
–ಶೈಲಜಾ ಗೋರನಮನೆ ಶಿರಸಿಯ ಹೋಳಿಯಾಟದ ಹುಲಿವೇಷ ಮತ್ತು ಬೇಡರವೇಷಗಳೆರಡೂ ಇಂದಿಗೂ ವಿಕೃತಿಯ ವಿನಾಶವನ್ನು ತಡೆಗಟ್ಟುತ್ತ ನಾಗರಿಕ ಕರ್ತವ್ಯಗಳನ್ನು ನೆನಪಿಸುತ್ತ ಸಂಸ್ಕೃತಿಯೊಂದರ ರಾಯಭಾರಿಗಳಂತೆ ನಿಂತಿವೆ. “ಬೇಡ ಕೃಷ್ಣ… ರಂಗಿನಾಟ ಸೀರೆ ನೆನೆವುದೂ. ಮಧ್ಯರಾತ್ರಿ ಚಂದ್ರಚಳಿಯು ತುಂಬುತಿರುವುದು.. ರಾಧೆ ತೊಟ್ಟ ರವಿಕೆ ಜರಿ ರೇಶ್ಮೆಯಾಗಿದೆ. ಕೃಷ್ಣನ ಬಳಿ ರಂಗು ತುಂಬಿದ ಗಡಿಗೆ ಕಾದಿದೆ…’’ ಬಾಲ್ಯದಲ್ಲಿ ಬಣ್ಣಬಣ್ಣದ ಲಂಗ-ದಾವಣಿ ತೊಟ್ಟು, ಗುಲಾಬಿರಂಗಿನ ಓಡನಿ ಹೊದ್ದು ಗೆಜ್ಜೆಯನ್ನು ಗಿಲಿಗಿಲರೆನಿಸುತ್ತಿದ್ದ ನರ್ತನವು ಹೆಜ್ಜೆಯಿಂದ ಎದೆಗೇರಿ ಕೆನ್ನೆಗಳನ್ನು ತುಂಬಿದಾಗ ಯೌವನ ಬಂದಿತ್ತು. ರಂಗುರಂಗಿನ ಗೋಕುಲದಲ್ಲಿ ಪಿಚಕಾರಿ […]