
‘ಇದು ನನ್ನದು, ಅದು ನನ್ನದು’ ಎನ್ನುತ್ತ ವ್ಯಕ್ತಿಗಳಿಗೋ, ವಸ್ತುಗಳಿಗೋ ಬಲವಾಗಿ ಅಂಟಿಕೊಳ್ಳುವ ಮೋಹದ ಪ್ರವೃತ್ತ್ತಿಯನ್ನು ಶಕ್ತಿಯಾಗಿ ಮಾರ್ಪಡಿಸಿಕೊಳ್ಳುವುದು ಹೇಗೆ? ಶತ್ರುವನ್ನು ಮಿತ್ರನನ್ನಾಗಿ ಪರಿವರ್ತಿಸುವುದು ಹೇಗೆ? ಮೋಹ ಅರಿಷಡ್ವರ್ಗಗಳಲ್ಲಿ ಒಂದು. ಇದು ಮನುಷ್ಯನ ಸಾಧನೆಗೆ ಬಹುದೊಡ್ಡ ಅಡ್ಡಿ. ಎಂತಹ ಉನ್ನತಿಗೇರಿದ ಸಂತರೂ, ಸಾಧಕರೂ ಮೋಹಪಾಶದಿಂದಾಗಿ ಅವನತಿ ಹೊಂದಿದ ಉದಾಹರಣೆಗಳು ಅನೇಕ. ಅಹಂಕಾರವನ್ನಾದರೂ ಗೆಲ್ಲಬಹುದು; ಆದರೆ ಮಮಕಾರವನ್ನು ಗೆಲ್ಲುವುದು ಕಷ್ಟ. ಅರಿಷಡ್ವರ್ಗದಲ್ಲಿ ಕಾಮವೊಂದು ಅಗ್ನಿ, ಕ್ರೋಧವೊಂದು ಅಗ್ನಿ. ಆದರೆ ಮೋಹವು ಅಗ್ನಿಯಲ್ಲ, ಪಾಶ. ಏಕೆಂದರೆ ಕಾಮಕ್ರೋಧಗಳು ಉದ್ರೇಕಗೊಂಡಾಗ ಅವು ನಮ್ಮ […]