ಎಂಥ ಸಂದಿಗ್ಧ! ಗುಂಡಪ್ಪ ಒಳಗೊಳಗೆ ಮಿಡುಕತೊಡಗಿದ. ಗಿರಿ ಏನೇ ಹೇಳಲಿ, ಈಗ ಮನೆಯ ಯಜಮಾನ ಸುಧಿ ಎನ್ನುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ.
’ನಿಮಗೆ ಹೃದಯವೇ ಇಲ್ಲ’ ಎಂದು ಹೆಂಡತಿಯಿಂದ ಹಂಗಿಸಿಕೊಂಡವನಿಗೆ ಈ ಹಾಳು ಹೃದಯಕಾಯಿಲೆ ಎಲ್ಲಿಂದ ಗಂಟು ಬಿತ್ತೋ? ಎಂಬ ಕಳವಳ ಕಳೆದ ಎರಡು ದಿನಗಳಿಂದ ಗುಂಡಪ್ಪನಿಗೆ ತಪ್ಪಿಯೇ ಇಲ್ಲ.
ಛೇ! ಇಷ್ಟು ದಿನ ಎಷ್ಟು ಹಾಯಾಗಿದ್ದೆ. ಎಪ್ಪತು ವರ್ಷಗಳಾದರೂ ಕಾಯಿಲೆ ಕಸಾಲೆ ಇಲ್ಲ. ಒಂದುದಿನವೂ ಜ್ವರ ಎಂದು ಮಲಗಿದ ನೆನಪಿಲ್ಲ. ನೋಡಿದವರು ’ಬೇಕಾದ್ದು ತಿಂತೀರಿ, ಕುಡಿತೀರಿ. ಆದ್ರೂ ಆರೋಗ್ಯನ ಎಷ್ಟು ಚೆನ್ನಾಗಿ ಕಾಪಾಡಿಕೊಂಡು ಬಂದಿದೀರಿ’ ಎನ್ನುವಾಗ ಆ ಮೆಚ್ಚುಗೆಯ ಮಾತಿನಲ್ಲಿ ಒಂದು ಚೂರು ಅಸೂಯೆಯ ಛಾಯೆ ಕಾಣಿಸಿದ ಹಾಗಾಗಿ ಒಳಗೊಳಗೆ ಖುಷಿಯಾಗುತ್ತಿತ್ತು. ಆದರೆ ಯಾರದೇನು ದೃಷ್ಟಿಯಾಯಿತೋ, ಮೊನ್ನೆ ರಾತ್ರಿ ಊಟ ಮಾಡಿ ಮಲಗಿದವನಿಗೆ ಎದೆಯೊಳಗೆ ಅದೇನೋ ಸಣ್ಣದಾಗಿ ಎಳೆ ಎಳೆಯಾಗಿ ಸುಳಿದಾಡುವ ನೋವು ಭಾಸವಾದಾಗ ತುಸು ಅಸ್ವಸ್ಥತೆಯ ಅನುಭವ. ಆಮೇಲೂ ಉದಾಸೀನ ಮಾಡಲಾಗದಂತೆ ನೋವು ಹೆಚ್ಚಾಗುತ್ತ ಹೋಯಿತು. ಮುಳ್ಳಿನಿಂದ ಚುಚ್ಚುವಂತಹ ಅಸಹನೀಯ ನೋವು ಕ್ರಮೇಣ ಬೆನ್ನಿಗೂ ಹರಡಿ ಭುಜ ಭಾರವಾಗಿ ಬೆವರು ಹರಿದಿತ್ತು. ಪರೀಕ್ಷೆ ಮಾಡಿದ ಶೆಣೈ ಡಾಕ್ಟರು ’ಹೃದಯಾಘಾತವಾಗಿದೆ. ಸಾಗರಕ್ಕೆ ಹೋಗಿ ಇ.ಸಿ.ಜಿ. ಮಾಡಿಸಿ’ ಎಂದು ಚೀಟಿ ಬರೆದುಕೊಟ್ಟರು. ಆಗ ಮೊದಲ ಬಾರಿಗೆ ಅದೆಷ್ಟು ಭಯವಾಯಿತೆಂದರೆ ಕಾರಿನಲ್ಲಿ ಹೋಗುವಾಗಲೇ ದಾರಿಯಲ್ಲಿ ಕಂತೆ ಒಗೆದುಬಿಡುವನೇನೋ ಎಂಬ ಅಳುಕು. ಜೊತೆಗೆ ಈ ಸುಡುಗಾಡು ಊರಲ್ಲಿ ಒಂದು ಸೊಟ್ಟ ಇ.ಸಿ.ಜಿ.ಗೂ ಗತಿ ಇಲ್ಲ ಎಂದು ಸಿಟ್ಟು ಬಾರದೆ ಇರಲಿಲ್ಲ. ಅಲ್ಲ, ಹೀಗೆ ಪ್ರತಿಯೊಂದು ಟೆಸ್ಟಿಗೂ ಬಾಡಿಗೆಕಾರು ಮಾಡಿಸಿಕೊಂಡು ಸಾಗರ, ಶಿವಮೊಗ್ಗ ಎಂದು ಹೋಗುವುದಾದರೆ ಕೂಡಿಟ್ಟ ಹೂಡಿಕೆಹಣ ಕರಗಿಹೋಗುವುದಲ್ಲ ಎಂದು ಅವನಿಗೆ ದಿಗಿಲು.
ಆವತ್ತಿನಿಂದ ಮನಸ್ಸು ಹದಗೆಟ್ಟು ಹೋಗಿದೆ. ಜೀವಕ್ಕೆ ಸಮಾಧಾನ ಎನ್ನುವುದೇ ಇಲ್ಲವಾಗಿದೆ. ಹಗಲುರಾತ್ರಿ ಏನೋ ಒಂಥರಾ ದುಗುಡ. ನಿಯಂತ್ರಣಕ್ಕೆ ಬಾರದ ಏನೇನೋ ಕನವರಿಕೆ. ಚಡಪಡಿಕೆ. ಓಹ್, ಬಂದ ಒಂದೇ ಒಂದು ಎದೆನೋವು ಈ ಮೂರುದಿನಗಳಲ್ಲಿ ತನ್ನನ್ನು ಅದೆ? ಹೆದರಿಸಿ ಹೈರಾಣಾಗಿಸಿಬಿಟ್ಟಿತಲ್ಲ. ಹಾಳಾದ ಈ ಹೃದಯರೋಗ ಎಲ್ಲರನ್ನೂ ಬಿಟ್ಟು ಹುಡುಕಿಕೊಂಡು ಬಂದಹಾಗೆ ತನಗೆ ಅಮರಿಕೊಳ್ಳಬೇಕೇ ಎಂಬ ಕೊರಗು ತಪ್ಪಿಯೇ ಇಲ್ಲ.
ಸಾಗರಕ್ಕೆ ನಾಲ್ಕಾರು ಅಲೆದಾಟದಲ್ಲಿ ಎಲ್ಲ ನಿಚ್ಚಳವಾಗಿದೆ.
’ಹೃದಯ ದುರ್ಬಲವಾಗಿದೆಯಂತೆ. ಓಪನ್ಹಾರ್ಟ್ ಸರ್ಜರಿ ಮಾಡಬೇಕಂತೆ. ಬೆಂಗಳೂರಿಗೆ ಕರೆದುಕೊಂಡು ಹೋದರೆ ಒಳ್ಳೆಯದು ಅಂದಿದ್ದಾರಂತೆ ಡಾಕ್ಟರು. ಆಪರೇ?ನ್ಗೆ ಎಂಟರಿಂದ ಹತ್ತು ಲಕ್ಷ ಬೇಕಾಗಬಹುದು. ಎಂದೂ ಸಹ ಹೇಳಿದ್ದಾರೆ’ ಎಂದು ರಾಜ ಹೇಳಿದ್ದು ಕೇಳಿ ಒಂದುಕ್ಷಣ ಅರೇ ತಾನು ಇಷ್ಟು ಬೆಲೆಬಾಳುವ ಮನುಷ್ಯನಾಗಿ ಹೋದೆನೇ? ಎಂಬ ವಿಸ್ಮಯ. ಮರುಕ್ಷಣ ಗುಂಡಪ್ಪನಿಗೆ ತಲೆಸುತ್ತು ಬಂದಿತ್ತು. ಸದ್ಯ ತನ್ನ ಎದೆ ಹೊಡೆದುಕೊಳ್ಳಲಿಲ್ಲವಲ್ಲ ಅದೇ ಬೆರಗು. ’ಇಷ್ಟು ಮಾಡಿಯೂ ಅಪ್ಪ ಬದುಕುತ್ತಾರಾ?’ ಎಂದು ರಾಜ ವಿಚಾರಿಸಿದಾಗ ’ಹೂಂ ಕೆಲಕಾಲ ಬದುಕಬಹುದು’ ಎಂದರಂತೆ. ಇದೇ ಗುಂಡಪ್ಪನ ತಲೆತಿಂದಿದ್ದು. ಬಹುದು ಯಾಕೆ? ಬದುಕುತ್ತಾರೆ ಯಾಕಿಲ್ಲ. ಅಂದರೆ ಯಾವುದಕ್ಕೂ ಖಾತ್ರಿ ಇಲ್ಲ ಎಂದು ತಾನೇ ಅರ್ಥ? ಎಂದು ಗುಂಡಪ್ಪ ಅಸಹಾಯಕತೆಯಿಂದ ತನಗೆತಾನೇ ಊಹಿಸಿಕೊಂಡ. ಅದರ ಹಿಂದೆಯೇ ಒಂದು ಆತಂಕ ಧುತ್ತನೇ ಪ್ರತ್ಯಕ್ಷವಾಯ್ತು. ಒಂದು ವೇಳೆ ಇಷ್ಟೊಂದು ಹಣ ಖರ್ಚು ಮಾಡಿಯೂ ಅಪ್ಪ ಬದುಕುವುದು ಅನಿಶ್ಚಿತ ಅಂದಾಗಲೇ, ’ವೃಥಾ ಖರ್ಚು ಮಾಡುವುದಾದರೂ ಯಾಕೆ? ಹಣವಾದರೂ ಉಳಿಯುತ್ತದಲ್ಲ’ ಎಂದೇನಾದರೂ ರಾಜನಿಗೆ ಅನಿಸಿಬಿಟ್ಟರೆ? ಹೌಹಾರಲು ಗುಂಡಪ್ಪನಿಗೆ ಇಷ್ಟು ಅನುಮಾನ ಸಾಕಾಗಿತ್ತು.
