ಭಾರತದ ಗಡಿಯಲ್ಲಿ ಬಹುದೊಡ್ಡ ಭಾಗವನ್ನು ಹಂಚಿಕೊಂಡಿರುವ ಚೀನಾ ಮತ್ತು ಪಾಕಿಸ್ತಾನಗಳು ನಮ್ಮ ಶತ್ರುಗಳೆಂದೇ ಪರಿಗಣಿತವಾಗಿವೆ. ದೇಶದ ಸೇನಾಸಿದ್ಧತೆಗಳು ಮುಖ್ಯವಾಗಿ ಈ ಎರಡು ದೇಶಗಳನ್ನು ಗಮನದಲ್ಲಿಟ್ಟುಕೊಂಡೇ ನಡೆಯುತ್ತವೆ. ಎರಡೂ ಶತ್ರುರಾ?ಗಳೇ ಆದರೂ ಕೂಡ ಅವುಗಳ ನಡುವೆ ಒಂದು ದೊಡ್ಡ ವ್ಯತ್ಯಾಸವಿದೆ. ಸಮರಸಾಮರ್ಥ್ಯದಲ್ಲಿ ಚೀನಾ ನಮಗಿಂತ ಮುಂದಿದೆ ಮತ್ತು ಗಡಿಯಲ್ಲಿ ಬೇರೆಬೇರೆ ಸಮಸ್ಯೆಗಳನ್ನು ಸೃಷ್ಟಿಸುತ್ತ ಇದೆಯಾದರೂ ಕಾಲುಕೆರೆದು ಜಗಳಕ್ಕೆ ನಿಲ್ಲುವುದು, ಕದನ ವಿರಾಮ ಉಲ್ಲಂಘಿಸಿ ಸೈನಿಕರ ಅಥವಾ ನಾಗರಿಕರಿಗೆ ಹಾನಿ ಎಸಗುವುದು ಇವೆಲ್ಲ ಇಲ್ಲ. ಅದೇ ವೇಳೆ ಪಾಕಿಸ್ತಾನ ಸೇನೆ ಮತ್ತು ಸಮರ ಸಾಮರ್ಥ್ಯದಲ್ಲಿ ನಮಗಿಂತ ಬಹಳ? ಹಿಂದೆ ಇದೆಯಾದರೂ ಚೀನಾ ಗಡಿಗಿಂತ ಪೂರ್ತಿ ವಿಭಿನ್ನ ವಾತಾವರಣ ಅಲ್ಲಿದೆ. ಪ್ರತಿದಿನವೂ ಕದನವಿರಾಮ ಉಲ್ಲಂಘನೆ, ಸೈನಿಕರು ಮಾತ್ರವಲ್ಲ ನಾಗರಿಕರನ್ನು ಕೂಡ ಕೊಲ್ಲುವುದು, ಗಡಿಯಲ್ಲಿ ಅಕ್ರಮ ಪ್ರವೇಶ ನಡೆಸಿ ಭಯೋತ್ಪಾದಕ ಕೃತ್ಯ ಎಸಗುವುದು – ಹೀಗೆ ಪೂರ್ತಿ ಅಶಾಂತಿ-ಆತಂಕದ ಸ್ಥಿತಿ.
ಕದನ ವಿರಾಮದ ಉಲ್ಲಂಘನೆ ಮಾಡುತ್ತಾರೆಂದರೆ ನಮ್ಮ ಸೈನಿಕರು ಸದಾ ಸಿದ್ಧರಾಗಿರಬೇಕಲ್ಲವೆ? ಇನ್ನು ಕೇಂದ್ರದ ಕಾಂಗ್ರೆಸ್ ಸರ್ಕಾರ ಪಾಕಿಸ್ತಾನವನ್ನು ಎದುರಿಸುತ್ತಿದ್ದ ರೀತಿಗೂ ಈಗಿನ ಬಿಜೆಪಿ ನೇತೃತ್ವದ ಸರ್ಕಾರ ಎದುರಿಸುತ್ತಿರುವ ರೀತಿಗೂ ವ್ಯತ್ಯಾಸವಿದೆ. ರಾಜತಾಂತ್ರಿಕ ವ್ಯವಹಾರದಲ್ಲಿ ಕೂಡ ಪಾಕಿಸ್ತಾನಕ್ಕೆ ಘನತೆ-ಗೌರವ ಎಂಬುದಿಲ್ಲ. ಎರಡು ರಾಷ್ಟ್ರಗಳ ನಡುವೆ ಮಾತುಕತೆ ನಡೆಯಬೇಕೆನ್ನುವ ಮಂತ್ರವನ್ನು ಅದು ಸದಾ ಪಠಿಸುತ್ತದೆ. ಆದರೆ ಮಾತುಕತೆಗೆ ಅನುಕೂಲವಾದ ವಾತಾವರಣ ಬೇಕಾಗುತ್ತದೆ; ಅದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು ಎನ್ನುವ ವಿವೇಕ ಅದಕ್ಕಿಲ್ಲ. ಒಂದು ಮಾತುಕತೆಗೆ ಎರಡೇ ದಿನ ಇದೆ ಎನ್ನುವಾಗ ಗಡಿಯಲ್ಲೊಂದು ದಾಳಿ ನಡೆಸಿ ಕೆಲವು ಜೀವಹಾನಿ ಮಾಡಿಬಿಡುತ್ತದೆ. ಅದನ್ನು ನುಂಗಿಕೊಂಡು ಮಾತುಕತೆಯಲ್ಲಿ ಭಾಗವಹಿಸಬೇಕು. ಇದು ಅವಮಾನಕರವಲ್ಲವೆ? ಕಾಂಗ್ರೆಸ್ ಸರ್ಕಾರ ಇಂತಹ ಅವಮಾನಗಳನ್ನು ನುಂಗಿಕೊಂಡು ಕಾಲಕಾಲಕ್ಕೆ ಮಾತುಕತೆ ನಡೆಸುತ್ತಿತ್ತು; ನರೇಂದ್ರ ಮೋದಿ ಸರ್ಕಾರ ಅದಕ್ಕೆ ತಯಾರಿಲ್ಲ. ಅಂತಹ ಘಟನೆ ನಡೆದರೆ ಮಾತುಕತೆ ಸದ್ಯಕ್ಕೆ ಬಂದ್. ಪರಿಣಾಮವಾಗಿ ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ ಜಾಸ್ತಿಯಾಗಿದೆ; ಗಡಿಯಲ್ಲಿ ಉಗ್ರರನ್ನು ಒಳಗೆ ನುಗ್ಗಿಸಿ ಭಯೋತ್ಪಾದಕ ಕೃತ್ಯಕ್ಕೆ ಹೆಚ್ಚಿನ ಪ್ರಚೋದನೆ ನೀಡುವುದು ಕೂಡ ನಡೆದಿದೆ. ಅದಕ್ಕೆ ಉತ್ತರವೆಂಬಂತೆ ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದ ಕೃತ್ಯಗಳನ್ನು ಸಾಕ್ಷಿ ಸಹಿತ ಬಯಲು ಮಾಡಿ ಸಾಕಷ್ಟು ಪೇಚಿನ ಪ್ರಸಂಗಗಳನ್ನು ಉಂಟುಮಾಡಿದೆ; ಅದಕ್ಕೆ ಭಯೋತ್ಪಾದಕ ರಾ? ಎನ್ನುವ ಹಣೆಪಟ್ಟಿ ಅಂಟಿಸುವಲ್ಲಿ ಸಾಕ? ಯಶಸ್ವಿಯಾಗಿದೆ. ಇನ್ನು ಸರ್ಜಿಕಲ್ ಸ್ಟ್ರೈಕ್ನಂತಹ ದಾಳಿಯನ್ನೂ ನಡೆಸಿದೆ.
ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನಕ್ಕೆ ಪರವಾದ ಪಿಡಿಪಿ ಪಕ್ಷದೊಂದಿಗೆ ಬಿಜೆಪಿ ಸೇರಿ ಸರ್ಕಾರ ರಚಿಸಿದ್ದು ಎನ್ಡಿಎ ಸರ್ಕಾರ ನಡೆಸಿದ ಇನ್ನೊಂದು ದಿಟ್ಟತನದ ಪ್ರಯೋಗ. ರಾಜ್ಯಕ್ಕೆ ಅದರಿಂದ ಏನಾದರೂ ಲಾಭವಾಯಿತೆ ಎಂಬುದನ್ನು ಕಾಲವೇ ಹೇಳಬೇಕು. ಆದರೆ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಾಗಲಿ, ಪಿಡಿಪಿಯಾಗಲಿ ಬದಲಾದಂತೆ ಕಾಣಲಿಲ್ಲ. ಮುಫ್ತಿ ಒಳಗಿಂದೊಳಗೆ ಪಾಕ್ ಪರ ಶಕ್ತಿಗಳನ್ನು ಬೆಂಬಲಿಸುತ್ತಲೇ ಇದ್ದರು. ಅದು ಸಹನೆಯ ಗಡಿ ದಾಟಿದಾಗ ಬಿಜೆಪಿ ಅವರ ಸಂಬಂಧ ಕಡಿದುಕೊಂಡು ಹೊರಗೆ ಬಂತು; ಸರ್ಕಾರ ಬಿತ್ತು. ಇದರಿಂದ ಒಟ್ಟಾರೆ ಕಾಶ್ಮೀರ ಮತ್ತು ಭಾರತ-ಪಾಕ್ ಗಡಿಯಲ್ಲಿ ನಮ್ಮ ಸೇನೆ ಎಂತಹ ಸನ್ನಿವೇಶಗಳನ್ನು ಎದುರಿಸಿತು? ಮುಖ್ಯವಾಗಿ ಗಡಿಯ ಇಂತಹ ಪರಿಸ್ಥಿತಿಗಳನ್ನು ನಿಭಾಯಿಸುವಲ್ಲಿ ಅನುಭವಿಯಾದ ಭೂಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ ನೇತೃತ್ವದಲ್ಲಿ ಎಂತಹ ಕಾರ್ಯಾಚರಣೆಗಳು ನಡೆದವು ಎಂಬುದನ್ನಿಲ್ಲಿ ಗಮನಿಸಬಹುದು.
ಮೂರು ಸವಾಲುಗಳು
ಜನವರಿ ೧, ೨೦೧೭ರಂದು ಜ| ರಾವತ್ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಜಮ್ಮು-ಕಾಶ್ಮೀರದಲ್ಲಿ ಆಗ ಕ?ಕರ ಪರಿಸ್ಥಿತಿಯಿತ್ತು. ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಯುವನಾಯಕ ಮತ್ತು ಸಾಕ? ಜನಪ್ರಿಯತೆಯನ್ನು ಹೊಂದಿದ್ದ ಬುರ್ಹಾನ್ವಾನಿ ಹತ್ಯೆ ನಡೆದು ಕೇವಲ ಆರು ತಿಂಗಳಾಗಿತ್ತು. ಬೀದಿಕಾಳಗ, ಹಿಂಸಾಚಾರಗಳು ನಡೆಯುತ್ತಲೇ ಇದ್ದವು. ಸೇನೆಯ ಮುಂದೆ ಮೂರು ಪ್ರಮುಖ ಸವಾಲುಗಳಿದ್ದವು.
ಮೊದಲನೆಯದಾಗಿ, ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಓಸಿ) ಪಾಕಿಸ್ತಾನ ಸೇನೆಯಿಂದ ಪ್ರತಿದಿನ ಕದನವಿರಾಮ ಉಲ್ಲಂಘನೆ ನಡೆಯುತ್ತಿತ್ತು. ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯ ಸಮೀಪದ ಹಿಂದೂ ಜನವಸತಿ ಪ್ರದೇಶಗಳ ಮೇಲೆ ತೀವ್ರಸ್ವರೂಪದ ಗುಂಡೆಸೆತ ನಡೆಯುತ್ತಿತ್ತು. ಅದರಿಂದ ಅಶಾಂತಿ, ನಕಾರಾತ್ಮಕ ವಾತಾವರಣ ಉಂಟಾಗಿತ್ತು; ಪಾಕಿಸ್ತಾನದ ಉದ್ದೇಶ ಅದೇ ಆಗಿತ್ತು.
