ಒಂದು ರಾಷ್ಟ್ರದ ಭವಿಷ್ಯ ಅದರ ತರಗತಿ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ ಎನ್ನುವ ಒಂದು ಮಾತು ಪ್ರಸಿದ್ಧವೇ ಇದೆ. ಏಕೆಂದರೆ ಅವು ನಮ್ಮ ಮುಂದಿನ ಜನಾಂಗವಾದ ಇಂದಿನ ಮಕ್ಕಳ ಗರಡಿಮನೆಗಳು. ಆದರೆ ನಮ್ಮ ಸರ್ಕಾರಗಳು ಶಿಕ್ಷಣ ಇಲಾಖೆಗೆ ಎಷ್ಟು ಮಹತ್ತ್ವವನ್ನು ನೀಡುತ್ತವೆ? ದೇಶದ ಸರ್ಕಾರಗಳಿಗೆ ಶಿಕ್ಷಣ ಇಲಾಖೆ ಎಂದರೆ ಅಷ್ಟಕ್ಕಷ್ಟೆ. ಏಕೆಂದರೆ ಅದು ಹಣದ ಕೊಯ್ಲು ಮಾಡುವ ಇಲಾಖೆ ಅಲ್ಲ; ಮಾತ್ರವಲ್ಲ, ಖರ್ಚಿನ ಬಾಬತ್ತು. ಕೇಂದ್ರವಿರಲಿ ರಾಜ್ಯಸರ್ಕಾರಗಳಿರಲಿ; ಸಂಪುಟದ ೩-೪ ಸ್ಥಾನಗಳೊಳಗೆ ಶಿಕ್ಷಣ ಬರುವುದಿಲ್ಲ. ಎಲ್ಲೋ ಬರುತ್ತದೆ, ಅಷ್ಟೆ. ಒಂದು ಹೋಲಿಕೆ ಕೊಡುವುದಾದರೆ ಹಣ ತರುವ ಅಬಕಾರಿ ಇಲಾಖೆಗೆ ಇರುವ ಕಿಮ್ಮತ್ತು ಶಿಕ್ಷಣ ಇಲಾಖೆಗಿಲ್ಲ. ಒಂದು ಸಂಪುಟ ರಚನೆಯಾದಾಗ ಜನ ಹಣಕಾಸು ಮಂತ್ರಿ ಯಾರು, ಗೃಹಸಚಿವ ಯಾರು ಎಂದು ಕೇಳುತ್ತಾರೆಯೇ ಹೊರತು ವಿದ್ಯಾಮಂತ್ರಿ ಯಾರೆಂದು ಕೇಳುವವರು ಇಲ್ಲವೆಂದೇ ಹೇಳಬಹುದು. ಅವರೇನಾದರೂ ಇಲಾಖೆಯವರು ಅಥವಾ ಶಾಲಾ ಶಿಕ್ಷಕರಾದರೆ ಕೇಳಬಹುದೇನೋ! ಅದೇ ರೀತಿ ಶಿಕ್ಷಣ ಇಲಾಖೆ ಅಲಕ್ಷಿತವಾದುದು ಎಂಬುದಕ್ಕೆ ಏಳು ವ?ಗಳ ಹಿಂದೆ ಅನುಷ್ಠಾನಗೊಂಡ ಶಿಕ್ಷಣದ ಹಕ್ಕು-ಕಾಯ್ದೆ-೨೦೦೯ನ್ನು ಕೂಡ ಉದಾಹರಣೆಯಾಗಿ ನೀಡಬಹುದು. ಜಾರಿಗೊಂಡ ಬಹುತೇಕ ವ?ದೊಳಗೆ ಇದೊಂದು ದೋ?ಪೂರ್ಣ ಶಾಸನ, ನಿರೀಕ್ಷಿತ ಗುರಿಯತ್ತ ಇದು ಹೋಗುತ್ತಿಲ್ಲ ಎಂದು ಗಮನಕ್ಕೆ ಬಂದರೂ ಅದನ್ನು ವಜಾಗೊಳಿಸುವ ಅಥವಾ ಕನಿ?ಪಕ್ಷ ಪೂರ್ತಿಯಾಗಿ ಪುನರ್ವ್ಯವಸ್ಥೆಗೆ ಒಳಪಡಿಸುವ ಪ್ರಯತ್ನ ಯಾರಿಂದಲೂ ನಡೆದಿಲ್ಲ; ಸರ್ಕಾರಿ, ಖಾಸಗಿ ಎಂದು ಭೇದವಿಲ್ಲದೆ ಶಿಕ್ಷಣಕ್ಷೇತ್ರವನ್ನು ಹಾಳುಮಾಡುತ್ತಾ ಅದು ಮುಂದುವರಿದಿದೆ.
ಆರರಿಂದ ಹದಿನಾಲ್ಕು ವರ್ಷದ ವರೆಗಿನ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಬಗೆಗಿನ ಶಿಕ್ಷಣ ಹಕ್ಕು ಕಾಯ್ದೆಯನ್ನು (Right To Education – RTE) ಅನುಷ್ಠಾನಗೊಳಿಸುವಾಗ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅಂದಿನ ಪ್ರಧಾನಿ ಡಾ| ಮನಮೋಹನ ಸಿಂಗ್ ಅವರು “ಗಂಡು, ಹೆಣ್ಣು ಎಂಬ ಭೇದವಿಲ್ಲದೆ ದೇಶದ ಪ್ರತಿಯೊಂದು ಮಗುವಿಗೂ ಶಿಕ್ಷಣದ ಬೆಳಕು ತಾಗಬೇಕು. ಪ್ರತಿಯೊಬ್ಬ ಭಾರತೀಯನು ಉತ್ತಮ ಭವಿ?ದ ಬಗ್ಗೆ ಕನಸು ಕಾಣಬೇಕು; ಮತ್ತು ಅದರಂತೆ ಜೀವಿಸಬೇಕು” ಎಂದು ಹೇಳಿದರು. ಏಳು ವ?ಗಳ ಅನಂತರ ಈಗ ಅನ್ನಿಸುವುದೆಂದರೆ ಇದು ಕನಸಿನ ಸಾಕಾರಕ್ಕೆ ನೆರವಾಗುವುದಕ್ಕಿಂತ ಒಂದು ಹಗಲುಗನಸಾಗಿ ಪರಿಣಮಿಸಿದೆ. ಶಾಸನವು ದೇಶದ ಪ್ರಾಥಮಿಕ ಶಿಕ್ಷಣದ ಸಮಸ್ಯೆಗೆ ಪರಿಹಾರ ಆಗುವ ಬದಲು ಅದೇ ಒಂದು ಸಮಸ್ಯೆಯಾಗಿದೆ. ಕೆಳ ಆದಾಯದವರ ಮಕ್ಕಳಿಗೆ ಶಿಕ್ಷಣದ ಅವಕಾಶವನ್ನು ನೀಡುವ ಬದಲು ಅದನ್ನು ಹಾಳುಮಾಡಿದೆ; ಶಿಕ್ಷಣದ ಗುಣಮಟ್ಟವನ್ನು ಏರಿಸುವ ಬದಲು ಅದರ ಕುಸಿತಕ್ಕೆ ಕಾರಣವಾಗಿದೆ; ಮತ್ತು ಲೈಸೆನ್ಸ್ ರಾಜ್ಗೆ ಪ್ರೋತ್ಸಾಹ ನೀಡುವ ಮೂಲಕ ಇನ್ನಷ್ಟು ಭ್ರಷ್ಠಾಚಾರಕ್ಕೆ ದಾರಿ ಮಾಡಿಕೊಟ್ಟಿದೆ.
ದೋಷಪೂರ್ಣ ಶಾಸನ
ಆರ್ಟಿಇ ಕಾಯ್ದೆ ಒಂದು ದೋಷಪೂರ್ಣ ಶಾಸನ ಎಂಬುದು ಈಗಾಗಲೇ ಸಾಬೀತಾಗಿದೆ. ಆರಂಭದಲ್ಲಿ ಅದರ ಪರವಾಗಿ ಮಾತನಾಡುತ್ತಿದ್ದವರಿಗೂ ಈಗ ಯಾವುದೇ ಉತ್ಸಾಹ ಉಳಿದಿಲ್ಲ; ಕಾಯ್ದೆಯ ಕಳಪೆ ಅನು?ನವು ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡಿದೆ. ಶಿಕ್ಷಣದ ಮೂಲಸವಲತ್ತು, ಶಿಕ್ಷಕ-ವಿದ್ಯಾರ್ಥಿ ಅನುಪಾತ, ಶಿಕ್ಷಕರ ಅರ್ಹತೆ, ವೇತನ, ವಿದ್ಯಾರ್ಥಿಗಳ ಸಮವಸ್ತ್ರ ಮುಂತಾದ ಅಂಶಗಳಿಗೆ ನೀಡುವಷ್ಟು ಮಹತ್ತ್ವವನ್ನು ಅದು ಶಿಕ್ಷಣದ ನಿಜವಾದ ಗುಣಮಟ್ಟಕ್ಕೆ ನೀಡುವುದಿಲ್ಲ. ಶಿಕ್ಷಣದ ಲೈಸೆನ್ಸ್- ಕೋಟಾ ರಾಜ್ಯವು ಅಂತ್ಯವಾಗಬೇಕಿದ್ದಾಗ ಅದು ಆ ಪಿಡುಗಿಗೆ ಮತ್ತೆ ಚಾಲನೆ ನೀಡಿದೆ.
ಈಗ ಸಾಮಾನ್ಯವಾಗಿ ಎಲ್ಲ ಮಕ್ಕಳು ಶಾಲೆಗೆ ಸೇರುತ್ತಿದ್ದು ಅದು ಆರ್ಟಿಇ ಕಾಯ್ದೆಯ ಸಾಧನೆ ಎನ್ನುವವವರಿದ್ದಾರೆ. ಅದರೆ ನಿಜ ಸಂಗತಿ ಹಾಗಿಲ್ಲ. ಒಂದರಿಂದ ಎಂಟನೇ ತರಗತಿ ವಯೋಮಾನದ ಮಕ್ಕಳ ಶಾಲಾ ಪ್ರವೇಶಾತಿ (ಸೇರ್ಪಡೆ) ೨೦೦೮ರ ಹೊತ್ತಿಗೇ ಶೇ. ನೂರರಷ್ಟಿತ್ತು. ೨೦೧೪-೧೫ರ ಹೊತ್ತಿಗೆ ಅದು ಶೇ. ೯೬.೯ ಇತ್ತು. ಕಳೆದ ದಶಕದಲ್ಲಿ ಮಕ್ಕಳ ಶಾಲಾ ಪ್ರವೇಶಾತಿ ಹೆಚ್ಚಿದುದರಲ್ಲಿ ಆರ್ಟಿಇ ಪಾತ್ರವಿಲ್ಲ; ಬದಲಾಗಿ ಜನರಲ್ಲಿ ಸಂಪತ್ತಿನ ಹೆಚ್ಚಳ, ಶಿಕ್ಷಣದ ಬಗೆಗಿನ ಜಾಗೃತಿ, ಮಧ್ಯಾಹ್ನದ ಬಿಸಿಯೂಟ, ಸರ್ವಶಿಕ್ಷಣ ಅಭಿಯಾನ ಮುಂತಾದವು ಕಾರಣ. ಇನ್ನು ಹತ್ತನೇ ತರಗತಿಯವರೆಗೆ ಅನುತ್ತೀರ್ಣಗೊಳಿಸದಿರುವ ಇಂದಿನ ವಿದ್ಯಮಾನವೂ ಕಾರಣ ಎನ್ನಬಹುದು. ಹಿಂದೆ ಆರಂಭದ ತರಗತಿಗಳಲ್ಲಿ ಅನುತ್ತೀರ್ಣರಾದ ಬಹಳಷ್ಟು ಮಕ್ಕಳು ಶಾಲೆಯನ್ನೇ ಬಿಡುತ್ತಿದ್ದರು.
