
ಭಾರತದ ಗಡಿಯಲ್ಲಿ ಬಹುದೊಡ್ಡ ಭಾಗವನ್ನು ಹಂಚಿಕೊಂಡಿರುವ ಚೀನಾ ಮತ್ತು ಪಾಕಿಸ್ತಾನಗಳು ನಮ್ಮ ಶತ್ರುಗಳೆಂದೇ ಪರಿಗಣಿತವಾಗಿವೆ. ದೇಶದ ಸೇನಾಸಿದ್ಧತೆಗಳು ಮುಖ್ಯವಾಗಿ ಈ ಎರಡು ದೇಶಗಳನ್ನು ಗಮನದಲ್ಲಿಟ್ಟುಕೊಂಡೇ ನಡೆಯುತ್ತವೆ. ಎರಡೂ ಶತ್ರುರಾ?ಗಳೇ ಆದರೂ ಕೂಡ ಅವುಗಳ ನಡುವೆ ಒಂದು ದೊಡ್ಡ ವ್ಯತ್ಯಾಸವಿದೆ. ಸಮರಸಾಮರ್ಥ್ಯದಲ್ಲಿ ಚೀನಾ ನಮಗಿಂತ ಮುಂದಿದೆ ಮತ್ತು ಗಡಿಯಲ್ಲಿ ಬೇರೆಬೇರೆ ಸಮಸ್ಯೆಗಳನ್ನು ಸೃಷ್ಟಿಸುತ್ತ ಇದೆಯಾದರೂ ಕಾಲುಕೆರೆದು ಜಗಳಕ್ಕೆ ನಿಲ್ಲುವುದು, ಕದನ ವಿರಾಮ ಉಲ್ಲಂಘಿಸಿ ಸೈನಿಕರ ಅಥವಾ ನಾಗರಿಕರಿಗೆ ಹಾನಿ ಎಸಗುವುದು ಇವೆಲ್ಲ ಇಲ್ಲ. ಅದೇ ವೇಳೆ ಪಾಕಿಸ್ತಾನ ಸೇನೆ […]