ಗಡಿ ಪ್ರದೇಶ ಸಾಕಷ್ಟು ನಿಯಂತ್ರಣದಲ್ಲಿದ್ದರೂ ಕೂಡ ವಿದೇಶೀ ಭಯೋತ್ಪಾದಕರು ಒಳಗೆ ನುಗ್ಗುತ್ತಿದ್ದರು. ಆ ಹೊತ್ತಿಗೆ ಗಡಿರೇಖೆಗೆ ಸಮೀಪವಿದ್ದ ಸೇನಾನೆಲೆಗಳ ಮೇಲೆ ದಾಳಿ ನಡೆಸುವ ಪ್ರಯತ್ನಗಳು ನಡೆದವು. ಭಯೋತ್ಪಾದಕರು ಸಾಮಾನ್ಯವಾಗಿ ಸಾಕ? ಒಳಭಾಗದ ಸುರಕ್ಷಿತ ಪ್ರದೇಶಕ್ಕೆ ಬಂದು ಒಳನಾಡಿನಲ್ಲಿ ದಾಳಿ ನಡೆಸುತ್ತಾರೆ. ಅದಕ್ಕೆ ಭಿನ್ನವಾಗಿ ಸೆಪ್ಟೆಂಬರ್ ೧೮, ೨೦೧೬ರಂದು ಉರಿ ಬ್ರಿಗೇಡ್ನ ಪ್ರಧಾನ ಕಛೇರಿಯ ಮೇಲೆ ಉಗ್ರರು ಆತ್ಮಹತ್ಯಾದಾಳಿಯನ್ನು ನಡೆಸಿದ್ದರು. ಅದಕ್ಕೆ ಮುನ್ನ ಝೀಲಂ ಕಣಿವೆಯ ಸೇನಾ ನೆಲೆಯ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆದಿತ್ತು. ಪೂಂಚ್ ಮತ್ತು ತಂಗ್ದರ್ ಬ್ರಿಗೇಡ್ಗಳ ಪ್ರಧಾನಕಛೇರಿಗಳ ಮೇಲಿನ ದಾಳಿಗಳನ್ನು ವಿಫಲಗೊಳಿಸಲಾಗಿತ್ತು. ಸೆಪ್ಟೆಂಬರ್ ೨೮, ೨೦೧೬ರಂದು ಗಡಿಯಾಚೆಗಿನ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ (ನಿರ್ದಿ? ದಾಳಿ) ನಡೆಸಲಾಗಿತ್ತು.
ಅದರಿಂದಾಗಿ ಎಷ್ಟು ಸಾವು-ನೋವುಗಳಾದವು, ಪಾಕಿಸ್ತಾನಕ್ಕೆ ಎ? ಹಾನಿಯಾಯಿತು ಎನ್ನುವುದು ದೃಢವಾಗದಿದ್ದರೂ ಸೇನಾ ಕಾರ್ಯಾಚರಣೆಯಲ್ಲಿ ಅದೊಂದು ಯಶಸ್ವೀದಾಳಿ ಎಂದು ದಾಖಲಾಯಿತು; ಮುಂದೆ ಕೂಡ ಅಂತಹ ದಾಳಿಗಳು ನಡೆಯಬಹುದೆನ್ನುವ ನಿರೀಕ್ಷೆಯನ್ನೂ ಹುಟ್ಟಿಸಿತು.
ಬುರ್ಹಾನ್ವಾನಿ ಹತ್ಯೆ
ಎರಡನೇ ಸವಾಲು ರಾಜ್ಯದ ವಿವಿಧೆಡೆ ನಡೆಯುತ್ತಿದ್ದ ಭಯೋತ್ಪಾದಕ ದಾಳಿಗಳು. ೨೦೧೧-೧೨ರಲ್ಲಿ ಸೇನೆಯ ಕಾರ್ಯಾಚರಣೆಗಳು ಅತ್ಯಂತ ಯಶಸ್ವಿಯಾದರೂ ಗಡಿಯಲ್ಲಿನ ಅಕ್ರಮ ಪ್ರವೇಶವು ಬಹುತೇಕ ನಿಂತುಹೋಗಿತ್ತು. ಆದರೆ ಉಗ್ರರು ಕ್ರಮೇಣ ಸ್ಥಳೀಯವಾಗಿ ಹುಟ್ಟಿಕೊಂಡರು. ಬುರ್ಹಾನ್ವಾನಿ ಅದಕ್ಕೊಂದು ಉದಾಹರಣೆ. ದಕ್ಷಿಣ ಕಾಶ್ಮೀರದಲ್ಲಿ ಅಂತಹ ವಾತಾವರಣ ಹೆಚ್ಚಾಗಿದ್ದು ಬುರ್ಹಾನ್ವಾನಿ ಸಾಮಾಜಿಕ ಮಾಧ್ಯಮಗಳು ಹಾಗೂ ಬಾಯಿಂದ ಬಾಯಿಗೆ ಹಬ್ಬುವ ಪ್ರಚಾರದ ಮೂಲಕ ಸ್ಥಳೀಯ ಯುವಜನರ ಮೇಲೆ ಸಾಕ? ಪ್ರಭಾವ ಬೀರಿದ. ೨೦೧೬ರಲ್ಲಿ ದಕ್ಷಿಣದ ಜಿಲ್ಲೆಗಳಾದ ಅನಂತನಾಗ್, ಪುಲ್ವಾಮ, ಕುಲ್ಗಾಮ್ ಮತ್ತು ಸೋಪಿಯಾನ್ ಹಾಗೂ ಕೆಲವೊಮ್ಮೆ ಬಂಡೀಪೋರಾದ ವರೆಗೂ ಹಿಂಸಾಚಾರ ಪಸರಿಸಿತ್ತು. ಭದ್ರತಾ ಪಡೆಗಳು ಒಂದುಕಡೆ ಎನ್ಕೌಂಟರ್ ಮಾಡಬೇಕೆಂದು ಹೋದರೆ ಇದ್ದಕ್ಕಿದ್ದಂತೆ ಅಲ್ಲಿ ಜನರ ಗುಂಪು ಸೇರಿಬಿಡುತ್ತಿತ್ತು. ಅದರಿಂದ ಕಾರ್ಯಾಚರಣೆ ನಡೆಸುವುದೇ ಕಷ್ಟವಾಗುತ್ತಿತ್ತು; ನಡೆಸಿದಲ್ಲಿ ಭದ್ರತಾಪಡೆ ಮತ್ತು ನಾಗರಿಕರು ಎರಡೂ ಕಡೆ ಸಾವು ಸಂಭವಿಸುತ್ತಿತ್ತು. ನಾಗರಿಕರು ಸತ್ತರೆಂದರೆ ಮತ್ತ? ಹಿಂಸಾಚಾರ, ಇನ್ನಷ್ಟು ಸಾವು, ಅಶಾಂತಿ ಆಕ್ರೋಶ ಎಲ್ಲ ಮುಂದುವರಿಯುತ್ತಿದ್ದವು.
