ ಕಿವಿಯ ಮೇಲೆ ಬೀಳುತ್ತಿತ್ತು. ಅಷ್ಟೊಂದು ದುಡ್ಡು ಕೊಟ್ಟು ಬೆಳಗ್ಗೆ ಮುಂಚೆಯೇ ಹುಡುಗರನ್ನು ಸಿದ್ಧಮಾಡಿ ಶಾಲೆಗೆ ಕಳುಹಿಸಿ ಅಲ್ಲಿ ಅವರು ಏನು ಹೇಳಿಕೊಡುತ್ತಿದ್ದಾರೋ ಎನ್ನುವುದನ್ನು ಗಮನಿಸದೆ ಕೇವಲ ಪ್ರತಿ?ಗಾಗಿ ಅಂತಹ ಕಾನ್ವೆಂಟ್ಗಳಿಗೆ ಕಳುಹಿಸುವ ಪೋ?ಕರ ಬಗ್ಗೆ ನನಗೆ ಕನಿಕರ ಉಂಟಾಗುತ್ತಿತ್ತು.
ನಾನು ಸರ್ಕಾರೀ ಶಾಲೆಯ ಟೀಚರ್. ಸರ್ಕಾರೀ ಶಾಲೆಯಲ್ಲಿ ಎಲ್ಲ ಸರಿ ಇಲ್ಲ ಎಂದು ಒಪ್ಪಿಕೊಂಡರೂ, ಎಲ್ಲಾ ಕಾನ್ವೆಂಟ್ಗಳೂ ಸರಿ ಇವೆಯೇ? ಅಡ್ಮಿಷನ್ ಸಮಯದಲ್ಲಿ ಸೂಟ್ಕೇಸ್ ತುಂಬ ದುಡ್ಡು ತುಂಬಿಕೊಂಡು ಹೋಗುವ ಹೆಡ್ಮಿಸ್ ಎಲ್ಲಿ? ಕೈಚೀಲದಲ್ಲಿ ರಶೀದಿ ಪುಸ್ತಕ, ಒಂದಿ? ನೋಟು ತುಂಬಿ ಬೀರುವಿನಲ್ಲಿಟ್ಟು ಹೋಗುವ ನಮ್ಮ ಎಚ್. ಎಂ. ಎಲ್ಲಿ? ಸುತ್ತಲ ಹಳ್ಳಿಗಳಲ್ಲೆಲ್ಲ ಬಲೆಹಾಕಿ ಹಿಡಿದಂತೆ ಬಸ್ವ್ಯಾನ್ ಕಳುಹಿಸಿ ಪೋ?ಕರನ್ನು ಮರುಳುಮಾಡಿ ಮಕ್ಕಳನ್ನು ಸೆಳೆಯುವ ಕಾನ್ವೆಂಟ್ಗಳಲ್ಲಿನ ಟೀಚರ್ಸ್ಗಳಿಗಿಂತ ನಮ್ಮ ಟೀಚರ್ಸ್ ಏನು ಕಡಮೆ? ನಮ್ಮ ಟೀಚರ್ಸ್ಗಳೂ ಸಹ ಸಿ.ಇ.ಟಿ. ಪರೀಕ್ಷೆಯಲ್ಲಿ ಪಾಸಾದವರೇ ತಾನೇ. ಅವರು ಯಾಕೆ ಬುದ್ಧಿವಂತರಲ್ಲ ಎಂದು ಪೋ?ಕರು ಯೋಚನೆ ಮಾಡುತ್ತಾರೆ. ಇವೆಲ್ಲ ಯೋಚನೆಗಳು ನನ್ನ ಮಗ ಬಂದು ಕೂಗುವವರೆಗೂ ನಡೆಯುತ್ತಲೇ ಇತ್ತು.
“ಅಮ್ಮಾ, ಈ ದಿನ ನೀನು ಶಾಲೆಗೆ ಯಾಕೆ ಬರಲಿಲ್ಲ? ಯಾರೋ ಮ್ಯಾಜಿಕ್ ಮಾಡುವವರು ಬಂದಿದ್ದರು. ಎಷ್ಟು ಚೆನ್ನಾಗಿತ್ತು ಗೊತ್ತಾ?” – ಎಂದು ಕೂಗುತ್ತಲೆ ಮಗ ರಾಜೀವ ಬಂದ.