ಆದರೆ ಹಾಜರಾತಿ ಅದೇ ರೀತಿಯಲ್ಲಿಲ್ಲ. ೨೦೧೬ರ ಶಿಕ್ಷಣದ ವಾರ್ಷಿಕ ವಿದ್ಯಮಾನದ ವರದಿ (Annual
Status of Education Report – ASER) ಪ್ರಕಾರ ಮಕ್ಕಳ ಹಾಜರಾತಿ ಇಳಿದಿರುವುದು ಕಂಡುಬರುತ್ತದೆ. ೨೦೦೯ರಲ್ಲಿ ಪ್ರಾಥಮಿಕ ಶಾಲೆಯದ್ದು ಶೇ. ೭೪.೩ ಇದ್ದರೆ, ಹಿರಿಯ ಪ್ರಾಥಮಿಕ ಶಾಲೆಯದ್ದು ಶೇ. ೭೭ ಇತ್ತು. ೨೦೧೬ರಲ್ಲಿ ಇವು ಅನುಕ್ರಮವಾಗಿ ಶೇ. ೭೧.೪ ಮತ್ತು ೭೩.೨ ಇದ್ದವು. ಅದಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳ ತಿಳಿವಳಿಕೆಯ ಮಟ್ಟದಲ್ಲಿ ಸಾಕಷ್ಟು ಇಳಿಕೆಯಾದದ್ದು ಕಂಡುಬರುತ್ತದೆ. ಐದನೇ ತರಗತಿಯಲ್ಲಿದ್ದು ಎರಡನೇ ತರಗತಿಯ ಪುಸ್ತಕ ಓದಬಲ್ಲವರು ೨೦೧೦ರಲ್ಲಿ ಶೇ. ೫೩.೭ ಇದ್ದರೆ ೨೦೧೬ರಲ್ಲಿ ಅದು ಶೇ. ೪೭.೮ಕ್ಕೆ ಇಳಿದಿತ್ತು. ಎಂಟನೇ ತರಗತಿಯವರಿಗೆ ಸಂಬಂಧಿಸಿ ಆ ಪ್ರಮಾಣ ಶೇ. ೮೩.೫ರಿಂದ ೭೩.೧ಕ್ಕೆ ಇಳಿದಿತ್ತು. ಗಣಿತದಲ್ಲೂ ಅದೇ ಕಥೆ. ೨೦೧೦ರಲ್ಲಿ ಐದನೇ ತರಗತಿಯ ಮಕ್ಕಳಲ್ಲಿ ಶೇ. ೩೨.೨ರಷ್ಟು ಜನ ಭಾಗಿಸುವ ಲೆಕ್ಕ ಮಾಡಬಲ್ಲವರಾಗಿದ್ದರೆ, ೨೦೧೬ರಲ್ಲಿ ಅದು ಶೇ. ೨೯.೮ಕ್ಕೆ ಇಳಿದಿತ್ತು. ಮನಮೋಹನ ಸಿಂಗ್ ಅವರ ಮಾತಿನ ಹಿನ್ನೆಲೆಯಲ್ಲಿ ನೋಡುವಾಗ ಇದು ಎಂತಹ ಉಜ್ಜ್ವಲ ಭವಿಷ್ಯ?
ಅನುತ್ತೀರ್ಣತೆ ಇಲ್ಲ!
ಇದರ ಒಂದು ಮುಖ್ಯ ಕಾರಣ ಆರ್ಟಿಇ ಕಾಯ್ದೆಯ ಸೆಕ್ಷನ್ ೧೬ರ ಪ್ರಕಾರ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲು ಅವಕಾಶ ಇಲ್ಲದಿರುವುದೆಂದು ವಿಶ್ಲೇಷಿಸಲಾಗಿದೆ. ಅದg ಪ್ರಕಾರ ಒಂದರಿಂದ ಎಂಟನೇ ತರಗತಿಯವರೆಗೆ ಯಾರನ್ನೂ ಫೇಲ್ ಮಾಡುವಂತಿಲ್ಲ. ಪಾಸು-ಫೈಲಿನ ವಾರ್ಷಿಕ ಪರೀಕ್ಷೆಗೆ ಬದಲಾಗಿ ಆರ್ಟಿಇ ಕಾಯ್ದೆಯಲ್ಲಿ ನಿರಂತರ ಸಮಗ್ರ ಮೌಲ್ಯಮಾಪನ (ಸಿಸಿಇ) ಇರುತ್ತದೆ; ಅಂದರೆ ಇಡೀ ವ? ಮೌಲ್ಯಮಾಪನ ಎಂದರ್ಥ. ಮಗುವಿಗೆ ಕಲಿತದ್ದನ್ನೇ ಮತ್ತೆ ಕಲಿಯುವ (ರೆಪಿಟಿ?ನ್) ಒತ್ತಡ ಇರಬಾರದೆಂದು ಎಲ್ಲರನ್ನು ಪಾಸುಮಾಡುವ ಕ್ರಮವನ್ನು ತಂದರು. ಇದು ವಿದ್ಯಾರ್ಥಿಕೇಂದ್ರಿತ ನೀತಿಯಾಗಿದ್ದು ಇದರಲ್ಲಿ ಪ್ರತಿ ತಿಂಗಳು ಸಮೀಕ್ಷೆ ಇರುತ್ತದೆ; ಉತ್ತರದಾಯಿತ್ವ (ಹೊಣೆಗಾರಿಕೆ) ಶಿಕ್ಷಕರದ್ದು ಎನ್ನುತ್ತಾರೆ. ಫೇಲ್ಮಾಡುವುದು ಇಲ್ಲದ ಕಾರಣ ಅದಕ್ಕೆ ಬದಲಿಯಾಗಿ ಸಿಸಿಇ ಇದೆ. ಆದರೆ ದುರದೃ?ವೆಂದರೆ ಭಾರತದಲ್ಲಿ ಇದು ಕೇವಲ ಕಾಗದದ ಮೇಲೆ ಉಳಿಯಿತು. ಶಿಕ್ಷಕರಿಗೆ ಸಿಸಿಇ ವಿಧಾನಕ್ಕೆ ಬೇಕಾದ ತರಬೇತಿ ಇರಲಿಲ್ಲ. ಪರಿಣಾಮವೆಂದರೆ, ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಹೇಗೇ ಇರಲಿ; ಪಾಸು ಮಾಡಿಸುತ್ತಾ ಹೋಗುವುದು ಎಂದಾಯಿತು. ಶಿಕ್ಷಕರ ಉತ್ತರದಾಯಿತ್ವ ಇನ್ನಷ್ಟು ದುರ್ಬಲವಾಯಿತು.
ಫೇಲ್ಮಾಡದಿರುವ ಕಾರಣ ಉಂಟಾದ ಸಮಸ್ಯೆ ಆರ್ಟಿಇ ಜಾರಿಗೆ ಬಂದ ಎರಡೇ ವರ್ಷಗಳಲ್ಲಿ ಗಮನಕ್ಕೆ ಬಂತು. ೨೦೧೨ರಲ್ಲಿ ಶಿಕ್ಷಣಕೇಂದ್ರದ ಸಲಹಾ ಮಂಡಳಿ(ಸಿಎಬಿಇ)ಯ ಉಪಸಮಿತಿ ಇದನ್ನು ಪರಿಶೀಲಿಸಿತು; ಅನುತ್ತೀರ್ಣ ಇಲ್ಲದಿರುವುದು ಮತ್ತು ಪ್ರೊವಿಜನಲ್ ಪ್ರೊಮೋಶನ್ಗಳ ಮಿಶ್ರಣ ಮಾಡಬೇಕು ಎಂಬ ಸಲಹೆ ನೀಡಿತು. ಆದರೆ ೨೦೧೫ರ ಸಿಎಬಿಇ ಸಭೆಯಲ್ಲಿ ಎಲ್ಲ ರಾಜ್ಯಗಳ ಶಿಕ್ಷಣಸಚಿವರು ಪ್ರೊವಿಜನಲ್ ಪ್ರೊಮೋಶನ್ ಬೇಡ ಎಂದರು. ರಾಜಸ್ಥಾನ ಸರ್ಕಾರ ಅನುತ್ತೀರ್ಣತೆ ಇಲ್ಲ ಎಂಬುದಕ್ಕೆ ತಿದ್ದುಪಡಿ ತಂದಿತಾದರೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್ಆರ್ಡಿ) ಇಲಾಖೆ ಅದಕ್ಕೆ ಒಪ್ಪಿಗೆ ನೀಡಲಿಲ್ಲ; ಶಿಕ್ಷಣವು ಸಹವರ್ತಿ ಪಟ್ಟಿಯಲ್ಲಿರುವ ಕಾರಣ ಕೇಂದ್ರಸರ್ಕಾರದ ಒಪ್ಪಿಗೆ ಅಗತ್ಯ.
ಅಲ್ಪಸಂಖ್ಯಾತರ ಶಾಲೆಗೆ ವಿಶೇಷ ಹಕ್ಕು
ಹಿಂದೂಗಳು ನಡೆಸುವ ಶಾಲೆಗಳಿಗಿಲ್ಲದ ಅನೇಕ ಹಕ್ಕುಗಳು ಅಲ್ಪಸಂಖ್ಯಾತರ ಸಂಸ್ಥೆಗಳಿಗಿದ್ದು, ಅವುಗಳಲ್ಲಿ ಕೆಲವು ಹೀಗಿವೆ:
- ಸಂವಿಧಾನವು ಜಾರಿಯಾಗುವುದಕ್ಕೆ ಮುನ್ನವೇ ಸ್ಥಾಪನೆಯಾದ ಅಲ್ಪಸಂಖ್ಯಾತರ ಶಿಕ್ಷಣಸಂಸ್ಥೆಗೆ ಕೂಡ ಸಂವಿಧಾನದ ೩೦(೧)ನೇ ವಿಧಿಯ ರಕ್ಷಣೆಯಿದೆ.
- ಒಂದು ಅಲ್ಪಸಂಖ್ಯಾತರ ಸಂಸ್ಥೆಯನ್ನು ಭಾರತದ ಓರ್ವ ನಾಗರಿಕನೇ ಸ್ಥಾಪಿಸಿರಬೇಕೆಂದಿಲ್ಲ. ಭಾರತದಲ್ಲಿ ವಾಸವಿರುವ ಓರ್ವ ವಿದೇಶೀ ಪ್ರಜೆಯು ಸ್ಥಳೀಯ ಅಲ್ಪಸಂಖ್ಯಾತರ ನೆರವಿನಿಂದ ಸಂಸ್ಥೆಯನ್ನು ಸ್ಥಾಪಿಸಿದ್ದರೆ ಸಾಕು.
- ಸಿದ್ಧಿರಾಜ್ ಭಾಯಿ ಮತ್ತು ಗುಜರಾತ್ ರಾಜ್ಯಸರ್ಕಾರಗಳ ನಡುವಣ ದಾವೆಯಲ್ಲಿ ಸುಪ್ರೀಂಕೋರ್ಟ್ ಅಲ್ಪಸಂಖ್ಯಾತರಿಗೆ ಸಂವಿಧಾನದ ೩೦(೧)ನೇ ವಿಧಿಯನ್ವಯ ನೀಡಿದ ಹಕ್ಕು ನೈಜವಾಗಿದ್ದು, ಅದನ್ನು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸಬಾರದು ಎಂದು ಹೇಳಿತ್ತು. ಈ ತೀರ್ಪು ಅಲ್ಪಸಂಖ್ಯಾತರಿಗೆ ಪೂರ್ಣಾಧಿಕಾರವನ್ನು ನೀಡುವುದಿಲ್ಲವಾದರೂ ಬಹಳಷ್ಟು ಸ್ವಾಯತ್ತತೆಯನ್ನು ನೀಡಿತು. ಸರ್ಕಾರ ಒಂದು ಅಲ್ಪಸಂಖ್ಯಾತ ಸಂಸ್ಥೆಯನ್ನು ನಿಯಂತ್ರಿಸುವುದಾದರೆ ಅದರ ನಿಯಮಗಳಿಗೆ ಎರಡು ?ರತ್ತುಗಳು ಅನ್ವಯವಾಗುತ್ತವೆ : ಎ) ನಿಯಮಗಳು ನ್ಯಾಯಸಮ್ಮತವಿರಬೇಕು; ಮತ್ತು ಬಿ) ನಿಯಮವು ಸಂಸ್ಥೆಯ ಶೈಕ್ಷಣಿಕ ಸ್ವರೂಪಕ್ಕೆ ಅನುಸಾರವಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣಕ್ಕೆ ಅದು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು.
- ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ತಮ್ಮ ಬೋಧನೆಯ ಮಾಧ್ಯಮವನ್ನು ಆರಿಸಿಕೊಳ್ಳುವ ಅವಕಾಶವಿರುತ್ತದೆ; ಏಕೆಂದರೆ ಸಂಸ್ಕೃತಿಯ ಸಂರಕ್ಷಣೆಗೆ ಅದು ಅಗತ್ಯ. ಸರ್ಕಾರ ಒಂದು ಭಾಷಾಮಾಧ್ಯಮವನ್ನು ವಿಧಿಸಿದರೂ ಕೂಡ ಅವರ ಸಮುದಾಯದ ಭಾಷೆಯ ಕಲಿಕೆಗೆ ಅವಕಾಶವಿರಬೇಕು.
- ಸಂಸ್ಥೆಯ ಮಾನ್ಯತೆ/ಸಂಯೋಜನೆಯ ವಿಷಯದಲ್ಲಿ ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಇತರರ ಸಂಸ್ಥೆಗಳಿಗಿಂತ ಹೆಚ್ಚಿನ ಸ್ವಾಯತ್ತತೆ ಇರುತ್ತದೆ. ಸರ್ಕಾರ ವಿಧಿ ೩೦(೧)ರ ಅನ್ವಯ ಅವರಿಗೆ ಲಭ್ಯವಾದ ಹಕ್ಕುಗಳಿಗೆ ಧಕ್ಕೆ ತರುವಂತಹ ?ರತ್ತುಗಳನ್ನು ವಿಧಿಸುವಂತಿಲ್ಲ.