ಎರಡನೇ ಸವಾಲಿಗೆ ಕಾರಣವಾದ ಘಟನಾವಳಿಗಳು ಮುಂದುವರಿದಾಗ ಉಂಟಾದ ವಾತಾವರಣವನ್ನು ನಿಭಾಯಿಸುವುದೇ ಮೂರನೆಯ ಸವಾಲು. ರಾಜಕೀಯ ವಾತಾವರಣವು ಹಾಳಾಗಿ ಸ್ಥಳೀಯ ರಾಜಕೀಯ ವರ್ಗ ಹಿಂದೆ ಸರಿಯುತ್ತಿತ್ತು. ಚಳವಳಿ ಗ್ರಾಮೀಣ ಪ್ರದೇಶಕ್ಕೆ ಹಬ್ಬಿದಾಗ ರಾಜಕೀಯ ಮುಂದಾಳುಗಳು ಅದನ್ನು ಎದುರಿಸಲು ಮುಂದಾಗಲಿಲ್ಲ. ಭಾರತವಿರೋಧಿ ಮನೋಭಾವ ಹೆಚ್ಚಾಗಿದ್ದು, ’ಸದ್ಭಾವನಾ’ದಂತಹ ಸೇನೆ- ನಾಗರಿಕ ಸಂಯೋಜಿತ ಕಾರ್ಯಕ್ರಮದಿಂದ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ೧೯೮೯ರ ಆನಂತರ ಹುಟ್ಟಿದ ಕಾಶ್ಮೀರದ ಹೊಸ ತಲೆಮಾರು ದೈನಂದಿನ ಜೀವನದಲ್ಲಿ ಹಿಂಸೆಯಲ್ಲದೆ ಬೇರೇನನ್ನೂ ಕಂಡಿಲ್ಲ; ಒತ್ತಡವಿಲ್ಲದೆ ಸಂತೋ?ದಿಂದ ಜೀವಿಸಬಹುದೆಂಬುದು ಅವರಿಗೆ ಗೊತ್ತೇ ಇಲ್ಲ. ಈ ತಲೆಮಾರಿನ ಯುವಜನರಲ್ಲಿ ಪ್ರತೀಕಾರ, ಆತ್ಮಘಾತುಕ ಪ್ರವೃತ್ತಿಗಳೇ ಮನೆಮಾಡಿದಂತಿದೆ.
ಜ| ರಾವತ್ ಆಗಮನ
೨೦೧೭ರ ಜನವರಿಯಿಂದ ಅರಂಭಿಸಿ ಜ| ರಾವತ್ ಅವರ ಪ್ರಸ್ತುತ ಅಧಿಕಾರಾವಧಿಯಲ್ಲಿ ಕಾಶ್ಮೀರದ ವಾತಾವರಣವು ಬಹುತೇಕ ಅದೇ ರೀತಿ ಮುಂದುವರಿದಿದೆ; ಸಂಘರ್ಷಗಳು ದೀರ್ಘಕಾಲ ಮುಂದುವರಿಯುತ್ತವೆ. ಆದರೆ ಅವುಗಳನ್ನು ನಿರ್ವಹಿಸುವಲ್ಲಿ ಈಗ ವಾಸ್ತವದ ಪರಿಜ್ಞಾನ ಕಂಡುಬರುತ್ತಿರುವುದು ಅಷ್ಟು ನಿಜ. ಗಡಿರೇಖೆಯಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ದಿಟ್ಟತನ ಕಂಡುಬರುತ್ತಿದೆ. ಪಾಕಿಸ್ತಾನ ಎಲ್ಲಿ ತನ್ನ ಚಟುವಟಿಕೆಯನ್ನು ಹೆಚ್ಚಿಸಬಯಸುತ್ತದೋ ಅಲ್ಲಿ ಬಿಗಿಯಾದ ಕ್ರಮ ಕೈಗೊಳ್ಳುವ ಬಗ್ಗೆ ಮುಂಚೂಣಿ ಕಮಾಂಡರ್ಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಕಾಶ್ಮೀರ ಕಣಿವೆಯ ಗಡಿಭಾಗದಲ್ಲಿ ಗುಂಡುಹಾರಿಸಿ ಗಮನ ಆ ಕಡೆಗೆ ಹರಿಯುವಂತೆ ಮಾಡಿ ಇನ್ನೆಲ್ಲೋ ಉಗ್ರರನ್ನು ನುಗ್ಗಿಸುವುದು ಪಾಕಿಸ್ತಾನದ ಒಂದು ತಂತ್ರವಾಗಿದೆ. ನೀಲಮ್ ಕಣಿವೆಯಲ್ಲಿ ಭಾರತೀಯ ಸೇನೆಯ ಮೇಲುಗೈ ಇದ್ದು ಅದನ್ನು ಬಿಟ್ಟುಕೊಡಬಾರದು. ಅಕ್ರಮ ಪ್ರವೇಶದ ಮೇಲಿನ ಎನ್ಕೌಂಟರನ್ನು ನಿರಂತರವಾಗಿ ಬಲಪಡಿಸಲಾಗುತ್ತಿದೆ. ಉಪವಿಭಾಗಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಮತ್ತು ಪೀರ್ ಪಂಜಾಲ್ ದಕ್ಷಿಣದಿಂದ ಹೆಚ್ಚುವರಿ ಯೂನಿಟ್ಗಳನ್ನು ತರಿಸಿಕೊಳ್ಳುವ ಮೂಲಕ ಇದನ್ನು ಸಾಧಿಸಲಾಗಿದೆ.