“ಇಲ್ಲಪ್ಪ, ಯಾಕೋ ತಲೆನೋವು ಎಂದು ರಜ ಹಾಕಿದ್ದೆ. ಅದಕ್ಕೆ ಬರಲಿಲ್ಲ. ಏನು ತೋರಿಸಿದರು ಹೇಳ್ತೀಯಾ?”
ಅವರು ತೋರಿಸಿದ ಮ್ಯಾಜಿಕ್ನಲ್ಲಿ ೩-೪ ಮ್ಯಾಜಿಕ್ಗಳನ್ನು ಹೀಗೆ ಮಾಡಿದರು ಎಂದು ತೋರಿಸಿದ ಅವನ ಬುದ್ಧಿ ಕಂಡು ನನಗೆ ಸಂತೋ? ಆಯಿತು. ಓದುವ ಆಸಕ್ತಿ ಇರುವ ಮಕ್ಕಳಿಗೆ ಎಂತಹ ಶಾಲೆ ಆದರೂ ಸರಿ, ಸ್ವಲ್ಪ ಅವಕಾಶ ಸಿಕ್ಕರೆ ಅಲ್ಲಿಯೇ ಅವರು ತಮ್ಮ ಪ್ರತಿಭೆಯನ್ನು ತೋರಿಸಬಲ್ಲರು. ಈ ವಿಷಯ ನಮ್ಮ ಪೋಷಕರಿಗೆ ಯಾಕೆ ಅರ್ಥವಾಗುವುದಿಲ್ಲವೋ ತಿಳಿಯುವುದಿಲ್ಲ ಎಂದುಕೊಂಡೆ. ತಮ್ಮ ಪ್ರತಿಷ್ಠೆಯ ಕಾರಣವಾಗಿ ಮಕ್ಕಳಿಗೆ ಹಿಂಸೆ ಕೊಡುತ್ತಾರಲ್ಲ ಎನಿಸಿತು. ಶಾಲೆಗಳಲ್ಲಿ ಯೂನಿಫಾರಂ ಮಾಡಿದ ಉದ್ದೇಶವೆಂದರೆ ಬಡವ-ಶ್ರೀಮಂತ, ಮೇಲು- ಕೀಳು ಎಂಬ ಭಾವನೆ ತಿಳಿಯದಂತೆ ಒಂದೇ ಭಾವನೆ ಬರಲಿ ಎನ್ನುವುದೂ ಒಂದು. ಆದರೆ ಈ ಕಾನ್ವೆಂಟುಗಳು ಬಂದು ಕಾನ್ವೆಂಟ್-ಸರ್ಕಾರೀ ಎಂದು ಭೇದಭಾವವನ್ನು ಮಕ್ಕಳ ಮನಸ್ಸಿನಲ್ಲಿ ತುಂಬುತ್ತಿಲ್ಲವೇ? ಯಾಕೆ ಈ ಬಗ್ಗೆ ಯಾರಿಗೂ ಯೋಚನೆ ಇಲ್ಲ ಎನಿಸಿತು. ದಿನವೂ ಸಂಜೆ ವಿಮಲಮ್ಮ- ಕಮಲಮ್ಮನವರ ಸಂಭಾ?ಣೆ ಇದ್ದದ್ದೆ. ಸರ್ಕಾರೀ ಶಾಲೆಯ ಟೀಚರ್ ಎಂದು ಅವರು ನನ್ನನ್ನು ತಮ್ಮ ಸಂಭಾ?ಣೆಯಲ್ಲಿ ಸೇರಿಸಿಕೊಳ್ಳುತ್ತಿರಲಿಲ್ಲ.
