
ಜೂನ್ 21, 2015ನ್ನು ಮೊದಲ ಅಂತಾರಾಷ್ಟ್ರೀಯ ಯೋಗದಿನವಾಗಿ ಆಚರಿಸಲಾಯಿತು ಮತ್ತು ಅಲ್ಲಿಂದೀಚೆಗೆ ಯೋಗವು ವಿಶ್ವದೆಲ್ಲೆಡೆ ಮತ್ತಷ್ಟು ಜನಪ್ರಿಯವಾಗುತ್ತ ಬಂದಿದೆ. ಭಾರತೀಯರ ಹೆಮ್ಮೆಯಾಗಿರುವ ಯೋಗದ ತತ್ತ್ವ, ಆಚರಣೆಗಳು ಮತ್ತು ಪ್ರಸಕ್ತ ದಿನಗಳಲ್ಲಿ ಅದರ ಸ್ವರೂಪದ ಕುರಿತು ವಿವರಿಸುವ ಕಿರುಪ್ರಯತ್ನ ಇಲ್ಲಿಯದು. ಯೋಗ ಎಂದರೇನು? ಯೋಗ ಎಂಬುದು ‘ಯುಜ್’ ಎಂಬ ಸಂಸ್ಕೃತ ಧಾತುವಿನಿಂದ ಹುಟ್ಟಿಕೊಂಡಿದೆ. ಇದರ ಅರ್ಥ ಸಂಯೋಗ, ಸೇರುವುದು ಎಂದಾಗಿದೆ; ಜೀವಾತ್ಮವು ಪರಮಾತ್ಮನೊಂದಿಗೆ ಸೇರುವುದೇ ಯೋಗ. ಯೋಗವೆಂದರೆ ಒಂದು ಸ್ವಶಿಸ್ತು. ಯೋಗದ ಉದ್ದೇಶ ದೇಹ, ಮನಸ್ಸು ಮತ್ತು ಆತ್ಮದ […]