ಕನ್ನಡದ ಬುದ್ಧನೂ ಕನ್ನಡತಿ ಗೌತಮಿಯೂ ಸಾವಿಲ್ಲದ ಮನೆಯ ಸಾಸಿವೆಯ ಕಥೆಯ ಪಾತ್ರಧಾರಿಗಳಾಗಿ, ನಮ್ಮ ಕಾರಂತಜ್ಜನ ಲೇಖನಿಯಿಂದ ಕಿಸಾಗೌತಮಿ ಎಂಬ ಸುಂದರ ಗೀತನಾಟಕವಾಗಿ ಮೂಡಿಬಂದದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇಲ್ಲಿ ನನಗೊಂದು ಸಂಶಯವಿತ್ತು. ಅದೇನೆಂದರೆ, ಬುದ್ಧ ಯಾಕೆ ಸಾವಿಲ್ಲದ ಮನೆಯಿಂದ ಸಾಸಿವೆಯನ್ನೇ ತರಲು ಹೇಳಿದ? ಮೆಂತೆಯನ್ನೋ ಜೀರಿಗೆಯನ್ನೋ ಕೊತ್ತಂಬರಿಯನ್ನೋ ಹೇಳಲಿಲ್ಲ ಯಾಕೆ? ಸಾವು ಹಾಗೂ ಸಾಸಿವೆ ಪ್ರಾಸ ಹೊಂದುತ್ತದೆ ಎಂದೇ? ಮಧ್ಯದ ‘ಸಿ’ ತೆಗೆದರೆ ಸಾಸಿವೆ ‘ಸಾವೆ’ ಆಗುತ್ತದೆಯಲ್ಲವೇ? ಆದರೆ ಸಾವಿಗೂ ಎಳ್ಳಿಗೂ ಸಂಬಂಧವಿರುವುದಲ್ಲವೇ? ಎಳ್ಳನ್ನೇ ತರಲು ಹೇಳಬಹುದಿತ್ತಲ್ಲ, […]
ಅಡುಗೆಯಜ್ಞಕ್ಕೊಂದು ಪೂರ್ಣಾಹುತಿ
Month : May-2020 Episode : Author : ರೇಶ್ಮಾ ಕೆ.