“ಉಪಕಾರ ಮಾಡೋದೇ ಖಾಕಿ ಬಟ್ಟೆ ಗುರಿ. ಉಪಚಾರ ಮಾಡೋದೇ ಖಾದಿ ಬಟ್ಟೆ ಗುರಿ, ಉಪದೇಶ ಮಾಡೋದೇ ಕಾವಿ ಬಟ್ಟೆ ಗುರಿ… ಈ ಗುಟ್ಟು ಹೇಳಿದರೆ ಮೂರು ಬಟ್ಟೆಯವರಿಗೂ ನನ್ನ ಮೇಲೆ ಹೊಟ್ಟೆ ಉರಿ…’’ ಈ ಗುಟ್ಟು ಹೇಳಿದವರು ಯಾರು ಗೊತ್ತಾ? ಇಡೀ ಪ್ರಪಂಚದ ಕನ್ನಡಿಗರಿಗೆಲ್ಲರೂ ಮೆಚ್ಚುವ ಮಾಸ್ಟರ್ ಹಿರಣ್ಣಯ್ಯ (ಮಾಹಿ). ಸಮಾಜಕ್ಕೆ ದಾರಿದೀಪವಾಗಿರುವ ಅಥವಾ ದಾರಿದೀಪವಾಗಿರಬೇಕಾದವರ ಕರ್ತವ್ಯವನ್ನು ಇದಕ್ಕಿಂತ ಸೂಕ್ತವಾಗಿ, ಸೂಕ್ಷ್ಮವಾಗಿ, ಸರಳವಾಗಿ, ನೇರವಾಗಿ – ಹೇಳುವುದಕ್ಕಾಗುತ್ತದೆಯೇ, ಬೇರೆ ಯಾರಿಗಾದರೂ? ಸಾಧ್ಯವಿಲ್ಲ. ಕನ್ನಡಕ್ಕೊಬ್ಬನೇ ಕೈಲಾಸಂ ಅಂದ ಹಾಗೆ […]




