ತುಂಬಾ ದೂರ ನಡೆದುಕೊಂಡೇ ಹೋಗಲು ಇದ್ದಾಗ ದಾರಿ ಖರ್ಚಿಗೆ ಅಂತ ಏನಾದರೂ ಜೊತೆಗಿರಬೇಕು ಎಂಬೊಂದು ರೂಢಿಯಿದೆ. ಹರಟೆ ಹೊಡೆಯುತ್ತಾ ಸಾಗಲೊಬ್ಬ ಸಹಪಯಣಿಗ, ಮತ್ತೆ ಮತ್ತೆ ಗುನುಗುನಿಸಲು ಯಾವುದೋ ಹಾಡಿನ ಜನಪ್ರಿಯ ಸಾಲುಗಳು, ನಾಟಕ ಇಲ್ಲವೇ ಯಕ್ಷಗಾನದ ಪ್ರಸಿದ್ಧ ಡೈಲಾಗ್ ಜೊತೆಯಾದರೆ ಅದೆಷ್ಟೇ ದೂರದ ದಾರಿಯಾದರೂ ಸಾಗಿದ್ದೇ ಗೊತ್ತಾಗುವುದಿಲ್ಲ. ಕೆಲವರಂತೂ ಅವನ್ನು ಹೇಳುತ್ತಾ ತಕ್ಕ ಹಾವಭಾವ, ಸಣ್ಣಗೆ ಕೈ ಸನ್ನೆಯನ್ನೂ ಮಾಡುತ್ತಾ ನಡೆಯುವುದಿದೆ. ಇಳಿವಯಸ್ಸಿನಲ್ಲಿ ನನ್ನಜ್ಜನಿಗೆ ಒಂದು ಅಭ್ಯಾಸವಿತ್ತು. ಒಬ್ಬರೇ ಎಲ್ಲಿಯಾದರೂ ಹೋಗುವಾಗಲೂ ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡು ಸಾಗುವುದು. […]
‘ದಾರಿ’ ಕಾಣದಾಗಿದೆ…
Month : December-2024 Episode : Author : ಸಂದೇಶ್ ಎಚ್. ನಾಯ್ಕ್