ಮತ್ತೆ, ಬೆಂಗಳೂರು ಎನ್ನುವುದೇನೂ ಸುಲಭವಲ್ಲ. ಉಳಿದುಕೊಳ್ಳುವುದು ಎಲ್ಲಿ? ಅಲ್ಲಿ ಇನ್ನೆಷ್ಟು ಟೆಸ್ಟು ಮಾಡಬೇಕಾಗಿದೆಯೋ? ಆಪರೇಷನ್ ಆದ ಮೇಲೆ ಆಸ್ಪತ್ರೆಯಲ್ಲಿ ಎ? ದಿನಗಳಿರಬೇಕೋ. ಅಲ್ಲಿಂದ ಊರಿಗೆ ಹಿಂದಿರುಗಿದ ಮೇಲೆ ಮತ್ತೇನಾದರೂ ಹೆಚ್ಚುಕಡಮೆಯಾದರೆ ಏನು ಮಾಡುವುದು? ಒಟ್ಟಿನಲ್ಲಿ ಎಲ್ಲವೂ ಗೊಂದಲಮಯ. ಯಾರೂ ಸಾಂತ್ವನ ಹೇಳುವುದೇ ಇಲ್ಲ ಎನಿಸಿ ಮನಸ್ಸು ತಪ್ತಗೊಂಡರೂ, ಬದುಕಲೇಬೇಕು ಎಂಬ ಅವನ ತುಡಿತಕ್ಕೆ ಸಾವಿರಲಿಲ್ಲ. ಉಹೂಂ, ನಾನು ಸಾಯಬಾರದು, ಸಾಯಲು ನಾನು ಸಿದ್ಧನಿಲ್ಲ. ಸಾಯುವ ವಯಸ್ಸೂ ನನ್ನದಲ್ಲ. ನಮ್ಮದು ಧೀರ್ಘಾಯುಷಿಗಳ ವಂಶ ಎಂದೆಲ್ಲ ಗಂಟಲೊಳಗೆ ಬೊಬ್ಬಿರಿದವನ ಮುಂದೆ ಹತ್ತೇ ಲಕ್ಷ ಎನ್ನುವುದು ಭೂತಾಕಾರವಾಗಿ ನಿಂತಿದೆ. ಒಂದೆರಡು ಲಕ್ಷವಾಗಿದ್ದg ಹೇಗೋ ಹೊಂದಿಸಬಹುದಿತ್ತು ಎಂಬ ಪರಿತಾಪದಲ್ಲಿ ಈಗ ಆದಾಯದ ಮೂಲ ಹುಡುಕುವುದೇ ಕಷ್ಟವಾಗಿಬಿಟ್ಟಿದೆ.
ಈ ಮಧ್ಯೆ ಗುಂಡಪ್ಪ ಹೃದಯರೋಗಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ತರಿಸಿಕೊಂಡು ಓದಿದ. ಪತ್ರಿಕೆಗಳಲ್ಲಂತೂ ಈ ಕಾಯಿಲೆ ಕುರಿತು ಒಂದಲ್ಲ ಒಂದು ಲೇಖನ ಪ್ರಕಟವಾಗುತ್ತಿರುವುದನ್ನು ಗಮನಿಸಿದ. ಆದರೆ ಎಲ್ಲರೂ ರೋಗವನ್ನು ವೈಭವೀಕರಿಸುತ್ತಾರೆಯೇ ಹೊರತು ಕಂಡೂಕಾಣದ ಪರಿಹಾರ ಸೂಚಿಸದಿರುವುದು ಅವನಿಗೆ ಬೇಸರ ತರದಿರಲಿಲ್ಲ. ಹಾಗೇ ನೋಡಿದರೆ ಅವನೇನೂ ಸ್ಥೂಲಕಾಯದವನಲ್ಲ. ದಿನದ ಓಡಾಟ ತಪ್ಪಿಸಿಯೇ ಇಲ್ಲ. ಊಟತಿಂಡಿ ಹಿತಮಿತವಾಗಿಯೇ ಇದೆ. ಇಷ್ಟಾದರೂ ದೇಹಕ್ಕೆ ಏನು ಧಾಡಿ ಬಡಿಯಿತೋ. ತನ್ನ ಪರಿಚಿತರಲ್ಲಿ ಒಬ್ಬನಂತೂ ’ಇದೆಲ್ಲ ಗ್ರಹಚಾರದಿಂದ ಬರುವಂತಹ ರೋಗ, ಇದು ಪೂರ್ವಜನ್ಮದ ಪಾಪವಶೇ?’ ಎಂದೆಲ್ಲ ಗುಮ್ಮ ಬಿಟ್ಟು ಥರಥರಿಸುವ ಹಾಗೇ ಮಾಡಿಬಿಟ್ಟಿದ್ದಾನೆ.
ಆಮೇಲೆ ಒಂದು ದಿನ ’ಹೇಗಿದಿಯೋ’ ಎಂದು ಕೇಳುತ್ತ ಮನೆಯೊಳಗೆ ಬಂದವನು ಶೇಷ ಎಂದು ನಸುಗತ್ತಲಲ್ಲೂ ಗುಂಡಪ್ಪನಿಗೆ ಗೊತ್ತಾಗದೇ ಇರಲಿಲ್ಲ. ಶೇ? ಕುರ್ಚಿ ಎಳೆದುಕೊಂಡು ಪ್ರಶಸ್ತವಾಗಿ ಎದುರಿಗೆ ಕೂತು ’ಮೊನ್ನೆ ಹೈಕೋರ್ಟಿನ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದೆ. ಅಲ್ಲಿ ನಿನ್ನ ತಮ್ಮ ಗಿರಿ ಭೇಟಿಯಾದ. ನಿನಗೆ ಹೃದಯರೋಗ ಎಂದು ಗೊತ್ತಾಗಿ ತುಂಬ ಸಂತಾಪ ಪಟ್ಟ. ಮುಂದಿನವಾರ ನಿನ್ನ ನೋಡಲು ಬರುತ್ತಾನಂತೆ’ ಎಂಬ ವರದಿ ಕೇಳಿಯೂ ಗುಂಡಪ್ಪನ ಮನಸ್ಸೇನೂ ಪುಳಕಗೊಳ್ಳಲಿಲ್ಲ. ವ್ಯಂಗ್ಯವಾಗಿ, ಉದ್ದೇಶಪೂರ್ವಕವಾಗಿ ಗಿರಿ ಹೇಳಿದ್ದಾನು ಅನಿಸಿ ಸಂತಪ್ತನಾದ. ಕೂತಲ್ಲೇ ಕೊಸರಾಡಿದ.
ಶೇಷ ಹೋದ ಮೇಲೆ ಹಳೆಯ ಸಂಗತಿಗಳ ನೆನಪು ಕಾಡತೊಡಗಿತು.
ಗಿರಿ ಮೂವತ್ತು ವರ್ಷಗಳ ಹಿಂದೆ ಮನೆಬಿಟ್ಟು ಹೋದವನು. ಆಮೇಲೆ ಒಂದು ಕಾಗದವಿಲ್ಲ, ಫೋನಿಲ್ಲ. ಇಬ್ಬರ ನಡುವೆ ಮಾತುಕತೆಯೇ ಮರೆತುಹೋದ ಹಾಗಾಗಿದೆ. ಅಲ್ಲ, ಗಿರಿ ಹೇಳಿದ್ದನ್ನು ಆ ಶೇಷಥವರು ತನಗೀಗ ಹೇಳಬೇಕೆ ಹೊರತು ಅಣ್ಣನೆಂಬ ಅಭಿಮಾನ ಸತ್ತುಹೋದಂತೆ ಗಿರಿ ಇದ್ದಾನೆ. ತನಗಾದರೂ ಅವನ ಮೇಲೆ ಅಕ್ಕರಾಸ್ತೆ ಎಲ್ಲಿತ್ತು?
ದಿನಕ್ಕೆ ಹತ್ತಿಪ್ಪತ್ತು ಜನ ತಮ್ಮೂರಿನಿಂದ ಬೆಂಗಳೂರಿಗೆ ಹೋಗಿಬಂದು ಮಾಡುತ್ತಲೇ ಇರುತ್ತಾರೆ. ಹಾಗೇ ಹೋದವರು ಗಿರಿಯ ಹೋಟೆಲಲ್ಲೇ ಉಳಿದುಕೊಳ್ಳುವುದಂತೆ, ಊಟ ಮಾಡುವುದಂತೆ. ಅಂದ ಮೇಲೆ ಅಣ್ಣನ ಮನೆಯ ವಿ?ಯ ಗಿರಿ ಕೆಣಕಿ ಕೇಳದೇ ಇರುತ್ತಾನಾ? ಖಂಡಿತಾ ಎಲ್ಲ ತಿಳಿದುಕೊಂಡಿದ್ದಾನೆ ಭಂಡ. ಗೊತ್ತಾದ ಮೇಲಾದರೂ ಒಂದು ಫೋನು…! ಊಹೂಂ ಕೇಳುವುದೇ ಬೇಡ. ಈಗಲೂ ಶೇ?ನ ಮುಂದೆ ಬಣ್ಣನೆಯ ಮಾತಾಡಿದ್ದಾನೆ ಅಷ್ಟೆ.
ಅಥವಾ ಬಂದರೂ ಬಂದಾನು. ’ನೀನು ಉಗುರಿನ? ಮಣ್ಣು ಕೊಡದಿದ್ದರೂ ನಾನು ದುಡಿದು ಲಕ್ಷಲಕ್ಷ ಸಂಪಾದನೆ ಮಾಡಿದೀನಿ ನೋಡು’ ಎಂದು ತನ್ನೆದುರು ವೈಭವ ತೋರಿಸಿಕೊಳ್ಳಲು ಈ ಅವಕಾಶ ಬಿಡುತ್ತಾನಾ?- ತನ್ನ ಹೊಟ್ಟೆ ಉರಿಯಬೇಕಲ್ಲ, ಖಂಡಿತ ಬರುತ್ತಾನೆ
ಮೈದುನ ಬರುವ ಸುದ್ದಿ ಕೇಳಿ ನಿಜವಾಗಿ ಸಂತಸಪಟ್ಟವಳು ಶಾಂತು.
“ನೋಡಿ ಬೆಂಗಳೂರು ಸೇರಿದವನು ಇಡ್ಲಿ ಮಾಡಿ ಮಾರ್ತಿದಾನಂತೆ. ಕೇಳಿ ’ಊರಲ್ಲಿ ಸರಿಕರ ಮುಂದೆ ನನಗೆ ತಲೆ ಎತ್ತಲಾಗುತ್ತಿಲ್ಲ. ಎಂಥ ನಾಚಿಕೆಗೇಡು’ ಎಂದು ಆವಾಗ.. ಮೂವತ್ತೋ ವ?ಗಳ ಹಿಂದೆ ನನ್ನ ಮೇಲೆ ಹರಿಹಾಯ್ದದ್ದನ್ನು ನೆನಪು ಮಾಡಿಕೊಳ್ಳಿ. ಆದರೂ ಪಾಪ ಹಿಂದಿನ ಸಂಬಂಧ ನೆನಪು ಮಾಡಿಕೊಂಡು ಬರ್ತಿದಾನೆ” ಎಂದು ಗಂಡನನ್ನು ಮೂದಲಿಸುತ್ತಲೇ ಒಂದು ಬಗೆಯಲ್ಲಿ ಸಂಭ್ರಮಿಸಿದರು.
