“ಭಾರತದಲ್ಲಿ ಹಿಂದೂಧರ್ಮವನ್ನು ಹೊರಗಿನ ಅತಿಕ್ರಮಣಗಳು ಹಾಗೂ ಒಳಗಿನ ಏರುಪೇರುಗಳಿಂದ ಉಳಿಸಿ ಬೆಳೆಸಲು ಮುಖ್ಯಕಾರಣಸ್ಥರು ಭಕ್ತಿಪಂಥದಲ್ಲಿ ತೊಳಗಿ ಬೆಳಗಿದ ತಾರಾಗಣಗಳು ಎಂದರೆ ನಾವು ಸತ್ಯವನ್ನೇ ಹೇಳುತ್ತಿರುವೆವು ಎಂದರ್ಥ” ಎನ್ನುತ್ತಾರೆ ವರೇಣ್ಯರು. ಈ ತಾರಾಸಮೂಹದಲ್ಲಿ ಅತ್ಯಂತ ಪ್ರಜ್ವಲವಾಗಿ ಬೆಳಗುತ್ತಿರುವ ನಕ್ಷತ್ರ ಮಹಾರಾಷ್ಟ್ರದ ಸಂತವರೇಣ್ಯ ಶ್ರೀ ಜ್ಞಾನದೇವರು (1275-1296). ಜ್ಞಾನದೇವರು ಚಿಕ್ಕವಯಸ್ಸಿನಲ್ಲೇ ಭಗವದ್ಗೀತೆಯ 700 ಶ್ಲೋಕಗಳಿಗೆ 9000ಕ್ಕೂ ಮೇಲ್ಪಟ್ಟು ಓವಿಗಳನ್ನು ಹಾಡಿದ ‘ಭಾವಾರ್ಥದೀಪಿಕಾ’ ಅಥವಾ ‘ಜ್ಞಾನೇಶ್ವರೀ’ ಎಂಬ ಬೃಹದ್ ಗ್ರಂಥವನ್ನು ರಚಿಸಿದ್ದಾರೆ. ಇದಲ್ಲದೆ, ಅವರು ವಾರಕರೀ ಸಂಪ್ರದಾಯಕ್ಕೆ ನವಚೇತನ ತುಂಬಿದುದು, ಮರಾಠಿಭಾಷೆಯ […]
‘ಜ್ಞಾನೇಶ್ವರೀ’ ಮರಾಠಿಯಲ್ಲಿ ಮಾಧವನ ಗೀತೆ
Month : May-2020 Episode : Author : ಶಶಿಕಲಾ ಶ್ರೀಧರ್