ಹೀಗೆ ಮಾಡುವಾಗ ಜಮ್ಮು ಮತ್ತು ಕಣಿವೆ ಎರಡೂ ಭಾಗದಲ್ಲಿ ಅಪಾಯ ಇದ್ದೇ ಇತ್ತು. ದೊಡ್ಡ ಸಾಧನೆಯೆಂದರೆ ಜಮ್ಮು ಪ್ರದೇಶದಲ್ಲಿ ಉಗ್ರರ ಭಯೋತ್ಪಾದಕ ಕೃತ್ಯಗಳನ್ನು ಬಹುತೇಕ ಅಳಿಸಿ ಹಾಕಲಾಗಿದೆ; ಆದರೆ ಅದು ಮರುಕಳಿಸುವ ಅಪಾಯ ಇದ್ದೇ ಇದೆ. ಅಲ್ಲಿಗೆ ರಾಷ್ಟ್ರೀಯ ರೈಫಲ್ಸ್ ಯೂನಿಟ್ಗಳನ್ನು ರವಾನಿಸುವುದರಿಂದ ಇದು ಸಾಧ್ಯವಾಯಿತು. ಪೀರ್ ಪಂಜಾಲ್ ದಕ್ಷಿಣದಲ್ಲಿ ಕೋಮು ಹಿಂಸಾಚಾರ ಮತ್ತಿತರ ರಾಜಕೀಯ ಅಂಶಗಳು ಅಲ್ಲಿನ ವಾತಾವರಣವನ್ನು ಅಭದ್ರಗೊಳಿಸುವುದು, ಪಾಕಿಸ್ತಾನ ಅದರ ಲಾಭವನ್ನು ಪಡೆಯಲು ಯತ್ನಿಸುವುದು ಇದ್ದೇ ಇದೆ. ಈಗ ಉತ್ತಮ ವಾತಾವರಣ ಇರುವ ಕಡೆ ಅದನ್ನು ಕದಡುವುದು ಒಂದು ರೀತಿಯಿಂದ ಸರಿಯಲ್ಲ; ಆದರೆ ಅದರಿಂದ ಹೆಚ್ಚಿನ ಲಾಭ ಇರುವುದಾದರೆ ಹಾಗೆ ಮಾಡಬಹುದು. ಅಂತಹ ಕ್ರಮದಿಂದ ಕಾಶ್ಮೀರ ವಿಭಾಗದ ಗಡಿಯಲ್ಲಿ ಅಕ್ರಮಪ್ರವೇಶವನ್ನು ಹತ್ತಿಕ್ಕಲಾಯಿತು. ಜ| ರಾವತ್ ಅವರಿಗೆ ಉರಿ ಮತ್ತು ಲಿಪಾ ವಿಭಾಗಗಳಲ್ಲಿ ಸ್ವತಃ ಅನುಭವವಿದ್ದ ಕಾರಣ ಸೇನಾ ನಿರ್ವಹಣೆಗೆ ಅನುಕೂಲವಾಯಿತು. ಪಾಕ್ ಸೇನೆಯ ಗಡಿ ಕ್ರಿಯಾಪಡೆಗಳು ಅಲ್ಲಿ ದಾಳಿ ನಡೆಸಿದ್ದು ನಿಜ; ಆದರೆ ಅವುಗಳ ಗಡಿ ದಾಟುವ ಪ್ರಯತ್ನ ಸಫಲವಾಗಲಿಲ್ಲ; ಕಳೆದ ಡಿಸೆಂಬರ್ನಲ್ಲಿ ಒಮ್ಮೆ ಮಾತ್ರ ಪೂಂಚ್ನಲ್ಲಿ ಅಕ್ರಮ ಪ್ರವೇಶ ನಡೆದಿತ್ತು.
ಬುದ್ಧಿಜೀವಿಗಳ ಆಕ್ರೋಶ
ಎನ್ಕೌಂಟರ್ ಪ್ರದೇಶಗಳಲ್ಲಿ ಸೇನೆ ನಡೆಸುವ ಕಾರ್ಯಾಚರಣೆಯನ್ನು ವಿರೋಧಿಸುವವರನ್ನು ಜ| ರಾವತ್ ಕಟುವಾದ ಭಾ?ಯಲ್ಲಿ ಟೀಕಿಸಿದಾಗ ದೇಶದ ಬುದ್ಧಿಜೀವಿವರ್ಗ ಅವರ ಮೇಲೆ ತಿರುಗಿಬಿದ್ದಿತು. ಅದರಿಂದ ಅವರು ಭಯೋತ್ಪಾದಕ- ವಿರೋಧಿ ಕಾರ್ಯಾಚರಣೆಯನ್ನೇನೂ ಬದಲಿಸಲಿಲ್ಲ. ಅವರನ್ನು ಓವರ್ಗ್ರೌಂಡ್ ವರ್ಕರ್ಸ್ (ಓಜಿಡಬ್ಲ್ಯು) ಎಂದು ಬಣ್ಣಿಸಿದ ಅವರು ಅಂತಹ ನಾಡಿನ ಶತ್ರುಗಳನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು. ಅದು ಸೈನಿಕರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಒಂದು ಉತ್ತಮ ಕ್ರಮವಾಗಿದ್ದು, ಅವರ ಕಾರ್ಯಾಚರಣೆಗೆ ಯಾರಾದರೂ ಅಡ್ಡಿಪಡಿಸಿದಲ್ಲಿ ಅದಕ್ಕೆ ಮಣಿಯಬಾರದು ಎನ್ನುವ ಸೂಚನೆ ನೀಡಿತ್ತು.
