ಅಲಿಖಿತ ಡೈರಿಯ ಪುಟಗಳಿಂದ
“ಹೆಸರಿನದೇನು ದೊಡ್ಡ ವಿಷಯ ಮೋದಿಜೀ! ’ಮಿಸ್ಟರ್ ಪ್ರೆಸಿಡೆಂಟ್’, ’ಮಿಸ್ಟರ್ ಪ್ರೆಸಿಡೆಂಟ್’ ಎನ್ನುತ್ತಹೋದರೆ ಸಾಕಾಗುತ್ತದೆ”
ಮಧ್ಯಾಹ್ನದ ಫ್ಲೈಟಿನಲ್ಲಿ ಚೀಣಾಕ್ಕೆ ಹೊರಡಬೇಕು. ಅದಕ್ಕೆ ಮೊದಲು ಪ್ರಮಾಣವಚನ ಸ್ವೀಕಾರದ ಕಲಾಪವನ್ನು ಮುಗಿಸಿಬಿಟ್ಟರೆ ಪೋರ್ಟ್‌ಫೋಲಿಯೋ ಬಟವಾಡೆಯ ಸಂಗತಿಯನ್ನು ಅಮಿತ್ ಷಾ ನೋಡಿಕೊಳ್ಳುತ್ತಾರೆ.
ಚೀಣಾದಲ್ಲಿ ಬ್ರಿಕ್ಸ್ ಮೀಟಿಂಗ್. ಆ ಮೀಟಿಂಗಿಗೆ ಬರುವವರೆಲ್ಲ ಬೇರೆಬೇರೆ ದೇಶಗಳ ಪ್ರೆಸಿಡೆಂಟರುಗಳು. ನಾನೊಬ್ಬನೇ ಪ್ರೈಮ್‌ಮಿನಿಸ್ಟರ್ ಆಗಿರುವುದರಿಂದ ಎದ್ದುಕಾಣಬೇಕು.
ಫ್ಲೈಟ್‌ನ ಅಡಾವುಡಿಯಲ್ಲಿ ಸೂಟ್‌ಕೇಸಿನೊಳಗಿನ ಬಟ್ಟೆಗಳ ಇಸ್ತ್ರಿ ಹಾಳಾಗದಂತೆ ಲಗೇಜಿನ ಬಗೆಗೆ ಎಚ್ಚರಿಕೆ ವಹಿಸಲು ಹೇಳಿದ್ದೇನೆ. ಬರಿಯ ಮೂರುವರೆ ಗಂಟೆಗಳ ಪ್ರಯಾಣದಲ್ಲಿ ಬಟ್ಟೆಗಳಿಗೆ ಹಾನಿಯೇನೂ ಆಗುವುದಿಲ್ಲವೆಂದು ವಿದೇಶಾಂಗ ಸಚಿವಾಲಯದವರೇನೋ ಹೇಳಿದ್ದಾರೆ. ಆದರೂ ನನಗೆ ಅನುಮಾನ. ಎ? ಇಂಟೆಲಿಜೆನ್ಸ್ ವರದಿಗಳು ಫೇಲ್ ಆದ ಅನುಭವಗಳಿಗೆ ಕೊರತೆಯಿಲ್ಲವಲ್ಲ.
“ಈ ವಿಷಯಕ್ಕೆ ತುಂಬಾ ದೊಡ್ಡ ಇಂಟೆಲಿಜೆನ್ಸ್ ವ್ಯವಸ್ಥೆಯೇನೂ ಬೇಕಾಗುವುದಿಲ್ಲ, ಸಾರ್” ಎಂದಿದ್ದರು, ಸುಬ್ರಹ್ಮಣ್ಯಂ ಜೈಶಂಕರ್.
“ಯಾವುದಕ್ಕೆ ದೊಡ್ಡ ಇಂಟೆಲಿಜೆನ್ಸ್ ವ್ಯವಸ್ಥೆ ಅನಾವಶ್ಯಕವೆಂದು ಹೇಳುತ್ತಿದ್ದೀರಿ ಜೈಶಂಕರ್?” ಎಂದು ಕೇಳಿದೆ.
“ಅದೇ ಸಾರ್. ಮೂರೂವರೆ ಗಂಟೆಗಳ ಪ್ರಯಾಣದಲ್ಲಿ ಸೂಟ್‌ಕೇಸಿನೊಳಗಿನ ಬಟ್ಟೆಗಳಿಗೆ ಹಾನಿಯಾಗದು ಎನ್ನಲು ಹಾಗೆ ಹೇಳಿದೆ” ಎಂದರು ಅವರು.
ಜೈಶಂಕರ್ ಫಾರೀನ್ ಸೆಕ್ರೆಟರಿ. ಅವರು ಒಳ್ಳೆಯ ಮೇಧಾವಿ ಎಂದು ಸು? ಸ್ವರಾಜ್ ಯಾವಾಗಲೋ ಹೇಳಿದ್ದ ಹಾಗೆ ನೆನಪು.
