
ಸಾಮಾನ್ಯವಾಗಿ ಕಳೆಯೆಂದು ಪರಿಗಣಿಸಲಾದ ನೂರೆಪ್ಪತ್ತು ಸಸ್ಯಗಳನ್ನು ಗುರುತಿಸಿ, ಅವು ಈ ನಿಸರ್ಗದಲ್ಲಿ ಏಕೆ ಹುಟ್ಟಿವೆ, ಅವುಗಳಿಂದ ಏನಾದರೂ ಪ್ರಯೋಜನವಿದೆಯೆ? ಎಂದು ಸಂಶೋಧನೆ ನಡೆಸಿದವರು ವಿಜ್ಞಾನಿ ಪಳ್ಳತ್ತಡ್ಕ ಕೇಶವ ಭಟ್ಟ. ಇಂಥ ವಿಭಿನ್ನ ಕೆಲಸಗಳಿಂದಲೇ ಜಗನ್ಮಾನ್ಯತೆ ಪಡೆದ ಈ ಕನ್ನಡಿಗ ವಿಜ್ಞಾನಿಯ ಮೂಲ ಕಾರ್ಯಕ್ಷೇತ್ರ ದಕ್ಷಿಣ ಅಮೆರಿಕದ ವೆನಿಝ್ಯೂಲ! ಬಾಲ್ಯದಲ್ಲಿದ್ದಾಗ ಅಂಗಡಿಯಿಂದ ಉಪ್ಪೊ, ಹುರಿಗಡಲೆಯೊ ತಂದುಕೊಡು ಎಂದು ಅಮ್ಮ ಹೇಳಿದೊಡನೆ ನೀವು ನೆಗೆಯುತ್ತಾ ಪೇಟೆಬೀದಿಗೆ ಓಡುತ್ತಿದ್ದೀರಲ್ಲವೆ? ಆ ಓಟವೆಂದೂ ನೇರವಾಗಿರುತ್ತಿರಲಿಲ್ಲ, ಎಡದಿಂದ ಬಲ, ಬಲದಿಂದ ಎಡಕ್ಕೆ ಸುತ್ತುತ್ತಾ ಅಂಗಡಿ […]