{ಫೆಬ್ರುವರಿ ೨೬ಕ್ಕೆ ಸಾವರ್ಕರ್ (೧೮೮೩ – ೧೯೬೬) ನಿಧನರಾಗಿ ಅರವತ್ತು ವರ್ಷ. ಈ ನಿಮಿತ್ತ ಬರೆದ ಕವನ.} ¬ ವೀರ ವಿನಾಯಕ, ಭಾರತ ನಾಯಕ, ವಿಘ್ನ ವಿಮೋಚಕ – ನಿನಗೆ ನಮೋ | ಕ್ರಾಂತಿಯ ಕಿಚ್ಚನು ಬೆಳಗಿದ ಧೀರನೇ, ಅಪ್ರಿಯ ಸತ್ಯವ ನುಡಿದ ಸುಪುತ್ರನೇ – ನಿನಗೆ ನಮೋ || ಪಾರತಂತ್ರ್ಯಕೆ ಸಿಡಿದು ಸ್ವಾತಂತ್ರ್ಯಕೆ ಮಿಡಿದವನು | ದೂರ ತೀರದಲಿದ್ದೂ ಕ್ಷಾತ್ರದಲಿ ಧುಮುಗುಟ್ಟಿದವನು || ಶತ್ರು ಪಾಳೆಯಕೆ ಸಿಲುಕಿ, ಈಸಿ ಜಯಿಸಲು ನೋಡಿದವನು | ಕುಟಿಲರಾಟಕ್ಕೆ ಸಿಲುಕಿ […]