೨೦೧೭ರ ಬೇಸಿಗೆಯ ಹೊತ್ತಿಗೆ ಭದ್ರತಾಪಡೆಗಳು ಕೈಗೊಂಡ ಭಯೋತ್ಪಾದಕವಿರೋಧಿ ಕಾರ್ಯಾಚರಣೆಗೆ ’ಪೂರ್ಣ ಹುಟ್ಟಡಗಿಸುವ ಕಾರ್ಯಾಚರಣೆ’ (All Out)ಎಂದು ಹೆಸರಿಡಲಾಯಿತು. ಭದ್ರತಾ ಪಡೆಗಳ ನಡುವಣ ಪರಸ್ಪರ ಸಹಕಾರ ಯಾವಾಗಲೂ ಉತ್ತಮವಾಗಿತ್ತು; ಆದರೆ ಕಾದಾಟಗಳ ಸ್ವರೂಪ ಬದಲಾಗುತ್ತಾ ಇದ್ದ ಕಾರಣ ಅದಕ್ಕನುಗುಣವಾಗಿ ಸಹಕಾರ ಸುಧಾರಿಸುತ್ತಾ ಹೋಗಬೇಕಿತ್ತು. ಕಾರ್ಯಾಚರಣೆಯ ವೇಳೆ ಜನರ ಗುಂಪು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಕಲ್ಲೆಸೆದು ಅಡ್ಡಿಪಡಿಸುತ್ತಿದ್ದ ಕಾರಣ ಪರಿಣಾಮಕಾರಿ ಕಾರ್ಯಾಚರಣೆಗೆ ಹೆಚ್ಚಿನ ಗಮನ ಕೊಡಬೇಕಿತ್ತು. ಆಗ ಕೈಗೊಂಡ ಕೆಲವು ನಿರ್ಧಾರಗಳು ಪರಿಣಾಮಕಾರಿ ಕಾರ್ಯಾಚರಣೆಗೆ ಸಹಕಾರಿಯಾದವು.
ಅದರಲ್ಲಿ ಮೊದಲನೆಯದು ಸುತ್ತುವರಿಯುವುದು ಮತ್ತು ಶೋಧಕಾರ್ಯ (ಕ್ಯಾಸೋ-Cordon and Search Operation). ದೊರೆತ ಮಾಹಿತಿಯು ಸ್ಪಷ್ಟವಾಗಿರದೆ ತುಂಡುತುಂಡಾಗಿದ್ದಾಗ ಈ ವಿಧಾನವನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಕಾರ್ಯಾಚರಣೆಗೆ ದೊಡ್ಡ ಸಂಖ್ಯೆಯ ಸೈನಿಕರನ್ನು ಬಳಸಲಾಗುತ್ತದೆ. ಸೇನೆಯ ಕೆಲಸಕ್ಕೆ ಅಡ್ಡಿಪಡಿಸಬಹುದಾದ ಸ್ಥಳೀಯರಲ್ಲಿ ಭಯದ ವಾತಾವರಣ ಉಂಟಾಗುವುದರಿಂದ ಸೇನೆಯ ಸುದೀರ್ಘ ಕಾರ್ಯಾಚರಣೆಗೆ ಅನುಕೂಲವಾಗುತ್ತದೆ. ದಕ್ಷಿಣಕಾಶ್ಮೀರದಲ್ಲಿ ಇದೊಂದು ಸವಾಲಾಗಿದ್ದು, ಅಲ್ಲಿ ಕ್ಯಾಸೋ ಬಳಕೆಯಿಂದ ಸೇನೆಗೆ ಅನುಕೂಲವಾಯಿತು. ಕೆಲವು ಸಂದರ್ಭಗಳಲ್ಲಿ ಉಗ್ರರು ಸುಲಭದಲ್ಲಿ ಸಿಕ್ಕಿಬಿಡುತ್ತಿದ್ದರು. ಸೇನೆಯ ಕೈ ಮೇಲಾಗುತ್ತಿದ್ದ ಕಾರಣ ೨೦೧೭ರ ಮುಂದಿನ ಭಾಗದಲ್ಲಿ ಕ್ರಮೇಣ ಕ್ಯಾಸೋ ಬಳಕೆಯನ್ನು ಕಡಮೆ ಮಾಡಲು ಸಾಧ್ಯವಾಯಿತು.
ಆಯುಸ್ಸು 3 ತಿಂಗಳು
`ಆಲ್ ಔಟ್’ ಕಾರ್ಯಾಚರಣೆಯು ತುಂಬ ಚಲನಶೀಲ (ಡೈನಾಮಿಕ್) ಆಗಿದ್ದು, ಭಯೋತ್ಪಾದಕ ಕಮಾಂಡರ್ಗಳ ಮೇಲೆ ಕಣ್ಣಿಡಲು ಅದರಿಂದ ಅನುಕೂಲವಾಯಿತು. ಏಕೆಂದರೆ ಉಗ್ರರ ನಾಯಕರು ಸಾಮಾಜಿಕ ಮಾಧ್ಯಮದ ಮೂಲಕ ವ್ಯಕ್ತಿಪೂಜೆ ನಡೆಸಿ ತಮ್ಮನ್ನು ದೊಡ್ಡದಾಗಿ ಚಿತ್ರಿಸುತ್ತಿದ್ದರು. ಈ ಕಾರ್ಯತಂತ್ರದ ಮೂಲಕ ಸೇನೆ ಉಗ್ರ ಕಮಾಂಡರ್ಗಳಿಗಿದ್ದ ಹಿಡಿತ, ನಿಯಂತ್ರಣ ಮತ್ತು ಅವರ ಯೋಜನೆಗಳನ್ನು ಬಗ್ಗುಬಡಿದು ಅಂತಹ ಸುಮಾರು ೨೦ ನಾಯಕರನ್ನು ಅಳಿಸಿಹಾಕಿತು. ಬುರ್ಹಾನ್ವಾನಿಯ ಸುತ್ತ ಕೆಲವು ಯುವ ಭಯೋತ್ಪಾದಕರು ನಿಂತಿದ್ದ ಛಾಯಾಚಿತ್ರವನ್ನು ಹಿಡಿದುಕೊಂಡು ಬೇಟೆ ಆರಂಭಿಸಿದ ಸೇನೆ ಅವರನ್ನೆಲ್ಲ ಮುಗಿಸಿತು. ಇಂತಹ ಬಿಗಿಯಾದ ಕಾರ್ಯಾಚರಣೆಗಳಿಂದಾಗಿ ಭಯೋತ್ಪಾದಕನಾದ ಒಬ್ಬಾತನ ಆಯುಸ್ಸು ಮೂರು ತಿಂಗಳಿಗೇ ಮುಕ್ತಾಯ ಎನ್ನುವ ಸಂದೇಶವನ್ನು ಎಲ್ಲೆಡೆಗೆ ರವಾನಿಸಿತು.
