
ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೧೩ರಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ ‘ಅವನು’ ಆ ಗಳಿಗೆಯಿಂದ ‘ಅವರು’ ಆಗಿದ್ದು ಹೇಗೆ? ಜೀವನದಲ್ಲಿ ಏನೆಲ್ಲವನ್ನೂ ಅನುಭವಿಸಿದ ಮೇಲೆ ಹಣ್ಣೆಲೆಗೆ ಹೇಳಿಕೊಳ್ಳಲು ಏನು ತಾನೇ ಇರುತ್ತದೆ? ಅರ್ಧ ತುಂಬಿದ ಕೊಡವಷ್ಟೇ ನೀರು ತುಂಬುವಾಗ ಶಬ್ದ ಮಾಡುವುದು. ತುಂಬಿದ ಕೊಡ ತುಳುಕುವುದಿಲ್ಲ, ಎಂದರೆ ಶಬ್ದ ಮಾಡದು. ವಿಪರ್ಯಾಸವೆಂದರೆ ಅದು ಖಾಲಿ ಕೊಡದಷ್ಟೇ ಮೌನಿ, ಶಬ್ದರಹಿತ, ಆದರೆ ಸ್ವಯಂಪೂರ್ಣ.