- ೧೮ ರಿಂದ ೬೦ ವರ್ಷದ ಒಳಗಿರುವ ಎಲ್ಲಾ ಮಹಿಳೆಯರು ಮತ್ತು ಪುರುಷರು ರಕ್ತದಾನ ಮಾಡಬಹುದು.
- ರಕ್ತದಾನಿಯ ದೇಹದ ತೂಕ ಕನಿ? ೪೫ ಕೆ.ಜಿ.ಗಿಂತ ಹೆಚ್ಚು ಇರಬೇಕು.
- ರಕ್ತದಲ್ಲಿ ಹೀಮೋಗ್ಲೊಬಿನ್ ಅಂಶ ೧೨.೫ ಗ್ರಾಂಗಿಂತ ಹೆಚ್ಚು ಇರಲೇಬೇಕು.
- ಗಂಡಸರು ೩ ತಿಂಗಳಿಗೊಮ್ಮೆ ಮತ್ತು ಹೆಂಗಸರು ೪ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
- ಒಮ್ಮೆ ರಕ್ತದಾನ ಮಾಡುವಾಗ ೩೫೦-೪೫೦ ಮಿ.ಲೀ. ರಕ್ತ ತೆಗೆಯಲಾಗುತ್ತದೆ. ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಏನಿಲ್ಲವೆಂದರೂ ಸುಮಾರು ೭೦-೭೫ ಲೀಟರ್ ರಕ್ತದಾನ ಮಾಡಬಹುದು ಮತ್ತು ಸರಿಸುಮಾರು ಜೀವಿತ ಅವಧಿಯಲ್ಲಿ ೫೦೦ ರಿಂದ ೬೦೦ ಜನರ ಜೀವ ಉಳಿಸಬಹುದು.
- ದೇಹದ ಉಷ್ಣತೆ ೩೭.೫ ಡಿಗ್ರಿ ಸೆಲ್ಸಿಯಸ್ಗಿಂತ ಜಾಸ್ತಿ ಇರಬಾರದು. ರಕ್ತದಾನಿಗಳು ರಕ್ತದಾನ ಮಾಡುವ ಸಮಯದಲ್ಲಿ ಜ್ವರದಿಂದ ಬಳಲುತ್ತಿರಬಾರದು. ರಕ್ತದಾನಿಗಳಿಂದ ಪಡೆದ ರಕ್ತವನ್ನು ವಿಶೇಷವಾದ ಹೆಪ್ಪುನಿರೋಧಕ ದ್ರವ್ಯಗಳಿರುವ ಚೀಲಗಳಲ್ಲಿ ಸಂಗ್ರಹಿಸಲಾಗುತ್ತದೆ. ದಾನಿಗಳಿಂದ ಪಡೆದ ರಕ್ತವನ್ನು ರಕ್ತದ ಮೂಲಕ ಹರಡಬಹುದಾದ ಹೆಪಟೈಟಿಸ್ ಬಿ ಮತ್ತು ಸಿ, ಎಚ್.ಐ.ವಿ., ಮಲೇರಿಯಾ, ಸಿಫಿಲಿಸ್ ರೋಗಾಣುಗಳಿಗಾಗಿ ಪರೀಕ್ಷಿಸಲಾಗುತ್ತದೆ. ಹೀಗೆ ದಾನಿಗಳಿಂದ ಪಡೆದ ರಕ್ತವನ್ನು ಮೇಲೆ ತಿಳಿಸಿದ ರೋಗಾಣುಗಳಿಲ್ಲವೆಂದು ಖಾತರಿಗೊಳಿಸಿದ ಬಳಿಕವೇ ಬೇರೆ ರೋಗಿಗಳಿಗೆ ನೀಡುತ್ತಾರೆ.