ಒಂದು ದಿನ ಕಮಲಮ್ಮನವರ ಮೊಮ್ಮಗ ’ಟೀಚರ್, ಈ ಲೆಕ್ಕ ಅರ್ಥ ಆಗುತ್ತಿಲ್ಲ, ಹೇಳಿ ಟೀಚರ್’ ಎಂದು ಬಂದ. ಅಲ್ಲಿಯೆ ಹತ್ತಿರದಲ್ಲಿ ನನ್ನ ಮಗನನ್ನು ಕೂಡಿಸಿಕೊಂಡು ಹೋಂವರ್ಕ್ ಮಾಡಿಸುತ್ತಿದ್ದ ನಾನು ಅವನನ್ನು ಹತ್ತಿರ ಕರೆದು ಕೂಡಿಸಿಕೊಂಡು ಯಾವ ಲೆಕ್ಕ ಎಂದು ನೋಡುತ್ತಿದ್ದೆ. ಒಂದೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗನೂ ಆ ಲೆಕ್ಕ ನೋಡಿ ಐದು ನಿಮಿ?ದಲ್ಲಿಯೇ ನನಗಿಂತ ಮುಂಚೆ ಲೆಕ್ಕ ಮಾಡಿ ತೋರಿಸಿದ.
“ಥ್ಯಾಂಕ್ಸ್ ರಾಜೀವ, ಲೆಕ್ಕ ತೋರಿಸದಿದ್ದರೆ ನಾಳೆ ನಮ್ಮ ಮಿಸ್ ಹೊಡೆಯುತ್ತಿದ್ದರು” ಎಂದು ಹೇಳಿ ಹೊರನಡೆದ. ಅವನನ್ನು ನೋಡಿ ಲಕ್ಷಗಟ್ಟಲೇ ಫೀ ತುಂಬಿಸಿಕೊಳ್ಳುವ ಕಾನ್ವೆಂಟ್ನಲ್ಲಿ ಏನು ಹೇಳಿಕೊಡುತ್ತಾರೆ? ನಮ್ಮಲ್ಲಿನ ಈ ಹುಡುಗ ಹೇಗೆ ಕಲಿತುಕೊಂಡ ಎನಿಸಿತು. ಇನ್ನೊಂದು ದಿನ ಇಂಗ್ಲಿ? ಪಾಠದ ಅರ್ಥ ಕೇಳಿದ ಆ ಹುಡುಗನಿಗೆ ನಾನು ಅರ್ಥ ಹೇಳಿ ಕಳುಹಿಸಿದೆ. ಇಂಥವೇ ಹತ್ತಾರು ಘಟನೆಗಳು ನಡೆದ ಮೇಲೆ ಒಂದುದಿನ ನಾನು ಕಮಲಮ್ಮನವರ ಹತ್ತಿರ ಈ ಬಗ್ಗೆ ಪ್ರಸ್ತಾಪಿಸಿದೆ. ಅದು ನನಗೆ ಇ? ಇಲ್ಲದಿದ್ದರೂ ಸರ್ಕಾರೀ ಶಾಲೆಯ ಟೀಚರ್ಸ್ ಎಂದರೆ ನಿಕೃ?ವಾಗಿರುವ ಇವರಿಗೆ ಗೊತ್ತಾಗಲಿ ಎನ್ನುವುದೇ ನನ್ನ ಉದ್ದೇಶ ಆಗಿದ್ದಿತು.
“ರೀ ಕಮಲಮ್ಮ ನಿಮ್ಮ ಮೊಮ್ಮಗನ ಕಾನ್ವೆಂಟ್ನಲ್ಲಿ ಲೆಕ್ಕದ ಮಿಸ್ ಸರಿ ಇಲ್ಲ ಎಂದು ಕಾಣುತ್ತದೆ” ಎಂದೆ.
“ಯಾಕೆ ಹಾಗೆ ಹೇಳುತ್ತೀರಿ? ನಮ್ಮ ಹುಡುಗ ಎಲ್ಲ ಲೆಕ್ಕ ಮಾಡುತ್ತಿದ್ದಾನಲ್ಲ” ಎಂದರು.