* * * *
ಒಂದು ಕಾಲಕ್ಕೆ ಸೋಮಯಾಗ ಮಾಡಿದ ದೀಕ್ಷಿತರ ಮನೆ ಎಂದು ಸಾರ್ವಜನಿಕವಾಗಿ ಅಭಿಮಾನ ಆವಾಹಿಸಿಕೊಂಡ ಮನೆಯಲ್ಲಿ ಹುಟ್ಟಿದರೂ ಗಿರಿಗೆ ಮಾತ್ರ ಮಂತ್ರ ಒಲಿಯಲಿಲ್ಲ. ತಂತ್ರದಲ್ಲೂ ದಡ್ಡನಾದ. ಹೀಗಾಗಿ ’ತಥಾಸ್ತು ಬ್ರಾಹ್ಮಣ’ ಎಂಬ ಅಡ್ಡಹೆಸರು ಅಂಟಿಬಿಟ್ಟಿತ್ತು. ಕರೆದರೆ ಹೋಗಿ ಅಚ್ಚುಕಟ್ಟಾಗಿ ಶ್ರಾದ್ಧದೂಟ ಕತ್ತರಿಸಿ ಬರುತ್ತಿದ್ದ. ಇಂಥವನಿಗೆ ಹೆಂಡತಿಯೂ ಬಂದಳು, ಸುಧೀರ ಹುಟ್ಟಿದ. ಆಗಿನಿಂದಲೇ ಗುಂಡಪ್ಪನಲ್ಲಿ ತಹತಹ ಶುರು.
ಇವನ ಸಂಸಾರದ ಜವಾಬ್ದಾರಿ ಹೊರುವ ಕರ್ಮ ತನಗ್ಯಾಕೆ?
ಅಲ್ಲದೇ ತನಗಾದರೂ ಏನು ಮಹಾ ಪ್ರಾಪ್ತಿ ಆಗ. ಬ್ರಾಹ್ಮಣನಾಗಿ ಹುಟ್ಟಿರುವುದೇ ಬೇಡಲಿಕ್ಕೆ ಎಂಬಂತಹ ಮಾತು ಕೇಳಿ ಆಗೆಲ್ಲ ತಮ್ಮ ಹೀನಸ್ಥಿತಿಗಾಗಿ ಅಸಹನೆ. ಪೂಜೆ, ಪುನಸ್ಕಾರಕ್ಕೆ ಚಿಲ್ಲರೆ; ಮದುವೆ, ಮುಂಜಿ ಮಾಡಿಸಿದರೆ ಐವತ್ತೋ ನೂರೋ ಕೊಟ್ಟರೆ ಅದೇ ಹೆಚ್ಚು. ಅಲ್ಲ, ಕೈಬಿಚ್ಚಿ ಕೊಡುವ ಮನೋಭಾವವೇ ಇಲ್ಲಿಯ ಜನರಿಗೆ ಇಲ್ಲವಾದ ಮೇಲೆ ವೈದಿಕ ವೃತ್ತಿಯನ್ನೇ ನಂಬಿಕೊಂಡಿರುವ ತಮ್ಮ ಜೀವನನಿರ್ವಹಣೆ ಹೇಗೆ ಸಾಗಬೇಕು? ಏನಾದರೂ ತಮ್ಮನ್ನು ಕಾಪಾಡುವ ಹೊಣೆಯನ್ನು ಈ ಸಮಾಜ ಸಮರ್ಪಕವಾಗಿ ನಿರ್ವಹಿಸುತ್ತಲೇ ಇಲ್ಲ. ಜನ ಮೆಚ್ಚುವಂತೆ ಕೆಲಸ ಮಾಡಿದರೂ ದೇವರು ವರ ಕೊಡುತ್ತಿಲ್ಲ ಎಂದು ಗುಂಡಪ್ಪ ಸಂಕಟದಲ್ಲಿರುವಾಗಲೇ, ಗಿರಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಲು ಹವಣಿಸಿದ್ದಾನೆ ಎಂಬ ಸುದ್ದಿ ಗಾಳಿಯಲ್ಲಿ ತಲಪಿತ್ತು. ಅಸಹನೆ ಆಗದೇ ಇದ್ದೀತೆ? ’ಏನು ಪಾಲು ಕೊಡುವುದು’ ಎಂದು ಹೆಂಡತಿಯ ಮುಂದೆ ಗುಡುಗಿದ್ದ. ಪಿತ್ರಾರ್ಜಿತಆಸ್ತಿ ಎಂದು ಇರುವುದು ಇದೊಂದು ಮನೆ ತಾನೆ? ಇದು ಸಹ ನೂರೈವತ್ತು ವ? ಹಳೆಯದು. ಮಳೆಗಾಲದಲ್ಲಿ ಗೋಡೆ ಕುಸಿಯುತ್ತದೆ. ತೊಲೆಗೂ ವರಲೆ ಹಿಡಿದಿದೆ. ಮಂಗಗಳು ಓಡಾಡಿ ಹುಡುಗರು ಒಡೆಯುವುದು ಇದ್ದದ್ದೆ. ವ?ವಿಡೀ ರಿಪೇರಿ ಮಾಡಿಸುತ್ತ ಈಗ ಆರು ಸಾವಿರ ಸಾಲ ತಲೆ ಮೇಲೆ ಕೂತಿದೆ. ಅದನ್ನು ತೀರಿಸಲು ಮತ್ತೆ ಸಾಲ ಮಾಡದೆ ಗತಿ ಇಲ್ಲ. ನಾನು ಎದೆಗೆಟ್ಟು ಕೂತಿರುವ ಸಮಯದಲ್ಲಿ ಗಿರಿಗೆ ಪಾಲು ಕೊಡುವುದು ಹೇಗೆ? ಮಾರಲು ಹೋದರೂ ಮನೆಗೆ ಬೆಲೆ ಬರುವುದಿಲ್ಲ. ಬರಿ ನೆಲಗಟ್ಟಿಗೆ ಮಾತ್ರ ಬೆಲೆ ಅನ್ನುತ್ತಾರೆ.
ತಾನಿಷ್ಟು ಸ್ಪಷ್ಟವಾಗಿ ಅಲವತ್ತುಕೊಂಡರೂ ಇವಳಿಗೆ ಸೂಕ್ಷ್ಮ ಅರ್ಥವಾಗುವುದೇ ಇಲ್ಲವಲ್ಲ; ಮತ್ತೂ ಮೈದುನನ ಪರವಾಗಿಯೇ ವಾದಿಸುತ್ತಾಳೆ. ಮೊದಲಿನಿಂದಲೂ ಇವಳಿಗೆ ಮೈದುನನ ಮೇಲೆ ಮಮಕಾರ. ಗಿರಿಯನ್ನು ಮಗನಂತೆ ಸಾಕಿರುವುದೇನೂ ಸುಳ್ಳಲ್ಲ. ಎಲ್ಲರ ಮುಂದೆ ’ನನ್ನ ಹಿರಿಯ ಮಗನ ಹಾಗೆ’ ಎಂದು ಅಭಿಮಾನದಿಂದ ಹೇಳಿಕೊಳ್ಳುವುದೇ ಹೆಚ್ಚು.
ಆದರೆ ಇವೆಲ್ಲ ಸಂವೇದನೆಗಳು ಇವರಿಗೆ ಮಾತ್ರ. ತನಗೆ ಮಾತ್ರ ಗಿರಿ ಒಡಹುಟ್ಟಿದ್ದರಿಂದ ಮಾತ್ರ ತಮ್ಮ. ಬೆಳೆದ ಮೇಲೆ ದಾಯಾದಿ ಎಂಬ ಗಾದೆ ಮಾತಿನಲ್ಲಿಯೇ ನಂಬಿಕೆ. ಏನು ತಪ್ಪು ಇದರಲ್ಲಿ?
’ನೋಡು, ಪಾಲು ಕೊಡಬೇಕೆಂದರೆ ಮನೆ ಮಾರಬೇಕು. ಮನೆ ಮಾರುವುದಾದರೆ ಸಾಲ ತೀರಿಸಬೇಕು. ನೀನು ಬೇಕಾದರೆ ಸಾಲ ತೀರಿಸಿ ಅರ್ಧಮನೆ ತಗೊ’ ಎಂಬ ಅಣ್ಣನ ವರಸೆಗೆ ಗಿರಿ ಕಂಗಾಲಾಗಿ ಹೋಗಿದ್ದ. ಮೊದಲಬಾರಿಗೆ ಬೆರಗಿನಿಂದ ಕಣ್ಣರಳಿಸಿದ್ದ. ಇದು ಗಮನಕ್ಕೆ ಬಂದರೂ ಗುಂಡಪ್ಪ ಹಿಡಿದ ಪಟ್ಟು ಸಡಿಲಿಸಿರಲಿಲ್ಲ. ’ನಾನಾದರೂ ಎಲ್ಲಿಂದ ತರಲಿ?’ ಅವನಿಗೂ ಅಸಹಾಯಕತೆಯ ಆವೇಶ ಬಂದಿತ್ತು. ’ಶ್ರಾದ್ಧದೂಟಕ್ಕೆ ಹೋದರೂ ಪಾವಲಿ (ನಾಲ್ಕಾಣೆ) ದಕ್ಷಿಣೆ ಕೊಡುತ್ತಾರೆ. ಇನ್ನು ದೇವರ ಪೂಜೆ ಮಾಡಿ ಯಾರು ಉದ್ಧಾರ ಆಗಿದ್ದಾರೆ?’
