
ಒಂದು ರಾಷ್ಟ್ರದ ಭವಿಷ್ಯ ಅದರ ತರಗತಿ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ ಎನ್ನುವ ಒಂದು ಮಾತು ಪ್ರಸಿದ್ಧವೇ ಇದೆ. ಏಕೆಂದರೆ ಅವು ನಮ್ಮ ಮುಂದಿನ ಜನಾಂಗವಾದ ಇಂದಿನ ಮಕ್ಕಳ ಗರಡಿಮನೆಗಳು. ಆದರೆ ನಮ್ಮ ಸರ್ಕಾರಗಳು ಶಿಕ್ಷಣ ಇಲಾಖೆಗೆ ಎಷ್ಟು ಮಹತ್ತ್ವವನ್ನು ನೀಡುತ್ತವೆ? ದೇಶದ ಸರ್ಕಾರಗಳಿಗೆ ಶಿಕ್ಷಣ ಇಲಾಖೆ ಎಂದರೆ ಅಷ್ಟಕ್ಕಷ್ಟೆ. ಏಕೆಂದರೆ ಅದು ಹಣದ ಕೊಯ್ಲು ಮಾಡುವ ಇಲಾಖೆ ಅಲ್ಲ; ಮಾತ್ರವಲ್ಲ, ಖರ್ಚಿನ ಬಾಬತ್ತು. ಕೇಂದ್ರವಿರಲಿ ರಾಜ್ಯಸರ್ಕಾರಗಳಿರಲಿ; ಸಂಪುಟದ ೩-೪ ಸ್ಥಾನಗಳೊಳಗೆ ಶಿಕ್ಷಣ ಬರುವುದಿಲ್ಲ. ಎಲ್ಲೋ ಬರುತ್ತದೆ, ಅಷ್ಟೆ. ಒಂದು […]