“ಹೇಗೆ ಮಾಡುತ್ತಿದ್ದಾನೆ ಗೊತ್ತಿದೆಯೇ? ನಮ್ಮ ರಾಜೀವ ಹೇಳಿಕೊಡುತ್ತಿದ್ದಾನೆ, ಅಥವಾ ನಾನು ಹೇಳಿಕೊಡುತ್ತಿದ್ದೇನೆ. ಅದಕ್ಕೆ ಲೆಕ್ಕ ಸರಿಯಾಗುತ್ತಿದೆ. ಅಲ್ಲದೆ ಇಂಗ್ಲಿ? ಮಿಸ್ ಸಹ ಸರಿ ಇದ್ದ ಹಾಗೆ ಕಾಣುವುದಿಲ್ಲ” ಎಂದೆ.
“ಇಲ್ಲಾರೀ, ಟೀಚರ್ಸ್ ಹೊಸಬರಲ್ವ, ಅವರು ಇನ್ನೂ ಹೊಂದಿಕೊಂಡಿಲ್ಲ. ಹೀಗಾಗಿ ಸ್ವಲ್ಪ ಎಡವಟ್ಟಾಗಿದೆ ಅಷ್ಟೆ.”
“ಪ್ರತಿವ?ವೂ ಅಲ್ಲಿರುವ ಮಿಸ್ಗಳಲ್ಲಿ ೨-೩ ಜನ ಬಿಟ್ಟುಹೋಗುತ್ತಿದ್ದಾರೆ. ಹೊಸಬರು ಬರುತ್ತಾರೆ. ಅವರು ಹೇಗಿರುತ್ತಾರೋ ಏನೊ ನೀವೇನಾದರೂ ಗಮನಿಸಿದ್ದೀರಾ?”
“ಇಲ್ಲ, ಅದೆಲ್ಲ ನನಗೆ ತಿಳಿಯುವುದಿಲ್ಲ. ಅವೆಲ್ಲ ನನ್ನ ಸೊಸೆಯ ಜವಾಬ್ದಾರಿ. ಅವಳೇ ಕುಣಿದುಕೊಂಡು ಕಾನ್ವೆಂಟಿಗೆ ಸೇರಿಸಿದ್ದು.”
“ನೋಡಿ ಟೀಚರ್ಸ್ ಎಂದರೆ ಎಲ್ಲ ಒಂದೇ. ನಾನು ಕಾನ್ವೆಂಟ್ ಟೀಚರ್ಸ್ಗಳನ್ನಾಗಲಿ, ನಮ್ಮ ಟೀಚರ್ಸ್ಗಳನ್ನಾಗಲಿ ಟೀಕಿಸಲು ಹೋಗುವುದಿಲ್ಲ. ಆದರೆ ಅ?ಂದು ದುಡ್ಡು ಕೊಟ್ಟು ಅಲ್ಲಿಗೆ ಸೇರಿಸಿದ ಮೇಲೆ ಅವರು ಏನು ಹೇಳಿಕೊಡುತ್ತಿದ್ದಾರೆ ಎಂಬುದನ್ನು ನೋಡುವುದು ನಮ್ಮ ಕರ್ತವ್ಯವಲ್ಲವೇ
ಸಾಮಾನ್ಯವಾಗಿ ಕಾನ್ವೆಂಟ್ನವರು ಪುಸ್ತಕದ ಹೊರೆ ಜಾಸ್ತಿ ಮಾಡಿರುತ್ತಾರೆ. ಹೋಂವರ್ಕ್ ಜಾಸ್ತಿ ಲೋಡ್ ಕೊಡುತ್ತಾರೆ. ಮನೆಯಲ್ಲಿ ಪೋ?