ದಾನಿಗಳಿಂದ ಪಡೆದ ರಕ್ತವನ್ನು ರೋಗಾಣುಮುಕ್ತ ಎಂದು ಖಾತರಿಗೊಳಿಸಿದ ಬಳಿಕ ಶೈತ್ಯೀಕರಣ (ರೆಫ್ರಿಜಿರೇಟರ್) ಯಂತ್ರಗಳಲ್ಲಿ ಸೂಕ್ತ ಉ?ತೆಯಲ್ಲಿ ಶೇಖರಿಸಿಡಲಾಗುತ್ತದೆ. ಸಾಮಾನ್ಯವಾಗಿ ಪೂರ್ತಿ ರಕ್ತವನ್ನು (ಹೋಲ್ಬ್ಲಡ್) ಮತ್ತು ಬೇರ್ಪಡಿಸಿದ ರಕ್ತಕಣಗಳನ್ನು ೨ ರಿಂದ ೬ ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಶೇಖರಿಸಲಾಗುತ್ತದೆ ಮತ್ತು ಇದನ್ನು ಸುಮಾರು ೩೫ ರಿಂದ ೪೨ ದಿನಗಳ ಅವಧಿಯ ಒಳಗೆ ಬೇರೆಯವರಿಗೆ ನೀಡಬಹುದು. ಅವಧಿ ಕಳೆದ ರಕ್ತವನ್ನು ವೈಜ್ಞಾನಿಕವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ. ಕೆಲವೊಮ್ಮೆ ರಕ್ತದಿಂದ ಪ್ಲಾಸ್ಮಾ ಎಂಬ ಅಂಶವನ್ನು ಬೇರ್ಪಡಿಸಲಾಗುತ್ತದೆ.
ಈ ರೀತಿ ಪ್ಲಾಸ್ಮಾವನ್ನು -೧೮ಕ್ಕಿಂತ ಕಡಮೆ ಡಿಗ್ರಿ ಸೆಲ್ಸಿಯಸ್ನಲ್ಲಿ ಒಂದು ವರ್ಷದವರೆಗೆ ಶೇಖರಿಸಿಡಬಹುದು. -೬೫ಕ್ಕಿಂತ ಕಡಮೆ ಡಿಗ್ರಿ ಸೆಲ್ಸಿಯಸ್ನಲ್ಲಿ ೫ ವರ್ಷದಿಂದ ೭ ವರ್ಷಗಳವರೆಗೆ ಶೇಖರಿಸಿಡಬಹುದು. ಕೆಲವೊಮ್ಮೆ ರಕ್ತದಲ್ಲಿನ ಪ್ಲೇಟ್ಲೆಟ್ ಎಂಬ ಅಂಶವನ್ನು ರಕ್ತದಿಂದ ಬೇರ್ಪಡಿಸಿ ೨೦-೨೪ ಡಿಗ್ರಿ ಸೆಲ್ಸಿಯಸ್ನಲ್ಲಿ ಸುಮಾರು ೫ ದಿನಗಳವರೆಗೆ ಶೇಖರಿಸಿಡಬಹುದು. ಈ ರೀತಿಯ ರಕ್ತಕಣಗಳನ್ನು ಡೆಂಗ್ಯು, ಚಿಕೂನ್ಗುನ್ಯಾ ಮುಂತಾದ ರೋಗಿಗಳಿಗೆ ಮತ್ತು ರಕ್ತ ಹೆಪ್ಪುಗಟ್ಟದಿರುವ ರೋಗಿಗಳ ಚಿಕಿತ್ಸೆಗಾಗಿ ಉಪಯೋಗಿಸುತ್ತಾರೆ. ಆದರೆ ಇಂತಹ ರಕ್ತಕಣಗಳನ್ನು ೫ ದಿನಗಳಿಗಿಂತ ಜಾಸ್ತಿ ಉಪಯೋಗಿಸಲು ಸಾಧ್ಯವಾಗುವುದಿಲ್ಲ.
ಯಾರು ರಕ್ತದಾನ ಮಾಡಬಾರದು
೧. ಯಾವುದಾದರೂ ಹೃದಯ ಸಂಬಂಧ ಕಾಯಿಲೆ, ಯಕೃತ್ತಿನ ಕಾಯಿಲೆ, ಮೂತ್ರಪಿಂಡದ ಕಾಯಿಲೆ, ಅರ್ಬುದ ರೋಗ (ಕ್ಯಾನ್ಸರ್), ಅಪಸ್ಮಾರ, ಕ್ಷಯರೋಗ ಇತ್ಯಾದಿ ರೋಗಗಳಿಂದ ಬಳಲುತ್ತಿರುವವರು ರಕ್ತದಾನ ಮಾಡಬಾರದು.
