
ಕಾಲದಿಂದ ಕಾಲಕ್ಕೆ ಋತುಗಳು ಬದಲಾಗುವುದು ಎಷ್ಟು ಸಹಜವೋ, ಸೂರ್ಯೋದಯ ಚಂದ್ರೋದಯಗಳು ಹೇಗೆ ತಮ್ಮ ಪಾಡಿಗೆ ತಾವು ಘಟಿಸುತ್ತವೋ ಅದೇ ರೀತಿಯಲ್ಲಿ ಮನೆಯಲ್ಲಿ ಅಮ್ಮ ಇರುತ್ತಾಳೆ, ವಿಶೇಷವಾದ ಏನನ್ನೂ ಬಯಸದೇ. ಅವಳು ಕಂಗೆಟ್ಟಾಗ ಅವಳನ್ನು ಆಧರಿಸಿದ ನಮ್ಮೆಲ್ಲರ ಬದುಕೂ ಕಂಗೆಡುತ್ತದೆ. ಹಾಗಾಗಿ ಅಮ್ಮ ನಮ್ಮೊಡನಿದ್ದಾಗ ಅವಳಿಗೆ ಮನಸ್ಸಿಗೆ ಘಾಸಿಯಾಗದಂತೆ, ಒತ್ತಡಗಳು ಅವಳನ್ನು ಕಾಡದಂತೆ ನೋಡಿಕೊಳ್ಳಿ. ಐಸಿಯುನಿಂದ ಹೊರಗೆ ಕಾಯುವ ಒತ್ತಡವನ್ನು ಸಿನಿಮಾಗಳಲ್ಲಿ ನೋಡಿ ಅಷ್ಟೇ ಗೊತ್ತು. ಹೀರೋ ಅಥವಾ ಹೀರೋಯಿನ್ ಶತಪಥ ಸುತ್ತುತ್ತಿರುತ್ತಾರೆ. ಒದ್ದಾಡುತ್ತಿರುತ್ತಾರೆ. ನನ್ನಿಬ್ಬರು ಮಕ್ಕಳು ಜನಿಸಿದಾಗ […]