ಮಾನವಜೀವಿಗಳು ಈ ಲೋಕಕ್ಕೆ ಬರುವಾಗಲೂ ಸ್ವರ್ಗದಲ್ಲಿರುವ ಭಗವಂತನ ಸಾಯುಜ್ಯಕ್ಕೆ ಸೇರುವಾಗಲೂ ಏಕಾಂಗಿಗಳಾದರೂ, ಇಲ್ಲಿರುವಷ್ಟು ಕಾಲ ಒಂಟಿಯಾಗಿ ಬಾಳಲಾರರು! ಕುಟುಂಬವನ್ನಾಗಲಿ ಅಥವಾ ಒಂದು ಗುಂಪನ್ನಾಗಲಿ ಏರ್ಪಡಿಸಿಕೊಂಡು ಸಹಬಾಳ್ವೆ ನಡೆಸುವುದು ಅವರ ಸ್ವಭಾವ. ಗುಂಪುಗುಂಪಾಗಿ ವಾಸಿಸುವ ಅವರ ಪ್ರವೃತ್ತಿಯಿಂದಾಗಿ, ಆ ಗುಂಪು ಮಿತಿಮೀರಿ ಬೆಳೆದಾಗ ಸಣ್ಣ ಸಣ್ಣ ಪಂಗಡಗಳಾಗಿ ವಿಭಜನೆಯಾಗುವುದು ಅನಿವಾರ್ಯವಾಗುತ್ತದೆ. ಈ ವಿಭಜನೆಗೆ ನಾನಾ ಅಂಶಗಳು ನೆರವಾಗುತ್ತವೆ: ವೃತ್ತಿಗಳು, ಜನಾಂಗದ ಸ್ವಭಾವ, ನಂಬಿಕೆಗಳು, ತಲೆತಲಾಂತರದಿಂದ ಬೆಳೆದುಬಂದಿರುವ ಪದ್ಧತಿ, ಆಚರಣೆಗಳು ಆರ್ಥಿಕ ಅನುಕೂಲತೆಯಿಂದ ಅಥವಾ ಶಿಕ್ಷಣ ಮತ್ತು ಸಂಸ್ಕೃತಿಯಿಂದ ಉಂಟಾಗುವ […]
ಜಾತಿಪದ್ಧತಿ ಒಂದು ವಿವೇಚನೆ : ಸ್ವಾಮಿ ಹರ್ಷಾನಂದಜೀ
Month : December-2020 Episode : Author : ಸ್ವಾಮಿ ಹರ್ಷಾನಂದಜೀ