ಒಟ್ಟಿನಲ್ಲಿ ಅಲ್ಲಿಯವರೆಗೂ `ಉಪಾಧ್ಯಾಯ’ ಸಂಸ್ಕೃತ ಶಬ್ದಕ್ಕೆ ಪ್ರತಿಯಾಗಿ `ಓವಜ, ಓಜ’ ಎಂದು ಬಳಸಲ್ಪಡುತ್ತಿದ್ದ ಪದಕ್ಕೆ ಇಲ್ಲಿ `ನಾಡು’ ಪದವನ್ನು ಜೊತೆಮಾಡಿ ನಾಡು+ಓಜ=ನಾಡೋಜ ಎಂದರೆ, ನಾಡಿನ ಗುರು, ನಾಡಿನ ಶ್ರೇಷ್ಠ ಎಂಬರ್ಥದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಯೋಗಿಸಿ ಒಂದು ಸುಂದರವಾದ, ಅರ್ಥಗರ್ಭಿತವಾದ ಶಬ್ದವನ್ನು ಸೃಷ್ಟಿಸಿ ಶಬ್ದಬ್ರಹ್ಮನಾಗುತ್ತಾನೆ, ಮಹಾಕವಿ ಪಂಪ. ಉಪಾಧ್ಯಾಯ-ಓಜ ಸನಾತನಧರ್ಮದ ಭಾಷೆಯಾದ ಸಂಸ್ಕೃತದಿಂದ ಮೊದಲು ವಿಕಾಸಗೊಂಡಿದ್ದು ಪಾಳಿ ಭಾಷೆ. ಇದನ್ನು ಬೌದ್ಧಮತದ ಪ್ರಚಾರಕ್ಕೆ ಬಳಸಿಕೊಳ್ಳಲಾಯಿತು. ಅನಂತರ ವಿಕಾಸಗೊಂಡಿದ್ದು ಪ್ರಾಕೃತ ಭಾಷೆ. ಇದನ್ನು ಜೈನಮತಪ್ರಚಾರಕ್ಕೆ ಬಳಸಿಕೊಳ್ಳಲಾಯಿತು. ಮತಪ್ರಚಾರಕ್ಕೆ ಬಳಸಲ್ಪಟ್ಟ […]
ನಾಡೋಜ -ಒಂದು ಶಬ್ದಾರ್ಥ ಚಿಂತನೆ
Month : May-2015 Episode : Author : ಸುಬ್ರಹ್ಮಣ್ಯಂ ಕೆಂದೋಳೆ