೨. ಮದ್ಯಪಾನ ಮತ್ತು ಮಾದಕ ದ್ರವ್ಯಸೇವನೆ ಮಾಡಿದಾಗ ರಕ್ತದಾನ ಮಾಡಬಾರದು. (೭೨ ಗಂಟೆಗಳ ಕಾಲ).
೩. ಮಲೇರಿಯಾ ರೋಗವಿರುವ ಪ್ರದೇಶಗಳಲ್ಲಿ ವಾಸವಾಗಿದ್ದು ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆದಿದ್ದರೆ ಚಿಕಿತ್ಸೆ ಪಡೆದ ನಂತರದ ೩ ತಿಂಗಳು ಹಾಗೂ ಮಲೇರಿಯಾ ರಹಿತ ಪ್ರದೇಶಗಳಲ್ಲಿ ವಾಸವಾಗಿದ್ದು ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆದಿದ್ದರೆ ೩ ವ? ರಕ್ತದಾನ ಮಾಡಬಾರದು.
೪. ಆಸ್ಪಿರಿನ್ ಮಾತ್ರೆ ಸೇವಿಸಿದ್ದರೆ ೩ ದಿನಗಳವರೆಗೆ ರಕ್ತದಾನ ಮಾಡಬಾರದು.
೫. ಹಿಂದಿನ ೩ ತಿಂಗಳಲ್ಲಿ ತಾವು ರಕ್ತ ಅಥವಾ ರಕ್ತದ ಅಂಶ ಪಡೆದಿದ್ದಲ್ಲಿ, ಅಂಥವರು ರಕ್ತದಾನ ಮಾಡಬಾರದು
೬. ಮಹಿಳೆಯರು ತಿಂಗಳ ಮುಟ್ಟಿನ ಸಮಯದಲ್ಲಿ, ಗರ್ಭಿಣಿಯಾಗಿದ್ದಾಗ, ಎದೆಹಾಲು ಉಣಿಸುತ್ತಿರುವಾಗ ಮತ್ತು ಹೆರಿಗೆಯ ನಂತರ ೬ ತಿಂಗಳವರೆಗೆ ರಕ್ತದಾನ ಮಾಡಬಾರದು.
೭. ಅಧಿಕ ರಕ್ತದೊತ್ತಡ, ನಿಯಂತ್ರಣವಿಲ್ಲದ ಮಧುಮೇಹ ರೋಗದಿಂದ ಬಳಲುತ್ತಿರುವವರು ರಕ್ತದಾನ ಮಾಡದಿರುವುದು ಉತ್ತಮ.
೮. ಮಾತ್ರೆ ತೆಗೆದುಕೊಂಡು ನಿಯಂತ್ರಣದಲ್ಲಿರುವ ಮಧುಮೇಹ ರೋಗಿಗಳು ರಕ್ತದಾನ ಮಾಡಬಹುದು. ಇನ್ಸುಲಿನ್ ತೆಗೆದುಕೊಳ್ಳುತ್ತಿರುವ ಮಧುಮೇಹ ರೋಗಿಗಳು ರಕ್ತದಾನ ಮಾಡಬಾರದು.
೯. ರಕ್ತಹೀನತೆಯಿಂದ (ಹೀಮೋಗ್ಲೊಬಿನ್ ಅಂಶ ೧೨.೫ಕ್ಕಿಂತ ಕಡಮೆ ಇರುವವರು) ಬಳಲುತ್ತಿರುವವರು ರಕ್ತದಾನ ಮಾಡಬಾರದು.
೧೦. ಯಾವುದೇ ವ್ಯಕ್ತಿ ಗಂಭೀರ ಶಸ್ತ್ರಚಿಕಿತ್ಸೆಗೊಳಗಾಗಿದ್ದಲ್ಲಿ ಒಂದು ವ?ದವರೆಗೆ ರಕ್ತದಾನ ಮಾಡಬಾರದು. ಮತ್ತು ಸಣ್ಣಪ್ರಮಾಣದ ಚಿಕಿತ್ಸೆಗೆ ಒಳಗಾಗಿರುವವರು ೬ ತಿಂಗಳ ಕಾಲ ರಕ್ತದಾನ ಮಾಡಬಾರದು.
