ವಿತಸ್ತಾಕ್ಕೆ ಹಗಲಿಡೀ ಯಾತ್ರಿಕರನ್ನು ಕರೆತಂದು ಅವರಿಗೆ ಅಲ್ಲಿಯ ದೃಶ್ಯವನ್ನು ತೋರಿಸುವ ಮಾರ್ಗದರ್ಶಕರು ನಿತ್ಯ ಬಂದು ಹೋಗುತ್ತಿದ್ದರು. ನಾವೆಯಲ್ಲಿರುವವರ ಮಕ್ಕಳು ನದಿಯಲ್ಲಿ ಬೆತ್ತಲೆಯಲ್ಲಿ ಸ್ನಾನ ಮಾಡಿ, ಈಜುತ್ತಾ ನದಿಯನ್ನು ದಾಟುವ ದೃಶ್ಯವನ್ನು ನೋಡುವುದು ಅವನಿಗೆ ಇಷ್ಟವಾಗುತ್ತಿತ್ತು. ಅವನ ಬಾಲ್ಯದಿಂದ ಹಿಡಿದು ಯೌವನಕ್ಕೆ ಕಾಲಿಡುವವರೆಗೆ ಅದೆಷ್ಟೋ ನೆನಪುಗಳು ವಿತಸ್ತಾದೊಂದಿಗೆ ಕಲೆತಿವೆ. ಇಂದು ರೋಶನ್ ಬೆಳಗ್ಗೆಯಿಂದಲೇ ಅಶಾಂತನಾಗಿದ್ದ. ದಿನವಿಡೀ ಕೋಣೆಯಲ್ಲಿ ಕೂತಿದ್ದ. ಹಾಸಿಗೆಯನ್ನು ಇನ್ನೂ ತೆಗೆದಿರಲಿಲ್ಲ, ಸ್ನಾನವನ್ನೂ ಮಾಡಿರಲಿಲ್ಲ, ಮುಖ-ಕ್ಷೌರವನ್ನೂ ಮಾಡಿಕೊಂಡಿರಲಿಲ್ಲ. ಹಾಸಿಗೆಯ ಮೇಲೆ ಮಲಗಿ ಹೊರಳಾಡುತ್ತಿದ್ದ. ಸ್ವಲ್ಪ ಹೊತ್ತಿನ ನಂತರ […]
ವಿಳಾಸ (ಕಾಶ್ಮೀರಿ ಕಥೆ)
Month : December-2022 Episode : Author : ರೂಪಕೃಷ್ಣ ಭಟ್ಟ