- ಸಂಸ್ಥೆಯೇ ತನ್ನನ್ನು ಬೇಷರತ್ತಾಗಿ ಒಪ್ಪಿಸುವ ಸಂದರ್ಭವನ್ನು ಹೊರತುಪಡಿಸಿ ಸರ್ಕಾರವು ಅಲ್ಪಸಂಖ್ಯಾತರ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳುವಂತಿಲ್ಲ. ಅವರದೇ ಆಡಳಿತವಿದ್ದರೆ ಉತ್ತಮವೆಂದು ನ್ಯಾಯಾಲಯದ ತೀರ್ಪುಗಳು ಹೇಳಿವೆ.
- ಶಿಕ್ಷಕರ ನೇಮಕಾತಿಯೂ ಅವರ ಸೇವಾಸೌಲಭ್ಯ ಮತ್ತು ನಿಯಂತ್ರಣಗಳೂ ಆ ಸಂಸ್ಥೆಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಗಳಾಗಿದ್ದು, ಅದು ಶಿಕ್ಷಕರ ಸೇವಾ ಭದ್ರತೆ, ಸೌಲಭ್ಯಗಳ ಸುಧಾರಣೆಗೆ ಪೂರಕವಾಗಿರಬೇಕು. ಶಾಲೆಯ ಶೈಕ್ಷಣಿಕ ಉನ್ನತಿಗೆ ಸಹಕಾರಿಯಾದ ಅಂಶಗಳು ಧರ್ಮನಿರಪೇಕ್ಷತೆಯ ವ್ಯಾಪ್ತಿಯಲ್ಲಿ ಬರುತ್ತವೆ.
ಮೇಲಿನ ಅಂಶಗಳನ್ನು ಗಮನಿಸಿದಾಗ ಕ್ರೈಸ್ತ, ಮುಸ್ಲಿಂನಂತಹ ಅಲ್ಪಸಂಖ್ಯಾತರು ಮತ್ತು ಹಿಂದೂಗಳು ನಡೆಸುವ ಸಂಸ್ಥೆಗಳು ಒಂದೇ ಧರ್ಮನಿರಪೇಕ್ಷ (ಸೆಕ್ಯುಲರ್) ಶಿಕ್ಷಣವನ್ನು ನೀಡುತ್ತಿದ್ದರೂ ಸರ್ಕಾರ ಅವುಗಳನ್ನು ವಿಭಿನ್ನವಾಗಿ ನೋಡುತ್ತದೆ ಎಂಬುದು ತಿಳಿಯುತ್ತದೆ.
ಈಗ ಆ ವಿಷಯಕ್ಕೆ ಸಂಬಂಧಿಸಿ ಆರ್ಟಿಇಗೆ ತಿದ್ದುಪಡಿ ತರಲಾಗಿದ್ದು, ಎಷ್ಟನೇ ತರಗತಿಯವರೆಗೆ ಅನುತ್ತೀರ್ಣತೆ ಇಲ್ಲ ಎಂಬುದನ್ನು ರಾಜ್ಯಸರ್ಕಾರಗಳು ನಿರ್ಧರಿಸಬಹುದಾಗಿದೆ; ಆದರೆ ತಿದ್ದುಪಡಿ ತಂದ ರಾಜ್ಯಗಳು ರಾಜಸ್ಥಾನ, ದೆಹಲಿ ಮತ್ತು ಮಧ್ಯಪ್ರದೇಶಗಳು ಮಾತ್ರ. ಆರ್ಟಿಇ ಕಾಯ್ದೆಗೆ ಓದಿನ ಪರಿಣಾಮ(ಲರ್ನಿಂಗ್ ಔಟ್ಕಮ್)ವನ್ನು ಅದರಲ್ಲಿ ಸೇರಿಸುತ್ತೇವೆ, ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರನ್ನು ಉತ್ತರದಾಯಿಗಳನ್ನಾಗಿ ಮಾಡುತ್ತೇವೆ ಎಂದು ಕೇಂದ್ರ ಮಾನವಸಂಪನ್ಮೂಲ ಸಚಿವ ಜಾವಡೇಕರ್ ಹೇಳಿದ್ದಾರೆ. ಆದರೆ ಪರಿಸ್ಥಿತಿ ತುಂಬ ನಿರಾಶಾದಾಯಕವಿದೆ. ಖಾಸಗಿ, ಸರ್ಕಾರಿ ಎರಡೂ ಶಾಲೆಗಳ ಗುಣಮಟ್ಟ ತೀರಾ ಕುಸಿದಿದೆ. ಸಮೀಕ್ಷೆಯೊಂದರ ಪ್ರಕಾರ, ೨೦೦೯ರಲ್ಲಿ ಶೈಕ್ಷಣಿಕ ಫಲಿತಾಂಶದಲ್ಲಿ ಭಾರತ ಜಗತ್ತಿನಲ್ಲಿ ೭೩ ಅಥವಾ ೭೪ನೇ ಸ್ಥಾನದಲ್ಲಿತ್ತು. ಉಚಿತ ಶಿಕ್ಷಣ ಎಲ್ಲರಿಗೂ ಲಭ್ಯವಿಲ್ಲದಿರುವುದು, ಸೃಷ್ಟಿಶೀಲತೆ ಹಾಗೂ ಅನ್ವೇಷಣೆಗಳನ್ನು ಪ್ರೋತ್ಸಾಹಿಸುವ ಬದಲು ಪುಸ್ತಕದ ಬದನೆಕಾಯಿ ರೀತಿಯ ಶಿಕ್ಷಣ, ಸರ್ಕಾರಿ ಶಾಲೆಗಳ ದುಃಸ್ಥಿತಿ, ಅನಾರೋಗ್ಯಕರ ಸ್ಪರ್ಧೆ, ವಾಣಿಜ್ಯೀಕರಣ, ಟ್ಯೂಶನ್-ಕೋಚಿಂಗ್ ಸಂಸ್ಕೃತಿ, ಉತ್ತಮ ಶಿಕ್ಷಕರ ಅಭಾವ, ಮೀಸಲಾತಿ, ಅಂಕಗಳಿಗೆ ಅತಿಯಾದ ಪ್ರಾಧಾನ್ಯ ಮುಂತಾದವು ದೇಶದ ಶಿಕ್ಷಣವ್ಯವಸ್ಥೆಗಂಟಿದ ದೋಷಗಳೆನಿಸಿವೆ.
ಅರ್ಹ ಶಿಕ್ಷಕರು ಬೇಕು
ಶಿಕ್ಷಣಪದ್ಧತಿಯನ್ನೇನೋ ರೂಪಿಸಬಹುದು. ಆದರೆ ಅರ್ಹರಾದ ಶಿಕ್ಷಕರಿಲ್ಲದೆ ಅದರ ಅನು?ನ ಅಸಾಧ್ಯ. ಆರ್ಟಿಇಯಲ್ಲಿ ಶಿಕ್ಷಕರ ವಿದ್ಯಾರ್ಹತೆ, ವೇತನ ಎಲ್ಲ ಅಂಶಗಳಿವೆ. ಆದರೆ ಅದರ ಅನು?ನದಲ್ಲಿ ಸರ್ಕಾರಿ ಶಾಲೆಗಳೇ ಹಿಂದೆ ಬಿದ್ದಿವೆ. ಸರ್ಕಾರಿ ಶಾಲೆಗಳ ಶಿಕ್ಷಕರೇ ಆ ಮಟ್ಟದಲ್ಲಿ ಅರ್ಹರಿಲ್ಲ. ೨೦೧೫ರೊಳಗೆ ಸರಿಯಾಗಬೇಕೆಂದು ಐದು ವರ್ಷಗಳ ಅವಧಿ ನೀಡಿದ್ದರು. ಹಲವು ರಾಜ್ಯಗಳು ತಮ್ಮಲ್ಲಿ ಸೇವಾ ಸವಲತ್ತು ಇಲ್ಲ ಎಂದವು. ಅವರಿಗೆ ಮತ್ತೆ ನಾಲ್ಕುವರ್ಷ ಕಾಲಾವಕಾಶ ನೀಡಿದರು.
ಹೀಗಿರುವಾಗ ವಿದ್ಯಾರ್ಥಿ-ಶಿಕ್ಷಕ ಅನುಪಾತಕ್ಕೆ ಹೆಚ್ಚು ಮಹತ್ತ್ವವಿಲ್ಲ. ಆರ್ಟಿಇ ಕಾಯ್ದೆ ಪ್ರಾಥಮಿಕ ಶಾಲೆಗೆ ೩೦:೧ ಹಾಗೂ ಹಿರಿಯ ಪ್ರಾಥಮಿಕಕ್ಕೆ ೩೫:೧ ಅನುಪಾತ ಇರಬೇಕೆಂದು ಹೇಳುತ್ತದೆ. ಈಗ ಒಟ್ಟಾರೆ ಪ್ರಾಥಮಿಕದಲ್ಲಿ ೨೪:೧ ಮತ್ತು ಹಿರಿಯ ಪ್ರಾಥಮಿಕದಲ್ಲಿ ೨೭:೧ ಇದೆ. ಶೇ. ೨೬ರ? ಪ್ರಾಥಮಿಕ ಶಾಲೆಗಳಲ್ಲಿ ೩೦ಕ್ಕಿಂತ ಜಾಸ್ತಿ ಮತ್ತು ಶೇ. ೧೩ ಹಿರಿಯ ಪ್ರಾಥಮಿಕದಲ್ಲಿ ೩೫ಕ್ಕಿಂತ ಹೆಚ್ಚಿದೆ. ಈ ಅನುಪಾತಕ್ಕಿಂತ ಶಿಕ್ಷಕರ ಅರ್ಹತೆ ಮುಖ್ಯ ಎಂಬುದನ್ನು ಮರೆಯಬಾರದು. ಅದಲ್ಲದೆ ಸರ್ಕಾರಿ ಶಾಲೆಗಳು ಇದರಲ್ಲೂ ಹಿಂದೆ ಬಿದ್ದಿವೆ. ಶಿಕ್ಷಕ/ವಿದ್ಯಾರ್ಥಿ ಅನುಪಾತ ಒಟ್ಟು ಸರಾಸರಿಗಿಂತ ಜಾಸ್ತಿ ಇದೆ; ಮತ್ತು ದೇಶದ ಸರ್ಕಾರಿ ಶಾಲೆಗಳ ಶಿಕ್ಷಕರಲ್ಲಿ ಶೇ. ೬೦ರ? ಜನ ಗುತ್ತಿಗೆ ಶಿಕ್ಷಕರಾಗಿದ್ದು, ಕಡಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ.
ಇಲ್ಲಿ ಸರ್ಕಾರದ ದ್ವಂದ್ವನೀತಿ ಕೂಡ ಇದೆ. ಖಾಸಗಿ ಅನುದಾನರಹಿತ ಶಾಲೆಯವರು ಸರ್ಕಾರ ನಿಗದಿಪಡಿಸಿದ ಸಂಬಳ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಸವಲತ್ತಿಲ್ಲದಿದ್ದರೆ ಅವರಿಗೆ ಸರಿಪಡಿಸಲು ಸಮಯ ನೀಡುತ್ತಿದ್ದಾರೆ. ಖಾಸಗಿಯವರು ತಪ್ಪಿದರೆ ಅವರಿಗೆ ಸಮಾಜಕಂಟಕರೆಂಬ ಪಟ್ಟ ನೀಡಿ ಶಾಲೆ ಮುಚ್ಚಲು ಆದೇಶಿಸುತ್ತಾರೆ. ವಿಶೇ?ವಾಗಿ ಆರ್ಥಿಕ ದುರ್ಬಲರೇ ಅಧಿಕವಾಗಿರುವ ಪ್ರದೇಶಗಳಲ್ಲಿರುವ ಖಾಸಗಿ ಅನುದಾನರಹಿತ ಶಾಲೆಗಳು ಒತ್ತಡಕ್ಕೆ ಸಿಲುಕುತ್ತವೆ. ಉದಾಹರಣೆಗೆ, ಬೃಹನ್ಮುಂಬಯಿ ನಗರಪಾಲಿಕೆ ವ್ಯಾಪ್ತಿಯ ಕೊಳೆಗೇರಿಗಳಲ್ಲಿ ಸರ್ಕಾರಿ ಶಾಲೆ ಇಲ್ಲ. ಶಾಲೆ ಬಿಡುವ (ಡ್ರಾಪ್ಔಟ್) ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ; ಖಾಸಗಿ ಅನುದಾನರಹಿತ ಶಾಲೆಗಳು ಕ?ದಲ್ಲಿ ನಡೆಯುತ್ತಿವೆ. ಅಲ್ಲಿ ಹೆಚ್ಚಿನ ಮೂಲಸವಲತ್ತು ನೀಡಲು ಅಸಾಧ್ಯ; ಆ ಶಾಲೆಗಳಿಗೆ ನಿಯಮ ಸಡಿಲಿಸಬೇಕು; ಆದರೆ ಯಾರೂ ಕೇಳುತ್ತಿಲ್ಲ ಎಂದು ದೂರಲಾಗಿದೆ.
