
ಭೂಮಿ ಸ್ಫುರದ್ರೂಪಿ, ಸೌಂದರ್ಯದ ಖನಿ, ಆಕೆಯೊಂದಿಗೆ ನಿಂತಾಗ ಒಂಟಿತನವೆಂಬುದು ಬಾಧಿಸಲು ಸಾಧ್ಯವೇ ಇಲ್ಲ. ತರಹೇವಾರಿ ರೂಪದೊಂದಿಗೆ ಮನಸೆಳೆಯುವ ಭೂತಾಯ ಒಡಲು ಸಹ ಸಮೃದ್ಧ. ಮಾತೃತ್ವವೆಂಬುದೇ ಹಾಗೆ. ಅದು ಅತಿ ಆಕರ್ಷಣೀಯ. ಅದ್ಭುತ ಸೌಂದರ್ಯಗಳ ಸಂಗ್ರಹಿತ ರೂಪ. ತಾಯ ಆಂತರ್ಯದ ಸೌಂದರ್ಯದ ಮುಂದೆ ಆಕೆಯ ಬಾಹ್ಯ ಸ್ವರೂಪಗಳೆಲ್ಲವೂ ಗೌಣವಾಗಿಬಿಡುತ್ತದೆ. ತಾಯಿ ಎಂತಿದ್ದರೂ ಸುಂದರಿಯೇ. ಆ ಸೌಂದರ್ಯವೆಂಬುದೊಂದು ಅನುಭಾವ. ಮೊನ್ನೆ ಮೊನ್ನೆ ಮೇ ೧೨ರ ಎರಡನೇ ಭಾನುವಾರ, ವಿಶ್ವ ಅಮ್ಮಂದಿರ ದಿನ ಬಂದು ಹೋಗಿದೆ. ಇದೀಗ ಜೂನ್ ೫ಕ್ಕೆ ವಿಶ್ವ […]