ಕರು ಬುದ್ಧಿವಂತರಾಗಿದ್ದು ಮಕ್ಕಳಿಗೆ ಹೇಳಿಕೊಡದಿದ್ದರೆ ಎಲ್ಲ ವ್ಯರ್ಥ. ಅಲ್ಲಿ ಬಾಯಿಪಾಠ ಮಾಡಿ ಕಳುಹಿಸುತ್ತಾರೆ; ಅರ್ಥ ಕೇಳಿದರೆ ಗೊತ್ತಿಲ್ಲ. ಹಾಗಾಗಿದೆ ನಮ್ಮ ಇಂದಿನ ಶಿಕ್ಷಣ. ಮಕ್ಕಳು ಇಂಗ್ಲಿಷಿನಲ್ಲಿ ಮಾತನಾಡಿದರೆ ಬುದ್ಧಿವಂತರು ಎಂದುಕೊಳ್ಳುತ್ತಾರೆ. ಪಟ್ಟಣದಲ್ಲಿ ಪರವಾಗಿಲ್ಲ. ಅನೇಕ ಪೋ?ಕರು ಬುದ್ಧಿವಂತರಿರುತ್ತಾರೆ, ಸರಿ. ಆದರೆ ಹಳ್ಳಿಗಳಲ್ಲೂ ನಾವು ಏನು ಕಡಮೆ ಮಾಡಿದ್ದೇವೆ ಎಂದು ಇಂತಹ ಕಾನ್ವೆಂಟ್ಗಳು ಆರಂಭವಾಗಿವೆ? ಅವುಗಳ ಸ್ಥಿತಿಗತಿಗಳು ಚೆನ್ನಾಗಿರುವುದಿಲ್ಲ. ಆದರೂ ಮಕ್ಕಳನ್ನು ಕಾನ್ವೆಂಟಿಗೆ ಕಳುಹಿಸಬೇಕೆಂದು ಹಳ್ಳಿಯ ಜನ ಕಾತರದಿಂದ ಇರುತ್ತಾರೆ; ಇದು ದುರಂತ. ಪೋ?ಕರೇ ಇಂತಹ ಕಾನ್ವೆಂಟ್ಗಳು ಹುಟ್ಟುವುದಕ್ಕೆ ಕಾರಣವಾಗುತ್ತಾರೆ.
ಸರ್ಕಾರೀ ಶಾಲೆಗಳಲ್ಲಿ ಸವಲತ್ತುಗಳು ಇಲ್ಲ ಎಂದು ಗಲಾಟೆ ಮಾಡುವ ಸಾರ್ವಜನಿಕರು ಈ ಕಾನ್ವೆಂಟ್ಗಳ ಬಗ್ಗೆ ಏಕೆ ಗಲಾಟೆ ಮಾಡಬಾರದು” ಎಂದು ಒಂದು ಪುಟ್ಟ ಭಾಷಣವನ್ನೇ ಬಿಗಿದೆ.
ಯಾಕೋ ಕಾನ್ವೆಂಟ್ ಬಗ್ಗೆ ಇದ್ದ ಅಭಿಮಾನ ಕಮಲಮ್ಮನವರಲ್ಲಿ ಸ್ವಲ್ಪ ಕಡಮೆ ಆದ ಹಾಗೆ ಕಾಣುತ್ತಿತ್ತು. ಬೆಳಗ್ಗೆಯೇ ಬೇಗನೇ ಎದ್ದು ೮-೪೫ಕ್ಕೆ ಮೊಮ್ಮಗನನ್ನು ಹೊರಡಿಸಿ ಕಳುಹಿಸಿದರೆ ಅವನು ಬರುವುದು ಸಂಜೆ ೫-೪೫ಕ್ಕೆ. ಬಂದವನೇ ಪುಸ್ತಕದ ಚೀಲ ಎಸೆದು ತಿಂಡಿ ತಿಂದು ಆಟ-ಟಿವಿಯ ನಡುವೆ ಹೋಂವರ್ಕ್ ಮಾಡಲು ಬಿಡುವೆಲ್ಲಿ? ಹೇಳಿಕೊಡಲು ಪೋ?ಕರೆಲ್ಲಿ? ಹೀಗಾಗಿ ಲಕ್ಷಗಟ್ಟಲೆ ಫೀಸಿನ ಕಾನ್ವೆಂಟ್ ಕೇವಲ ಪ್ರತಿ?ಯ ಪ್ರಶ್ನೆ ಆಗಿದೆ ಅವರಿಗೆ.