ಶಾಲೆಗಳ ಮೂಲಸವಲತ್ತು ಸುಧಾರಣೆ ಅದದ್ದು ಆರ್ಟಿಇಯ ಒಂದು ಸಾಧನೆ ಎಂದು ಭಾವಿಸಲಾಗಿದೆ. ಶೌಚಾಲಯ ಇಲ್ಲದ ಶಾಲೆಗಳ ಸಂಖ್ಯೆ ಇಳಿಯಿತು. ಹೆಮ್ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ನೀರಿನ ಸೌಕರ್ಯ ಇದೆಲ್ಲ ಆಯಿತು. ಅದಕ್ಕೆ ಕಾರಣ ಶಾಲೆಗೆ ಮಾನ್ಯತೆ ಸಿಗಬೇಕಾದರೆ ಸವಲತ್ತು ಇರುವುದು ಕಡ್ಡಾಯ. ಆದರೆ ಈ ನಿಯಮಗಳಲ್ಲಿ ಕೂಡ ದ್ವಂದ್ವನೀತಿ ಇದೆ. ಸರ್ಕಾರಿ ಶಾಲೆಗಳಿಗೆ ಬೇರೆಯದೇ ನಿಯಮಗಳು. ಅಲ್ಪಸಂಖ್ಯಾತರ ಶಿಕ್ಷಣಸಂಸ್ಥೆಗಳಿಗೆ ಬಹಳಷ್ಟು ಸ್ವಾಯತ್ತತೆ, ಸ್ವಾತಂತ್ರ್ಯ. ಬಿಗಿನಿಯಮದಿಂದಾಗಿ ದೇಶದ ಬಹಳ? ಕಡೆ ಅನುದಾನರಹಿತ ಖಾಸಗಿ ಶಾಲೆಗಳು ಮುಚ್ಚಿವೆ. ಅದರಿಂದಾಗಿ ಬಡವರನ್ನು ಮುಟ್ಟುವ ಶಾಲೆಗಳು ಇಲ್ಲವಾಗಿ ಎಲ್ಲರಿಗೂ ಶಿಕ್ಷಣ ಎನ್ನುವ ಆರ್ಟಿಇಯ ಮೂಲ ಉದ್ದೇಶಕ್ಕೇ ಭಂಗ ಬಂತು. ಅದಲ್ಲದೆ ನಗರಪ್ರದೇಶದಲ್ಲಿ ಶಾಲೆಯು ಹೊಂದಿರುವ ಸ್ಥಳಾವಕಾಶ, ಆಟದ ಬಯಲು ಮುಂತಾದ ನಿಯಮಗಳ ಪಾಲನೆ ಅಸಾಧ್ಯವೆನಿಸಿದೆ; ಎಷ್ಟು ಶಾಲೆಗಳಿಗೆ ತರಗತಿ ಹೆಚ್ಚಿಸಲು ಬೇಕಾದ ಜಾಗವೇ ಇರುವುದಿಲ್ಲ.
ಅದೇ ವೇಳೆ ಸರ್ಕಾರಿ ಶಾಲೆಗಳಿಗೆ ಈ ನಿಯಮಗಳಿಲ್ಲ. ಅವರು ಕಾರಿಡಾರ್ಗಳಲ್ಲಿ ಕ್ಲಾಸ್ ಮಾಡುತ್ತಾರೆ. ಸರಿಯಾದ ಶೌಚಾಲಯ, ಕುಡಿಯುವ ನೀರು ಇಲ್ಲದ ಶಾಲೆಗಳು ಎ? ಇವೆ. ೨೦೧೫ರಲ್ಲಿ ಶಾಲೆಗಳ ಮೂಲ ಸವಲತ್ತಿಗೆ ಸಂಬಂಧಿಸಿ ದೆಹಲಿ ಸರ್ಕಾರಕ್ಕೆ ರಾಷ್ಟ್ರೀಯ ಮಾನವಹಕ್ಕು ಆಯೋಗವು ನೋಟಿಸ್ ನೀಡಿತ್ತು.
ಶೇ. ೨೫ ಸೀಟಿನ ಸಮಸ್ಯೆ
ಖಾಸಗಿ ಶಾಲೆಗಳು ತಮ್ಮ ಪಾಲಿನ ಶೇ. ೨೫ರ? ಸೀಟುಗಳನ್ನು ಸುತ್ತಮುತ್ತಲಿನ ಪ್ರದೇಶದ ಆರ್ಥಿಕವಾಗಿ ದುರ್ಬಲ ಕುಟುಂಬಗಳ ಮಕ್ಕಳಿಗೆ ನೀಡಬೇಕು; ಅದರ ವೆಚ್ಚವನ್ನು ಸರ್ಕಾರ ಭರಿಸುತ್ತದೆ – ಎಂಬುದು ಆರ್ಟಿಇ ಕಾಯ್ದೆಯ ಒಂದು ನಿಯಮ. “ಆದರೆ ಸರ್ಕಾರ ಕೊಡುವ ಹಣ ತೀರಾ ಕಡಮೆ. ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳಲ್ಲಿ ಒಂದು ಮಗುವಿನ ಮೇಲೆ ಬರುವ ವೆಚ್ಚವನ್ನು ನೋಡಿ ಅದರಲ್ಲಿ ಕಡಮೆಯದನ್ನು ನೀಡುತ್ತಾರೆ. ಶಾಲೆಯ ಜಾಗ, ಕಟ್ಟಡ ನಿರ್ಮಾಣ, ಮೂಲಸವಲತ್ತಿನ ವೆಚ್ಚವನ್ನು ಅದರಲ್ಲಿ ಸೇರಿಸುವುದಿಲ್ಲ. ಶಾಲೆಯವರು ಆ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಸಮವಸ್ತ್ರ ನೀಡಬೇಕು. ದೆಹಲಿಯಲ್ಲಿ ಒಂದು ಮಗುವಿಗೆ ಸರ್ಕಾರ (ತಿಂಗಳಿಗೆ) ೧,೬೯೦ ರೂ. ನೀಡುತ್ತದೆ. ಆದರೆ ಖರ್ಚು ಸುಮಾರು ೩,೦೦೦ ರೂ. ಆಗುತ್ತದೆ; ಹರ್ಯಾಣಾ ಸರ್ಕಾರ ಮೊದಲು ಆ ಮಕ್ಕಳ ಬಗ್ಗೆ ಹಣ ಕೊಡುವುದಿಲ್ಲವೆಂದು ಹೇಳಿ ಈಗ ಕೇವಲ ೫೦೦ ರೂ. ನೀಡುತ್ತಿದೆ” ಎಂಬ ದೂರು ಶಾಲೆಗಳ ಕಡೆಯಿಂದ ಬಂದಿದೆ; ಮತ್ತು “ಅನುದಾನರಹಿತ ಖಾಸಗಿ ಶಾಲೆಗಳ ಮೇಲೆ ಸರ್ಕಾರ ಈ ರೀತಿ ಆರ್ಟಿಇ ಹೊರೆಯನ್ನು ಹೇರುವುದು ಎಷ್ಟು ಸರಿ? ಮಕ್ಕಳು ಸರ್ಕಾರಿ ಶಾಲೆಗೆ ಬದಲಾಗಿ ಖಾಸಗಿ ಶಾಲೆಯನ್ನು ಆರಿಸುತ್ತಿರುವಾಗ ಸರ್ಕಾರ ಆ ವೆಚ್ಚವನ್ನು ತುಂಬಿಕೊಡಬೇಕಲ್ಲವೇ?” ಎಂಬ ಪ್ರಶ್ನೆ ಕೂಡ ಬಂದಿದೆ.
ಪಾವತಿ ಸಮಸ್ಯೆ
ವೆಚ್ಚದಲ್ಲಿ ವ್ಯತ್ಯಾಸವಾಗುವ ಕಾರಣ ಸರ್ಕಾರ ತುಂಬುವ ಹಣವನ್ನು ಪ್ರತಿವ? ಪರಿ?ರಿಸಬೇಕು ಎನ್ನುವ ಒಂದು ಒತ್ತಾಯವೂ ಇದೆ. ರಾಜಸ್ಥಾನದಲ್ಲಿ ಅದು ನಡೆಯುತ್ತಿದೆ. ದೆಹಲಿ ಸರ್ಕಾರವು ಬೇಡಿಕೆ ಬಂದು ಎರಡು ವ?ಗಳ ಅನಂತರ ಅದನ್ನು ಮಾಡಿತು. ಹಣ ತುಂಬುವ ವಿ?ಯದಲ್ಲಿ ಖಾಸಗಿ ಶಾಲೆ ಮತ್ತು ಶಿಕ್ಷಣ ಇಲಾಖೆಯ ನಡುವೆ ತಿಕ್ಕಾಟ ಇರುವುದು ಸತ್ಯ. “ನಮ್ಮ ಶಾಲೆಗೆ ಬರುವ ಮಕ್ಕಳು ಸರ್ಕಾರಿ ಶಾಲೆಗೆ ಹೋಗುವಂಥವರು. ಆ ಶಾಲೆಗಳ ಗುಣಮಟ್ಟ ಕಳಪೆಯಾದ ಕಾರಣ ನಮ್ಮಲ್ಲಿಗೆ ಬರುತ್ತಾರೆ. ಈಗಾಗಲೆ ನಾವು ಕೆಳವರ್ಗದವರಿಗೆ ಶಿಕ್ಷಣ ಕೊಡುತ್ತಿರುವ ಕಾರಣ ಮತ್ತೆ ನಮ್ಮ ಮೇಲೆ ಬಡಮಕ್ಕಳ ಹೇರಿಕೆ ಸರಿಯಲ್ಲ” ಎಂಬ ವಾದ ಬಹಳ? ಖಾಸಗಿ ಶಾಲೆಗಳಿಂದ ಬಂದಿದೆ. ಪ್ರಸ್ತುತ ಶೇ. ೨೫ ಸೀಟುಗಳ ಮಕ್ಕಳಿಗೆ ತಮ್ಮ ವೆಚ್ಚದಲ್ಲಿ (ಸರ್ಕಾರ ನೀಡುತ್ತದೆಯಾದರೂ) ಶಿಕ್ಷಣ ನೀಡುವುದರಿಂದ ಉಳಿದ ಶೇ. ೭೫ರಷ್ಟು ಮಕ್ಕಳ ಮೇಲೆ ಹೆಚ್ಚಿನ ಹೊರೆ ಬರುತ್ತದೆ ಎನ್ನುವ ಒಂದು ವಾದವೂ ಇದೆ.
