
ಹಿಂದೊಂದು ಕಾಲವಿತ್ತು, ಜನರು ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎನ್ನುವ ತತ್ತ್ವವನ್ನು ನಂಬಿದ್ದರು, ಪಾಲಿಸುತ್ತಿದ್ದರು. ಇದೀಗ ಎಲ್ಲವೂ ಶರವೇಗ ಪಡೆದುಕೊಂಡು ಬದಲಾಗಿದೆ. ಈವತ್ತೇನಿದ್ದರೂ ‘ಗಂಡಾಗುಂಡಿ ಮಾಡಿಯಾದರೂ ಸರಿಯೇ, ಗಡಿಗೆ ತುಪ್ಪ ಕುಡಿಯಬೇಕು’ ಎನ್ನುವ ತತ್ತ್ವದ ಬೆನ್ನುಬಿದ್ದಿದ್ದಾರೆ. ಜಗತ್ತಿನ ಬಹುಪಾಲು ಜನರು ಹಣದ ಕೊರತೆಯಿಂದ ಬಳಲುವುದು ಸಾಮಾನ್ಯ ವಿಷಯವಾಗಿದೆ. ಹತ್ತು ಅಥವಾ ಹದಿನೈದು ಸಾವಿರ ರೂಪಾಯಿ ಸಂಬಳ ಪಡೆಯುವವನಿಂದ ಹಿಡಿದು ಲಕ್ಷಾಂತರ ರೂ.ಗಳ ಮಾಸಿಕ ಸಂಬಳ ಪಡೆಯುವ ವ್ಯಕ್ತಿಯದೂ ಅದೇ ಗೋಳು. ಇಂತಹ ಸ್ಥಿತಿ ಏಕೆ ಬಂತು? – […]