ಗಿರಿ ಮಾತಾಡಿರಲಿಲ್ಲ. ಹಾಗೇ ಹಠಕ್ಕೆ ನಿಲ್ಲುವ ಸ್ವಭಾವವೂ ಅವನದಲ್ಲ. ಆದರೆ ಅವನ ಪರವಾಗಿ ವಕಾಲತ್ತು ವಹಿಸಲು ಶಾಂತು ಮುಂದಾದದ್ದು ಗುಂಡಪ್ಪನಿಗೆ ಕಿರಿಕಿರಿಯಾಗದಿರಲಿಲ್ಲ. ’ನಿಮ್ಮನ್ನೇ ತಂದೆ ಎಂದು ನಂಬಿಕೊಂಡಿದ್ದಾನೆ ಅವನು.’ ರಾತ್ರಿ ಗಂಡನ ಕಾಠಿಣ್ಯ ಕರಗಿಸಲು ಸನ್ನಾಹ ನಡೆದೇ ಇತ್ತು. ಈಗ ವಾಸ್ತವ ಹೆಂಡತಿಯೆದುರು ತೆರೆದಿಡದೆ ಗುಂಡಪ್ಪನಿಗೆ ಗತ್ಯಂತರವೇ ಇರಲಿಲ್ಲ. ’ಹುಚ್ಚಿಯ ಹಾಗೇ ಹಲುಬಬೇಡ. ನಮಗೂ ಒಬ್ಬ ಮಗನಿದ್ದಾನೆ. ಅವನಿಗಾಗಿ ನಾವೇನು ದುಡಿದು ಆಸ್ತಿ ಮಾಡಲು ಆಗಿಲ್ಲ. ಇನ್ನು ಗಿರಿಯ ಪ್ರಶ್ನೆ – ಪಾಲೇಕೆ ಬೇಕು? ಈಗಿರುವ ಹಾಗೇ ಇಲ್ಲೇ ಇರಲಿ. ಬೇಕಾದರೆ ಒಲೆ ಬೇರೆ ಮಾಡಿಕೊಳ್ಳಲಿ. ವಾರದಲ್ಲಿ ನಾಲ್ಕುದಿನ ಅವನಿಗೆ ಊಟದ ಚಿಂತೆ ಇಲ್ಲ. ಉಳಿದ ಖರ್ಚಿಗೆ ಹೇಗೂ ಅವನ ಹೆಂಡತಿಗೆ ಟೇಲರಿಂಗ್ ಬರುತ್ತದಲ್ಲ!” ಎಂದು ಮಾತು ಮುಗಿಸಿದ್ದ.
ಕೊನೆಗೂ ಗೆದ್ದದ್ದು ಗುಂಡಪ್ಪನೇ. ಶಾಂತು ಸೋತಿದ್ದಳು. ಗಿರಿ ಸಂಸಾರದೊಂದಿಗೆ ಉಟ್ಟಬಟ್ಟೆಯಲ್ಲಿ ಊರು ಬಿಟ್ಟಿದ್ದ.
* * * * *
ಮುಂದೆ ಈ ಮೂವತ್ತು ವ?ಗಳಲ್ಲಿ ಗಿರಿಯ ಸಂಗತಿ ಗುಂಡಪ್ಪನಿಗೆ ಅ?ಇ? ತಿಳಿಯುತ್ತಿತ್ತೇ ಹೊರತು ಪ್ರತ್ಯಕ್ಷ ಭೇಟಿ ಸಂಭವಿಸಿರಲಿಲ್ಲ. ರಾಜನ ಮದುವೆಗೂ ಅವನು ಬರಲಿಲ್ಲ. ಬರದಿದ್ದರೆ ಪೀಡೆ ಕಳೆಯಿತು ಎಂದು ನಿಶ್ಚಿಂತೆಯಿಂದ ಇದ್ದ ಹೊತ್ತು ಅದು.
ಆದರೆ ತನ್ನ ಅದೃ?ದ ಚಕ್ರಕ್ಕೆ ತುಕ್ಕು ಹಿಡಿದು ನಿಂತಲ್ಲೇ ನಿಂತರೆ, ಗಿರಿಯ ಅದೃ?ಚಕ್ರ ಭರಭರನೆ ಸುತ್ತತೊಡಗಿದೆ ಎಂದು ಅರಿವಾಗುವ ಹೊತ್ತಿಗೆ ಗುಂಡಪ್ಪ ಮಾನಸಿಕವಾಗಿ, ದೈಹಿಕವಾಗಿ ಹಣ್ಣಾಗಿದ್ದ.
ಬೆಂಗಳೂರಿಗೆ ಹೋದ ಹೊಸತರಲ್ಲಿ ಇಡ್ಲಿ ಮಾರಿ ಮನೆಮನೆಗೆ ಹೊತ್ತು ಒಯ್ದು ಮಾರಿದ ಗಿರಿ ಈಗ ಮಗ ಸುಧೀರನ ಕಾಲಕ್ಕೆ ಹೋಟೆಲ್ ಇಟ್ಟಿದ್ದಾನೆ, ಮನೆ ಕಟ್ಟಿಸಿದ್ದಾನೆ, ಕಾರು ಬಂದಿದೆ; ’ಸುಧೀರ ವ್ಯವಹಾರದಲ್ಲಿ ಮಹಾ ನಿಪುಣ’ ಎಂಬಂತಹ ಸುದ್ದಿಗಳು ಪದೇಪದೇ ತೇಲಿ ಬರುತ್ತ ತನಗರಿವಿಲ್ಲದೆ ಹತಾಶೆ ಗುಂಡಪ್ಪನನ್ನು ಆವರಿಸತೊಡಗಿದೆ. ’ಯಾವಾಗಲೂ ಸಂಕಟ ಪಡುತ್ತಿದ್ದರೆ ಜಠರದಲ್ಲಿ ಒಂದು ಬಗೆಯ ರಸ ಸ್ರವಿಸಲು ಶುರುವಾಗುತ್ತದೆ. ಅದು ನಾನಾ ರೋಗಗಳಿಗೆ ಮೂಲವಾಗುತ್ತದೆ’ ಎಂದು ಶೆಣೈ ಡಾಕ್ಟರು ಯಾವಾಗಲೋ ಹೇಳಿದ್ದು ಈಗ ಗುಂಡಪ್ಪನಿಗೆ ಪದೇಪದೆ ನೆನಪಾಗದೆ ಇರಲಿಲ್ಲ. ಸುಧಾರಿಸಿಕೊಳ್ಳಲು ಯತ್ನಿಸಿದರೂ ಮನಸ್ಸಿನಲ್ಲಿ ಅಶಾಂತಿ ಹೆಚ್ಚುತ್ತಲೇ ಇದೆ.
ಅಶಾಂತಿಗೆ ಕಾರಣ ಮಗನೂ ಹೌದು. ಮಗನಾದವನು ಅಪ್ಪನ ನಿರೀಕ್ಷೆಯನ್ನು ಹುಸಿ ಮಾಡಬಲ್ಲ ಎಂದು ಗುಂಡಪ್ಪನಿಂದ ಊಹಿಸಲೂ ಆಗಿರಲಿಲ್ಲ.
’ಈ ವೈದಿಕವೃತ್ತಿ ನಿನಗೆ ಬೇಡ’ ಎಂದು ಹೇಳಿ ಮಗನನ್ನು ಗುಂಡಪ್ಪ ಸ್ಕೂಲಿಗೆ ಅಟ್ಟಿದ್ದು. ರಾಜ ವಿದ್ಯಾಭ್ಯಾಸದಲ್ಲಿ ಅಪ್ಪನ ನಿರೀಕ್ಷೆಯಂತೆ ಪ್ರತಿವ? ಚೆನ್ನಾಗಿ ಓದುತ್ತ ಮುಂದೆ ಎಂ.ಎ. ಪದವಿ ಗಳಿಸಿದ್ದ. ರೆವಿನ್ಯೂ ಇಲಾಖೆಯಲ್ಲಿ ಒಂದು ಸೊಗಸಾದ ಕೆಲಸವೂ ಸಿಕ್ಕಾಗ ಇನ್ನು ಅವನಿಂದಾಗಿ ಊರಲ್ಲಿ ಗಣ್ಯವ್ಯಕ್ತಿಯಾಗುವ ಕನಸನ್ನು ಗುಂಡಪ್ಪ ಕಾಣುತ್ತಿದ್ದರೆ, ಕೆಲವೇ ವ?ಗಳಲ್ಲಿ ಅದೆಲ್ಲ ಭ್ರಮೆಯಾಗಿ ಹೋಗಿತ್ತು. ಬೇರೆಯವರಾಗಿದ್ದರೆ ಈ ಹದಿನಾರು ವ?ಗಳಲ್ಲಿ ಕ್ಷಲಕ್ಷ ಆಸ್ತಿ ಮಾಡಿರೋರು. ಆದರೆ ರಾಜ ಒಂದು ಪೈಸಾ ಸಹ ಲಂಚ ಮುಟ್ಟದೆ ಇಲಾಖೆಯಲ್ಲಿ ’ಕೆಲಸಕ್ಕೆ ಬಾರದ ಮನು?’ ಎಂಬ ಖ್ಯಾತಿ ಗಳಿಸಿದ. ’ಈಗಿನ ಕಾಲದಲ್ಲಿ ಪ್ರಾಮಾಣಿಕನಾಗಿದ್ದರೆ ಜನ ನಗತಾರೋ’ ಎಂದು ಗುಂಡಪ್ಪ ಮಗನೆದುರು ಹಲುಬಿದ್ದು ಪ್ರಯೋಜನಕ್ಕೆ ಬಂದಿಲ್ಲ.
ರಾಜ ಒಂಥರಾ ಮನು?. ಮಹತ್ತ್ವಾಕಾಂಕ್ಷೆಯೇ ಇಲ್ಲ ಅವನಿಗೆ.
ಇದರ ಬದಲು ಅವನು ಕೆಲವು ಗೆಳೆಯರೊಂದಿಗೆ ಹಳ್ಳಿಹಳ್ಳಿಗಳಿಗೆ, ಕೇರಿಕೇರಿಗಳಿಗೆ ಹೋಗುತ್ತಾನೆ. ಮಕ್ಕಳಿಗೆ ಪಾಠ ಹೇಳಿಕೊಡುತ್ತಾನೆ. ಮುಗ್ಧರ, ಅಮಾಯಕರ ಸಹಾಯಕ್ಕೆ ನಿಲ್ಲುತ್ತಾನೆ. ಇದರ ಕಾರಣ ಕಿಸೆಯಿಂದ ಹಣ ಖರ್ಚಾದರೂ ಲೆಕ್ಕಿಸದುದು ನೋಡಿ ಗುಂಡಪ್ಪನಿಗೆ ಗಾಬರಿ. ’ಬಿಡಿಗಾಸು ಸಂಪಾದನೆ ಇಲ್ಲದ ಮೇಲೆ ಯಾಕೆ ಬೇಕು ಈ ಸಮಾಜಸೇವೆ?’ ಎಂದು ಕೇಳಿದರೆ ’ಅದು ನನಗೆ ತೃಪ್ತಿ ಕೊಡುವ ಕೆಲಸ’ ಎನ್ನುತ್ತಾನೆ.
ತನ್ನ ಹಾಗೆ ಗಳಿಸುವ, ಕೂಡಿಡುವ ಮನೋಭಾವವೇ ಇಲ್ಲ. ಇದು ಗುಂಡಪ್ಪನ ಮುಗಿಯದ ಕೊರಗು.