ಕರ್ನಾಟಕದಲ್ಲಿ ಆರ್ಟಿಇಯಿಂದ ಬೇರೆಯದೇ ಒಂದು ಬಗೆಯ ಸಮಸ್ಯೆ ಉಂಟಾಗಿರುವುದು ಕಾಣಿಸುತ್ತದೆ. ಖಾಸಗಿ ಶಾಲೆಗಳಲ್ಲಿ ಶೇ. ೨೫ರ? ಸೀಟುಗಳನ್ನು ಸಮಾಜದ ದುರ್ಬಲವರ್ಗದ ಮಕ್ಕಳಿಗೆ ಮೀಸಲಿಡುವ ಯೋಜನೆಯನ್ನು ರಾಜ್ಯಸರ್ಕಾರ ಜಾರಿಗೆ ತಂದಿತ್ತು. ಆಗ ಆಂಗ್ಲಮಾಧ್ಯಮದ ಶಾಲೆಗಳಲ್ಲಿ ಪ್ರವೇಶಪಡೆಯಲು ಸಹಜವಾಗಿಯೇ ಸ್ಪರ್ಧೆ ಉಂಟಾಯಿತು. ಪರಿಣಾಮವಾಗಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಪಡೆಯುವವರ ಸಂಖ್ಯೆ ಕಡಮೆಯಾಯಿತು. ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಗೆ ಅಥವಾ ಅದಕ್ಕೂ ಮೊದಲು ಆರ್ಟಿಇ ಕಾಯ್ದೆಯಡಿ ಪ್ರವೇಶ ಪಡೆಯುವ ಮಕ್ಕಳಿಗೆ ತಲಾ ೧೧,೮೪೮ ರೂ.ಗಳನ್ನು ಸರ್ಕಾರ ಪಾವತಿಸುತ್ತದೆ. ಅಂದರೆ ಖಾಸಗಿಯವರೇನೂ ಆ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವುದಿಲ್ಲ. ಅದರೂ ಅವರ ಬಗ್ಗೆ ತಾರತಮ್ಯ ಎಸಗುತ್ತಾರೆ ಎಂದು ದೂರುಗಳು ಬಂದಿವೆ. ನಿಯಮ ಏನೇ ಇರಲಿ, ಮಕ್ಕಳ ನಡುವೆ ತಾರತಮ್ಯ ಎಸಗುವುದು ಅತ್ಯಂತ ಆಕ್ಷೇಪಾರ್ಹ; ಇದು ಸಮಾನತೆ, ಸಾಮಾಜಿಕನ್ಯಾಯಗಳ ಮೂಲ ಆಶಯಕ್ಕೆ ವಿರುದ್ಧವಾದದ್ದು. ಈಗ ರಾಜ್ಯದ ಶಿಕ್ಷಣಸಚಿವ ತನ್ವೀರ್ ಸೇಠ್ ಅವರು, ಕಾಯ್ದೆಯ ಕೆಲವು ಅಂಶಗಳನ್ನು ರದ್ದುಪಡಿಸುವುದಾಗಿ ಪ್ರಕಟಿಸಿದ್ದಾರೆ. ಸರ್ಕಾರ ತನ್ನ ಮೂಗಿನ ನೇರಕ್ಕೆ ಕ್ರಮ ಕೈಗೊಂಡು ಮಕ್ಕಳ ಹಿತಕ್ಕೆ ಧಕ್ಕೆಯಾಗದಿರಲೆಂದು ಆಶಿಸೋಣ
ಲಂಚ – ಭ್ರಷ್ಟಾಚಾರ
ಯಾವುದೇ ಕಾಯ್ದೆಯು ಅನುಷ್ಠಾನಕ್ಕೆ ಇಳಿಯತ್ತಲೇ ಅಪಸವ್ಯಗಳು ನಮ್ಮಲ್ಲಿ ಮಾಮೂಲು. ಖಾಸಗಿ ಶಾಲೆಗೆ ದುರ್ಬಲವರ್ಗದ ಮಕ್ಕಳ ಪ್ರವೇಶದಿಂದಲೇ ಅದು ಆರಂಭಗೊಳ್ಳುತ್ತದೆ. ಆ ಹಂತದಲ್ಲಿ ನಕಲಿ ಆದಾಯ ಸರ್ಟಿಫಿಕೇಟ್ ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಅಲ್ಲಿ ವ್ಯವಸ್ಥಿತ ವಂಚನಾಜಾಲಗಳೇ ಇರುತ್ತವೆ. ಉತ್ತಮವೆನ್ನುವ ಶಾಲೆಗಳು ಕೂಡ ಅದರಲ್ಲಿ ಶಾಮೀಲಾಗಿ ನಕಲಿ ದುರ್ಬಲವರ್ಗದ ಮಕ್ಕಳಿಗೆ ಸೀಟುಕೊಟ್ಟು ಸರ್ಕಾರದ ಹಣವನ್ನು ಲಪಟಾಯಿಸುತ್ತವೆ. ಬೆಂಗಳೂರು ಮುಂಬಯಿಯಂತಹ ಮಹಾನಗರಗಳಲ್ಲೂ ಆ ಸಮಸ್ಯೆ ಬೆಳಕಿಗೆ ಬಂದಿತ್ತು.
ದುರ್ಬಲವರ್ಗದ ಮಕ್ಕಳು ತಮಗೆ ಸೀಟು ನೀಡಿದ ಶಾಲೆ ಬೇಡವೆಂದು ಅಧಿಕ ಶುಲ್ಕದ ಶಾಲೆಯಲ್ಲಿ ಸೀಟು ಬೇಕೆನ್ನುವುದು ಈಚಿನ ಒಂದು ಪ್ರವೃತ್ತಿ ಎನ್ನಲಾಗಿದೆ. ಶಾಲೆಯಿಂದ ಹೊರಗಿರುವ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಆರ್ಟಿಇ ಕಾಯ್ದೆ ಬಂತು. ಆದರೆ ಈಗ ಸಮೀಪದ ಖಾಸಗಿ ಶಾಲೆ ಅಥವಾ ಸರ್ಕಾರಿ ಶಾಲೆಯಲ್ಲಿ ಕಲಿಯುವ ಬದಲು ದುಬಾರಿ ಖಾಸಗಿ ಶಾಲೆಯನ್ನು ಬಯಸುವ ಪ್ರವೃತ್ತಿ ಹೆಚ್ಚಿದೆ. ಇದರಲ್ಲಿ ಆಂಗ್ಲಮಾಧ್ಯಮದ ಹಂಬಲ ತನ್ನ ಪ್ರಭಾವವನ್ನು ಕೂಡ ಬೀರಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದಕ್ಕೆ ಕಾರಣವಾಗುತ್ತಿದೆ. (ಶೇ. ೨೫ ಸೀಟಿನ ಬಗ್ಗೆ) ಖಾಸಗಿ ಶಾಲೆಗಳಿಗೆ ಹಣ ತುಂಬುವ ಬದಲು ಆ ಹಣದಿಂದ ಸರ್ಕಾರಿ ಶಾಲೆಗಳನ್ನು ಉತ್ತಮ ಪಡಿಸಬಹುದಲ್ಲವೆ? ಆ ಮೂಲಕ ಕನ್ನಡಮಾಧ್ಯಮ ಶಾಲೆಗಳ ಉಳಿವಿಗೆ ಪ್ರಯತ್ನಿಸಬಹುದಲ್ಲವೆ? – ಎನ್ನುವ ಪ್ರಶ್ನೆಗಳು ಈಗ ಮುಂದೆಬಂದಿವೆ. ಒಂದು ಪ್ರದೇಶದಲ್ಲಿ ಇಪ್ಪತ್ತು ಶಾಲೆಗಳಿದ್ದು ಅವುಗಳಲ್ಲಿ ಏಳು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೆ ಅವುಗಳಿಗೇ ಬೇಡಿಕೆ ಇರುತ್ತದೆ. ಉಳಿದ ೧೩ ಶಾಲೆಗಳ ಸೀಟು ತುಂಬುವುದಿಲ್ಲ; ಮುಂದಿನ ಐದು ವರ್ಷ ಆ ಸೀಟುಗಳು ಖಾಲಿ ಉಳಿಯುತ್ತವೆ – ಎಂಬುದೊಂದು ದೂರು.
ಸರ್ಕಾರದ ಹಣ ಪಾವತಿಯಲ್ಲಿ ವಿಳಂಬವಾಗುತ್ತದೆ. ಪ್ರತಿತಿಂಗಳು ಖರ್ಚುಮಾಡಬೇಕು; ಆದರೆ ಸರ್ಕಾರದ ಪಾವತಿ ಬರುವುದು ವ?ದ ಕೊನೆಯಲ್ಲಿ ಅಥವಾ (ಕೆಲವು ರಾಜ್ಯಗಳಲ್ಲಿ) ವ?ಕ್ಕೆ ಎರಡು ಸಲ. ಪೇಪರ್ವರ್ಕ್ ತುಂಬ ಇರುತ್ತದೆ. ಸರ್ಕಾರಿ ಅಧಿಕಾರಿಗಳು ಏನೇನೋ ತಗಾದೆ ತೆಗೆಯುತ್ತಾರೆ. ಕೊಡಬೇಕಾದ ಹಣವನ್ನು ಏಕಪಕ್ಷೀಯವಾಗಿ ಕಡಮೆಮಾಡುತ್ತಾರೆ. ಕೆಲವು ಶಾಲೆಗಳಿಗೆ ಎರಡು ವ?ವಾದರೂ ಸರ್ಕಾರದ ಹಣ ಬಾರದಿರುವ ನಿದರ್ಶನಗಳಿವೆ ಎಂದು ಅರೋಪಿಸಲಾಗಿದೆ. ನಮ್ಮ ಸರ್ಕಾರಗಳು ಕೆಲಸ ಮಾಡುವ ರೀತಿಯನ್ನು ಕಂಡವರಿಗೆ ಇದರಲ್ಲಿ ಯಾವುದೇ ಆಶ್ಚರ್ಯ ಆಗುವುದಿಲ್ಲ. ಅಂದರೆ ಆರ್ಟಿಇ ಕಾರಣದಿಂದ ಶಿಕ್ಷಣ ಇಲಾಖೆಯಲ್ಲಿ ಭ್ರ?ಚಾರ ಹೆಚ್ಚುತ್ತಿದೆ. ದುರ್ಬಲವರ್ಗದ ಮಕ್ಕಳ ಪ್ರವೇಶಾತಿ, ಶಾಲೆಯ ಮೂಲಸವಲತ್ತು ಇತ್ಯಾದಿ ನಿಯಮಗಳ ಪಾಲನೆಗೆ ಸಂಬಂಧಿಸಿ ಇಲಾಖೆಯವರ ಕೃಪಾಕಟಾಕ್ಷ ಅನಿವಾರ್ಯ. ಪೇಪರ್ವರ್ಕ್, ಸಲ್ಲಿಸುವ ದಾಖಲೆ – ಇವೆಲ್ಲ ಭ್ರ?ಚಾರದ ಕೂಪಗಳಾಗಿ ರೂಪಗೊಳ್ಳುತ್ತಿವೆ.
ಮುಖ್ಯವಾಗಿ ಶಾಲೆಯ ಮಾನ್ಯತೆಗೆ ಸಂಬಂಧಿಸಿ ಲಂಚ ನೀಡಿದರೆ ಶಾಲೆಯಲ್ಲಿ ಸವಲತ್ತುಗಳು ಇಲ್ಲದಿದ್ದರೂ ನಡೆಯುತ್ತದೆ; ಲಂಚ ಕೊಡದಿದ್ದರೆ ಎಲ್ಲ ಸವಲತ್ತುಗಳಿದ್ದರೂ ಮಾನ್ಯತೆ (ರೆಕಗ್ನಿಶನ್) ಸಿಗುವುದಿಲ್ಲ. ಹರ್ಯಾಣಾದಲ್ಲಿ ಹಳ್ಳಿಯ ಸಣ್ಣ ಶಾಲೆಗಳಿಗೆ ಒಂದೆರಡು ಲಕ್ಷ ರೂ. ಇದ್ದರೆ ಗುರುಗ್ರಾಮ, ಫರೀದಾಬಾದ್ನಂತಹ ನಗರದ ಶಾಲೆಗಳ ಮಾನ್ಯತೆಗೆ ೫-೧೦ ಲಕ್ಷ ರೂ. ಕಕ್ಕಬೇಕು.
ತಮಿಳುನಾಡಿನಲ್ಲಿ ಸಿಬಿಎಸ್ಇಯಿಂದ ಮಾನ್ಯತೆ ಪಡೆಯಲು ಅವಶ್ಯವಾದ ಶಿಕ್ಷಣ ಇಲಾಖೆಯ ನಿರಾಕ್ಷೇಪ ಪತ್ರ(ಎನ್ಓಸಿ)ಕ್ಕೆ ಸುಮಾರು ೪೦ ಲಕ್ಷ ರೂ. ಚಾಲ್ತಿಯಲ್ಲಿದೆಯಂತೆ; ಇದೇ ಕಂಟ್ರೋಲ್-ಲೈಸೆನ್ಸ್ ರಾಜ್. ಶಿಕ್ಷಣದ ಖಾಸಗಿ ಕ್ಷೇತ್ರವನ್ನು ನಿಯಂತ್ರಿಸಲು ಸ್ಥಾಪಿತ ಹಿತಾಸಕ್ತಿಗಳು ಆರ್ಟಿಇ ಕೆಳಗೆ ಲಾಭದ ಕೇಂದ್ರಗಳನ್ನು ಮಾಡಿಕೊಂಡಿವೆ. ಇದು ತುಂಬ ಹಾನಿಕರ. ಆದ್ದರಿಂದ ಆರ್ಟಿಇ ಕಾಯ್ದೆಯನ್ನು ರದ್ದುಪಡಿಸಿ ರಾಜ್ಯಗಳಿಗೆ ಸ್ವಾಯತ್ತತೆ ನೀಡಬೇಕೆಂಬ ಕೂಗು ಬಲವಾಗುತ್ತಿದೆ. ರಾಜ್ಯಗಳು ತಮಗೆ ಹೊಂದುವ ಕಾನೂನನ್ನು ರಚಿಸಿಕೊಳ್ಳಲು ಅವಕಾಶ ನೀಡಬೇಕು; ಇದು ಸಹವರ್ತಿ ಪಟ್ಟಿಯಲ್ಲಿರುವ ಕಾರಣ ಕೇಂದ್ರಸರ್ಕಾರ ಅದಕ್ಕೆ ಅನುಮತಿ ನೀಡಬೇಕು; ಏನಿದ್ದರೂ ಆರ್ಟಿಇ ಅದರ ಇಂದಿನ ಸ್ವರೂಪದಲ್ಲಿ ಇರಲೇಬಾರದು ಎಂದು ಆಗ್ರಹಿಸಲಾಗಿದೆ.
