ದೇಶದಲ್ಲಿ ಆಗ ತುರ್ತುಸ್ಥಿತಿಯ ಸಮಯ. ಅದು ಜಾರಿಯಾಗಿ ಆರೆಂಟು ತಿಂಗಳು ಕಳಿದಿತ್ತೇನೋ. ಆ ಸಮಯದಲ್ಲಿ ಉಡುಪಿಯ ಪೂಜ್ಯ ಶ್ರೀ ಪೇಜಾವರ ಮಠಾಧೀಶರು ಹಲವೆಡೆ ಉಪನ್ಯಾಸಗಳಲ್ಲಿ ಜನಸಾಮಾನ್ಯರನ್ನು ಎಚ್ಚರಿಸಲು ಪ್ರಯತ್ನಿಸಿದರು. ಅದಕ್ಕಾಗಿ ಸ್ವಾರಸ್ಯಕರ ಪ್ರಸಂಗಗಳನ್ನು ಹಾಸ್ಯದ ರಂಗು ಬೆರೆಸಿ ಹೇಳುತ್ತಿದ್ದರು. ಆ ಪೈಕಿ ಇದೊಂದು: ಒಮ್ಮೆ ಅವರು ಒಂದು ಸಭೆಯಲ್ಲಿ ಉಪನ್ಯಾಸ ನೀಡುತ್ತಿದ್ದಾಗ, ಯಾರೋ ಆಗಂತುಕರೊಬ್ಬರು ಸಭೆಯ ಮಧ್ಯೆ ಪ್ರವೇಶಿಸಿ, ನೆರೆದಿದ್ದವರಿಗೆಲ್ಲ ಮಿಠಾಯಿ ಹಂಚಲಾರಂಭಿಸಿದರಂತೆ. ಮಿಠಾಯಿ ತಿಂದು ಮುಗಿಸಿದ ನಂತರ ಸಭಿಕರಲ್ಲೊಬ್ಬರು, “ಹಂಚಲು ಈಗೇನು ಅಂಥ ವಿಶೇಷ?” ಎಂದರಂತೆ. […]
ದೊಡ್ಡವರ ಪುಟ್ಟ ಕಥೆಗಳು
Month : December-2023 Episode : Author : ಸಂ: ಸು. ವೇಣುಗೋಪಾಲ್