ಮೊದಲಿನಿಂದಲೂ ದಿನಚರಿಯನ್ನು ಬರೆಯುವ ಅಭ್ಯಾಸವಿರುವ ನನಗೆ ಇನ್ನೊಬ್ಬರ ದಿನಚರಿಯನ್ನು ಓದಬಾರದೆನ್ನುವ ಒಂದು ಮನೋಭಾವ ಈಗಲೂ ಇದೆ. ಇದೇ ಕಾರಣಕ್ಕಾಗಿ ನನಗೆ ಯಾರದೋ ಖಾಸಗಿ ವಿಷಯಗಳನ್ನು ಆಡಿಕೊಳ್ಳುವುದು, ಮೂಗುತೂರಿಸುವುದು ಹಿಡಿಸದ ಸಂಗತಿ. ಹೀಗಿರುವಾಗ ಒಬ್ಬ ಶಿಕ್ಷಕಿಯ ದಿನಚರಿಗಳನ್ನು ಓದುವುದು ಎಂದರೆ? ಅಪರಾಧವೋ ಅಥವಾ ಕಾತುರವೋ ತಿಳಿಯಲಿಲ್ಲ! ಆದರೂ ಅವರೇ ಓದು ಪರವಾಗಿಲ್ಲ ಎಂದು ತಾವಾಗಿಯೇ ಲೋಕಕ್ಕೆ ತೆರೆದಿಟ್ಟಾಗ, ಹಲವು ದೃಷ್ಟಿಕೋನಗಳಿಂದ ಓದುವುದು ಉಚಿತವೆನಿಸಿತು. ಹಾಗಾಗಿಯೇ ಲೇಖಕಿ, ಶಿಕ್ಷಕಿ, ಕವಯಿತ್ರಿ, ಗೃಹಿಣಿ ಇತ್ಯಾದಿ ಅಭಿಧಾನಯುಕ್ತ ಮೇದಿನಿಯವರ ‘ಮಿಸ್ಸಿನ ಡೈರಿ’ಯ ಪ್ರತಿಯನ್ನು […]
ಅನುಕರಣೀಯ ದಿನಚರಿ ‘ಮಿಸ್ಸಿನ ಡೈರಿ’
Month : July-2024 Episode : Author : ವಿಘ್ನೇಶ್ವರ ಉಡುಪ