– ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜೀ, ಸಿದ್ಧಗಂಗಾ ಮಠ ನಮ್ಮ ಭಾರತೀಯ ಕುಟುಂಬಪದ್ಧತಿ ವಿಶ್ವದಲ್ಲೇ ಎಲ್ಲಿಯೂ ಕಾಣಸಿಗದೆ ಇರುವಂತಹ ಅತಿಶಯದ ಪದ್ಧತಿ. ಇಷ್ಟು ಮಂದಿ ಒಟ್ಟಾಗಿ ಜೀವಿಸುವಂತಹ ವಾತಾವರಣವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ನಮ್ಮ ಕುಟುಂಬಪದ್ಧತಿಯೂ ಜೀವನಶೈಲಿಯೂ ದೊಡ್ಡÀ ಆದರ್ಶವನ್ನು ಬೆಳೆಸಿಕೊಂಡು ಬಂದಂಥದ್ದು. ಎಲ್ಲ ಆಶ್ರಮಗಳಿಗೂ ಆಶ್ರಯಸ್ಥಾನ ಗೃಹಸ್ಥಾಶ್ರಮ ಎಂದು ಹೇಳಿಕೊಂಡು ಬಂದಿದ್ದಾರೆ. ‘ಧನ್ಯೋ ಗೃಹಸ್ಥಾಶ್ರಮೀ’ ಎಂದು ಹೇಳಿದ್ದಾರೆಯೆ ಹೊರತು ‘ಧನ್ಯೋ ಸಂನ್ಯಾಸಾಶ್ರಮೀ’ ಎಂದು ಎಲ್ಲಿಯೂ ಹೇಳಿಲ್ಲ. ಈ ಮಾತಿನ ಮೂಲಕ ಗೃಹಸ್ಥಾಶ್ರಮಕ್ಕೆ ಎಷ್ಟೊಂದು ಮಹತ್ತ್ವವನ್ನು ಕೊಟ್ಟಿದ್ದೇವೆ […]




