ಸಂಸ್ಕೃತದಲ್ಲಿ ಕಾವ್ಯವೆಂದರೆ ಗದ್ಯವೂ ಹೌದು, ಪದ್ಯವೂ ಹೌದು. ಆದರೆ ಕನ್ನಡದ ಮಟ್ಟಿಗೆ ಯೋಚಿಸುವುದಾದರೆ ಕಾವ್ಯ ಶಬ್ದವು ಗದ್ಯಕ್ಕಿಂತ ಪದ್ಯವನ್ನೇ ಪ್ರಧಾನವಾಗಿ ಸೂಚಿಸುತ್ತದೆ. ಸಾಹಿತ್ಯದ ಪರಿಭಾಷೆ ಆಯಾ ಕಾಲಕ್ಕೆ ಆಯಾ ಭಾಷೆಗೆ ಬದಲಾಗುವುದು ಇದಕ್ಕೆ ಕಾರಣವೆನಿಸುತ್ತದೆ. ಕಾವ್ಯವು ತನ್ನ ಕಾಲಘಟ್ಟದ ಜನಜೀವನವನ್ನೂ, ಜೀವನಮೌಲ್ಯವನ್ನೂ ಕಟ್ಟಿಕೊಡುತ್ತದೆ. ಕನ್ನಡ ಕಾವ್ಯಲೋಕವನ್ನು ಗಮನಿಸಿದರೆ ಇಪ್ಪತ್ತನೆಯ ಶತಮಾನದ ಆರಂಭವು ಹೊಸದೊಂದು ಆಯಾಮವನ್ನೇ ಹುಟ್ಟುಹಾಕಿದ್ದನ್ನು ಕಾಣಬಹುದು. ಪ್ರಾಚೀನದಿಂದಲೂ ಪದ್ಯ ಸಾಹಿತ್ಯವೇ ಭಾರತದ ಅಂತರ್ವಾಣಿಯಾಗಿ ಪ್ರವಹಿಸಿದ್ದು, ನಮಗೆ ಬಿಡಿಬಿಡಿಯಾಗಿ ತೋರುವ ಸುಭಾಷಿತಗಳು, ಪ್ರಕೃತಿ ಗೀತೆಗಳು, ಶೃಂಗಾರ ಪದ್ಯಗಳು […]
ಕಾವ್ಯ ಪಾಕದಲ್ಲಿ ಸಮಷ್ಟಿಯ ಹೂರಣ
Month : February-2026 Episode : Author : ಸುಜಾತಾ ಹೆಗಡೆ