ಮಯನ್ಮಾರ್‌ನಲ್ಲಿ ಹಾಕಿಕೊಳ್ಳಬೇಕಾದ ಪೋ?ಕಿನ ಬ್ಯಾಗ್ ಪ್ರತ್ಯೇಕವಾಗಿದೆ. ಇ?ಕ್ಕೂ ಅಲ್ಲೇನು ಸಮಿಟ್ ಮೀಟಿಂಗ್ ಇಲ್ಲವಲ್ಲ. ಮಯನ್ಮಾರ್ ಪ್ರೆಸಿಡೆಂಟರೊಡನೆ ಅಲ್ಲಿ ಇಲ್ಲಿ ಸುತ್ತಿ ಬರುವುದ?. ಆದುದರಿಂದ ಬಟ್ಟೆಗಳದು ಹೆಚ್ಚಿನ ಸಮಸ್ಯೆ ಇರದು. ಸಮಸ್ಯೆ ಎಂದರೆ ಆ ಮಹಾನುಭಾವನ ಹೆಸರೇ! ಸು? ಸ್ವರಾಜ್‌ರಿಗೆ ಫನ್ ಮಾಡಿ ನನ್ನ ಸಮಸ್ಯೆ ತಿಳಿಸಿದೆ.
ಸುಷ್ಮಾ ನಕ್ಕರು. “ಹೆಸರಿನದೇನು ದೊಡ್ಡ ವಿಷಯ ಮೋದಿಜೀ! ’ಮಿಸ್ಟರ್ ಪ್ರೆಸಿಡೆಂಟ್’, ’ಮಿಸ್ಟರ್ ಪ್ರೆಸಿಡೆಂಟ್’ ಎನ್ನುತ್ತಹೋದರೆ ಸಾಕಾಗುತ್ತದೆ” ಎಂದರು ಸುಷ್ಮಾ.
“ಅದು ಸರಿಯೆ ಸುಷ್ಮಾಜೀ. ಅಲ್ಲಿ ಇರುವ ಎರಡು ದಿವಸಗಳಲ್ಲಿ ಒಂದು ಸಾರಿಯಾದರೂ ಅವರನ್ನು ಹೆಸರು ಹಿಡಿದು ಸಂಬೋಧಿಸಿದರೆ ಅವರಿಗೆ ಸಂತೋಷವಾಗಬಹುದಲ್ಲವೆ – ಭಾರತ ಪ್ರಧಾನಿಗೆ ತನ್ನ ಹೆಸರು ಗುರುತಿದೆಯೆಂದು?”
“ಹೌದು ಮೋದಿಜೀ. ಆದರೆ ಏನಾದರೂ ಗಲಿಬಿಲಿಯಾಗಿ ಅವರನ್ನು ’ಹ್ಯೂಟೆನ್ ಜಾ’ ಎನ್ನುವುದಕ್ಕೆ ಬದಲಾಗಿ ’ಜಾ ಹ್ಯೂಟೆನ್’ ಎಂದುಬಿಡುವ ಅಪಾಯ ಇರುತ್ತದೆ” ಎಂದರು ಸುಷ್ಮಾ.
“ಅದು ಏನು ದೊಡ್ಡ ಪ್ರಮಾದವೋ ಅರ್ಥವಾಗುತ್ತಿಲ್ಲವಲ್ಲ ಸುಷ್ಮಾಜೀ?” ಎಂದೆ.
“ಜಾ ಹ್ಯೂಟೆನ್ ಎಂಬವರು ಬರ್ಮಾದ ಆರ್ಮಿಚೀಫ್ ಆಗಿದ್ದವರು. ಅವರು ತೀರಿಕೊಂಡು ಹತ್ತು ವರ್ಷಗಳಾಗಿವೆ” ಎಂದರು ಸು?. ಅವರ ಸ್ಮರಣಶಕ್ತಿಯನ್ನು ಮೆಚ್ಚಿದೆ.
“ಆದರೆ ಸುಷ್ಮಾಜೀ, ಇನ್ನೊಂದು ಸಮಸ್ಯೆಯೂ ಇದೆಯಲ್ಲ! ಮಯನ್ಮಾರ್ ದೇಶದ ಪ್ರೆಸಿಡೆಂಟ್ ಒಬ್ಬ ಪುರುಷರು ಎಂದೇ ನನಗೆ ತಿಳಿದಿರಲಿಲ್ಲ!” ಎಂದೆ.
ಸುಷ್ಮಾ ಗಟ್ಟಿಯಾಗಿ ನಕ್ಕರು “ವಿದೇಶಾಂಗ ಸಚಿವೆಯಾದ ನನಗೇ ನೆನಪಿರುವುದು ಕಷ್ಟ ಮೋದಿಜೀ! ತಲೆಗೆ ಹೂ ಮುಡಿದುಕೊಂಡ ಆಂಗ್ ಸಾನ್ ಸೂಕಿ ಅವರೇ ಸದಾ ನನಗೆ ಮಯನ್ಮಾರ್ ಪ್ರೆಸಿಡೆಂಟ್ ಅನಿಸುತ್ತಿರುತ್ತದೆ.”
ನಾನು ನಕ್ಕು ಹೇಳಿದೆ _ “ಸುಷ್ಮಾಜೀ, ಸದಾ ನೀವೇ ನಮ್ಮ ಎಕ್ಸ್‌ಟರ್ನಲ್ ಮಿನಿಸ್ಟರ್ ಆಗಿರುತ್ತೀರಿ” ಎಂದರು.
(ಕೃಪೆ: ’ಸಾಕ್ಷಿ’ ತೆಲುಗು ದೈನಿಕ)