ವಜಾವೇ ಸೂಕ್ತ
ವಿಷಯದ ತಜ್ಞರಾದ ಲೋಕಸತ್ತಾ ಚಳವಳಿ ಮತ್ತು ಪ್ರಜಾಸತ್ತಾತ್ಮಕ ಸುಧಾರಣಾ ಪ್ರತಿಷ್ಠಾನಗಳ ಪ್ರವರ್ತಕ ಡಾ| ಜಯಪ್ರಕಾಶ ನಾರಾಯಣ್ ಅವರು, ಆರ್ಟಿಇ ಕಾಯ್ದೆಯಲ್ಲಿ ದೋಷಗಳು ತುಂಬಿಕೊಂಡಿರುವ ಕಾರಣ ಅದನ್ನು ವಜಾಮಾಡುವುದೇ ಪರಿಹಾರ ಎಂದಿದ್ದಾರೆ. “ಅದು ಕೇವಲ ಶಾಲೆಗಳ ಭೌತಿಕ ಮೂಲಸವಲತ್ತುಗಳಿಗೆ ಒತ್ತುನೀಡುತ್ತದೆಯೇ ಹೊರತು ಶಿಕ್ಷಣದ ಗುಣಮಟ್ಟವನ್ನು ಅಲಕ್ಷಿಸುತ್ತದೆ. ಅದರದ್ದು ದಾರಿತಪ್ಪಿದ ಆದರ್ಶವಾದ. ಎಲ್ಲ ಪರೀಕ್ಷೆಗಳು, ಮೌಲ್ಯಮಾಪನ, ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದು – ಎಲ್ಲವನ್ನೂ ಅದು ಕೈಬಿಟ್ಟಿದೆ. ಪರೀಕ್ಷೆಗಳಲ್ಲಿ ಒತ್ತಡ ಇರಬಾರದೆಂಬುದು ಸರಿ. ವಿದ್ಯಾರ್ಥಿಗಳನ್ನು ಬೇಕಾಬಿಟ್ಟಿ ಫೇಲ್ ಮಾಡುವುದು ಸಲ್ಲದು. ಮುಂದಿನ ತರಗತಿಗೆ ಹೋಗಿ ಸುಧಾರಿಸಿಕೊಳ್ಳಲು ಮಗುವಿಗೆ ಅವಕಾಶ ಇರಬೇಕು ಎಂಬುದು ಕೂಡ ನಿಜ. ಆದರೆ ಸೂಕ್ತ ಮೌಲ್ಯಮಾಪನವೇ ಇಲ್ಲದೆ ಎಲ್ಲರನ್ನೂ ಹತ್ತನೇ ತರಗತಿಯವರೆಗೆ ಕಳುಹಿಸಬೇಕೆನ್ನುವುದು ತೀರಾ ಅಪಾಯಕಾರಿ” ಎಂದವರು ಹೇಳಿದ್ದಾರೆ (ನೋಡಿ – ’ಸ್ವರಾಜ್ಯ’ ಮಾಸಪತ್ರಿಕೆ, ಮೇ ೨೦೧೭) ಈ ಬಗೆಯ ಅವ್ಯವಸ್ಥೆಯನ್ನು ಇಡೀ ದೇಶದ ಮೇಲೆ ಹೇರುವ ಮೂಲಕ ಆರ್ಟಿಇ ಕಾಯ್ದೆ ಶಿಕ್ಷಣಕ್ಷೇತ್ರಕ್ಕೆ ಎಸಗಿರುವ ಹಾನಿಯನ್ನು ಅಳೆಯಲು ವರ್ಷಗಳೇ ಬೇಕಾಗಬಹುದು; ಇದೊಂದು ರೀತಿ ತಲೆಯ ಮೇಲೆ ಕಲ್ಲುಚಪ್ಪಡಿ ಎಳೆದಂತೆ ಎಂದೂ ಹೇಳಬಹುದು.
ಜಯಪ್ರಕಾಶ್ ನಾರಾಯಣ್ ಅವರು ಮುಂದುವರಿದು, “ಮೊದಲನೆಯದಾಗಿ ಶಿಕ್ಷಣವನ್ನು ಒಂದು ರಾಷ್ಟ್ರೀಯ ಆಯೋಗದ ಕೆಳಗೆ ಕೇಂದ್ರೀಕರಿಸುವುದೇ ತಪ್ಪು. ನಾವು ಜಿಲ್ಲಾಮಟ್ಟ ಅಥವಾ ಸ್ಥಳೀಯ ಮಟ್ಟದತ್ತ ಹೋಗಿ ಸ್ವಾಯತ್ತತೆ (ಚಿuಣoಟಿomಥಿ) ಹೊಂದಬೇಕು. ಭಾರತಸರ್ಕಾರ ಮಟ್ಟದ ಸಂಸ್ಥೆಯು ಅಧಿಕಾರ ನಡೆಸುವುದರಿಂದ ಶಿಕ್ಷಣದ ನಾಶವಾಗುತ್ತದೆ – ಎಂದಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೊಂಡ ಆರ್ಟಿಇ ಕಾಯ್ದೆ ಸಮಾಜವನ್ನು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎಂದು ಒಡೆದು ಅಲ್ಪಸಂಖ್ಯಾತರಿಗೆ ಬಹಳಷ್ಟು ವಿಶೇಷ ಸವಲತ್ತುಗಳನ್ನು ನೀಡಿದೆ. ದೇಶದಲ್ಲಿ ಹಿಂದೆಯೇ ನೀಡುತ್ತಿದ್ದ ಸವಲತ್ತನ್ನು ದೃಢಪಡಿಸಿ ಇನ್ನಷ್ಟು ವ್ಯಾಪಕಗೊಳಿಸಿದೆ; ಆ ಉದ್ದೇಶಕ್ಕಾಗಿ ಸಂವಿಧಾನಕ್ಕೇ ತಿದ್ದುಪಡಿಯನ್ನು ತರಲಾಗಿದೆ.
ಮತೀಯ ತಾರತಮ್ಯ
ದೇಶದಲ್ಲಿ ಸಂವಿಧಾನದ ೩೦ನೇ ವಿಧಿಗೆ ತಪ್ಪು ವ್ಯಾಖ್ಯಾನ ಮಾಡಿ ತಾರತಮ್ಯವನ್ನು ಸೃಷ್ಟಿಸಲಾಗಿದೆ; ಅಲ್ಪಸಂಖ್ಯಾತರು ನಡೆಸುವ ಶಿಕ್ಷಣಸಂಸ್ಥೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ೩೦ನೇ ವಿಧಿಗೆ ಅರ್ಥೈಸಲಾಗಿದೆ. ಮುಖ್ಯನ್ಯಾಯಾಧೀಶ ನ್ಯಾ| ರಮೇಶ್ಚಂದ್ರ ಲಹೋಟಿ ಅವರ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಅಲ್ಪಸಂಖ್ಯಾತರ ಸಂಸ್ಥೆ ಮತ್ತು ಇತರ ಖಾಸಗಿ ಸಂಸ್ಥೆಗಳ ಬಗ್ಗೆ ಪರಿಶೀಲಿಸಿತು. ಇದು ಅಲ್ಪಸಂಖ್ಯಾತರಿಗೆ ನೀಡಿದ ವಿಶೇಷ ಅಧಿಕಾರವೇ ಅಥವಾ ಅಲ್ಪಸಂಖ್ಯಾತರಿಗೆ ತಾರತಮ್ಯ ಮಾಡಬಾರದೆನ್ನುವುದು ಈ ವಿಧಿಯ ಉದ್ದೇಶವೇ ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಿದ ಪೀಠ, ಅಲ್ಪಸಂಖ್ಯಾತರಿಗೆ ಯಾವುದೇ ಹೆಚ್ಚುವರಿ ಅಥವಾ ಹೊಸ ಹಕ್ಕನ್ನು ನೀಡಬಾರದು; ಅವರಿಗೆ ತಾರತಮ್ಯ ಮಾಡಬಾರದು ಎನ್ನುವ ಅಭಿಪ್ರಾಯ ನೀಡಿತು. ಅಲ್ಪಸಂಖ್ಯಾತರಿಗೆ (ಮತೀಯ ಅಥವಾ ಭಾ?) ತಮಗೆ ಇ?ವಾದ ಶಿಕ್ಷಣಸಂಸ್ಥೆಯನ್ನು ಸ್ಥಾಪಿಸಿ ನಡೆಸುವ ಹಕ್ಕಿದೆ; ಆದರೆ ಇತರ ವಿಧಿಗಳಿಗೆ ಅದು ಬಾಧಕವಾಗುವುದಿಲ್ಲ. ಅದೇ ಕಾರಣದಿಂದ ಅಲ್ಪಸಂಖ್ಯಾತರು ನಡೆಸುವ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಿಗೆ ಕೂಡ ಇತರರಿಗಿರುವ ನಿರ್ಬಂಧಗಳು ಅನ್ವಯವಾಗುತ್ತವೆ. ಅಂದರೆ ನ್ಯಾ| ಲಹೋಟಿ ಪೀಠದ ಪ್ರಕಾರ ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಸಲ್ಲದು.
ಆದರೆ ಇದನ್ನು ಹೊರತುಪಡಿಸಿ ಇತರ ನ್ಯಾಯಾಲಯಗಳು ಹಾಗೂ ಸರ್ಕಾರಗಳು ೩೦ನೇ ವಿಧಿಯ ತಪ್ಪು ವ್ಯಾಖ್ಯಾನಮಾಡುತ್ತಾ ಬಂದಿವೆ. ಪರಿಣಾಮವಾಗಿ ದೇಶದ ಅಲ್ಪಸಂಖ್ಯಾತರು ಇತರರಿಗಿಲ್ಲದ ವಿಶೇ? ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಇದು ಅಸಂಗತ; ಏಕೆಂದರೆ ಅಲ್ಪಸಂಖ್ಯಾತರಿರಲಿ ಅಥವಾ ಬಹುಸಂಖ್ಯಾತರಿರಲಿ ಯಾವುದೇ ಗುಂಪಿಗೆ ತಾರತಮ್ಯ ಸಲ್ಲದು. ಅದರಿಂದ ಸಂವಿಧಾನದ ಆಶಯಕ್ಕೆ ಭಂಗ ಉಂಟಾಗುತ್ತದೆ; ಮತ್ತು ದು?ರಿಣಾಮಕ್ಕೆ ದಾರಿಯಾಗುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಒಂದು ಸಂಸ್ಥೆ ಅಲ್ಪಸಂಖ್ಯಾತರದ್ದೇ ಅಥವಾ ಇತರರದ್ದೇ ಎಂಬುದನ್ನು ತೀರ್ಮಾನಿಸಲು ಅಲ್ಪಸಂಖ್ಯಾತರ ಶಿಕ್ಷಣಸಂಸ್ಥೆಗಳ ರಾಷ್ಟ್ರೀಯ ಆಯೋಗ(ಎನ್ಸಿಇಎಂಐ) ವನ್ನು ಸ್ಥಾಪಿಸಲಾಗಿದೆ. ಆರ್ಟಿಇ ಪ್ರಕಾರ ಇದರಲ್ಲಿ ಹಿಂದೂ ಸದಸ್ಯರು ಇರಲು ಅವಕಾಶವಿಲ್ಲ. ಅದರೆ ಒಬ್ಬ ಕ್ರೈಸ್ತ ವ್ಯಕ್ತಿ ಮುಸ್ಲಿಮರ ಸಂಸ್ಥೆಗಳ ಬಗ್ಗೆ ನಿರ್ಧಾರವನ್ನು ಕೈಗೊಳ್ಳಬಹುದು. ಅಂತಹ ಸಂಸ್ಥೆ ಸಂವಿಧಾನಬದ್ಧ ಎನಿಸಬಹುದೆ? – ಎಂಬ ಪ್ರಶ್ನೆ ಮುಂದೆಬಂದಿದೆ. ಸಮಾಜವನ್ನು ಜಾತಿ ಮತ್ತು ಮತಗಳ ಆಧಾರದಲ್ಲಿ ಒಡೆಯುವುದೇ ತಪ್ಪು ಮತ್ತು ಅಪಾಯಕಾರಿ. ಅದರ ಹಿಂದೆ ರಾಜಕೀಯ ಉದ್ದೇಶವಿರುತ್ತದೆ. ಮಕ್ಕಳನ್ನು ವಿಭಜಿಸುವುದು ಅದಕ್ಕಿಂತ ತಪ್ಪು. ಅದರಿಂದ ಶಿಕ್ಷಣದ ಮೇಲೆ ದು?ರಿಣಾಮವಾಗುತ್ತದೆ.
ವಿಕೃತ ಸೆಕ್ಯುಲರಿಸಂ
ಬಹುಸಂಖ್ಯಾತ ಸಂಸ್ಥೆಗಳ ವಿರುದ್ಧ ನಡೆಯುವ ತಾರತಮ್ಯ ಒಂದೆರಡಲ್ಲ. ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಸಾಮಾಜಿಕ ಕಾರ್ಯ ನಡೆಸಲು ಅವಕಾಶವಿದೆ; ಆದರೆ ಬಹುಸಂಖ್ಯಾತರ ಸಂಸ್ಥೆಗಳಿಗೆ ಇರುವುದಿಲ್ಲ. ಹಿಂದೂ ಧಾರ್ಮಿಕ-ದತ್ತಿ ಸಂಸ್ಥೆಗಳನ್ನು ಸರ್ಕಾರ ಅಡಿಗಡಿಗೆ ನಿಯಂತ್ರಿಸುತ್ತದೆ; ಆದರೆ ಅಲ್ಪಸಂಖ್ಯಾತರ ಸಂಸ್ಥೆಗ ಸುದ್ದಿಗೇ ಹೋಗುವುದಿಲ್ಲ. ಇದು ನಾವು ಕಾಣುವ ಧರ್ಮ- ನಿರಪೇಕ್ಷತೆಯ ವಿಕೃತ ಸ್ವರೂಪ.
