ಜೀವತಂತಿ ಕಡಿದುಹೋಗುವ ಮುನ್ನ ಮೋಹಜಾಲಗಳನ್ನೆಲ್ಲ ಒಮ್ಮೆ ಕಳಚಿಟ್ಟು ನಾನು ನಾನಾಗಿ ಬದುಕಬೇಕಿದೆ ಒಮ್ಮೆ ಬರುವುದೆ ಆ ಒಂದು ದಿನ? ಕಣ್ಣ ಜ್ಯೋತಿ ಆರಿಹೋಗುವ ಮುನ್ನ ನನ್ನ ನಾನೇ ಮರೆತು ಹೋಗುವ ಮುನ್ನ ನಾನು ನಾನಾಗಿ ಬೆಳಗಬೇಕಿದೆ ಒಮ್ಮೆ ದೊರೆವುದೆ ಆ ಒಂದು ದಿನ? ಮಗಳು, ಮಡದಿ, ಮಾತೆ ಎಂಬ ಹೆಮ್ಮೆ ಇದೆ ನನಗೆ ಆದರೂ ಆ ಬಿರುದುಗಳ ಕಳಚಿಟ್ಟು ನಾನು ನಾನಾಗಿ ಬಾಳಬೇಕೆಂಬ ಆಸೆ ಒದಗಿಬರುವುದೇ ಆ ಒಂದು ಸುದಿನ! ಶ್ರಮರಹಿತಳಾಗಿ , ತ್ಯಾಗರಹಿತಳಾಗಿ ಯಮನಪಾಶ ಬೀಳುವ […]
ನಿರೀಕ್ಷೆ
Month : December-2021 Episode : Author :