೧೧. ಕಾಮಾಲೆ (ಜಾಂಡಿಸ್) ಮತ್ತು ಹೆಚ್.ಐ.ವಿ. (ಏಡ್ಸ್) ಮತ್ತು ಸಿಫಿಲಿಸ್ ಮುಂತಾದ ಲೈಂಗಿಕ ಕಾಯಿಲೆ ಇರುವವರು ರಕ್ತದಾನ ಮಾಡಬಾರದು.
೧೨. ಹೆಪಟೈಟಿಸ್ ಬಿ ಮತ್ತು ಸಿ. ಎನ್ನುವ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆ ಇರುವವರು ರಕ್ತದಾನ ಮಾಡಬಾರದು.
೧೩. ವಾಂತಿ, ಬೇಧಿ ಮತ್ತು ಜ್ವರದಿಂದ ಬಳಲುತ್ತಿರುವವರು ರಕ್ತದಾನ ಮಾಡಬಾರದು.
೧೪. ಯಾವುದೇ ಸೂಕ್ತಕಾರಣವಿಲ್ಲದೆ ದೇಹದ ತೂಕದಲ್ಲಿ ತುಂಬಾ ಏರುಪೇರಾಗಿದ್ದಲ್ಲಿ (ಈಚೆಗೆ ೬ ತಿಂಗಳಲ್ಲಿ) ಸರಿಯಾದ ಮಾರ್ಗದರ್ಶನ ಮತ್ತು ಪರೀಕ್ಷೆ ನಡೆಸದೆ ರಕ್ತದಾನ ಮಾಡಬಾರದು.
೧೫. ಅಲರ್ಜಿ ಮತ್ತು ವಿಪರೀತ ಆಸ್ತ್ಮ ರೋಗಗಳಿಂದ ಬಳಲುತ್ತಿರುವವರು ರಕ್ತದಾನ ಮಾಡದಿರುವುದೇ ಉತ್ತಮ.
೧೬. ಚಿಕೂನ್ಗುನ್ಯ, ಡೆಂಗ್ಯೂ ಜ್ವರ ಬಂದ ೬ ತಿಂಗಳುಗಳ ಕಾಲ ರಕ್ತದಾನ ಮಾಡಬಾರದು.
೧೭. ಹುಚ್ಚುನಾಯಿ ಕಚ್ಚಿದುದಕ್ಕೆ ಲಸಿಕೆ ಹಾಕಿಸಿಕೊಂಡಿದ್ದಲ್ಲಿ ಒಂದು ವ? ಕಾಲ ರಕ್ತದಾನ ಮಾಡಬಾರದು.
೧೮. ಹಿಂದಿನ ೧೫ ದಿನಗಳಿಂದ ಕಾಲರಾ, ಟೈಫಾಯಿಡ್, ಡಿಫ್ತೀರಿಯಾ, ಟೆಟನಸ್, ಪ್ಲೇಗ್ ಮುಂತಾದ ರೋಗನಿರೋಧಕ ಲಸಿಕೆಗಳನ್ನು ಹಾಕಿಸಿಕೊಂಡಿದ್ದಲ್ಲಿ ರಕ್ತದಾನ ಮಾಡಬಾರದು.
೧೯. ದೈಹಿಕವಾಗಿ ರಕ್ತದಾನಕ್ಕೆ ಅರ್ಹನಾಗಿದ್ದರೂ, ಮಾನಸಿಕವಾಗಿ ರಕ್ತದಾನ ಮಾಡಲು ಹಿಂಜರಿಕೆ ಇದ್ದಲ್ಲಿ ದಾಕ್ಷಿಣ್ಯಪೂರ್ವಕವಾಗಿ ರಕ್ತದಾನ ಮಾಡಬಾರದು. ಅಂತಹ ವ್ಯಕ್ತಿಗೆ ವಿಶೇ?ವಾದ ಸಂದರ್ಶನ ನಡೆಸಿ ರಕ್ತದಾನದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ರಕ್ತದಾನದ ಬಗ್ಗೆ ಇರುವ ಸಂದೇಹಗಳನ್ನು ನಿವಾರಿಸಿದ ಬಳಿಕವೇ ತಜ್ಞ ವೈದ್ಯರ ಸಮ್ಮುಖದಲ್ಲಿ ವಿಶೇ? ಮುತುವರ್ಜಿ ವಹಿಸಿ ರಕ್ತದಾನದ ಪ್ರಕ್ರಿಯೆಯನ್ನು ನಡೆಸತಕ್ಕದ್ದು.
