
ನಮ್ಮ ಸನಾತನ ಧರ್ಮದ ಪ್ರಕಾರ ಯುಗಾದಿ ಹೊಸ ವರ್ಷದ ಆರಂಭದ ದಿನ. ಹೊಸ ವರುಷವಾಗಿ ಯುಗಾದಿಯ ಆಚರಣೆಗೂ, ಡಿಸೆಂಬರ್ ೩೧ರ ರಾತ್ರಿಯ ಆಚರಣೆಗೂ ಅಜಗಜಾಂತರವಿದೆ. ಒಂದರಲ್ಲಿ ಭಾರತೀಯ ಸಂಸ್ಕೃತಿಯ ಸೊಗಡಿದ್ದರೆ ಇನ್ನೊಂದರಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ವಿಲಾಸೀ ಸೋಗಲಾಡಿತನವಿದೆ…. ಭಾರತೀಯ ಸಂಸ್ಕೃತಿಯ ಮೇಲೆ ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಯ ಸವಾರಿ ಅತಿಯಾಗುತ್ತಿದೆ. `ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ ಎಂಬುದು ಋಗ್ವೇದದ ಮಾತು. ಅಂದರೆ ಉದಾತ್ತ ವಿಚಾರಗಳು ವಿಶ್ವದ ಎಲ್ಲ ಕಡೆಗಳಿಂದಲೂ ಬರಲಿ ಎಂದು ಪ್ರಾರ್ಥಿಸಿದ ಸಂಸ್ಕೃತಿ ನಮ್ಮದು. […]