
ಈಗ್ಗೆ ಎರಡು ತಿಂಗಳ ಹಿಂದೆಯಷ್ಟೆ ನಮ್ಮನ್ನಗಲಿದ ಸಾಹಿತ್ಯಕ್ಷೇತ್ರ ಮೇರು, ಶಬ್ದಶಾಸ್ತ್ರಪಾರೀಣ ಜಿ. ವೆಂಕಟಸುಬ್ಬಯ್ಯ ಅವರೊಡನೆ ಹತ್ತಾರು ವರ್ಷಗಳ ನಿಕಟ ಸಂಪರ್ಕದ ಧನ್ಯತೆ ಪಡೆದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಈ ನುಡಿನಮನದಲ್ಲಿ ‘ಜೀವಿ’ಯವರ ವ್ಯಕ್ತಿತ್ವಮಾಧುರ್ಯದ ಹಲವು ವಿರಳ ಝಳಕುಗಳನ್ನು ಹಾರ್ದವಾಗಿ ಮೆಲುಕುಹಾಕಿದ್ದಾರೆ. ಸಮುನ್ನತ ಸಾರಸ್ವತ ಸಾಧನೆಯಷ್ಟೆ ‘ಜೀವಿ’ಯವರ ಸರಸತೆ-ಲೋಕಾಭಿಮುಖ ಸ್ಪಂದನಶೀಲತೆಗಳೂ ಸ್ಪೃಹಣೀಯವಾಗಿದ್ದವು. ಎಂದೂ ಮಸುಳದ, ಮರೆಯಾಗದ, ಮಂಕಾಗದ, ಪ್ರಭಾತಪ್ರಸೂನದ ಆಹ್ಲಾದದ ಮಂದಸ್ಮಿತ ಅವರ ಮೊಗದಿಂದ ಮಾಸಿದ್ದೇ ಇಲ್ಲ. ಆ ಚಾರುಹಾಸದ ಹಿಂದೆ ಶತಮಾನದ ಜೀವನಸಂತೃಪ್ತಿ ಇದೆ; ಜಿಜೀವಿಷೆಯ […]