* * * * *
ಹೃದಯದ ಕಾಯಿಲೆ ಅಮರಿಕೊಂಡಾಗಿನಿಂದ ಗುಂಡಪ್ಪನ ಅಸ್ವಸ್ಥತೆ ಸುಧಾರಿಸಿಯೇ ಇಲ್ಲ, ನಡುಕ, ಭೀತಿ ತಪ್ಪಿಲ್ಲ. ರಾತ್ರಿ ಮಲಗಿದವನು ಮರುದಿನ ಬೆಳಗ್ಗೆ ಏಳುತ್ತೇನೋ ಇಲ್ಲವೋ ಎಂಬ ಆತಂಕ. ಹಗಲು ಓಡಾಡುವಾಗ ಪಕ್ಕನೆ ಹೃದಯ ಸ್ತಬ್ಧವಾಗಿ ಕುಸಿದುಹೋದೆನಲ್ಲ ಎಂಬ ಭಯ. ಒಟ್ಟಿನಲ್ಲಿ ಜೀವಕ್ಕೆ ನಿಶ್ಚಿಂತೆ ಎಂಬುದೇ ಕಳೆದುಹೋಗಿದೆ. ಎದೆನೋವಿನ ಭಾಸವಾದರೂ ಸಾಕು, ಏದುಸಿರು ಬಂದರೂ ಸಾಕು, ಸಾವು ಎರಗಿಯೇ ಬಿಟ್ಟಿತೇನೋ ಎಂದು ಗುಂಡಪ್ಪ ಹೌಹಾರದ ದಿನವಿಲ್ಲ.
ಇದೆಲ್ಲದರ ಜತೆಗೆ ಈಗ ಮತ್ತೊಂದು ಚಿಂತೆಯೂ ಸೇರಿಕೊಂಡಿದೆ.
ರಾಜನಿಗೆ ಈಗಾಗಲೇ ನಲವತ್ತು ದಾಟಿದೆ. ಅವನ ಹೆಂಡತಿಯ ಆರೋಗ್ಯವೂ ಸುಮಾರು. ಎಲ್ಲ ಬಗೆಯ ಔ?ದೋಪಚಾರ, ವ್ರತನಿಯಮ ಮುಗಿದರೂ ಇನ್ನು ಮೇಲಾದರೂ ರಾಜನಿಗೆ ಮಕ್ಕಳಾದಾವು ಎಂಬ ಬಗ್ಗೆ ಗುಂಡಪ್ಪನಲ್ಲಿಯೇ ಭರವಸೆ ಅಳಿದು ಹೋಗಿದೆ.
ಅದೇ, ಗಿರಿಯ ಮಗ ಸುಧೀರನಿಗೆ ಇಬ್ಬರು ಗಂಡುಮಕ್ಕಳಂತೆ! ವಿಚಿತ್ರವೆಂದರೆ ಮಕ್ಕಳಾಗದ ಬಗ್ಗೆ ಮಗ, ಸೊಸೆಗೆ ಚಿಂತೆಯೇ ಇದ್ದ ಹಾಗಿಲ್ಲ. ಈ ವಿ?ಯದಲ್ಲಿ ಒಂದು ಬಗೆಯ ನಿರ್ವಿಕಾರತ್ವ ಸಾಧಿಸಿಬಿಟ್ಟ ಹಾಗಿದೆ ಇವರ ವರ್ತನೆ. ಆದರೆ ಅವರಿವರ ಮಕ್ಕಳನ್ನು ಎತ್ತಿ ಮುದ್ದಾಡುವುದು ನೋಡಿದರೆ ಮಕ್ಕಳೆಂದರೆ ಅಮಿತ ಪ್ರೀತಿ ಇರುವುದು ಗೊತ್ತಾಗದೇ ಇರದು. ಬೇಕಾದರೆ ಒಂದು ಮಗುವನ್ನು ’ದತ್ತು ಪಡೆದುಕೋ’ ಎಂದು ಗುಂಡಪ್ಪ ಒಂದೆರಡು ಸಲ ಶೇ?ನ ಕಡೆಯಿಂದ ಹೇಳಿಸಿದ್ದೂ ಉಪಯೋಗವಾಗಿಲ್ಲ. ರಾಜ ಹಗುರಾಗಿ ನಕ್ಕುಬಿಟ್ಟನಂತೆ.
ಒಂದು ವೇಳೆ ರಾಜ ದತ್ತುಮಗುವನ್ನು ತೆಗೆದುಕೊಳ್ಳದೆ ಹೋದರೆ ಮುಂದೆ ಏನಾಗಬಹುದು ಎಂದು ಗುಂಡಪ್ಪನಿಗೆ ಅನಿಸಿದ್ದೆ ತಡ, ಗಕ್ಕನೆ ಎದ್ದು ಕೂತ. ಭವಿ?ವನ್ನು ಕುರಿತು ಯಾರೂ ಭವಿ? ಹೇಳಬೇಕಾಗಿಲ್ಲ, ತನಗೇ ಎಲ್ಲ ಗೊತ್ತಾಗುತ್ತದೆ. ಆಗುವುದು ಇ?. ರಾಜನ ನಂತರ ತನ್ನ ಸಂತತಿ ಮುಗಿದುಹೋಗುತ್ತದೆ. ಗಿರಿಯ ಸಂತತಿ ಬೆಳೆಯತೊಡಗುತ್ತದೆ. ಹಾಗೆಯೇ ಇ?ಕಾಲ ಗಿರಿಯನ್ನು ವಂಚಿಸಿ ತಾವು ಅನುಭವಿಸುತ್ತಿದ್ದ ಪಿತ್ರಾರ್ಜಿತ ಆಸ್ತಿ ಸುನಾಯಾಸವಾಗಿ ಸುಧೀರನ ಮಕ್ಕಳಿಗೆ ದಕ್ಕಿ ಹೋಗುತ್ತದೆ. ಇ? ವ? ಪ್ರಾಮಾಣಿಕವಾಗಿ ದೇವರಸೇವೆ ಮಾಡಿಕೊಂಡು ಬಂದದ್ದಕ್ಕೆ ದೇವರು ತನಗೆ ದಯಪಾಲಿಸಿದ ವರ… ಈ ಪರಾಭವ! ಬಹುಶಃ ಈ ವೇದನೆಯಲ್ಲಿಯೇ ತಾನು ಕೊರಗಿ ಸಾಯಬೇಕೆಂದು ತನ್ನ ಹಣೆಯಲ್ಲಿ ಬರೆದಿದೆಯೋ ಏನೋ ಎಂದು ಗುಂಡಪ್ಪ ನಿಟ್ಟುಸಿರುಬಿಟ್ಟ.
* * * * *
ಹೊತ್ತುಹೊತ್ತಿಗೆ ಇಂಜಕ್ಷನ್ನು, ಗುಳಿಗೆ, ಇಸಿಜಿ ಇತ್ಯಾದಿ ಯಾವ ಉಪಚಾರವೂ ಕಡಮೆ ಆಗದ ಹಾಗೆ ರಾಜ ನೋಡಿಕೊಳ್ಳುತ್ತಿದ್ದಾನೆ. ಆದರೂ ಕಾಯಿಲೆ ಗುಣವಾಗುತ್ತದೆ ಎಂಬ ಭರವಸೆಯೇ ಬರುತ್ತಿಲ್ಲ. ಆಗಾಗ ನೋಡಲು ಬರುವ ಅವರಿವರು ಈಗಾಗಲೇ ಗುಂಡಪ್ಪನ ಕಥೆ ಮುಗಿಯಿತು ಎಂಬಂತೆ ವರ್ತಿಸಲು ಶುರು ಮಾಡಿದ್ದಾರೆ. ಔಪಚಾರಿಕ ಸಹಾನುಭೂತಿಯ ಮಾತು ಕೇಳಿಕೇಳಿ ಸ್ವತಃ ಗುಂಡಪ್ಪನೇ ಬೇಸತ್ತು ಹೋಗಿದ್ದಾನೆ. ಮೊನ್ನೆ ಬಂದ ದೂರದ ದಾಯಾದಿ ದಿಟ್ಟಪ್ಪ ತನ್ನ ಮನೆಯಲ್ಲಿ ತನ್ನೊಂದಿಗೆ ಪಂಕ್ತಿಯಲ್ಲಿ ಕೂತು ಪು?ಳವಾಗಿ ಊಟ ಮಾಡಿ ಬಾಯಿತುಂಬ ಎಲೆಅಡಿಕೆ ಹಾಕಿಕೊಂಡು ಹೋಗುವ ಮೊದಲು ’ಚಿಂತೆ ಮಾಡಬೇಡ. ಇದು ಹೀಗೆ ಅಂತೆ. ಬಂದದ್ದು ತಗೊಂಡೇ ಹೋಗುತ್ತದಂತೆ’ ಎಂದು ಬೆನ್ನು ತಟ್ಟಿದಾಗ ಗುಂಡಪ್ಪ ಅವಾಕ್ಕಾದ.
ಕಾಯಿಲೆ ಬಂದಿರುವುದು ತನಗೆ. ಆದರೆ ತನ್ನೊಂದಿಗೆ ಶಾಂತೂ ಸಹ ಕೊರಗಿ ಅರ್ಧಕರ್ಧ ಇಳಿದುಹೋಗಿದ್ದಾಳೆ. ಆವಳಿಗೆ ಅವಳ ಸೌಭಾಗ್ಯದ ಚಿಂತೆ ಸಹಜ.
’ಅಲ್ರೀ ಹತ್ತು ಲಕ್ಷ ಹೊಂದಿಸುವುದು ಹೇಗೆ?’
ಶಾಂತೂ ಪ್ರಶ್ನೆ ಎದುರಿಗೆ ಭೂತಾಕಾರವಾಗಿ ನಿಂತಿತ್ತು.
ತಾನಾದರೂ ಏನು ಹೇಳಬಹುದಿತ್ತು? ಇವಳ ಆತಂಕ ನನ್ನನ್ನು ಕಾಡದೆ ಇಲ್ಲ. ಒಂದುವೇಳೆ ಸರಿಯಾದ ಸಮಯಕ್ಕೆ ಹಣ ಸೇರಿಸಲು ಆಗದೇ ಹೋದರೆ… ಆಪರೇ?ನ್ ನಡೆಯದೆ ಹೋದರೆ, ಈ ಮೊದಲು ತಾನು ಇದ್ದೆ ಎಂಬುದಕ್ಕೆ ಸಾಕ್ಷಿಯಾಗಿ ರಾಜನೊಬ್ಬ ಇರುತ್ತಾನೆ ಅ?. ಓಹ್, ಯೋಚಿಸಿಯೇ ಗುಂಡಪ್ಪನ ಮೈ ನಡುಗಿತು.
’ರಾಜ ಏನು ಮಾಡುತ್ತಾನೋ ನೋಡಬೇಕು’
’ಇನ್ನೇನು ನೋಡೋದು’ ಶಾಂತು ನಿಟ್ಟುಸಿರು ಬಿಟ್ಟಳು. ಈಗಾಗಲೇ ಅವನ ಉಳಿತಾಯದ ಹಣವೆಲ್ಲ ಖರ್ಚಾಗಿದೆಯಂತೆ. ಅ?ಇ? ಸಾಲ ಸಿಕ್ಕರೂ ಈ ರಾಕ್ಷಸನಂತಹ ಕಾಯಿಲೆಗೆ ಅದೆಲ್ಲಿ ಸಾಕಾದೀತು?’
