ಕೈಗಾರಿಕೀಕೃತ, ಜಾಗತೀಕೃತ ಕೃಷಿಯು ಆತ್ಮಹತ್ಯಾಪರ ಆರ್ಥಿಕತೆಯಲ್ಲಿ ಪರ್ಯವಸಾನಗೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ; ಆಹಾರದ ಅಭಾವವುಂಟಾಗಿ ಬಡವರು ಆತ್ಮಹತ್ಯೆಯತ್ತ ಹೋಗುತ್ತಾರೆ; ಮತ್ತು ಕೊನೆಯದಾಗಿ ಬಿತ್ತನೆಬೀಜ, ಜೀವವೈವಿಧ್ಯ, ಮಣ್ಣು ಹಾಗೂ ನೀರಿಗೆ ಹಾನಿಯುಂಟಾಗಿ ಜೈವಿಕ ಅಸ್ತಿತ್ವವೇ ಅಪಾಯಕ್ಕೆ ಗುರಿಯಾಗುತ್ತದೆ. ಭಾರತದಲ್ಲಿ ಪುನರ್ಜನ್ಮವು ಒಂದು ಸಾಮಾನ್ಯವಾದ ನಂಬಿಕೆ; ಇಲ್ಲಿ ಜೀವನದ ಬ್ಯಾಲೆನ್ಸ್ಶೀಟನ್ನು ಹಲವು ಜನ್ಮಗಳ ಆಧಾರದಲ್ಲಿ ಸಿದ್ಧಪಡಿಸಲಾಗುತ್ತದೆ. ಇಲ್ಲಿ ತಾಳ್ಮೆ ಮತ್ತು ಪುನಶ್ಚೇತನಗಳನ್ನು ’ಕಿಸಾನ್’ ಅಥವಾ ರೈತಜೀವನದ ಗುಣಲಕ್ಷಣವೆಂದು ಪರಿಗಣಿಸಲಾಗುತ್ತದೆ. ಇಂತಹ ಒಂದು ದೇಶದಲ್ಲೇ ರೈತರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾದರೂ ಏಕೆ? […]