ಮೂರನೆಯದಾದ ಸಾಮಾಜಿಕ-ರಾಜಕೀಯ ಕ್ಷೇತ್ರದಲ್ಲಿ ಭದ್ರತಾ ಪಡೆಗಳು ಕೈಗೊಂಡ ಕ್ರಮಗಳು ಇನ್ನ? ನಿರೀಕ್ಷಿತ ಫಲಿತಾಂಶವನ್ನು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮುಂದುವರಿದಿದೆ. ಮೃದು ಸ್ವರೂಪದ ಕ್ರಮಗಳು ಪರಿಣಾಮ ಬೀರಬೇಕಾದರೆ ಜನತೆಯಲ್ಲಿ ಘನತೆ ಮತ್ತು ಆತ್ಮವಿಶ್ವಾಸಗಳು ಮರಳಬೇಕು;
ಅದರಿಂದ ವಿಶ್ವಾಸ ಮತ್ತು ನಿರೀಕ್ಷೆಗಳು ಉಂಟಾಗಬೇಕು. ೨೦೧೮ ಅದಕ್ಕೆ ಸರಿಯಾದ ವ? ಎನಿಸುತ್ತದೆ. ಸೇನೆ ತನ್ನ ಕಡೆಯಿಂದ ಮೃದುಸ್ವರೂಪದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ; ಆದರೆ ಇದರಲ್ಲಿ ಹೆಚ್ಚಿನ ಯಶಸ್ಸು ಬಂದಿಲ್ಲ. ಏಕೆಂದರೆ ಪ್ರತ್ಯೇಕತಾವಾದಿಗಳು ವಿವಿಧ ವಾದಗಳ ಮೂಲಕ ಜನರ ಮನಸ್ಸನ್ನು ಕೆಡಿಸುವಲ್ಲಿ ಬಹಳ? ಯಶಸ್ವಿಯಾಗಿದ್ದಾರೆ. ಜ| ರಾವತ್ ಅವರು ಈಚೆಗೆ ಮಾಧ್ಯಮದೊಂದಿಗೆ ನಡೆಸಿದ ಒಂದು ಸಂವಾದದಲ್ಲಿ, ಉಗ್ರರ ನುಸುಳುವಿಕೆಯಿಂದ ನಿರಂತರವಾಗಿ ನಡೆಯುತ್ತಿದ್ದ ಹಿಂಸಾಚಾರವನ್ನು ನಿಯಂತ್ರಿಸಲಾಗಿದೆ ಎಂದು ಹೇಳಿದರು.
ಈಗ ಯಾರು ಭಯೋತ್ಪಾದಕರ ಪಡೆಗೆ ಸೇರಿಕೊಳ್ಳುತ್ತಿದ್ದಾರೆ ಎಂಬುದನ್ನು ಗಮನಿಸಿದರೆ, ಕೆಲವು ಸ್ಥಳೀಯ ಯುವಕರು ಸೇರಿಕೊಳ್ಳುತ್ತಿದ್ದಾರೆ. ಸೇರಿಕೊಳ್ಳುವುದಕ್ಕೆ ಕಾರಣವೆಂದರೆ, ಕೆಲವೆಡೆ ಬೀದಿಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಹತರಾದ ಉಗ್ರರ ಅಂತ್ಯಕ್ರಿಯೆಯ ಸಂದರ್ಭಗಳಲ್ಲಿ ಉಂಟಾಗುತ್ತಿರುವ ಭಾವೋದ್ರೇಕದ ವಾತಾವರಣ. ಹಲವು ಸಲ ಮೃತ ಉಗ್ರನ ಸ್ನೇಹಿತರು ಭಯೋತ್ಪಾದಕರಾಗುತ್ತಿದ್ದಾರೆ. ಅಂದರೆ ಸ್ಥಳೀಯ ಯುವಕರು ಸೇರಿಕೊಳ್ಳುವ ಮೂಲಕ ಭಯೋತ್ಪಾದಕರ ಒಂದು ಸರಪಳಿ ರಚನೆಯಾಗುತ್ತಿದೆ; ಮತ್ತು ಅದರಿಂದಾಗಿ ಕಾಶ್ಮೀರದಲ್ಲಿ ಶಾಂತಿಯ ಮರಳಿಕೆಗೆ ಕಾಲ ಕೂಡಿಬರುತ್ತಿಲ್ಲ. ಶಾಂತಿ ಮರಳಬೇಕಿದ್ದಲ್ಲಿ ಅದಕ್ಕೆ ರಾಜಕೀಯ ಮುಂದಾಳುಗಳು, ಧರ್ಮಗುರುಗಳು, ವಿದ್ಯಾವಂತ ವರ್ಗ ಮತ್ತು ಉಗ್ರರಾಗುವ ಯುವಜನರ ಹೆತ್ತವರ ಸಹಕಾರ ಅವಶ್ಯ. ಅವರಿಗೆ ವಿವಿಧ ಕಡೆಗೆ ಪ್ರವಾಸ ಮಾಡಲು, ಮಾತನಾಡಲು ಹಾಗೂ ವಿವಿಧ ಸಂಪರ್ಕವ್ಯವಸ್ಥೆಗಳ ಮೂಲಕ ಸಂವಹನ ನಡೆಸಲು ಅವಕಾಶ ಕಲ್ಪಿಸಬೇಕು. ಶಾಂತಿಸ್ಥಾಪನೆಯು ಅಂತಿಮ ಗುರಿಯಾಗಿರುವ ಕಾರಣ ತನ್ನ ಜವಾಬ್ದಾರಿಗಳ ಆಚೆಗೆ ಹೋಗಿ ಮೇಲಿನ ಉದ್ದೇಶಕ್ಕೆ ಸಹಾಯಹಸ್ತ ನೀಡುವಲ್ಲಿ ಸೇನೆ ಹಿಂದೆಬೀಳುವುದಿಲ್ಲ. ಇದಕ್ಕೆ ಸೇನೆ ಸಹಕಾರ ನೀಡಬಹುದು ಮತ್ತು ಪೂರಕ ಮಾಹಿತಿಗಳನ್ನು ಒದಗಿಸಬಹುದು. ರಾಜಕೀಯ ಸಮುದಾಯ ಈ ನಿಟ್ಟಿನಲ್ಲಿ ಜನರೊಂದಿಗೆ ಬೆರೆಯಬೇಕು; ಆದರೆ ಅವರ ಮಾತು ’ರಾಜಕೀಯ’ ಆಗಿರಬಾರದು. ಈ ಕುರಿತ ಭರವಸೆಯನ್ನು ಜ| ರಾವತ್ ತಮ್ಮ ಕಡೆಯಿಂದ ಹಲವಾರು ಸಲ ನೀಡಿದ್ದಾರೆ.