’ಹಾಗಾದರೆ ಸುಮ್ಮನೆ ಸತ್ತುಹೋಗಿಬಿಡು ಅಂತೀಯಾ?’ ಗುಂಡಪ್ಪ ಪಕ್ಕನೆ ಸಿಡುಕಿದ.
ಗಂಡನ ದುಡುಕು ಮಾತು ಅವಳ ಕಣ್ಣಲ್ಲಿ ನೀರು ತರಿಸದೇ ಇರಲಿಲ್ಲ. ’ಥೂ, ಬಿಡ್ತು ಅನ್ನಿ. ರಾಜ ಅಂಥ ಕುಹಕನೇನೂ ಅಲ್ಲ.
’ಮನೆಯಲ್ಲಿ ಬಂಗಾರ ಇದೆಯಲ್ವೇ’
’ಅದು ಸೊಸೆಗೆ ಸೇರಿದ್ದು.’
’ಯಾತಕ್ಕೆ ಬೇಕು ಅವ್ಳಿಗೆ? ಅವಳಿಗೇನು ಮಕ್ಕಳೇ, ಮರೀನೇ?’
’ಛೇ! ಎಷ್ಟು ನಿಷ್ಠುರವಾಗಿ ಮಾತಾಡ್ತೀರಿ ನೀವು.’
’ಹಾಗಾದರೆ ಇನ್ನು ಮಾಡಿರೋದು ಒಂದೇ ದಾರಿ. ಈ ಮನೇನ ಮಾರಿಬಿಡೋಣ.’
’ಹಾಂ!’
’ಹೌದು ಮತ್ತೆ. ಹಣ ಹೊಂದಿಸಲು ರಾಜನಿಗೆ ಕ? ಅಂತಿಯಲ್ಲ. ಮನೆ ಮಾರಿದರೆ ಅಷ್ಟು ಹಣ ಸಿಕ್ಕರೂ ಸಿಕ್ಕಬಹುದು.’
ಶಾಂತು ಸಂಕಟದಲ್ಲೂ ಗಂಡನ ಮುಖ ನೋಡಿ ಒಂಥರಾ ನಕ್ಕಳು. ಗುಂಡಪ್ಪನಿಂದ ಸಹಿಸಲಾಗಲಿಲ್ಲ.
’ಯಾಕೆ ನಗ್ತಿಯಾ? ನಾನೇನು ಹಾಸ್ಯ ಮಾಡಿಲ್ಲ.’
’ಅಲ್ಲ, ಈ ಮೊದಲು ಎಲ್ಲ ಮಗನಿಗೆ ಅನ್ನುತ್ತಿದ್ದ ನೀವು ಈಗ ಮನೆ ಮಾರುವುದಕ್ಕೆ ಹೊರಟಿದ್ದೀರಲ್ಲ! ಆಮೇಲೆ ರಾಜನಿಗೆ ಏನು ಉಳಿಯುವುದು? ಅದರ ಯೋಚನೆ ನಿಮಗಿಲ್ಲವಲ್ಲ ಎಂದು ನಗು ಬಂತು.’
’ನೋಡೆ. ಮೊದಲು ನಾನು ಉಳಕೋಬೇಕು. ಆಮೇಲೆ ಉಳಿದವರ ಚಿಂತೆ ಮಾಡುವ ಪೈಕಿ ನಾನು. ಹೊತ್ತಿನಲ್ಲಿ ಉಪಯೋಗಕ್ಕೆ ಬಾರದ ಆಸ್ತಿ ಇದ್ದರೇನು?, ಇಲ್ಲದಿದ್ದರೇನು?’
* * * * *
’ಇನ್ನು ರಾಜನಿಗೆ ಆಸ್ತಿ ಮಾಡುವ ವಿ?ಯ. ನಮ್ಮಪ್ಪ ಏನು ನನಗಾಗಿ ಆಸ್ತಿ ಮಾಡಿಟ್ಟನಾ? ಬಿಡು. ನನಗೂ ಆಸ್ತಿ ಮಾಡಲು ಆಗಲಿಲ್ಲ. ಆದರೆ ರಾಜನಿಗೆ ಆ ಯೋಗ್ಯತೆ ಇತ್ತಲ್ಲ. ರೆವಿನ್ಯೂ ಇಲಾಖೆಯಲ್ಲಿದ್ದು ಹದಿನೈದಿಪ್ಪತ್ತು ವ? ಸರ್ವಿಸಾದರೂ ಒಂದು ಮನೆ ಮಾಡಿದನೆ? ಒಂದು ಜಮೀನು ಕೊಂಡಿದ್ದಾನೆಯೆ? ಹಣ ಮಾಡಿದನೆ? ದೇವರೂ ಸಹ ಜಾಣ. ಅದಕ್ಕೆ ಇವನಿಗೆ ಮಕ್ಕಳನ್ನು ಕೊಡಲಿಲ್ಲ. ಆಮೇಲೆ ಅವು ದೊಡ್ಡವಾದ ಮೇಲೆ ಇವನನ್ನು ಬಯ್ಯುವ ಸಂಭವ ಇರುತ್ತದಲ್ಲ. ಅದಕ್ಕೆ.’
’ಏನು ಮಾತಾಡ್ತಿದೀರಿ ಅನ್ನೋ ಪ್ರಜ್ಞೆ ಇದೆಯೆ ನಿಮಗೆ?’
ಗುಂಡಪ್ಪನ ಮಾತಿನ್ನೂ ಮುಗಿದಿರಲಿಲ್ಲ. ಹೆಂಡತಿಯ ಮಾತು ಕೇಳಿಸದವನಂತೆ ’ಇವನ ಸಮಾಜಸೇವೆಗಿ? ಬೆಂಕಿ ಹಾಕ…’ ಎಂದು ಅದೆಲ್ಲಿತ್ತೋ ಆಕ್ರೋಶ, ಎಲ್ಲವನ್ನೂ ಹೆಂಡತಿಯ ಮುಂದೆ ವದರಿಬಿಟ್ಟ. ಆಮೇಲೇನಾದರೂ ಸಮಾಧಾನವಾಯಿತೇ?… ಎದೆಯಲ್ಲಿ ಒಂದೇಸಮ ಉರಿ, ಬಾಯಾರಿತು. ಕುಡಿಯಲೆಂದು ಕೈಚಾಚಿದರೆ ಹತ್ತಿರದಲ್ಲಿ ಒಂದೂ ಲೋಟ ಸಿಗಲಿಲ್ಲ.
* * * * *
ಬೆಂಗಳೂರಿನಿಂದ ಗಿರಿ ತನ್ನ ಮಗ ಸುಧೀರನೊಂದಿಗೆ ಕಾರಿನಲ್ಲಿ ಬಂದಿಳಿದ. ಆ ಕಾರು, ಆ ಸೂಟು, ಆ ಬಣ್ಣ, ಆ ಶ್ರೀಮಂತಿಕೆ ನೋಡಿ ಗುಂಡಪ್ಪ ದಂಗು ಬಡಿದದ್ದು ನಿಜ. ಒಂದು ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೆ ಕಾಯುತ್ತಿದ್ದ, ನಾಲ್ಕಾಣೆ ದಕ್ಷಿಣೆಗಾಗಿ ಕಾತರಿಸುತ್ತಿದ್ದ ಬ್ರಾಹ್ಮಣ ಈಗ ಕೋಟಿಗಳ ಒಡೆಯ ಎಂದು ಊಹಿಸಲೂ ಕಠಿಣವಾಗುತ್ತಿದೆ. ಅದೃ? ಒಲಿಯುವುದೆಂದರೆ ಬಹುಶಃ ಇದೇ ಏನೋ. ಇಂಥ ಅದೃಷ್ಟ ಹೊಂದಲು ಗಿರಿ ಯಾವ ದೇವರನ್ನು ಪ್ರಾರ್ಥಿಸಿದ್ದ?
ಗಿರಿ ಬಂದವನೇ ’ಅಣ್ಣಾ’ ಎಂದು ತಬ್ಬಿ ಬಿಕ್ಕಳಿಸಿದ. ’ಹೇಗಿದ್ದವನು ಹೇಗಾಗಿಬಿಟ್ಟಿದ್ದೀಯ’ ಎಂದು ಹಲುಬಿದ. ಗುಂಡಪ್ಪನಿಗೆ ಅವನ ದುಃಖದ ಕಡೆ ಗಮನ ಎಲ್ಲಿ? ಇವನದು ಬರಿ ಮೊಸಳೆ ಕಣ್ಣೀರೋ ಅಥವಾ ಹಣದ ವ್ಯವಸ್ಥೆ ಏನಾದರೂ ಮಾಡುತ್ತಾನೋ? ಒಂದುವೇಳೆ ಅವನಾಗಿ ಬಾಯಿ ಬಿಡದಿದ್ದರೆ ಬಿಡಿಸುವುದು ಹೇಗೆ? ಎಂಬ ಲೆಕ್ಕಾಚಾರದಲ್ಲಿದ್ದರೆ, ಗಿರಿ ತಟ್ಟನೆ ಹೇಳಿಬಿಟ್ಟ. ’ಅಣ್ಣ ನೀನೇನೂ ಯೋಚನೆ ಮಾಡಬೇಡ. ಹೃದಯದ ಕಾಯಿಲೆ ಎನ್ನುವುದು ಈಗೇನೂ ದೊಡ್ಡ ಕಾಯಿಲೆ ಅಲ್ಲ. ನಿನಗೆ ಬೇಗ ಗುಣವಾಗುತ್ತದೆ. ನೀನು ನನ್ನೊಂದಿಗೆ ಬೆಂಗಳೂರಿಗೆ ಬಾ. ನಮ್ಮ ಮನೆಯಲ್ಲಿ ಇರು. ನಿನ್ನ ಆಪರೇ?ನ್ನಿನ ಖರ್ಚಿನ ವಿಚಾರ ಮರೆತುಬಿಡು.’
ಅಬ್ಬಾ! ಈಗ ಶರ್ಮನಿಗೆ ಸಮಾಧಾನವಾಗಿತ್ತು. ಅಂತೂ ಹತ್ತು ಲಕ್ಷ ಕುರಿತು ತಾನೇನು ಇನ್ನು ಚಿಂತೆ ಮಾಡಬೇಕಾಗಿಲ್ಲ. ಇದಕ್ಕಿಂತ ಹೆಚ್ಚಾಗಿ ನೀನೇನೂ ಸಾಯುವುದಿಲ್ಲ ಎಂದು ಗಿರಿ ಸೂಚ್ಯವಾಗಿ ಹೇಳಿದ್ದು – ಹೌದು ಮತ್ತೆ. ಹತ್ತು ಲಕ್ಷ ಖರ್ಚು ಮಾಡಿದ ಮೇಲೆ ಸತ್ತವರೂ ಬದುಕಬೇಕು ಎಂಬುದು ಗುಂಡಪ್ಪನ ತೀರ್ಮಾನ. ಇ?ಕ್ಕೆ ಸುಮ್ಮನಾಗಲಿಲ್ಲ ಅವನು.
