ಪ್ರಾಗೈತಿಹಾಸಿಕ ಕಾಲಮಾನದಲ್ಲಿ ನಮ್ಮ ರಾಜ್ಯದಲ್ಲಿ ಏನೆಲ್ಲಾ ನಡೆದಿರಬಹುದು ಎನ್ನುವುದು ಕುತೂಲಹಲಕಾರಿ ಅಷ್ಟೇ ರೋಚಕವಾದ ಇತಿಹಾಸ, ಅಲ್ಲಲ್ಲ ಪ್ರಾಗಿತಿಹಾಸ. ಲಭ್ಯವಿರುವ ಮಾಹಿತಿಯ ಪ್ರಕಾರ ಕರ್ನಾಟಕ ಒಂದರಲ್ಲೇ ೫೦ಕ್ಕೂ ಹೆಚ್ಚು ಪ್ರಾಗೈತಿಹಾಸಿಕ ತಾಣಗಳಿವೆ. ಇವು ಸುಮಾರು ೨ ಲಕ್ಷ ವರ್ಷದಿಂದ ೧೦ ಸಾವಿರ ವರ್ಷಗಳಷ್ಟು ಹಳೆಯವು. ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿರುವ ಇವುಗಳಲ್ಲಿ ಹೆಚ್ಚಿನವು ಕೇವಲ ಸಂಶೋಧಕರಿಗೆ ಮಾತ್ರ ಪರಿಚಿತವಾಗಿವೆ ಎಂಬುದು ದುರದೃಷ್ಟದ ಸಂಗತಿ. ಸಂಸ್ಕೃತಿಯ ಬೇರುಗಳನ್ನು ಹುಡುಕಿಕೊಂಡು ಹೋಗುವ ಮನುಷ್ಯಪ್ರಯತ್ನ ಇಂದು-ನಿನ್ನೆಯದಲ್ಲ. ತನ್ನ ಪೂರ್ವಜರ ಬದುಕು, ವಲಸೆ, ಜೀವನಕ್ರಮ, ಆಹಾರಪದ್ಧತಿ, […]
ಭಾರತೀಯ ಅಸ್ಮಿತೆ ಮತ್ತು ಪ್ರಾಗೈತಿಹಾಸಿಕ ತಾಣಗಳ ಸಂರಕ್ಷಣೆ
Month : December-2021 Episode : Author : ಸುಘೋಷ್ ಸ. ನಿಗಳೆ