ಇದು ಸಕಾಲ
ಭದ್ರತೆಯ ವಾತಾವರಣದಲ್ಲಿ ಸುಧಾರಣೆ ಆಗಿರುವ ಕಾರಣ ರಾಜಕೀಯ ಮತ್ತು ಸಾಮಾಜಿಕ ಉಪಕ್ರಮಗಳಿಗೆ ಈಗ ಸಕಾಲ ಎನ್ನಬಹುದು. ಆದರೆ ಯೋಗ್ಯ ವಾತಾವರಣವು ನಿರಂತರವಾಗಿ ಇರಬೇಕು; ಏಕೆಂದರೆ ಉದ್ರಿಕ್ತ ವಾತಾವರಣದಲ್ಲಿ ಅದು ಸಾಧ್ಯವಾಗುವುದಿಲ್ಲ. ಯಶಸ್ವಿ ಕಾರ್ಯತಂತ್ರಗಳಿಗೆ ಸಾಂಸ್ಥಿಕ ರೂಪ ನೀಡುವುದರಿಂದ ಹೆಚ್ಚಿನ ಪ್ರಯೋಜನ ಆಗಬಹುದು. ಈಗಿನ ಸೇನಾ ಮುಖ್ಯಸ್ಥರಿಗೆ ಇದರ ಸರಿಯಾದ ಪರಿಜ್ಞಾನವಿದ್ದು ಈ ಬಗ್ಗೆ ತಮ್ಮ ಕಡೆಯಿಂದ ಆಗಬೇಕಾದ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಸದ್ಯ ನಿರ್ವಹಿಸಬೇಕಾದ ಕೆಲಸವು ಅತ್ಯಂತ ಸವಾಲೊಡ್ಡುವಂಥದ್ದಾಗಿದ್ದು, ಅದಕ್ಕೆ ಅರ್ಹರಾದವರನ್ನು ನೇಮಿಸುವ ಅವಕಾಶ ಮತ್ತು ಉತ್ತರಾಧಿಕಾರಿಗಳ ಬಗೆಗಿನ ನಿರ್ಣಯಕ್ಕೆ ಸೇನೆಯ ಒಳಗೆ ಪೂರಕ ವಾತಾವರಣವಿರುವುದು ಸಮಾಧಾನ ತರುವ ಅಂಶವಾಗಿದೆ.
ಒಬ್ಬ ಯೋಧನು ಸಮರದಲ್ಲಿ ಗೆಲವು ಸಾಧಿಸಬೇಕಿದ್ದರೆ ಅತ್ಯಂತ ಅಗತ್ಯವಾದ ಅಂಶವೆಂದರೆ ಸಂಬಂಧಪಟ್ಟ ಎಲ್ಲರೂ ಆತನ ಮೇಲೆ ವಿಶ್ವಾಸ ಇಡುವುದು. ನಮ್ಮಲ್ಲಿ ಆ ರೀತಿ ದಂಡನಾಯಕರಲ್ಲಿ ವಿಶ್ವಾಸವಿಡುವ ಒಂದು ಪರಂಪರೆಯೇ ಇದೆ. ಕೆಲವು ಸಲ ಅಕಸ್ಮಾತ್ತಾಗಿ ತಪ್ಪುಗಳು ಸಂಭವಿಸಿಬಿಡುತ್ತವೆ. ಆಗಲೂ ವಿಶ್ವಾಸಕ್ಕೆ ಚ್ಯುತಿ ಬರಬಾರದು. ಈ ಮಾತು ಸೇನೆಗೆ ಕೂಡ ಅನ್ವಯಿಸುತ್ತದೆ. ರಾಜಕೀಯ ನಾಯಕತ್ವವು ಸೇನೆಯ ಮೇಲೆ ವಿಶ್ವಾಸವಿಟ್ಟು ಅದಕ್ಕೆ ತನ್ನ ಕೆಲಸವನ್ನು ಮಾಡಿಕೊಂಡು ಹೋಗಲು ಅನುವು ಮಾಡಿಕೊಡಬೇಕು; ಅಗತ್ಯವಾದ ಬೆಂಬಲವನ್ನು ನೀಡಬೇಕು. ಜಮ್ಮು-ಕಾಶ್ಮೀರದ ಪರಿಸ್ಥಿತಿ ಒಂದು ರೀತಿಯಲ್ಲಿ ಚಿಂತೆಗೀಡುಮಾಡುವಂಥದು ಕೂಡ ಆಗಿದೆ. ರಾಜಕೀಯ ನಾಯಕತ್ವವು ಸೇನೆಯನ್ನು ಬೆಂಬಲಿಸುವ ರೀತಿಯಲ್ಲೇ ದೇಶದ ಜನತೆ ರಾಜಕೀಯ ನಾಯಕರನ್ನು ಮತ್ತು ಆಡಳಿತ ವ್ಯವಸ್ಥೆಯನ್ನು ಬೆಂಬಲಿಸಬೇಕು. ಅದರಿಂದ ಯಾವುದೇ ಸಮಸ್ಯೆಯ ಪರಿಹಾರಕ್ಕೆ ಅನುಕೂಲವಾಗುತ್ತದೆ.
ಅನುವಾದ: ಎಂ.ಬಿ. ಹಾರ್ಯಾಡಿ
ಸೌಜನ್ಯ: ‘ಸ್ವರಾಜ್ಯ’ ಮಾಸಪತ್ರಿಕೆ