ಇನ್ನು ತಾನೇನು ಗಿರಿಯ ಹಂಗಿನಲ್ಲಿ ಇರಬೇಕಾಗಿಲ್ಲ ಎಂಬಂತೆ ’ನೀನು ಬಂದೆಯಲ್ಲ, ನನಗಿನ್ನು ನೆಮ್ಮದಿ. ಸರಿಯಾದ ಸಮಯಕ್ಕೆ ಬಂದಿದೀಯ. ಅಣ್ಣ-ತಮ್ಮನ ಅನುಬಂಧ ಅನ್ನುವುದು ಇದಕ್ಕೇನೆ. ನೋಡು, ನೀನು ಸಣ್ಣವನಿದ್ದಾಗಿನಿಂದ ನಾನು ನಿನ್ನ ಜೋಪಾನ ಮಾಡಿದ್ದೇನೆ. ನಾನು ಹೇಗೆ ನಿರ್ವಂಚನೆಯಿಂದ ನನ್ನ ಕರ್ತವ್ಯ ಮಾಡಿದ್ದೆನೋ, ನೀನೂ ಸಹ ನಿನ್ನ ಕರ್ತವ್ಯವನ್ನು ಮಾಡಲು ಹಿಂಜರಿಯಲಾರೆ ಎಂದು ನನಗೆ ಗೊತ್ತು.’ ಎಂದಂದು ತಮ್ಮನ್ನು ಋಣಭಾರಕ್ಕೆ ಕೆಡವಿದ ಆನಂದ ಅನುಭವಿಸಿದ. ಆದರೆ ರಾತ್ರಿ ಮಲಗಲು ಹೋದಾಗ ನಿಶ್ಚಿಂತೆಯಿಂದ ನಿದ್ದೆ ಮಾಡಲು ಶಾಂತು ಬಿಡಬೇಕಲ್ಲ.
’ಏನ್ರಿ, ಬೆಂಗಳೂರಿಗೆ ಹೋಗಿ ತಮ್ಮನ ಮನೆಯಲ್ಲಿ ಇರುತ್ತೀರಾ?’
’ಹೂಂ ಮತ್ತೆ. ಅವನೇ ಕರಿತಿದ್ದಾನಲ್ಲ’
’ಒಂದು ಕಾಲಕ್ಕೆ ಉಪಾಯವಾಗಿ ಮನೆಯಿಂದ ತೊಲಗಿಸಿಕೊಂಡಿದ್ದೀರಿ. ಈಗ ಅವನ ಮನೆಗೇ ಹೋಗಿ ಇರುವ ಹೊತ್ತು ಬಂತಲ್ಲ. ಇದಕ್ಕಿಂತ ಶೋಚನೀಯ ಪರಿಸ್ಥಿತಿ ಬೇರೆ ಇದೆಯಾ?’
ಅವಳ ವ್ಯಂಗ್ಯ ಗುಂಡಪ್ಪನನ್ನು ಚುಚ್ಚದೇ ಇರಲಿಲ್ಲ. ಆದರೆ ತಬ್ಬಿಬ್ಬಾಗುವ ಸಮಯ ಅದಾಗಿರಲಿಲ್ಲ. ತನ್ನ ಮಾತಿಗೆ ಸಮರ್ಥನೆಯಾಗಿ ಗುಂಡಪ್ಪ ಸಹ ತುಸು ವ್ಯಂಗ್ಯವಾಗಿಯೇ ಉತ್ತರಿಸಿದ ’ಹೌದೇ. ಮೂವತ್ತು ವ?ಗಳ ಹಿಂದೆ ನಾನು ಯಥೋಚಿತವಾಗಿಯೇ ನಡೆದುಕೊಂಡದ್ದರಿಂದಲೇ ಅವತ್ತು ಗಿರಿಗೆ ಜವಾಬ್ದಾರಿ ಅರ್ಥವಾದದ್ದು. ಈವತ್ತು ಅವನು ಹೀಗೆ ಸುಭದ್ರಸ್ಥಿತಿಯಲ್ಲಿ ಇರುವುದಕ್ಕೆ ನಾನೇ ಕಾರಣ. ಇನ್ನು ಸರಿಯಾಗಿ ಹೇಳಬೇಕೆಂದರೆ ಅವನನ್ನು ಊರುಬಿಡಿಸಿದ್ದು ಒಂದು ರೀತಿಯಲ್ಲಿ ಅವನಿಗೆ ನಾನು ಮಾಡಿದ ಉಪಕಾರ, ತಿಳಿದುಕೋ.’
’ನೀವು ಹೀಗೆ ಏನೇನೋ ಕಲ್ಪಿಸಿಕೊಂಡು ಆನಂದದಿಂದ ಉಬ್ಬುವ ಸಮಯ ಇದಲ್ಲ.’
ಹೆಂಡತಿಯ ಮಾತು ಕೇಳಿ ಗುಂಡಪ್ಪ ವಿಹ್ವಲಗೊಂಡ. ತನ್ನ ಮಾತಿಗೆ ಉತ್ತರ ಬರುವುದಿಲ್ಲ ಎಂದು ತಾನು ನಿರೀಕ್ಷೆ ಮಾಡಿದ್ದರೆ ಇವಳು ಅದೇನೋ ಹೊಸದಕ್ಕೆ ಪೀಠಿಕೆ ಹಾಕುತ್ತಿದ್ದಾಳಲ್ಲ.
’ಏನೇ ಅದು ಸರಿಯಾಗಿ ಹೇಳು’ – ಗುಂಡಪ್ಪ ಹೆಂಡತಿಯನ್ನು ಗದರಿದ.
’ಈವತ್ತು ಮಧ್ಯಾಹ್ನ ಊಟವಾದ ಮೇಲೆ ಸುಧಿ ರಾಜನ ಬಳಿ ಕೂತು ಎಲ್ಲ ವಿಚಾರಿಸಿದನಂತೆ. ಹಣದ ವಿಚಾರವೂ ಪ್ರಸ್ತಾಪಕ್ಕೆ ಬಂತು. ನಮ್ಮ ಅಸಹಾಯಕತೆ ಗೊತ್ತಾಗಿ ಸುಧಿ ’ಒಂದುವೇಳೆ ನೀವು ಮನೇನ ಮಾರುವುದಾದರೆ ನಾನೇ ಕೊಂಡುಕೊಳ್ಳುತ್ತೇನೆ’ ಎಂದನಂತೆ.
’ಹಾಂ, ಹಾಗಂದನಾ?’
’ಹುಂ, ರಾಜನೇ ನನ್ನ ಬಳಿ ಇದನ್ನೆಲ್ಲ ಆಮೇಲೆ ಹೇಳಿದ. ನಾನು ದುಗುಡದಿಂದ ’ಮನೆ ಮಾರಿದ ಮೇಲೆ ನೀನೆಲ್ಲಿ ಇರ್ತಿಯೋ’ ಎಂದು ಕೇಳಿದ್ದಕ್ಕೆ ಅವನು ’ಇ? ದೊಡ್ಡ ಊರಲ್ಲಿ ನನಗೊಂದು ಬಾಡಿಗೆ ಮನೆ ಸಿಕ್ಕುವುದು ಕ?ವೇ? ಆಸ್ತಿ ಮುಖ್ಯವಲ್ಲ. ಮೊದಲು ಅಪ್ಪನನ್ನು ಉಳಿಸಿಕೊಳ್ಳುವುದು ಮುಖ್ಯ’ ಎಂದ.
ಗುಂಡಪ್ಪನ ಮನಸ್ಸು ದುಃಖದಿಂದ ತಪ್ತವಾಗಿ ಹೋಯಿತು. ಮತ್ತೆ ಮಾತನಾಡುವ ಮನಸ್ಸಾಗಲಿಲ್ಲ. ತಲೆತಗ್ಗಿಸಿದವನಿಗೆ ಗಾಢವಾದ ಯೋಚನೆ ಮುತ್ತಿಬಂತು. ಸುಧೀರ ಮನೆಯ ಮೆಟ್ಟಿಲು ತುಳಿದಾಗಲೇ ಇವನು ಗಿರಿಯ ಹಾಗಲ್ಲ ಎನ್ನಿಸಿತ್ತಲ್ಲ. ತನಗೆ ನಮಸ್ಕಾರ ಮಾಡುವಾಗಲೂ ಅದೆಂಥ ಕಾಟಾಚಾರ! ಈಗ ಸುಧೀರನ ಮನೋಭಾವಕ್ಕೆ ಇವಳು ಕನ್ನಡಿ ಹಿಡಿದ ಮೇಲೆ ಇದರಲ್ಲಿ ಅವನ ತಪ್ಪೇನೂ ಇಲ್ಲ ಎಂದು ಸಮಾಧಾನ ಮಾಡಿಕೊಳ್ಳದೆ ಬೇರೆ ವಿಧಿ ಇರಲಿಲ್ಲ. ಹೌದು ಮತ್ತೆ. ಮೂವತ್ತು ವ?ಗಳಿಂದ ನೋಡದ, ವಿಚಾರಿಸದ ದೊಡ್ಡಪ್ಪನ ಬಗ್ಗೆ ಅವನಿಗೆ ಯಾವ ಆಸ್ಥೆ ಇರಲು ಸಾಧ್ಯ? ಬಹುಶಃ ದೊಡ್ಡಪ್ಪ ಅಂದರೆ ಅವನ ಹೋಟೆಲ್ಲಿಗೆ ಬರುವ ಸಾವಿರಾರು ಗಿರಾಕಿಗಳಲ್ಲಿ ಒಬ್ಬ ಅಷ್ಟೆ.
’ರಾಜ ತಕ್ಷಣ ಒಪ್ಪಿಬಿಡಲಿಲ್ಲ.’ ಶಾಂತುಳ ಮಾತು ಮುಂದುವರಿಯಿತು. ’ಯಾವುದಕ್ಕೂ ಅಪ್ಪನ್ನ ಒಂದುಮಾತು ಕೇಳ್ತೀನಿ’ ಎಂದನಂತೆ. ಅದಕ್ಕೆ ಸುಧಿ ಶಾಂತವಾಗಿ ’ಆಗಲಿ, ನನಗೇನೂ ಇದು ಬೇಕೂಂತ ಏನಿಲ್ಲ. ನಾನು ಕೊಳ್ಳಬೇಕು ಎನ್ನುವ ಉದ್ದೇಶ ಇ?. ಪಿತ್ರಾರ್ಜಿತ ಆಸ್ತಿ ನೋಡು. ಅವರಿವರ ಪಾಲಾಗುವುದಕ್ಕಿಂತ ನಮ್ಮ ಆಸ್ತಿ ನಮ್ಮ ಹತ್ತಿರವೇ ಉಳಿಯುತ್ತದೆ ಎಂದು. ನನಗೇನೂ ಇದು ಬೇಕು ಎಂದೇನಿಲ್ಲ. ಹೇಗೂ ದೊಡ್ಡಪ್ಪನ ಆಪರೇ?ನ್ನಿಗೆ ನಿಮಗೂ ಹಣ ಬೇಕೆಬೇಕಲ್ಲ. ಅ?ಂದನ್ನು ನೀನಾದ್ರೂ ಎಲ್ಲಿಂದ ತರುತ್ತಿಯಾ?’ ಎಂದನಂತೆ.
