ಅಜ್ಜಿಮನೆಯಲ್ಲಿ ಕಳೆಯುವ ಅವಕಾಶ ಬೇಸಿಗೆರಜೆಯಲ್ಲಿ ಮಾತ್ರ. ಹೈಸ್ಕೂಲಿಗೆ ಸೇರುವವರೆಗೂ ಬೇಸಿಗೆರಜೆ ಶುರುವಾಗುತ್ತಿದ್ದಂತೇ ನನ್ನದು ಅಜ್ಜಿಮನೆಗೆ ಸವಾರಿ. ರಜೆ ಸಿಕ್ಕ ಮರುದಿನವೇ ಅಜ್ಜಿ ನಮ್ಮ ಮನೆಗೆ ದೊಡ್ಡಮಾವನನ್ನು ಕಳಿಸುತ್ತಿದ್ದರು. ಮಾವ ಕೆಂಪು ಬಸ್ಸಿನಲ್ಲಿ ನನ್ನನ್ನು ಕೂರಿಸಿಕರೆದುಕೊಂಡು ಹೋಗುತ್ತಿದ್ದರು. ಅಜ್ಜಿಮನೆಗೆ ಹೋಗುವಾಗ ಹಾಕಲೆಂದೇ ಅಮ್ಮ ಹಾಲು ಮಾರಿದ ದುಡ್ಡನ್ನು ಅಪ್ಪನಿಗೆ ಕಾಣದಂತೆ ತೆಗೆದಿರಿಸಿ ನನಗೆ ಹೊಸಬಟ್ಟೆ ಹೊಲಿಸಿ ಕೊಡುತ್ತಿದ್ದಳು. ಅದನ್ನು ಧರಿಸಿ ಸಂಭ್ರಮದಿಂದ ನಾನು ಅಜ್ಜಿಮನೆಗೆ ಹೋಗುತ್ತಿದ್ದೆ. ಈ ಬೇಸಿಗೆರಜೆಯಲ್ಲಿ ಅಜ್ಜಿಮನೆಗೆ ಹೋಗು. ಅಜ್ಜಿ ಕಾಯುತ್ತಿರುತ್ತಾಳೆ. ಕಳೆದ ಬೇಸಿಗೆರಜೆಯಲ್ಲೂ ಹೋಗಿಲ್ಲ. […]
ಅಜ್ಜಿ ಕಟ್ಟಿಕೊಟ್ಟ ಕೃಷಿಬುತ್ತಿ
Month : June-2021 Episode : Author : ಸಹನಾ ಕಾಂತಬೈಲು