ಈಗೀಗ ಆ ಮೊಮ್ಮಗ ಕಾನ್ವೆಂಟಿಗೆ ಹೋಗುವುದಿಲ್ಲ ಎಂದು ಹಠ ಹಿಡಿಯುತ್ತಿದ್ದಾನೆ. ಬೆಳಗ್ಗೆ ಬೇಗನೇ ಏಳಬೇಕು. ಬಸ್ಸಿನಲ್ಲಿ ಮುಂದಿನ ಸೀಟು ಸಿಕ್ಕರೆ ಸರಿ, ಇಲ್ಲವಾದರೆ ಹಿಂದೆ ಹೋಗಿ ಕುಳಿತುಕೊಳ್ಳಬೇಕು. ಸಂಜೆಯೂ ಅ?. ಇವನಿಗಿಂತ ದೊಡ್ಡವರು ಮುಂದಿನ ಸೀಟುಗಳಲ್ಲಿ ಕುಳಿತಿರುತ್ತಾರೆ. ಹೋಂವರ್ಕ್ ಮಾಡದೆ, ಜೊತೆಯವರೊಡನೆ ಸಂಜೆ ಆತ ಆಡಲೂ ಸಮಯ ಸಿಗದೆ ಬೈಹಾರ್ಟ್ ಲೆಕ್ಕದಲ್ಲಿ ಕಲಿತ ನಾಲ್ಕು ಇಂಗ್ಲಿ? ಹಾಡುಗಳು, ಪಾಠ ಬಿಟ್ಟರೆ ಬೇರೇನೂ ಇಲ್ಲ ಎಂದಾದಾಗ ಕಮಲಮ್ಮನ ಒಣಪ್ರತಿ? ಇಳಿದು ಹೋಗಿದೆ.
’ಎಲ್ಲ ಪೋಷಕರು ಕೇವಲ ಪ್ರತಿ?ಗಾಗಿ ಮಕ್ಕಳನ್ನು ಕಾನ್ವೆಂಟ್ಗೆ ಸೇರಿಸಿ ಮಕ್ಕಳಿಗೆ ತೊಂದರೆ ಕೊಡುವುದನ್ನು ಬಿಡದ ಹೊರತು ಈ ಕಾನ್ವೆಂಟ್ ಪ್ರತಿ? ಬಿಡುವುದಿಲ್ಲ ಎನಿಸುತ್ತದೆ. ಸಂಜೆ ಟಿವಿ ಹುಚ್ಚು ಬಿಟ್ಟು ಮಕ್ಕಳನ್ನು ತಮ್ಮ ಬಳಿ ಕೂಡ್ರಿಸಿಕೊಂಡು ಪಾಠ ಹೇಳಿಕೊಡುವುದಾಗಲೀ, ಪ್ರೀತಿಯ ಮಾತುಗಳನ್ನಾಡುವುದಾಗಲಿ ಮಾಡಿದರೆ, ತಂದೆ-ತಾಯಿಯ ಸಾಮೀಪ್ಯದ ಆನಂದ ಮಕ್ಕಳಿಗೆ ಸಿಗುತ್ತದೆ. ಆ ಮೂಲಕ ಸಂತಸದ ವಾತಾವರಣ ಮನೆಯಲ್ಲಿ ಇರುತ್ತದೆ. ಕಾನ್ವೆಂಟಿಗೆ ಸುರಿಯುವ ಹಣವೂ ಉಳಿದೀತು. ಮಕ್ಕಳ ಪ್ರೀತಿಯೂ ಸಿಕ್ಕೀತು. ಅವರು ಬುದ್ಧಿವಂತರೂ ಆಗುತ್ತಾರೆ. ಟಿ.ವಿ. ಹುಚ್ಚು ಬಿಟ್ಟುಹೋಗುತ್ತದೆ. ಕೇವಲ ಪ್ರತಿ?ಯ ಕಾರಣವಾಗಿ ಈ ಎಲ್ಲ ಸುಖಗಳಿಂದ ವಂಚಿತರಾಗಬೇಕೆ?’ ಎಂದೆನಿಸಿ ಮನಸ್ಸು ಭಾರವಾಯಿತು.