ಮತೀಯ ಸಂಸ್ಥೆಗೆ ಹೊರತಾದ ದತ್ತಿ(ಚಾರಿಟಿ)ಸಂಸ್ಥೆಗಳನ್ನು ಸರ್ಕಾರ ನಿಯಂತ್ರಿಸುತ್ತದೆ. ಬ್ರಿಟಿ?ರ ಕಾಲದಲ್ಲೂ ಆ ರೀತಿ ಇರಲಿಲ್ಲ. ದತ್ತಿಸಂಸ್ಥೆಗಳ ನಿರ್ವಹಣೆಗೆ ಅವರು ಉದಾರ ಶಾಸನಗಳನ್ನು ತಂದಿದ್ದರು. ಸಂಘ-ಸಂಸ್ಥೆಗಳ ವಿಷಯದಲ್ಲಿ ನ್ಯಾಯಸಮ್ಮತ ಉದ್ದೇಶವನ್ನು ಹೊಂದಿದ್ದರು. ಜನರು ಸ್ಥಾಪಿಸಿದ ಸೊಸೈಟಿಯಲ್ಲಿ ಸರ್ಕಾರವು ಮಧ್ಯಪ್ರವೇಶ ಮಾಡುತ್ತಿರಲಿಲ್ಲ. ಆಗ ಅಂತಹ ಉದಾರತೆ ಇತ್ತು. ನಮ್ಮ ಸಂವಿಧಾನದ ವಿಧಿ ೧೯ (೧)(ಸಿ) ಪ್ರಕಾರ ಶಿಕ್ಷಣ ಸಹಿತ ಎಲ್ಲ ಸಂಸ್ಥೆಗಳಿಗೆ ತಮ್ಮ ಸಾಮೂಹಿಕ ಗುರಿಯನ್ನು ಸಾಧಿಸಲು ಅವಕಾಶವಿದೆ. ಜನರು ಸಂಸ್ಥೆಗಳನ್ನು ರಚಿಸಿಕೊಳ್ಳಬಹದು. ಇರುವ ಒಂದೇ ನಿರ್ಬಂಧವೆಂದರೆ, ಸಾರ್ವಜನಿಕ ವ್ಯವಸ್ಥೆ, ನೈತಿಕತೆ ಮತ್ತು ರಾ?ದ ಭದ್ರತೆಗಳಿಗೆ ಪೂರಕವಾಗಿರಬೇಕು ಎನ್ನುವ ಜಯಪ್ರಕಾಶ ನಾರಾಯಣ್, ದುರದೃ?ವೆಂದರೆ ಈಗ ಹಲವು ರಾಜ್ಯಗಳಲ್ಲಿ ಚಾರಿಟಿ ಕಮಿ?ನರ್ ಇದ್ದು, ಅವರು ನಮ್ಮ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸುತ್ತಾರೆ, ಇದು ತೀರಾ ತಪ್ಪು ಎಂದು ಆಕ್ಷೇಪಿಸುತ್ತಾರೆ. ಭಾರತದಲ್ಲಿ ಒಳ್ಳೆಯ ಕೆಲಸ ಮಾಡುವ ಬಗ್ಗೆ ತಾವು ಅಮೆರಿಕದಲ್ಲಿ ಸಂಸ್ಥೆಯೊಂದನ್ನು ಸ್ಥಾಪಿಸಿ ಹಣ ಸಂಗ್ರಹಿಸಿದ್ದು, ಅದಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಅದರೆ ನಮ್ಮಲ್ಲಿ ನಮ್ಮದೇ ದೇಶಕ್ಕಾಗಿ ಕೆಲಸ ಮಾಡುವುದಾದರೂ ಸಂಗ್ರಹಿಸುವ ಹಣಕ್ಕೆ ತೆರಿಗೆ ರಿಯಾಯಿತಿ ಇಲ್ಲ; ಜೊತೆಗೆ ಸರ್ಕಾರ ವಿಪರೀತವಾಗಿ ಹಸ್ತಕ್ಷೇಪ ಮಾಡುತ್ತದೆ. ಅದು ತಪ್ಪು. ತನ್ನ ಶಿಕ್ಷಣಸಂಸ್ಥೆಗಳನ್ನು ಉತ್ತಮಪಡಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅವು ಹಾಳಾಗಿವೆ ಎಂದು ಟೀಕಿಸುವ ಅವರು, ಸಮಾಜದ ದತ್ತಿಸಂಸ್ಥೆಗಳನ್ನು ನಿಯಂತ್ರಿಸಲು, ಅವುಗಳ ಮೇಲೆ ನಿಗಾ ಇಡಲು, ಅವುಗಳ ದೈನಂದಿನ ವಿ?ಯಗಳಲ್ಲಿ ತೀರ್ಪುನೀಡಲು ಸರ್ಕಾರಕ್ಕೆ ಅಧಿಕಾರ ಕೊಟ್ಟವರು ಯಾರು? ಒಂದು ಸಂಸ್ಥೆಯು ನೀಡಿದ ಅವಕಾಶದ ದುರುಪಯೋಗ ಮಾಡಿದರೆ ತೆರಿಗೆವಿನಾಯಿತಿ ತೆಗೆಯಲಿ; ಕ್ರಿಮಿನಲ್ದಾವೆ ಹೂಡಲಿ. ಸರಿ ಇರುವಾಗ ನಿರ್ಬಂಧ ಹೇರುವುದೇಕೆ? – ಎಂದು ಪ್ರಶ್ನಿಸಿದ್ದಾರೆ; ಮತೀಯ ತಾರತಮ್ಯದ ಶಾಸನಗಳ ಬಗ್ಗೆ ಕೇಂದ್ರಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಭಾಷಾ ಅಲ್ಪಸಂಖ್ಯಾತರು
ಆರ್ಟಿಇ ಕಾಯ್ದೆ ಪ್ರಕಾರ ಅಲ್ಪಸಂಖ್ಯಾತರಿಗಿರುವ ಬಗೆಬಗೆಯ ಸವಲತ್ತುಗಳ ಕಾರಣದಿಂದಾಗಿ ಕೆಲವರು ಭಾ?ಅಲ್ಪಸಂಖ್ಯಾತದಂತಹ ಅಡ್ಡದಾರಿಯನ್ನು ಹುಡುಕುತ್ತಾರೆ ಎಂದರೆ ತಪ್ಪಲ್ಲ. ಆದರೆ ಅಂತಹ ಸರ್ಟಿಫಿಕೇಟ್ ಪಡೆಯುವುದು ಸುಲಭವಲ್ಲ. ಅದಕ್ಕೆ ಯುಪಿಎ ಸರ್ಕಾರ ೨೦೦೪ರಲ್ಲಿ ಅಧಿಕಾರಕ್ಕೆ ಬರುತ್ತಲೇ ಸ್ಥಾಪಿಸಿದ ಎನ್ಸಿಎಂಇಐಗೇ ಮೊರೆಹೊಗಬೇಕು. ಓರ್ವ ಹಿಂದುವನ್ನು ಅದರ ಸದಸ್ಯ ಅಥವಾ ಅಧ್ಯಕ್ಷನಾಗಿ ಆರಿಸುವಂತಿಲ್ಲ. ಗಮನಿಸಬೇಕದ ಅಂಶ ಎಂದರೆ, ಬಹಳ? ಸಲ ಭಾ? ಅಲ್ಪಸಂಖ್ಯಾತರ ಶಾಲೆ ನಡೆಸುವವರು ಹಿಂದುಗಳಾಗಿರುತ್ತಾರೆ. ಆದರೆ ಈ ಸರ್ಟಿಫಿಕೇಟ್ ನೀಡುವವರು ಅಲ್ಪಸಂಖ್ಯಾತರು. ಸರ್ಟಿಫಿಕೇಟಿಗಾಗಿ ಹಿಂದೂಸಂಸ್ಥೆಯ ಮುಖ್ಯಸ್ಥರು ಆಯೋಗದ ಮುಂದೆ ಕೈಕಟ್ಟಿ ನಿಲ್ಲಬೇಕು. “ಈ ದೇಶದ ಸಂಪನ್ಮೂಲಗಳಿಗೆ ಅಲ್ಪಸಂಖ್ಯಾತರೇ (ಮುಸ್ಲಿಮರೆಂದು ಓದಿಕೊಳ್ಳಬೇಕು) ಮೊದಲ ಹಕ್ಕುದಾರರು” ಎಂದಿದ್ದ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರ ಮಾತು ಇಲ್ಲಿ ನೆನಪಾಗುತ್ತದೆ.
ಆರ್ಟಿಇ ಕಾಯ್ದೆಯ ಫಲವಾಗಿ ದೇಶದಲ್ಲಿ ಅಲ್ಪಸಂಖ್ಯಾತರ ಶಾಲೆಗಳು ಹುಲುಸಾಗಿ ಬೆಳೆಯುತ್ತಿವೆ. ೨೦೧೨-೧೩ ಮತ್ತು ೨೦೧೫-೧೬ರ ನಡುವೆ ಬೆಂಗಳೂರಿನಲ್ಲಿ ಇತರರ ಖಾಸಗಿ ಶಾಲೆಗಳ ಸಂಖ್ಯೆ ೨,೭೫೩ರಿಂದ ೨,೮೬೮ಕ್ಕೇರುವ ಮೂಲಕ ಸಣ್ಣಪ್ರಮಾಣದ ಏರಿಕೆಯನ್ನು ಕಂಡರೆ ಅಲ್ಪಸಂಖ್ಯಾತರ ಶಾಲೆಗಳು ೧೬೦ರಿಂದ ೩೪೦ಕ್ಕೆ (ಇಮ್ಮಡಿಗೂ ಅಧಿಕ) ಏರಿದವು. ಇದೇ ವೇಗದಲ್ಲಿ ಮುಂದುವರಿದರೆ ಏನಾಗಬಹುದು? ನ್ಯಾಯಾಲಯಗಳೇಕೆ ಈ ಕಾನೂನನ್ನು ವಜಾಗೊಳಿಸಲಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಅದಕ್ಕೆ ಉತ್ತರ ಅ? ಸ್ಪ?ವಾಗಿ ಇದೆ; ಯುಪಿಎ ಸರ್ಕಾರ ೨೦೦೫ರಲ್ಲಿ ಸಂವಿಧಾನಕ್ಕೆ ೯೩ನೇ ತಿದ್ದುಪಡಿಯನ್ನು ತಂದು ಆರ್ಟಿಇ ಕಾಯ್ದೆಯ ತಾರತಮ್ಯವನ್ನು ಗಟ್ಟಿಗೊಳಿಸಿತು. ಅರ್ಟಿಇ ಕೆಳಗೆ ವಿಲಕ್ಷಣವಾದ ವಿಪರ್ಯಾಸಗಳು ನಡೆಯುತ್ತಿರುತ್ತವೆ. ಉದಾಹರಣೆಗೆ, ಒಂದು ಕ್ರೈಸ್ತ ಅಥವಾ ಮುಸ್ಲಿಂ ಶಾಲೆಯಲ್ಲಿ ಶೇ. ೧೦ರ? ಅಲ್ಪಸಂಖ್ಯಾತ ಮಕ್ಕಳಿದ್ದಾರೆ; ಮತ್ತು ಹಿಂದುಗಳು ನಡೆಸುವ ಒಂದು ಶಾಲೆಯಲ್ಲಿ ಶೇ. ೧೨ರ? ಅಲ್ಪಸಂಖ್ಯಾತ ಮಕ್ಕಳಿದ್ದಾರೆ ಎಂದಿಟ್ಟುಕೊಳ್ಳಿ. ಅಲ್ಪಸಂಖ್ಯಾತರ ಶಾಲೆಗಿಂತ ಹಿಂದೂ ಶಾಲೆಯಲ್ಲಿ ಅಲ್ಪಸಂಖ್ಯಾತ ಮಕ್ಕಳ ಸಂಖ್ಯೆ ಶೇಕಡಾವಾರು ಹೆಚ್ಚಿದ್ದರೂ ಇದಕ್ಕೆ ಸವಲತ್ತು ಸಿಗುವುದಿಲ್ಲ.