ರಕ್ತದಾನದಿಂದ ಆಗುವ ಪ್ರಯೋಜನಗಳು
೧. ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ, ದಾನಿಯ ದೇಹದಲ್ಲಿ ಮತ್ತ? ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಆಗುತ್ತದೆ. ಒಮ್ಮೆ ರಕ್ತದಾನ ಮಾಡುವಾಗ ಕೇವಲ ೩೫೦ರಿಂದ ೪೫೦ ಮಿ.ಲೀ. ವರೆಗೆ (ವ್ಯಕ್ತಿಯ ದೇಹದ ತೂಕವನ್ನು ಅವಲಂಬಿಸಿ) ರಕ್ತ ತೆಗೆಯಲಾಗುತ್ತದೆ. ಸಾಮಾನ್ಯವಾಗಿ ವ್ಯಕ್ತಿಯೊಬ್ಬರ ದೇಹದಲ್ಲಿ ೫ರಿಂದ ೬ ಲೀಟರ್ ರಕ್ತವಿರುವುದರಿಂದ ರಕ್ತದಾನಿಗಳಿಗೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲ ಮತ್ತು ದೇಹದೊಳಗಿನ ಮೂಳೆಯ ಒಳಗಿರುವ ಅಸ್ಥಿಮಜ್ಜೆಯಲ್ಲಿ ಮತ್ತ? ರಕ್ತ ಉತ್ಪತ್ತಿಯಾಗಲು ಪ್ರಚೋದನೆ ನೀಡಿ ವ್ಯಕ್ತಿಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನೇ ಬೀರುತ್ತದೆ.
೨. ದೇಹದಲ್ಲಿ ಮತ್ತ? ಹೊಸ ರಕ್ತ ಉತ್ಪತ್ತಿಯಾಗಿ, ರಕ್ತಸಂಚಲನೆ ಹೆಚ್ಚಾಗಿ ವ್ಯಕ್ತಿಯ ಕಾರ್ಯತತ್ಪರತೆ, ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ.
೩. ರಕ್ತದಲ್ಲಿ ಕೊಬ್ಬಿನ ಪ್ರಮಾಣ (ಕೊಲೆಸ್ಟ್ರಾಲ್) ಕಡಮೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಳೆಯ ರಕ್ತಕಣಗಳು ಹೋಗಿ ಹೊಸ ರಕ್ತಕಣಗಳು ಉತ್ಪತ್ತಿಯಾಗಿ ಕೊಬ್ಬಿನಪ್ರಮಾಣ ಕೂಡಾ ಕಡಮೆಯಾಗುತ್ತದೆ.
೪. ಹೃದಯಾಘಾತವನ್ನು ತಡೆಯುವ ಪ್ರಕ್ರಿಯೆಗೆ ರಕ್ತದಾನ ಖಂಡಿತವಾಗಿಯೂ ಧನಾತ್ಮಕ ಪರಿಣಾಮ ಬೀರುತ್ತದೆ. ಇದು ವೈಜ್ಞಾನಿಕವಾಗಿ ಸಂಶೋಧನೆಗಳಿಂದ ನಿರೂಪಿಸಲ್ಪಟ್ಟಿದೆ. ಆದುದರಿಂದ ಹೃದಯಾಘಾತಕ್ಕೆ ಪೂರಕವಾದ ದೇಹಪ್ರಕ್ರಿಯೆ ಉಳ್ಳವರು ಹೆಚ್ಚುಹೆಚ್ಚು ರಕ್ತದಾನ ಮಾಡಿದಲ್ಲಿ, ಹೃದಯಾಘಾತವನ್ನು ತಪ್ಪಿಸಬಹುದು.