ತಾಳಿಕೊಳ್ಳುವುದಕ್ಕಾಗಲಿಲ್ಲ. ಸಾಕು ಎನ್ನುವಂತೆ ಗುಂಡಪ್ಪ ಕೈಎತ್ತಿದ. ಅಬ್ಬ, ಇ? ಚಿಕ್ಕ ವಯಸ್ಸಿಗೆ ಸುಧೀರ ಅದೆ? ವ್ಯವಹಾರಸ್ಥನಾಗಿದ್ದಾನೆ ಎಂಬ ಬೆರಗು. ಮಾತಿನಲ್ಲಿ ಸಹ ಎಂಥ ನಯನಾಜೂಕುತನ. ಬೆಣ್ಣೆಯಲ್ಲಿ ಕೂದಲನ್ನು ಎಳೆದಂತಹ ನಿಶ್ಯಬ್ದ ಸನ್ನಾಹ. ಇಲ್ಲಿಂದ ಬೆಂಗಳೂರಿಗೆ ಹೋಗುವಾಗ ಸುಧೀರನಿಗೆ ಒಂಬತ್ತೋ ಹತ್ತೋ ವ?ವಿರಬೇಕು. ಆಗ ಅವನಿಗೆ ಎಲ್ಲ ತಿಳಿಯುತ್ತಿತ್ತೆ ಎಂದೇ ಈಗ ತರ್ಕಿಸಬೇಕಾಗಿದೆ. ಹಾಗಾಗಿ ಇದು ಅವನಲ್ಲಿ ಅಂತರ್ಗತವಾದ ಪ್ರತಿಕಾರದ ಮನೋಭಾವವೂ ಇದ್ದೀತು. ನಮ್ಮಪ್ಪನಿಗೆ ಮೂವತ್ತು ವ?ದ ಹಿಂದೆ ಮಾಡಿದ್ದನ್ನು ನೆನೆಸಿಕೊಳ್ಳಿ ಎಂದೇನೂ ಅವನು ಬಾಯಿಬಿಟ್ಟು ಹೇಳುತ್ತಿಲ್ಲ, ಮಾಡಿತೋರಿಸಲು ಹೊರಟಿದ್ದಾನೆ.
’ಎಂಥ ವಿಚಿತ್ರ ಅಲ್ವೆ!’ ಶಾಂತು ಮತ್ತೆ ಹೇಳಿದಳು. ’ನಿಮ್ಮ ಗುಣ, ಸ್ವಭಾವ ನಿಮ್ಮ ಮಗನ ರಕ್ತದಲ್ಲಿ ಇಲ್ಲವೇ ಇಲ್ಲ. ಅದೇ ಸುಧೀನ್ನ ನೋಡಿ. ನಿಮ್ಮ ಹಾಗೆ ಅವನಿಗೂ ಎಲ್ಲವನ್ನೂ ಕಬಳಿಸುವ ಹಪಾಪಿ ಗುಣ ಬಂದುಬಿಟ್ಟಿದೆ. ಈಗೇನು ಮಾಡುತ್ತೀರಿ?’
ಎಂಥ ಸಂದಿಗ್ಧ! ಗುಂಡಪ್ಪ ಒಳಗೊಳಗೆ ಮಿಡುಕತೊಡಗಿದ. ಗಿರಿ ಏನೇ ಹೇಳಲಿ, ಈಗ ಮನೆಯ ಯಜಮಾನ ಸುಧಿ ಎನ್ನುವುದು ಅಂಗೈ ಹುಣ್ಣಿನ? ಸ್ಪ?. ತನ್ನ ಕಾಯಿಲೆ ಗುಣ ಆಗಬೇಕೆಂದರೆ ಈಗ ಮನೆ ಮಾರಿದ ತನ್ನ ಹಣವನ್ನೇ ಖರ್ಚು ಮಾಡಬೇಕು. ಆಮೇಲೆ ತಾನು ಸಾಯದೆ ಬದುಕಲೂ ಬಹುದು. ಆದರೆ ನಂತರದ ಬದುಕು?
’ನೋಡಿ ಆವತ್ತು ಮೂವತ್ತು ವ?ಗಳ ಹಿಂದೆ ಗಿರಿಗೆ ಆಸ್ತಿಯಲ್ಲಿ ಅರ್ಧಪಾಲು ನ್ಯಾಯವಾಗಿ ಕೊಟ್ಟಿದ್ದರೆ ಈವತ್ತು ಇಂಥ ದುರ್ಗತಿ ಎದುರಾಗುತ್ತಿರಲಿಲ್ಲ. ಸುಧೀರನೂ ನಮ್ಮ ರಾಜನ ಹಾಗೆ ಅಂತಃಕರುಣಿಯಾಗಿರುತ್ತಿದ್ದ. ಈಗಲಾದರೂ ಪಶ್ಚಾತ್ತಾಪ ಆಗಿದೆಯಾ ನಿಮಗೆ?’
ಅರೆ, ಒಂದೇ ಮಾತಿನಲ್ಲಿ ಈ ಶಾಂತು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾಳಲ್ಲ ಎಂದು ಗುಂಡಪ್ಪ ಬೆಚ್ಚಿಬಿದ್ದು ಆಮೇಲೆ ಸುಧಾರಿಸಿಕೊಂಡು ಹೇಳಿದ. “ಆ ಹೊತ್ತಿನಲ್ಲಿ ಯಾವುದು ಸರಿ ಎನಿಸಿತೋ ಅದನ್ನು ನಾನು ಮಾಡಿದ್ದೀನಿ. ಈಗಲೂ ಮನೆ ಮಾರುವುದು ಸರಿ ಅನ್ನಿಸಿದ್ದರಿಂದಲೆ. ಪಶ್ಚಾತ್ತಾಪ ಪಡಲಿಕ್ಕೆ ನಾನೇನು ಮಾಡಿದ್ದೀನಿ?’
’ಓಹ್!’ ಶಾಂತು ನಿಟ್ಟುಸಿರು ಬಿಟ್ಟಳು. ’ನಿಮ್ಮದೆಂತಹ ಕಠೋರ ಮನಸ್ಥಿತಿ. ಇ? ಮಾಡಿಯೂ ನಿಮ್ಮನ್ನು ಯಾವ ಪಾಪಪ್ರಜ್ಞೆಯೂ ಕಾಡುವುದಿಲ್ಲವಲ್ಲ. ಪಶ್ಚಾತ್ತಾಪವಂತೂ ಮೊದಲೇ ಇಲ್ಲ. ಸಾಯುವ ವೇಳೆಯಲ್ಲಾದರೂ ಮನು?ನಿಗೆ ಅದುವರೆಗಿನ ಜೀವನದಲ್ಲಿ ತಾನು ಮಾಡಿದ ತಪ್ಪುಗಳಿಗಾಗಿ, ಅಪರಾಧಗಳಿಗಾಗಿ ಪಶ್ಚಾತ್ತಾಪವಾಗದಿದ್ದರೆ ಅವನು ಮನು?ನೇ ಅಲ್ಲ. ಪಶುಸಮಾನ ಅಂತ…’ ಇನ್ನೂ ಏನೇನು ಆರೋಪಿಸಲು ಹವಣಿಸಿದ್ದಳೋ, ಗುಂಡಪ್ಪನಿಗೆ ತಡೆಯುವುದಾಗದೆ ’ಮುಚ್ಚೇಬಾಯಿ’ ಎಂದು ಅಬ್ಬರಿಸಿದ. ’ಈಗ ನಾನೇನೂ ಸಾಯುತ್ತಿಲ್ಲ. ಸಾಯುವಂತಹದು ನನಗೇನೂ ಆಗಿಲ್ಲ. ಹುಷಾರಾಗಿ ಬರುತ್ತೀನಿ. ಆಗ ಬದುಕಲು ಏನು ಮಾಡಿದ್ದೀನೋ ಈಗ ಬದುಕಲು ಅದನ್ನೇ ಮಾಡುತ್ತೀದ್ದೀನಿ.”
’ಹೌದು…’ ತನ್ನ? ಗಡುಸಿನಿಂದ ಶಾಂತು ಪ್ರತಿಭಟಿಸಿಯಾಳೆಂದು ಗುಂಡಪ್ಪ ನಿರೀಕ್ಷಿಸಿರಲಿಲ್ಲ. ಅವನು ನೋಡುತ್ತಿದ್ದಂತೆ ಅವಳ ಮಾತು ಮುಂದುವರಿಯಿತು. “ನೀವು ಮಹಾ ಸ್ವಾರ್ಥಿ. ಹೌದು, ನೀವು ಬದುಕುವುದು ಕೇವಲ ನಿಮಗಾಗಿ, ನಿಮ್ಮ ಸ್ವಾರ್ಥಕ್ಕಾಗಿ. ನಿಮಗೆ ಹೆಂಡತಿಯಾಗಲಿ, ಮಗನಾಗಲೀ ಮುಖ್ಯವಾಗುವುದೇ ಇಲ್ಲ. ಯಾರು ಹಾಳಾದರೂ ನೀವು ಚಿಂತೆ ಮಾಡುವವರಲ್ಲ…”
ಗುಂಡಪ್ಪನಿಗೆ ಇನ್ನು ಭರಿಸುವುದಾಗಲಿಲ್ಲ. ಉತ್ತರಿಸಲಾಗದ ಹೊತ್ತಿನಲ್ಲಿ ಸಿಟ್ಟು ವಿಜೃಂಭಿಸಿತು. ಸೊಕ್ಕಿನ ಮಾತಾಡುವ ಹೆಂಡತಿಯನ್ನು ಶಿಕ್ಷಿಸಲು ಹವಣಿಸಿ ಕೈ ಎತ್ತಿದ. ಅ?. ಫಕ್ಕನೆ ತಲೆ ತಿರುಗಿದಂತಾಯಿತು. ಕಣ್ಣ ಕೆಳಗೆ ಕತ್ತಲೆ ಕವಿಯಿತು. ಮೇಲುಸಿರು ಮೇಲೆ ಕೆಳಗುಸಿರು ಕೆಳಗೆ ಆಗಿ ಕುಸಿದವನು ಗುಟುಕು ಉಸಿರಿಗಾಗಿ ಹಾಹಾಕರಿಸತೊಡಗಿತು.