೯೩ನೇ ತಿದ್ದುಪಡಿ
ಆರ್ಟಿಇ ಕಾಯ್ದೆಗೆ ಮುನ್ನವೇ ಅಲ್ಪಸಂಖ್ಯಾತರ ಶಿಕ್ಷಣಸಂಸ್ಥೆಗಳಿಗೆ ಸ್ವಾಯತ್ತತೆ ಇತ್ತು. ಆದರೂ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿಯವರ ಮುತುವರ್ಜಿಯಿಂದ ಸಂವಿಧಾನಕ್ಕೆ ೯೩ನೇ ತಿದ್ದುಪಡಿಯನ್ನು ತಂದರು; ಯಾವ ಸಂದರ್ಭದಲ್ಲಿ ಅದನ್ನು ತಂದರೆಂಬುದು ಗಮನಾರ್ಹ. ಡಾ| ಟಿ.ಎಂ.ಎ. ಪೈ ಪ್ರತಿ?ನ ಮತ್ತು ಕರ್ನಾಟಕ ಸರ್ಕಾರಗಳ ನಡುವಣ ದಾವೆಯ ತೀರ್ಪು ೨೦೦೨ರಲ್ಲಿ ಬಂತು. ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಿದ ಆ ತೀರ್ಪು ಭಾ? ಅಲ್ಪಸಂಖ್ಯಾತರಾದ ಹಿಂದುಗಳು ನಡೆಸುವ ಸಂಸ್ಥೆಗಳು ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಸಮಾ ಎಂಬಂತಹ ಅಭಿಪ್ರಾಯವನ್ನು ನೀಡಿತ್ತು.
ಮುಂದೆ ಬಂದದ್ದು ಇಸ್ಲಾಮಿಕ್ ಅಕಾಡೆಮಿ ಮತ್ತು ಕರ್ನಾಟಕ ಸರ್ಕಾರಗಳ ನಡುವಣ ಮೊಕದ್ದಮೆ. ಅದರಲ್ಲಿ ನ್ಯಾಯಾಲಯ ಅಲ್ಪಸಂಖ್ಯಾತರಿಗೆ ಹೊರತಾದವರಿಗೆ ಸಂವಿಧಾನದ ೩೦ನೇ ವಿಧಿಯ ರಕ್ಷಣೆ ಇಲ್ಲ; ಆ ಇತರರ ಸಂಸ್ಥೆಗಳು ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಸಮಾನವಲ್ಲ ಎನ್ನುವ ತೀರ್ಪು ನೀಡಿತು. ಅದೇ ಸರಣಿಯ ಮೂರನೇ ತೀರ್ಪು (ಇನಾಂದಾರ್ ತೀರ್ಪು) ೨೦೦೫ರ ಆಗಸ್ಟ್ನಲ್ಲಿ ಬಂತು; ಅಲ್ಪಸಂಖ್ಯಾತರು ಅಥವಾ ಇತರರ ಖಾಸಗಿ ಸಂಸ್ಥೆಗಳಲ್ಲಿ ಸರ್ಕಾರವು ಪ್ರವೇಶ ಕೋಟಾವನ್ನು ನಿಗದಿಪಡಿಸುವಂತಿಲ್ಲ ಎಂದು ಅದರಲ್ಲಿ ಹೇಳಲಾಗಿತ್ತು. ಆಗ ಯುಪಿಎ ಸರ್ಕಾರ ಸಂವಿಧಾನ ತಿದ್ದುಪಡಿಯ ಮಾರ್ಗವನ್ನು ಹಿಡಿದು ಅತ್ಯಂತ ಕ್ರಾಂತಿಕಾರಿಯಾದ ತಿದ್ದುಪಡಿಯನ್ನು ತಂದಿತು.
ಮೂರು ತೀರ್ಪುಗಳು
ಟಿ.ಎಂ.ಎ. ಪೈ ಪ್ರತಿ?ನದ ಮೊಕದ್ದಮೆಯಲ್ಲಿ ಹನ್ನೊಂದು ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ ಪೀಠವು, ದೇಶದ ಪ್ರತಿಯೊಬ್ಬ ನಾಗರಿಕನಿಗೆ ಶಿಕ್ಷಣಸಂಸ್ಥೆಯನ್ನು ಸ್ಥಾಪಿಸುವ ಹಕ್ಕಿದೆ ಎಂದು ರಕ್ಷಣೆಯನ್ನು ನೀಡಿತ್ತು. ೯೩ನೇ ತಿದ್ದುಪಡಿ ಬಹುಸಂಖ್ಯಾತರಿಗೆ ನೀಡಿದ ಆ ರಕ್ಷಣೆಯನ್ನೇ ತನ್ನ ದಾಳಿಯ ಗುರಿಯನ್ನಾಗಿ ಮಾಡಿಕೊಂಡಿತು. ಹಿಂದುಗಳ ಅನುದಾನಿತ ಶಾಲೆ ಮಾತ್ರವಲ್ಲ; ಅನುದಾನರಹಿತ ಖಾಸಗಿ ಶಾಲೆಗಳು ಕೂಡ ದಾಳಿಯ ಗುರಿ ಆದವು. ಅಲ್ಪಸಂಖ್ಯಾತರ ಸಂಸ್ಥೆಗಳ ಬಗ್ಗೆ ಅದು ಏನನ್ನೂ ಹೇಳಲಿಲ್ಲ.
೯೩ನೇ ತಿದ್ದುಪಡಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಏಪ್ರಿಲ್ ೧೩, ೨೦೧೨ರಂದು ನೀಡಿದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಅಲ್ಪಸಂಖ್ಯಾತರ ಶಿಕ್ಷಣಸಂಸ್ಥೆಗಳು ಅರ್ಟಿಇ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ; ಮತ್ತು ಅಲ್ಪಸಂಖ್ಯಾತರ ಅನುದಾನಿತ ಸಂಸ್ಥೆಗಳ ವಿ?ಯದಲ್ಲಿ ಮಾತ್ರ ಆರ್ಟಿಇ ಕಾಯ್ದೆ ೨೦೦೯ ಅನ್ವಯವಾಗುತ್ತದೆ ಎಂದು ಹೇಳಿತು. ಆಗ ಯುಪಿಎ ಸರ್ಕಾರ ಅಲ್ಪಸಂಖ್ಯಾತರ ಸಂಸ್ಥೆಗಳ ರಕ್ಷಣೆಗೆ ಧಾವಿಸಿದ್ದಲ್ಲದೆ ಕೇವಲ ಹನ್ನೆರಡು ದಿನಗಳಲ್ಲಿ ಆರ್ಟಿಇ ಕಾಯ್ದೆಗೆ ತಿದ್ದುಪಡಿ ತಂದಿತು; ಅದರಲ್ಲಿ ಸಂವಿಧಾನದ ವಿಧಿ ೨೯ ಮತ್ತು ೩೦ರ ಪ್ರಕಾರ ಈ ಕಾಯ್ದೆಯ ಅಂಶಗಳು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೂ ಅನ್ವಯವಾಗುತ್ತವೆ ಎಂದು ಹೇಳಲಾಗಿತ್ತು. ಸದ್ಯದ ಸ್ಥಿತಿ ನೋಡಿದರೆ ಆರ್ಟಿಇ ಕಾಯ್ದೆ ವಜಾಗೊಂಡರೆ ಮಾತ್ರ ಹಿಂದುಗಳು ನಡೆಸುವ ಶಾಲೆಗಳಿಗೆ ನ್ಯಾಯ ಸಿಗಬಹುದು ಎನ್ನಿಸುತ್ತದೆ; ಅದಕ್ಕೆ ಸಂವಿಧಾನದ ತಿದ್ದುಪಡಿಯು ಅಗತ್ಯವಾಗಬಹುದು.
ಪರಿಹಾರ
ಇತರ ಕೆಲವು ಪರಿಹಾರಕ್ರಮಗಳು ಕೂಡ ಪರಿಣಾಮಕಾರಿ ಅಗಬಹುದೆಂದು ಅಭಿಪ್ರಾಯಪಡಲಾಗಿದೆ: ೧) ಕಾನೂನು ಮತ್ತು ಅದರ ಅನು?ನಕ್ರಮವನ್ನು ಬದಲಿಸಿ ಆದ? ಕಡಮೆ ಸಂಸ್ಥೆಗಳನ್ನು ಆರ್ಟಿಇ ಕಾಯ್ದೆಯ ಕೆಳಗೆ ತರಬಹುದು ೨) ಮಹಿಳೆಯರ ರಾಷ್ಟ್ರೀಯ ನೀತಿ-೨೦೧೬ ಈಗ ಕೇಂದ್ರಸರ್ಕಾರದ ಮುಂದಿದೆ; ಅದರ ಮೂಲಕ ನಡೆಸುವ ಟ್ರಸ್ಟ್ಗೆ ಅರ್ಟಿಇ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಮಾಡಬಹುದು. ೩) ರಾಷ್ಟ್ರೀಯ ಅಲ್ಪಸಂಖ್ಯಾತರ ಪಟ್ಟಿಗೆ ನೇಮಕಾತಿ (ಉದಾ – ನಾಸ್ತಿಕರು) ಮೂಲಕ ಎಸ್ಸಿಎಂಇಐಯನ್ನು ದುರ್ಬಲಗೊಳಿಸಬಹುದು. ಆ ಸಂಸ್ಥೆ ನೀಡುವ ಎಲ್ಲ ಸರ್ಟಿಫಿಕೇಟ್ಗಳು ಡಿಜಿಟಲ್ಗೆ ಅಳವಡಿಸಿದರೆ ಪಾರದರ್ಶಕತೆ ಬಂದು ಭ್ರ?ಚಾರ ದೂರವಾಗಬಹುದು. ೪) ಪ್ರಸ್ತುತ ಸಂದರ್ಭದಲ್ಲಿ ಓಬಿಸಿ, ಇಬಿಸಿ, ಎಸ್ಸಿ, ಎಸ್ಟಿಗಿಂತ ಅಲ್ಪಸಂಖ್ಯಾತರಿಗೆ ಹೆಚ್ಚಿನ ಸವಲತ್ತಿದೆ ಎಂಬುದನ್ನು ಮುಂದಿಟ್ಟು ಸರಿಪಡಿಸಿ ಸಮಾನತೆಯನ್ನು ತರಬಹುದು. ೫) ಆರ್ಟಿಇ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರಿ ಶಾಲೆಗಳಿಗೆ ಅನುಕೂಲ ಕಲ್ಪಿಸಬೇಕು. ೬) ಶಾಲೆಗಳ ಸ್ಥಾಪನೆಯ ನಿಯಮವನ್ನು ಸಡಿಲಗೊಳಿಸಬೇಕು; ಅದರಿಂದ ಸಿಬಿಎಸ್ಇ ಮತ್ತು ರಾಜ್ಯ ಶಾಲಾ ಬೋರ್ಡ್ಗಳ ನಡುವೆ ಸ್ಪರ್ಧೆಯುಂಟಾಗಿ ಅದರಿಂದ ಅನುಕೂಲವಾಗಬಹುದು. ೭) ಸಂವಿಧಾನಕ್ಕೆ ತಿದ್ದುಪಡಿ ತಂದು ಎಲ್ಲ ಮತಧರ್ಮದವರ ಶಿಕ್ಷಣಸಂಸ್ಥೆಗಳನ್ನು ಸಮಾನಗೊಳಿಸಬಹುದು.
ಒಟ್ಟಿನಲ್ಲಿ ಇದೀಗ ಆರ್ಟಿಇ ಕಾಯ್ದೆ ತಾರತಮ್ಯಗಳ ಆಗರವಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪರಿಶಿ? ಜಾತಿಯವರಿಗಿಂತಲೂ ದೊಡ್ಡ ಮೊತ್ತದ ವಿದ್ಯಾರ್ಥಿವೇತನ ಮತ್ತು ಸವಲತ್ತು ಪಡೆಯುತ್ತಿರುವುದು ದೊಡ್ಡ ವಿಪರ್ಯಾಸವೇ ಸರಿ. ಆರ್ಟಿಇ ಮುಂದುವರಿದಂತೆ ಸರ್ಕಾರಿ ಶಾಲೆಗಳ ಮುಚ್ಚುವಿಕೆಯೂ ವೇಗವಾಗುತ್ತಿದೆ. ಅದರ ಇನ್ನೊಂದು ಆಘಾತಕಾರಿ ಅಪಾಯವೆಂದರೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾ?ಗಳಿಗೆ ಹೊಡೆತ. ನರೇಂದ್ರ ಮೋದಿ ಅವರ ನೇತೃತ್ವದ ಎನ್ಡಿಎ ಸರ್ಕಾರವು ಈಗಾಗಲೆ ಸಾಧನೆಗಳ ಹಲವು ಮೈಲಿಗಲ್ಲುಗಳನ್ನು ನೆಟ್ಟಿದೆ. ಆರ್ಟಿಇ ಕಾಯ್ದೆಯ ಸಮಸ್ಯೆಯ ಪರಿಹಾರವು ಅದರ ಮುಂದಿನ ಮೈಲಿಗಲ್ಲಾಗಲೆಂದು ಆಶಿಸೋಣ.