ಎಂಥ ಸಂದಿಗ್ಧ! ಗುಂಡಪ್ಪ ಒಳಗೊಳಗೆ ಮಿಡುಕತೊಡಗಿದ. ಗಿರಿ ಏನೇ ಹೇಳಲಿ, ಈಗ ಮನೆಯ ಯಜಮಾನ ಸುಧಿ ಎನ್ನುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ’ನಿಮಗೆ ಹೃದಯವೇ ಇಲ್ಲ’ ಎಂದು ಹೆಂಡತಿಯಿಂದ ಹಂಗಿಸಿಕೊಂಡವನಿಗೆ ಈ ಹಾಳು ಹೃದಯಕಾಯಿಲೆ ಎಲ್ಲಿಂದ ಗಂಟು ಬಿತ್ತೋ? ಎಂಬ ಕಳವಳ ಕಳೆದ ಎರಡು ದಿನಗಳಿಂದ ಗುಂಡಪ್ಪನಿಗೆ ತಪ್ಪಿಯೇ ಇಲ್ಲ. ಛೇ! ಇಷ್ಟು ದಿನ ಎಷ್ಟು ಹಾಯಾಗಿದ್ದೆ. ಎಪ್ಪತು ವರ್ಷಗಳಾದರೂ ಕಾಯಿಲೆ ಕಸಾಲೆ ಇಲ್ಲ. ಒಂದುದಿನವೂ ಜ್ವರ ಎಂದು ಮಲಗಿದ ನೆನಪಿಲ್ಲ. ನೋಡಿದವರು ’ಬೇಕಾದ್ದು ತಿಂತೀರಿ, ಕುಡಿತೀರಿ. […]
ಭವ
Month : October-2017 Episode : Author : ರಾಮಕೃಷ್ಣ ಭಾವೆ