೫. ಅಧಿಕ ರಕ್ತದೊತ್ತಡ ಮತ್ತು ಹೃದಯಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ರಕ್ತದಾನ ಹೆಚ್ಚು ಸಹಾಯ ಮಾಡುತ್ತದೆ.
೬. ಎಲ್ಲಕ್ಕಿಂತ ಮಿಗಿಲಾಗಿ ನಾಲ್ಕು ಜೀವವನ್ನು ಉಳಿಸಿದ ಸಾರ್ಥಕತೆ ರಕ್ತದಾನಿಗಳಿಗೆ ಉಚಿತವಾಗಿ ದೊರಕುತ್ತದೆ. ರಕ್ತದಾನದಿಂದ ಸಿಗುವ ಸಂತೃಪ್ತಿ ಮತ್ತು ಸಾರ್ಥಕತೆಗೆ ಯಾವುದೇ ಬೆಲೆ ಕಟ್ಟಲಾಗದು.
ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ
೧೯೦೧ರಲ್ಲಿ ಕಾರ್ಲ್ ಲಾಂಡ್ಸ್ಟೈನರ್ ಎಂಬ ಆಸ್ಟ್ರಿಯಾ ದೇಶದ ವೈದ್ಯರು ರಕ್ತದ ಗುಂಪುಗಳ ವರ್ಗೀಕರಣವನ್ನು ನೀಡಿದರು. ಆ ಕಾರಣಕ್ಕಾಗಿಯೇ ಆತನ ಜನ್ಮದಿನಾಂಕ ಜೂನ್ ೧೪ರಂದು ’ವಿಶ್ವ ರಕ್ತದಾನಿಗಳ ದಿವಸ’ ಎಂದು ಆಚರಿಸಲಾಗುತ್ತದೆ. ಅದೇ ರೀತಿ ಅಕ್ಟೋಬರ್ ೧ರಂದು ’ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿವಸ’ ಎಂದು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ.
ರಕ್ತ ಒಂದು ಸಂಜೀವನಿ ಇದ್ದಂತೆ. ಅದಕ್ಕೆ ಪರ್ಯಾಯವಾದ ಬೇರೊಂದು ವಸ್ತುವಿಲ್ಲ. ಅನೇಕ ತುರ್ತುಪರಿಸ್ಥಿತಿಗಳಲ್ಲಿ ರಕ್ತವನ್ನು ಇನ್ನೊಬ್ಬರಿಂದ ತೆಗೆದು ಅಗತ್ಯವಿರುವವರಿಗೆ ಕೊಡಲಾಗುತ್ತದೆ. ಇಂತಹ ಸಮಯದಲ್ಲಿ ಆವಶ್ಯಕತೆ ಇರುವ ರಕ್ತ ದೊರಕಿದರೆ ಮಾತ್ರ ಜೀವ ಉಳಿಸಲು ಸಾಧ್ಯ. ದೇಹದಲ್ಲಿ ಆರೋಗ್ಯವಂತ ರಕ್ತವಿದ್ದರೆ ಸಾಲದು, ರಕ್ತದಾನ ಮಾಡಿ ಜೀವ ಉಳಿಸಬಲ್ಲ ಉದಾರ ಮನಸ್ಸು ಪ್ರತಿಯೊಬ್ಬರಲ್ಲೂ ಇರಬೇಕು.
ಬನ್ನಿ ಗೆಳೆಯರೇ, ನಾವೆಲ್ಲಾ ಒಂದಾಗೋಣ. ಜಾತಿ, ಮತ, ಧರ್ಮ, ಲಿಂಗಭೇದವನ್ನು ಬದಿಗಿಟ್ಟು ರಕ್ತದಾನ ಮಾಡಿ ಜೀವದಾನ ಮಾಡೋಣ. ದೇಶದ ಮತ್ತು ವಿಶ್ವದ ಶಾಂತಿಯಲ್ಲಿಯೇ ನಮ್ಮೆಲ್ಲರ ಭವಿಷ್ಯ ಅಡಗಿದೆ.