ಅಂದಿನ ದಿನಗಳಲ್ಲಿ ನ್ಯಾಯಾಧೀಶ ಲೆ-ಮೈಸ್ಟ್ರ್ ಕೋಲ್ಕತಾ ನಗರದಲ್ಲಿ ಚಿಕ್ಕ ಪುಟ್ಟ ಮೊಕದ್ದಮೆಗಳ ವಿಚಾರಣೆಯನ್ನು ನಡೆಸುವ ನ್ಯಾಯಾಧೀಶನಾಗಿಯೂ (Justice of Peace) ಕಾರ್ಯ ನಿರ್ವಹಿಸುತ್ತಿದ್ದ. ಇದೊಂದು ಆಕ್ಷೇಪಾರ್ಹ ವ್ಯವಸ್ಥೆಯಾಗಿದೆ. ಏಕೆಂದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶನಾಗಿ ಕುಳಿತುಕೊಳ್ಳುವ ವ್ಯಕ್ತಿ ದಂಡಾಧಿಕಾರಿಯಾಗಿ ಆಪಾದಿತನ ವಿಚಾರಣೆ ನಡೆಸಿದ ಪ್ರಕರಣದಲ್ಲಿ ತೀರ್ಮಾನ ತೆಗೆದುಕೊಳ್ಳುವುದರಿಂದ ಪ್ರಕರಣದ ಬಗ್ಗೆ ಪೂರ್ವಭಾವಿಯಾಗಿ ಪೂರ್ವಗ್ರಹಕ್ಕೆ ತುತ್ತಾಗಿರುತ್ತಾನೆ. ಆಗಿನ ಕಾಲದಲ್ಲಿ ದೇಶೀಯ ಬ್ಯಾಂಕರ್ಗಳನ್ನು, ಎಂದರೆ ಆಭರಣಗಳನ್ನು ಅಡವಿಟ್ಟುಕೊಂಡು ಲೇವಾದೇವಿ ವ್ಯವಹಾರದಲ್ಲಿ ತೊಡಗಿದ್ದವರನ್ನು ಶರಾಫ್ಗಳೆಂದು ಕರೆಯುತ್ತಿದ್ದರು. ಬುಲಾಕಿದಾಸ ಅಂತಹ ಒಬ್ಬ ಶರಾಫನಾಗಿದ್ದು ಈ […]
ಕಾನೂನಿನ ಆಕಾರದಡಿಯ ಸ್ವೈರಾಚಾರ
Month : December-2021 Episode : ಐತಿಹಾಸಿಕ ನಂದಕುಮಾರ್ ಪ್ರಕರಣ -2 Author : ಬಿ.ಪಿ. ಪ್ರೇಮಕುಮಾರ್